ಯಾವ ವ್ಯೂಹಾತ್ಮಕ ದೃಷ್ಟಿಯಿಂದ ಪರಿಶೀಲಿಸಿದರೂ ’ಮಹಾಗಠ್ಬಂಧನ್’ ತುಂಬಾ ಹೆಚ್ಚಿನ ಭರವಸೆ ತಳೆಯಲು ಪ್ರಬಲ ಕಾರಣಗಳು ಗೋಚರಿಸುತ್ತಿಲ್ಲ.
ಕಳೆದ ಜನವರಿ ೧೯ರಂದು ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ’ಮಹಾಗಠ್ಬಂಧನ್’ ರಚನೆಯ ಘೋ?ಣೆಯೇನೋ ಆಯಿತು. ಎದ್ದುಕಾಣುವ ಸಂಗತಿಯೆಂದರೆ ಅದರಲ್ಲಿ ಪರಸ್ಪರ ’ಬಂಧನ’ದ ಅಭಾವ. ಹಲವಾರು ಅತೃಪ್ತ ಪಕ್ಷಗಳನ್ನು ಒಟ್ಟಿಗೆ ಬಂಧಿಸಿಡಲು ಮೋದಿದ್ವೇ?ವ? ಸಾಕೆ? ಇಂತಹ ಪ್ರಯಾಸಗಳೇನೂ ಹೊಸವಲ್ಲ. ಎ? ವ?ಗಳಿಂದ ಪರಿಚಿತವೇ. ಮೋದಿಸರ್ಕಾರವನ್ನು ಕೆಳಗಿಳಿಸುವೆವೆಂದು ವಿವಿಧ ಪಕ್ಷಗಳು ಬಯಸಿದರೆ ಬಯಸಲಿ; ಆದರೆ ಈ ಕೂಟರಚನೆಗೆ ಅವಶ್ಯಬೀಳುವ?ದರೂ ಹೊಂದಾಣಿಕೆಯ ಪ್ರವೃತ್ತಿ ಅವುಗಳ ನಡುವೆ ಇರಬೇಡವೆ? ಈ ಪಕ್ಷಗಳು ಇದುವರೆಗೆ ನಡೆದುಬಂದಿರುವ ರೀತಿಯು ಅವುಗಳ ಐಕ್ಯಸಾಧ್ಯತೆಯಲ್ಲಿ ಭರವಸೆ ಮೂಡಿಸುವಂತಿಲ್ಲವೆಂದು ಹೇಳಬೇಕಾಗಿದೆ. ಅಲ್ಪಕಾಲದ ಹಿಂದೆ ರಾಹುಲ್ಗಾಂಧಿ ವಿಪಕ್ಷ ಒಕ್ಕೂಟದ ಪರವಾದ ಪ್ರಧಾನಿ ಪದವಿಯ ಅಭ್ಯರ್ಥಿ ಎಂದಿದ್ದ ಡಿಎಂಕೆ ಪ್ರಮುಖ ಎಂ.ಕೆ. ಸ್ಟಾಲಿನ್ ಈಗ ತೂಷ್ಣೀಭಾವ ತಳೆದಿದ್ದಾರೆ.
ಟೀಸರ್ ಟ್ರೈಲರ್
ಈಗ್ಗೆ ಏಳೇ ತಿಂಗಳ ಹಿಂದೆ ಬೆಂಗಳೂರಿನ ವಿಧಾನಸೌಧದ ಮುಂಗಟ್ಟಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಕಿರೀಟಧಾರಣ ಸಂದರ್ಭದಲ್ಲಿ ಮಾಯಾವತಿ, ಅಖಿಲೇಶ್ ಯಾದವ್ ಮೊದಲಾದವರೊಡನೆ ಸೋನಿಯಾ-ರಾಹುಲ್ ಜೋಡಿಯ ನಂಟಸ್ತಿಕೆ ಘೋಷಿತವಾಗಿತ್ತು. ಕರ್ನಾಟಕದಲ್ಲಿ ಈಗಾಗಲೇ ನಗೆಪಾಟಲಾಗಿರುವ ಜೆಡಿಎಸ್-ಕಾಂಗ್ರೆಸ್ ’ಗಠ್ಬಂಧನ್’ ಮೋದಿಸರ್ಕಾರದ ಉಚ್ಚಾಟನೆಗೆ ನಾಂದಿಯೆಂದು ಆಗ ಸಾರಲಾಗಿತ್ತು. ರಾ?ಮಟ್ಟದ ವಿವಿಧಪಕ್ಷ ಒಕ್ಕೂಟದ ಮಾತು ಹಾಗಿರಲಿ; ಎರಡೇ ಪಕ್ಷಗಳೂ ಕರ್ನಾಟಕದಲ್ಲಿ ಸಂಸಾರ ನಡೆಸಲಾರದೆ ವಿಚ್ಛೇದದತ್ತ ಸಾಗಿವೆ.
ಮಮತಾ ಬ್ಯಾನರ್ಜಿ ತಾವು ಪ್ರಧಾನಮಂತ್ರಿಯಾಗುವ ಆಕಾಂಕ್ಷೆಯಿಂದ ವಿವಿಧಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ತೊಡಗಿರುವರೆಂಬ ವಾಸ್ತವವೇ ಹಲವಾರು ಪಕ್ಷಗಳನ್ನು ನಿರುತ್ಸಾಹಗೊಳಿಸಿದೆ. ಈ ವ?ದ ಆರಂಭದಲ್ಲಿ ಮಮತಾ ಬ್ಯಾನರ್ಜಿ ವಿಪಕ್ಷಸಮಾವೇಶವನ್ನು ಆಮಂತ್ರಿಸುವ ವೇಳೆಗೆ ಸೋನಿಯಾ-ರಾಹುಲ್ ಯುಗಳ ಎ? ಉತ್ಸಾಹಶೂನ್ಯವಾಗಿಬಿಟ್ಟಿತ್ತೆಂದರೆ ಆ ಕೂಟದಲ್ಲಿ ತಾವು ಭಾಗವಹಿಸಬೇಕೆಂದೂ ಎನಿಸದೆ ತಮ್ಮ ಪ್ರತಿನಿಧಿ ಖರ್ಗೆಯವರನ್ನು ಕಳಿಸಿ ಸುಮ್ಮನಾದರು. ಮಾಯಾವತಿಯವರೂ ದೂರ ಉಳಿದು ಪ್ರತಿನಿಧಿ ಎಸ್.ಸಿ. ಮಿಶ್ರಾರನ್ನು ಕಳಿಸಿದರು. ಬಂಗಾಳದೊಳಗಡೆಯೇ ಮಮತಾದೀದಿಯ ನಡವಳಿಗೆ ಹೆಚ್ಚಿನ ಜನಸ್ಪಂದನ ದೊರೆತಿಲ್ಲ.
ಶಿಥಿಲದ್ವಿತ್ವ
ಉತ್ತರಪ್ರದೇಶದಲ್ಲಿ ಸಮಾಜವಾದಿ ಮತ್ತು ಬಹುಜನಸಮಾಜ ಪಕ್ಷಗಳ ಕೂಡಿಕೆಯಾದರೂ ’ಶಿಥಿಲದ್ವಿತ್ವ’. ಅಖಿಲೇಶ್ ಯಾದವ್, ಮಾಯಾವತಿ – ಇಬ್ಬರೂ ತಮ್ಮ ಪುನಃಸ್ಥಾಪನೆಗಾಗಿ ಇನ್ನೊಬ್ಬರನ್ನು ಬಳಸಿಕೊಳ್ಳುವ ಹತಾಶ ಯತ್ನದಲ್ಲಿ ತೊಡಗಿರುವುದು ಸ್ಪ?ವಿದೆ. ಆ ಹಂತದಿಂದಾಚೆಗೆ ಆ ಮೈತ್ರಿ ಉಳಿಯದೆಂದು ಇಬ್ಬರಲ್ಲಿಯೂ ನಿಶ್ಚಯವಿದೆ. ಈ ಹಿನ್ನೆಲೆಯಲ್ಲಿ ಎ? ಅಬ್ಬರದಿಂದ ಅವರು ಮೈತ್ರಿಯನ್ನು ಘೋಷಿಸಿಕೊಂಡರೂ ಅದಕ್ಕೆ ಹೆಚ್ಚಿನ ಅರ್ಥವಿರಲಾರದು.
೧೯೯೦ರ ದಶಕದ ಆರಂಭದ ವ?ಗಳಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಹುಜನಸಮಾಜ ಪಾರ್ಟಿಗಳು ತಮ್ಮ ನಡುವೆ ಸಮಾನ ಆಧಾರಾಂಶಗಳು ಇಲ್ಲದಿದ್ದರೂ ಭಾರತೀಯ ಜನತಾ ಪಕ್ಷವನ್ನು ಹೊರಗಿರಿಸಬೇಕೆಂಬ ಏಕಾಂಶ ಪ್ರಣಾಳಿಯ ಆಧಾರದ ಮೇಲೆ ಉತ್ತರಪ್ರದೇಶದಲ್ಲಿ ಒಟ್ಟಾಗಿದ್ದವು. ಆ ವ್ಯೂಹವು ಒಂದ?ಮಟ್ಟಿಗೆ ಸಫಲವೂ ಆಗಿತ್ತು: ಎಸ್.ಪಿ. ೧೦೯ ಸ್ಥಾನಗಳನ್ನು ಪಡೆದರೆ ಬಿ.ಎಸ್.ಪಿ. ೬೭ ಸ್ಥಾನಗಳನ್ನು ಗಳಿಸಿತ್ತು. ಆದರೆ ೧೭೭ರ? ಅಧಿಕ ಸ್ಥಾನಗಳನ್ನು ಪಡೆದಿದ್ದ ಭಾಜಪಾ ಕೈಗೆ ಅಧಿಕಾರ ಲಭಿಸಿತ್ತು. ೧೯೯೫ರಲ್ಲಿ ಎಸ್.ಪಿ. ಪಡೆಗಳವರು ಮಾಯಾವತಿಯ ಮೇಲೆಯೆ ಹಲ್ಲೆ ನಡೆಸಿದಾಗ ಅವರ ಕೂಟ ಮುರಿದುಬಿದ್ದು ಅದು ಭಾಜಪಾ-ಬಹುಜನಸಮಾಜಪಕ್ಷ ಮೈತ್ರಿಗೆ ದಾರಿಮಾಡಿತ್ತು; ೧೯೯೫ರಲ್ಲಿ ಭಾಜಪಾ ಬೆಂಬಲದಿಂದ ಮಾಯಾವತಿ ಮುಖ್ಯಮಂತ್ರಿಯಾಗಿದ್ದರು. ೨೦೦೭ರಲ್ಲಿ ಸ್ವಪಕ್ಷಬಲದಿಂದಲೇ ಮಾಯಾವತಿ ಅಧಿಕಾರಕ್ಕೆ ಬಂದರು; ಆ ವ?ಗಳುದ್ದಕ್ಕೂ ಎಸ್.ಪಿ.ಯ ಬಗೆಗೆ ಮಾಯಾವತಿ ಕೆಂಡ ಉಗುಳುತ್ತಿದ್ದರು.
ಆದರೆ ಅಲ್ಲಿಂದಾಚೆಗೆ ವಿವಿಧ ಕಾರಣಗಳಿಂದ ಮಾಯಾವತಿಗಿದ್ದ ದಲಿತ ಮತಬ್ಯಾಂಕ್ ಶಿಥಿಲಗೊಳ್ಳುತ್ತ ಸಾಗಿತು. ಕ್ರಮೇಣ ಭಾಜಪಾದ್ದು ಮೇಲುಗೈಯಾಗುತ್ತ ಬಂದಿತು: ೨೦೧೪ರ ಚುನಾವಣೆಯಲ್ಲಿ ಉತ್ತರಪ್ರದೇಶದ ೮೦ ಲೋಕಸಭೆಯ ಸ್ಥಾನಗಳು ಭಾಜಪಾ ಕೈಸೇರಿದವು; ಎಸ್.ಪಿ., ಬಿ.ಎಸ್.ಪಿ. – ಎರಡೂ ಪಕ್ಷಗಳು ಗಣನೆಯಿಂದಲೇ ಹೊರಗುಳಿದವು. ಇದೀಗ ಎರಡೂ ಪಕ್ಷಗಳು ಕೂಡಿಕೊಂಡು ತಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಯತ್ನದಲ್ಲಿವೆ. ಆದರೆ ಎನ್.ಡಿ.ಎ. ಸರ್ಕಾರದ ಧೋರಣೆಗಳ ಬಗೆಗೆ ಓ.ಬಿ.ಸಿ. ಮತ್ತು ದಲಿತ ವರ್ಗಗಳು ಹೆಚ್ಚಿನ ಒಲವನ್ನು ತೋರುತ್ತಿರುವ ಸೂಚನೆಗಳಿವೆ. ಕುಮ್ಹಾರರು, ಜೋಗಿಗಳು, ದೀವರರು ಮೊದಲಾದ ನಾಲ್ಕಾರು ಸಮುದಾಯಗಳವರು ಭಾಜಪಾಕ್ಕೆ ಸಮೀಪಗತರಾಗುತ್ತಿದ್ದಾರೆ. ವಿಶೇ?ವಾಗಿ ಉಜ್ಜ್ವಲಾ, ಪ್ರಧಾನಮಂತ್ರಿ ಆವಾಸ ಯೋಜನಾ ಮೊದಲಾದ ನರೇಂದ್ರಮೋದಿ ಸರ್ಕಾರ-ಚಾಲಿತ ಯೋಜನೆಗಳು ಈ ಹಲವಾರು ಸಮುದಾಯಗಳಲ್ಲಿ ಉತ್ಸಾಹ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಎಸ್.ಪಿ.- ಬಿ.ಎಸ್.ಪಿ.ಗಳ ನವಯೋಜಿತ ಅನುಕೂಲಸಿಂಧು ಮರು- ಮೈತ್ರಿ ಎ?ಮಟ್ಟಿಗೆ ಕೆಲಸ ಮಾಡೀತೆಂದು ಕಾದು ನೋಡಬೇಕು.
ಹೀಗೆ ಯಾವ ವ್ಯೂಹಾತ್ಮಕ ದೃಷ್ಟಿಯಿಂದ ಪರಿಶೀಲಿಸಿದರೂ ’ಮಹಾಗಠ್ಬಂಧನ್’ ತುಂಬಾ ಹೆಚ್ಚಿನ ಭರವಸೆ ತಳೆಯಲು ಪ್ರಬಲ ಕಾರಣಗಳು ಗೋಚರಿಸುತ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲೂ ಹೆಣಗಾಡುತ್ತಿರುವ ಪಕ್ಷಗಳ ಸಾಹಚರ್ಯ ಸಾಧ್ಯವೆಂದಾಗಲಿ ಪ್ರಯೋಜನಕರವೆಂದಾಗಲಿ ಎನಿಸುತ್ತಿಲ್ಲ. ಇ?ಗಿ ದೇಶದ ಪ್ರಧಾನಿಯಾಗುವ ಆಸೆ ತಳೆದ ಮಮತಾರವರ ಆಡಳಿತ ವೈಖರಿಯನ್ನಾಗಲಿ ಶಾರದಾ ಚಿಟ್ಫಂಡ್ ಘೋಟಾಳದಲ್ಲಿ ಅವರು ಸಿಲುಕಿಕೊಂಡಿರುವುದನ್ನಾಗಲಿ ಜನ ಸುಲಭವಾಗಿ ಮರೆತು ’ಭಾರತವನ್ನು ಉಳಿಸೋಣ’, ’ಪ್ರಜಾಪ್ರಭುತ್ವವನ್ನು ಉಳಿಸೋಣ’ ಎಂಬ ಅವರ ಘೋ?ಣೆಗೆ ಮರುಳಾಗುವ? ಅಮಾಯಕರೆ? ಹಲವು ವ? ಹಿಂದಿಗಿಂತ ಈಗ ಜನಸಾಮಾನ್ಯರು ಹೆಚ್ಚು ಜಾಗೃತರೂ ಪ್ರಜ್ಞಾವಂತರೂ ಆಗುತ್ತಿದ್ದಾರೆಂಬುದನ್ನೂ ಅಲಕ್ಷಿಸಲಾಗದು.
ಯಾವುದು ಹೆಚ್ಚು ಲಾಭಕಾರಿ?
ತೆಲುಗುದೇಶಂ ಪಕ್ಷದ ಚಂದ್ರಬಾಬುನಾಯ್ಡು ಅವರಾದರೋ ರವೆಯ? ವಿಶ್ವಸನೀಯತೆಯನ್ನು ಯಾವ ಸಹವಾಸಿಪಕ್ಷದವರೊಡನೆಯೂ ಉಳಿಸಿಕೊಂಡಿಲ್ಲ. ಎನ್.ಸಿ.ಪಿ. ನಾಯಕ ಶರದ್ ಪವಾರ್ ಕಾಂಗ್ರೆಸಿನಿಂದ ಪೂರ್ತಿ ದೂರ ಸರಿಯುವ ತಪ್ಪನ್ನೆಸಗಲಾರರು. ಅಂತೆಯೇ ಬಿಜುಜನತಾದಳದ ನವೀನ್ ಪಟ್ಣಾಯಕ್ರಿಗೆ ಭಾಜಪಾ ಒಡನಾಟವೇ ಹೆಚ್ಚು ಪ್ರಯೋಜನಕರವಿರುವುದರಿಂದ ಅದನ್ನೇಕೆ ದೂರಮಾಡಿಯಾರು?
’ಗಠ್ಬಂಧನ್’ದಲ್ಲಿ ಪ್ರಮುಖ ಪಾತ್ರ ವಹಿಸಲು ತಾವಾಗಿ ಮುಂದಾಗಿರುವ ಅರವಿಂದ ಕೇಜ್ರಿವಾಲರಂತೂ ತಮ್ಮ ಪ್ರಧಾನ ಬೆಂಬಲಿಗರನ್ನೇ ಅನಾಮತ್ತಾಗಿ ಕಳೆದುಕೊಂಡಿದ್ದಾರೆ. ನೈತಿಕ ಪಾರಿಶುದ್ಧ್ಯವಿರುವವರನ್ನು ’ಗಠ್ಬಂಧನ್’ ಘಟಕಗಳಲ್ಲಿ ದುರ್ಬೀನು ಹಾಕಿ ಹುಡುಕಬೇಕಾಗಿದೆ.