ಕಾಳಿದಾಸನು ತನ್ನ ಕಾವ್ಯಗಳಲ್ಲಿ ಶಿವನನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾನೆ. ಅವನು ತನ್ನ ಮೂರೂ ನಾಟಕಗಳ ಮಂಗಳಪದ್ಯಗಳಲ್ಲಿ ಶಿವನನ್ನು ಸ್ತುತಿಸಿರುವುದು ಕಂಡುಬರುತ್ತದೆ. ಅದರ ಸ್ವಾರಸ್ಯವನ್ನು ಅರಿತಾಗ ಅವನ ಭಕ್ತಿಯು ಜ್ಞಾನಪೂರ್ವಕವಾದುದೆಂದು ಮನದಟ್ಟಾಗುತ್ತದೆ. ತನ್ನ ಮಹಾಕಾವ್ಯವಾದ ಕುಮಾರಸಂಭವದಲ್ಲಿ ಅವನು ಶಿವನನ್ನು ಹೇಗೆ ಚಿತ್ರಿಸಿದ್ದಾನೆ, ಅದರ ಸ್ವಾರಸ್ಯಗಳೇನು ಎಂದು ಸ್ಥೂಲವಾಗಿ ಗಮನಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.
ದಾಕ್ಷಾಯಣಿಯು ದಕ್ಷಾಧ್ವರದಲ್ಲಿ ಅಗ್ನಿಪ್ರವೇಶವನ್ನು ಮಾಡಿ, ಪುನಃ ಜನಿಸಲು ಹಿಮಾಲಯನ ಪತ್ನಿಯಾದ ಮೇನೆಯ ಗರ್ಭವನ್ನು ಆಯ್ದುಕೊಂಡಳು. ಅಲ್ಲಿ ಆವಿರ್ಭವಿಸಿ ಆಕೆ ಯೌವನಕ್ಕೆ ಕಾಲಿರಿಸಿದಳು. ಒಮ್ಮೆ ನಾರದಮಹರ್ಷಿಗಳು ಈಕೆಯನ್ನು ನೋಡಿ ’ನಿನ್ನ ಮಗಳು ತನ್ನ ಪ್ರೀತಿಯಿಂದ ಶಿವನ ಶರೀರಾರ್ಧವನ್ನು ವ್ಯಾಪಿಸುವ ಸತಿಯಾಗುತ್ತಾಳೆ’ ಎಂದರು. ಇತ್ತ ಈಶ್ವರನು ದಾಕ್ಷಾಯಣಿಯ ವಿಯೋಗದ ಬಳಿಕ ಹಿಮಾಲಯದ ತಪ್ಪಲಿನಲ್ಲಿ ತಪಸ್ಸು ಮಾಡುತ್ತಿದ್ದನು. ಇದನ್ನು ಕಾಳಿದಾಸ ಹೀಗೆ ವರ್ಣಿಸಿದ್ದಾನೆ-
ತತ್ರಾಗ್ನಿಮಾಧಾಯ ಸಮಿತ್ಸಮಿದ್ಧಂ ಸ್ವಮೇವ ಮೂರ್ತ್ಯಂತರಮ?ಮೂರ್ತಿಃ |
ಸ್ವಯಂ ವಿಧಾತಾ ತಪಸಃ ಫಲಾನಾಂ ಕೇನಾಪಿ ಕಾಮೇನ ತಪಶ್ಚಚಾರ || ೧.೫೭ ||
’ಸ್ವತಃ ತಪಸ್ಸಿಗೆ ಫಲಗಳನ್ನು ನೀಡುವ ಶಿವನು ಹಿಮಾಲಯದ ತಪ್ಪಲಿನಲ್ಲಿ ತನ್ನ ಅ?ಮೂರ್ತಿಗಳಲ್ಲಿ ಒಂದಾದ, ಸಮಿತ್ತಿನಿಂದ ಚೆನ್ನಾಗಿ ಜ್ವಲಿಸುತ್ತಿರುವ ಅಗ್ನಿಯನ್ನು ತಂದು ಯಾವುದೋ ಕಾಮನೆಯಿಂದ ತಪಸ್ಸನ್ನು ಮಾಡಿದನು.’ ಎಲ್ಲರ ಕಾಮನೆಗಳನ್ನು ಈಡೇರಿಸುವ, ಸ್ವತಃ ಆಪ್ತಕಾಮನಾದ ಶಿವನಿಗೆ ಬೇರೆ ಯಾವ ಕಾಮನೆಯಿದ್ದೀತು? ಇದ್ದರೂ ಅವನ ಕಾಮನೆಯನ್ನು ಊಹಿಸುವ ಶಕ್ತಿಯು ಮಾನು?ತರ್ಕಕ್ಕಿರುವುದೇ? ಆದ್ದರಿಂದಲೇ ಕವಿಯು ಜಾಣತನದಿಂದ ’ಕೇನಾಪಿ ಕಾಮೇನ’ (ಯಾವುದೋ ಒಂದು ಕಾಮನೆಯಿಂದ) ಎಂದಿದ್ದಾನೆ. ತನ್ನ ಎಂಟು ಮೂರ್ತಿಗಳಲ್ಲಿ ಒಂದಾದ ಅಗ್ನಿಯನ್ನು ತಂದು ತಪಸ್ಸನ್ನು ಮಾಡಿದನು ಎನ್ನುವ ಮೂಲಕ ಧ್ಯಾತೃ, ಧ್ಯೇಯ, ಧ್ಯಾನೋಪಕರಣ ಎಲ್ಲವೂ ಆತ್ಮವಸ್ತುವೇ ಆಗಿದೆ ಎಂಬ ವೇದಾಂತದ ಹೊಳಹು ಇಲ್ಲಿದೆ.
ಹಿಮಾಲಯನು ಶಿವನ ಸೇವೆಗಾಗಿ ತನ್ನ ಮಗಳನ್ನು ಅವಳ ಗೆಳತಿಯೊಂದಿಗೆ ಕಳುಹಿಸುತ್ತಾನೆ. ಅದನ್ನು ಹೀಗೆ ವರ್ಣಿಸಿದ್ದಾನೆ-
ಪ್ರತ್ಯರ್ಥಿಭೂತಾಮಪಿ ತಾಂ ಸಮಾಧೇಃ
ಶುಶ್ರೂ?ಮಾಣಾಂ ಗಿರಿಶೋಽನುಮೇನೇ |
ವಿಕಾರಹೇತೌ ಸತಿ ವಿಕ್ರಿಯಂತೇ ಯೇ?ಂ ನ
ಚೇತಾಂಸಿ ತ ಏವ ಧೀರಾಃ || ೧.೫೯ ||
’ತಪಸ್ಸಿಗೆ ಅಡ್ಡಿಯಾಗುವವಳಾದರೂ ಕೂಡ ಸೇವೆಮಾಡಲು ಶಿವನು ಆಕೆಗೆ ಒಪ್ಪಿಗೆಯನ್ನಿತ್ತನು. ವಿಕಾರಕ್ಕೆ ಕಾರಣವಿದ್ದಾಗಲೂ ಯಾರ ಮನಸ್ಸು ವಿಕಾರವನ್ನು ಹೊಂದುವುದಿಲ್ಲವೋ ಅವರೇ ಧೀರರು.’ ಧೀರನ ಭಾವವೇ ಧೈರ್ಯ. ಇಂದು ನಾವು ಧೈರ್ಯಶಬ್ದವನ್ನು ಸಂಕುಚಿತವಾದ ಅರ್ಥದಲ್ಲಿ ಬಳಸುತ್ತಿದ್ದೇವೆ. ಹುಲಿ, ಆಳವಾದ ಪ್ರಪಾತ ಇತ್ಯಾದಿಗಳನ್ನು ನೋಡಿದಾಗ ಮನಸ್ಸಿನಲ್ಲಿ ವಿಕಾರವಾಗದಿದ್ದರೆ ಅವನನ್ನು ಧೀರ ಎನ್ನುತ್ತಾರೆ. ಆದರೆ ಕಾಳಿದಾಸನು ಧೀರಶಬ್ದವನ್ನು ವಿಶಾಲವಾದ ಅರ್ಥದಲ್ಲಿ ಬಳಸಿದ್ದಾನೆ. ಹೆಣ್ಣು, ಹೊನ್ನು, ಮಣ್ಣು ಇವುಗಳೆಲ್ಲ ಮನಸ್ಸಿನ ವಿಕಾರಕ್ಕೆ ಕಾರಣವಾಗುವ ಪದಾರ್ಥಗಳು. ಇವುಗಳು ಇದ್ದಾಗಲೂ ಯಾರ ಮನಸ್ಸು ವಿಕಾರವನ್ನು ಹೊಂದುವುದಿಲ್ಲವೋ ಅವರೇ ಧೀರರು, ಅವರ ಭಾವವೇ ಧೈರ್ಯ. ಶಿವನು ಇಂತಹ ಧೈರ್ಯದ ನೆಲೆಯಾಗಿರುವಾಗ ಅವನಿಗೆಲ್ಲಿಯ ವಿಕಾರ?
ತನ್ನೆದುರಿಗೇ ಮನ್ಮಥನು ಶಿವನ ಹಣೆಗಣ್ಣಿನಿಂದ ಸುಟ್ಟುಹೋದುದನ್ನು ನೋಡಿ ಪಾರ್ವತಿಯ ಆಸೆಯು ಮಣ್ಣುಗೂಡುತ್ತದೆ. ಅದನ್ನು ಕವಿಯು ಹೀಗೆ ಚಿತ್ರಿಸಿದ್ದಾನೆ-
ತಥಾ ಸಮಕ್ಷಂ ದಹತಾ ಮನೋಭವಂ ಪಿನಾಕಿನಾ ಭಗ್ನಮನೋರಥಾ ಸತೀ |
ನಿನಿಂದ ರೂಪಂ ಹೃದಯೇನ ಪಾರ್ವತೀ ಪ್ರಿಯೇ? ಸೌಭಾಗ್ಯಫಲಾ ಹಿ ಚಾರುತಾ || ೫.೧ ||
’ಆ ತೆರನಾಗಿ ಎದುರಿಗೇ ಮನ್ಮಥನನ್ನು ಸುಡುತ್ತಿರುವ ಪಿನಾಕಿಯಿಂದ ಆಸೆಯು ಭಗ್ನವಾದಾಗ ಪಾರ್ವತಿಯು ಮನಸ್ಸಿನಲ್ಲಿಯೇ ತನ್ನ ರೂಪವನ್ನು ನಿಂದಿಸಿಕೊಂಡಳು. ಸೌಂದರ್ಯಕ್ಕೆ ಪ್ರಿಯತಮನ ಸೌಭಾಗ್ಯವೇ ಫಲ.’ ಪಾರ್ವತಿಯಲ್ಲಿರುವ ಸೌಂದರ್ಯವು ಶಿವನು ಮೆಚ್ಚಿದಾಗ ಮಾತ್ರ ಸಫಲವಾಗುವುದು ಎಂಬುದನ್ನು ಅರ್ಥಾಂತರನ್ಯಾಸದ ಮೂಲಕ ಕವಿಯು ಸುಂದರವಾಗಿ ನಿರೂಪಿಸಿದ್ದಾನೆ. ನಾವು ನಮ್ಮಲ್ಲಿರುವ ವಿಶೇ?ಶಕ್ತಿಯ ಬಗೆಗೆ ಹೆಮ್ಮೆಪಡುತ್ತಿರುತ್ತೇವೆ. ಆದರೆ ಅದು ಭಗವಂತ ಮೆಚ್ಚುವಂತಿದ್ದರೆ ಮಾತ್ರ ಸಫಲವಾಗುತ್ತದೆ ಎಂಬ ಆಂತರ್ಯವೂ ಇಲ್ಲಿ ಅಡಗಿದೆ.
ಬಾಹ್ಯಸೌಂದರ್ಯದಿಂದ ಶಿವನನ್ನು ಗೆಲ್ಲಲಾಗದು ಎಂಬುದನ್ನು ಅರಿತ ಪಾರ್ವತಿಯು ತಪಸ್ಸು ಮಾಡಲು ಮನಸ್ಸುಮಾಡಿದಳು.
ಇಯೇ? ಸಾ ಕರ್ತುಮವಂಧ್ಯರೂಪತಾಂ
ಸಮಾಧಿಮಾಸ್ಥಾಯ ತಪೋಭಿರಾತ್ಮನಃ |
ಅವಾಪ್ಯತೇ ವಾ ಕಥಮನ್ಯಥಾ ದ್ವಯಂ ತಥಾವಿಧಂ
ಪ್ರೇಮ ಪತಿಶ್ಚ ತಾದೃಶಃ || ೫.೨ ||
’ಪಾರ್ವತಿಯು ತಪಸ್ಸಿನಿಂದ ಸಮಾಧಿಸ್ಥಿತಿಯನ್ನು ಹೊಂದಿ ತನ್ನ ರೂಪವನ್ನು ಸಫಲವಾಗಿಸಬೇಕೆಂದು ಬಯಸಿದಳು. ಇಲ್ಲದಿದ್ದರೆ ಅಂತಹ ಪ್ರೀತಿ ಹೇಗೆ ಸಿಗುತ್ತಿತ್ತು? ಅಂತಹ ಪತಿ ಹೇಗೆ ಸಿಗುತ್ತಿದ್ದ?’ ಶಿವನನ್ನು ಬಾಹ್ಯವಾದ ಆಡಂಬರಗಳಿಂದ ಒಲಿಸಿಕೊಳ್ಳಲಾಗದು, ಅದಕ್ಕೆ ಅಂತರಂಗದ ಸೌಂದರ್ಯವನ್ನು ಉಂಟುಮಾಡುವ ಮಾರ್ಗಗಳೇ ಶರಣ್ಯ ಎಂಬುದನ್ನು ಕವಿಯು ಸೂಚಿಸಿದ್ದಾನೆ. ಅಂತಹ ಪ್ರೀತಿ ಎಂದರೆ ದೇಹದ ಅರ್ಧಭಾಗವನ್ನೇ ಕೊಡುವ? ಪ್ರೀತಿ ಎಂದೂ, ಅಂತಹ ಪತಿಯೆಂದರೆ ಮೃತ್ಯುಂಜಯನಾದ ಪತಿ ಎಂದೂ ಮಲ್ಲಿನಾಥನು ಸೊಗಸಾಗಿ ವ್ಯಾಖ್ಯಾನಿಸಿದ್ದಾನೆ.
ತಪಗೈಯುತ್ತಿರುವ ಪಾರ್ವತಿಯನ್ನು ಪರೀಕ್ಷಿಸಲು ಶಿವನು ವಟುರೂಪದಲ್ಲಿ ಬರುತ್ತಾನೆ. ಶಿವನನ್ನು ವಿಧವಿಧವಾಗಿ ನಿಂದಿಸುತ್ತಾನೆ. ಆ ಬಳಿಕ ಪಾರ್ವತಿಯು ಅದೆಲ್ಲಕ್ಕೂ ಸಮರ್ಥವಾದ ಉತ್ತರವನ್ನು ನೀಡುತ್ತಾಳೆ. ಕಾವ್ಯದಲ್ಲಿ ಪ್ರಶ್ನೆಗಳು ಒಂದೆಡೆ, ಉತ್ತರಗಳು ಇನ್ನೊಂದೆಡೆ ಬರುತ್ತವೆ. ಅವುಗಳಲ್ಲಿ ಕೆಲವನ್ನು ಪ್ರಶ್ನೋತ್ತರಕ್ರಮದಲ್ಲಿ ಈ ರೀತಿ ಸಂಗ್ರಹಿಸಬಹುದು-
ವಟು-ವಪುರ್ವಿರೂಪಾಕ್ಷಮಲಕ್ಷ್ಯಜನ್ಮತಾ
ದಿಗಂಬರತ್ವೇನ ನಿವೇದಿತಂ ವಸು |
ವರೇ? ಯದ್ಬಾಲಮೃಗಾಕ್ಷಿ ಮೃಗ್ಯತೇ ತದಸ್ತಿ ಕಿಂ
ವ್ಯಸ್ತಮಪಿ ತ್ರಿಲೋಚನೇ || ೫.೭೨ ||
ತ್ರಿಲೋಚನನ ದೇಹವು ವಿರೂಪವಾದ ಕಣ್ಣುಗಳನ್ನುಳ್ಳದ್ದು!
ಅವನ ಹುಟ್ಟು ಎಲ್ಲಿ ಹೇಗಾಯಿತೆಂದು ತಿಳಿಯದು!
ದಿಗಂಬರತ್ವದಿಂದಲೇ ಅವನ ಸಂಪತ್ತು ತಿಳಿಯುತ್ತದೆ!
ವರರಲ್ಲಿ ಜನರು ಯಾವುದನ್ನು ಹುಡುಕುತ್ತಾರೋ ಅವುಗಳಲ್ಲಿ ಯಾವ ಒಂದಾದರೂ ಅಂಶವು
ಆತನಲ್ಲಿದೆಯೇ?
ಪಾರ್ವತಿ-ವಿಭೂ?ಣೋದ್ಭಾಸಿ ಪಿನದ್ಧಭೋಗಿ ವಾ
ಗಜಾಜಿನಾಲಂಬಿ ದುಕೂಲಧಾರಿ ವಾ |
ಕಪಾಲಿ ವಾ ಸ್ಯಾದಥವೇಂದುಶೇಖರಂ ನ
ವಿಶ್ವಮೂರ್ತೇರವಧಾರ್ಯತೇ ವಪುಃ || ೫.೭೮ ||
ಯಮಾಮನಂತ್ಯಾತ್ಮಭುವೋಽಪಿ ಕಾರಣಂ ಕಥಂ ಸ
ಲಕ್ಷ್ಯಪ್ರಭವೋ ಭವಿ?ತಿ || ೫.೮೧ ||
ಅಸಂಪದಸ್ತಸ್ಯ ವೃ?ಣ ಗಚ್ಛತಃ
ಪ್ರಭಿನ್ನದಿಗ್ವಾರಣವಾಹನೋ ವೃ? |
ಕರೋತಿ ಪಾದಾವುಪಗಮ್ಯ ಮೌಲಿನಾ
ವಿನಿದ್ರಮಂದಾರರಜೋಽರುಣಾಂಗುಲೀ || ೫.೮೦ ||
ಶಿವನ ದೇಹವು ಅಲಂಕಾರಗಳಿಂದ ಶೋಭಿಸಲಿ ಅಥವಾ ಹಾವಿನಿಂದ ಬಿಗಿಯಲ್ಪಟ್ಟಿರಲಿ. ಗಜಚರ್ಮವನ್ನು ಧರಿಸಿರಲಿ ಅಥವಾ ರೇ?ವಸ್ತ್ರವನ್ನು ಧರಿಸಿರಲಿ. ಕಪಾಲವನ್ನು ಹಿಡಿದಿರಲಿ ಅಥವಾ ಚಂದ್ರನನ್ನು ಮುಡಿದಿರಲಿ. ವಿಶ್ವಮೂರ್ತಿಯ ದೇಹವನ್ನು ಎಂದರೆ ಸ್ವರೂಪವನ್ನು ತಿಳಿಯುವುದು ಸಾಧ್ಯವಿಲ್ಲ.
ಯಾರನ್ನು ಆತ್ಮಭೂ ಎನಿಸಿದ ಬ್ರಹ್ಮನಿಗೂ ಜನಕ ಎನ್ನುವರೋ ಅವನ ಹುಟ್ಟನ್ನು ತಿಳಿಯುವುದಾದರೂ ಹೇಗೆ ಸಾಧ್ಯ?
ಸಂಪತ್ತಿಲ್ಲದ ಅವನು ಗೂಳಿಯ ಮೇಲೆ ಕುಳಿತು ಹೋಗುತ್ತಿರುವಾಗ ಮದವೆತ್ತ ಆನೆಯ ಮೇಲೆ ಹೋಗುತ್ತಿರುವ ಇಂದ್ರನು ಇವನ ಕಾಲ ಬಳಿ ಬಂದು ನಮಸ್ಕರಿಸಿ ತನ್ನ ತಲೆಯಲ್ಲಿ ಮುಡಿದಿರುವ ಮಂದಾರಪು?ಗಳ ಪರಾಗದಿಂದ ಶಿವನ ಕಾಲುಗಳನ್ನು ಕೆಂಪಾಗಿಸುತ್ತಾನೆ.
ಈ ಮಾತುಗಳಿಂದ ಒಲಿದ ಶಿವನು ವಟುರೂಪವನ್ನು ಬಿಟ್ಟು ನಿಜರೂಪದಲ್ಲಿ ಪ್ರತ್ಯಕ್ಷನಾಗಿ ’ಇಂದಿನಿಂದ ನಾನು ನಿನ್ನ ದಾಸ’ ಎನ್ನುತ್ತಾನೆ. ಆದರೆ ಅದಕ್ಕೆ ಕಾರಣ ತಪಸ್ಸು ಎನ್ನಲೂ ಆತ ಮರೆಯುವುದಿಲ್ಲ. ’ಕ್ರೀತಸ್ತಪೋಭಿಃ’-ನೀನು ಮಾಡಿದ ತಪಸ್ಸಿನಿಂದ ನಾನು ನಿನ್ನಿಂದ ಖರೀದಿಸಲ್ಪಟ್ಟೆ ಎನ್ನುತ್ತಾನೆ. ಇಲ್ಲಿಯೂ ಶಿವನು ಆಕೆಗಿರುವ ಅಚಲನಿ?ಯನ್ನು ಪರೀಕ್ಷಿಸಿ ಅದು ಒಳಗಣ ಪಾಕದಿಂದಲೇ ಉಂಟಾದುದು ಎಂದು ತಿಳಿದ ಮೇಲೆ ಒಲಿದಿದ್ದಾನೆ ಎನ್ನುವುದನ್ನು ಗಮನಿಸಬೇಕು. ಭಗವಂತನ ಬಗೆಗೆ ತಾತ್ಕಾಲಿಕವಾದ ನಿ? ಯಾರಿಗೂ ಉಂಟಾಗಬಹುದು. ಆದರೆ ಅಚಲವಾದ ನಿ? ಇದ್ದಾಗ ಮಾತ್ರ ಆತ ಒಲಿಯುತ್ತಾನೆ ಎಂಬುದನ್ನು ನಾವು ಈ ಮೂಲಕ ಮನಗಾಣಬಹುದು.
ಕಾಳಿದಾಸನು ಕುಮಾರಸಂಭವಮಹಾಕಾವ್ಯದ ಈ ಎಲ್ಲ ಸನ್ನಿವೇಶಗಳ ಮೂಲಕ ’ಶಿವನು ಅಂತರಂಗದ ಸೌಂದರ್ಯಕ್ಕೆ ಮಾತ್ರ ಒಲಿಯುತ್ತಾನೆಯೇ ಹೊರತು ಬಾಹ್ಯವಾದ ರೂಪ, ಆಡಂಬರ ಇತ್ಯಾದಿಗಳಿಗಲ್ಲ. ತೋರಣಕ್ಕಿಂತ ಹೂರಣ ಮುಖ್ಯ’ ಎಂಬ ಸತ್ಯವನ್ನು ಸಾರಿದ್ದಾನೆ. ಅರಿವಿಗೆ ಮೀರಿದ ಹರನ ಹಿರಿಮೆಯ ಹರಹಿಗೆ ನಮೋ ನಮಃ.
|| ಸತ್ಯಂ ಶಿವಂ ಸುಂದರಮ್ ||