ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2019 > ಪೂರ್ಣ ಸಹಕಾರದ ಹೊಸ ಮನ್ವಂತರ

ಪೂರ್ಣ ಸಹಕಾರದ ಹೊಸ ಮನ್ವಂತರ

ಇಸ್ರೋದ ಪ್ರತಿಯೊಂದು ಉಡಾವಣೆಯೂ ಆಶಾವಾದ ಮತ್ತು ಭರವಸೆಯ ಕಥೆಯಾಗಿದೆ. ನವೆಂಬರ್ 29, 2018ರಂದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ (ಇಸ್ರೋ) ಭಾರತದ ‘ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್’ (ಪಿಎಸ್‍ಎಲ್‍ವಿ-ಸಿ43) ಮೂಲಕ 30 ಉಪಗ್ರಹಗಳನ್ನು ಹಾರಿಸಿತು. ಇಸ್ರೋದ ಈ ಉಡಾವಣೆಯ ಪ್ರಮುಖ ಉಪಗ್ರಹವು ದೇಶದ ಸ್ವಂತ ಭೂ ಸಮೀಕ್ಷಾ ಉಪಗ್ರಹವಾದ ‘ಹೈಫಲ್ ಸ್ಪೆಕ್ಟ್ರಲ್ ಇಮೇಜಿಂಗ್ ಸೆಟಲೈಟ್’ (ಎಚ್‍ವೈಎಸ್‍ಐಎಸ್) ಆಗಿತ್ತು. ಪಿಎಸ್‍ಎಲ್‍ವಿ-ಸಿ 43ರ ಇತರ 29 ಉಪಗ್ರಹಗಳು ಬೇರೆÉ ಎಂಟು ದೇಶಗಳಿಂದ ಬಂದಿದ್ದವು; ಅದರಲ್ಲಿ 23 ಉಪಗ್ರಹಗಳನ್ನು ಹೊಂದಿದ್ದ ಅಮೆರಿಕದ್ದು ಸಿಂಹಪಾಲು. ಇದು 2018ರಲ್ಲಿ ಪಿಎಸ್‍ಎಲ್‍ವಿ ಸಾಧಿಸಿದ ಆರನೇ ಉಡಾವಣೆಯಾಗಿತ್ತು. ಇತರ ಹಲವು ವಿಷಯಗಳೊಂದಿಗೆ ಈ ಬೆಳವಣಿಗೆಯು ಎರಡು ಪ್ರಮುಖ ವಿಷಯಗಳನ್ನು ತಿಳಿಸುವಂತಿತ್ತು.

* ಇಸ್ರೋ ಈ ರೀತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವುದರಿಂದ ಬಾಹ್ಯಾಕಾಶ ತಂತ್ರಜ್ಞಾನ ದೇಶಗಳಲ್ಲಿ ಭಾರತ ಪ್ರಮುಖ ಸ್ಥಾನಕ್ಕೆ ಬರುತ್ತಿದೆ. ಅದಕ್ಕೆ ಬಾಹ್ಯಾಕಾಶದಲ್ಲಿ ಸ್ವಂತ ಉಪಕರಣವಿದ್ದಲ್ಲಿ ಅದರ ಮೂಲಕ ಕೃಷಿ ವೈದ್ಯಕೀಯ ಹಾಗೂ ಭದ್ರತೆಯವರೆಗೆ ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ತರುವ ಸಾಮಥ್ರ್ಯವಿದೆ.

* ಈಚಿನ ವರ್ಷಗಳಲ್ಲಿ ಇಸ್ರೋದ ಬ್ರಾಂಡ್ ಮೌಲ್ಯವು ಆಕಾಶಕ್ಕೇರಿದೆ. ಹೆಚ್ಚು ಹೆಚ್ಚು ದೇಶಗಳು ತಮ್ಮ ಉಪಗ್ರಹಗಳನ್ನು ಹಾರಿಸಲು ಭಾರತದ ರಾಕೆಟ್‍ಗಳನ್ನು ಬಳಸಲು ಮುಂದೆ ಬರುತ್ತಿರುವುದರಿಂದ ಇದು ಸ್ಪಷ್ಟವಾಗುತ್ತದೆ; ಇದರಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಆರ್ಥಿಕವಾಗಿ ಬಲಗೊಳ್ಳುತ್ತಿದೆ.

ಆಡಳಿತದ ಬೆಂಬಲ

1969ರಲ್ಲಿ ಸ್ಥಾಪನೆಗೊಂಡಂದಿನಿಂದ ಇಸ್ರೋ ಎಲ್ಲ ರೀತಿಯಲ್ಲಿ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸುತ್ತಾ ಬಂದಿದೆ. 1975ರಲ್ಲಿ ಆರ್ಯಭಟವನ್ನು ಹಾರಿಸಿದ ದಿನದಿಂದ 2008ರಲ್ಲಿ ಚಂದ್ರಯಾನ-1ನ್ನು ಹಾರಿಸುವವರೆಗೆ ಸಂಸ್ಥೆ ಹಲವು ಮೈಲಿಗಲ್ಲುಗಳನ್ನು ದಾಟಿ ಬಂದಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವು ಬಾಹ್ಯಾಕಾಶ ಸಂಶೋಧನೆಗೆ ಆದ್ಯತೆ ನೀಡಿದ್ದಲ್ಲದೆ ಆ ಹೊತ್ತಿಗಾಗಲೇ ಪ್ರಗತಿಪಥದಲ್ಲಿದ್ದ ಇಸ್ರೋಗೆ ಹೆಚ್ಚಿನ ಪೆÇ್ರೀತ್ಸಾಹವನ್ನು ನೀಡಿತು.

ಇಸ್ರೋ ಮತ್ತು ಈಗಿನ ಕೇಂದ್ರಸರ್ಕಾರಗಳ ನಡುವೆ ಯಾವ ರೀತಿ ಒಳ್ಳೆಯ ಸಂಬಂಧವಿದೆ ಮತ್ತು ಅದರಿಂದ ಯಾವ ರೀತಿ ಹೊಸಹೊಸ ಸಾಧನೆಗಳು ಆಗುತ್ತಿವೆ ಎಂಬುದಕ್ಕೆ ಇಲ್ಲಿ ಕೆಲವು ಉದಾಹರಣೆಗಳಿವೆ. ಇಸ್ರೋದ ಪ್ರತಿಯೊಂದು ಉಡಾವಣೆ ವಿಭಿನ್ನ ಒಳನೋಟಗಳನ್ನು ಮತ್ತು ಪ್ರಗತಿಯ ಭರವಸೆಯನ್ನು ನೀಡುತ್ತಿದೆ. ಕೆಲವು ಪ್ರಮುಖ ಹೆಜ್ಜೆಗಳು ಹೀಗಿವೆ:

* 2014-17ರ ನಡುವೆ ಇಸ್ರೋ ಹಲವಾರು ಕಾರ್ಯಾಚರಣೆಗಳನ್ನು ನಡೆಸಿದೆ. ಅದರಲ್ಲಿ 17 ಲಾಂಚ್ ವೆಹಿಕಲ್ ಕಾರ್ಯಾಚರಣೆಗಳಾದರೆ 16 ಉಪಗ್ರಹ ಉಡಾವಣೆಗಳಾಗಿವೆ. ಮತ್ತು ಮೂರು ತಂತ್ರಜ್ಞಾನ ಪ್ರದರ್ಶನದ ಸಾಧನೆಗಳು.

*  2014-17ರ ಅವಧಿಯಲ್ಲಿ ಪಿಎಸ್‍ಎಲ್‍ವಿ ಮೂಲಕ 13 ದೇಶಗಳ 145 ಉಪಗ್ರಹಗಳನ್ನು ಹಾರಿಸಲಾಗಿದೆ.

* 2017ರ ಮೇ ತಿಂಗಳಲ್ಲಿ ಇಸ್ರೋ  ಜಿ-ಸ್ಯಾಟ್-9ರ ಉಡಾವಣೆ ನಡೆಸಿತು. ಅದು ಭಾರತದ ರಾಜತಾಂತ್ರಿಕತೆಗೂ ಮಹತ್ತ್ವದ ಸಂದರ್ಭವಾಗಿತ್ತು. ಏಕೆಂದರೆ ಅದು ನೆರೆಯ ಸಾರ್ಕ್ ದೇಶಗಳಾದ ಭೂತಾನ್, ನೇಪಾಳ, ಶ್ರೀಲಂಕಾ, ಬಂಗ್ಲಾದೇಶ, ಮತ್ತು ಮಾಲ್ದೀವ್ಸ್ ಅನ್ನು ಒಳಗೊಂಡಿತ್ತು. 2014ರ ಜೂನ್‍ನಲ್ಲಿ ಇಸ್ರೋ ಜೊತೆ ನಡೆಸಿದ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಆ ಸವಾಲನ್ನು ಮುಂದಿಟ್ಟಿದ್ದರು.

* ನಾವಿಕ್ (Navigation Indian Constellation) ಎನ್ನುವ ಏಳು ಉಪಗ್ರಹಗಳ ಸ್ಥಾಪನೆಯಿಂದಾಗಿ ಭಾರತ ಸ್ವಂತ ‘ಜಾಗತಿಕ ಸ್ಥಾನ ನಿಗದಿ ವ್ಯವಸ್ಥೆ’ಯನ್ನು (Global Positioning System) ಹೊಂದಿದೆ. ಈ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈನಲ್ಲಿ ಹಾರಿಸಲಾಗಿತ್ತು; ಉಳಿದ ಆರನ್ನು 2014-16ರ ನಡುವೆ ಹಾರಿಸಲಾಯಿತು.

* 2014ರಲ್ಲಿ ಭಾರತಕ್ಕೆ ತನಗಿರುವ ದ್ವೀಪಗಳು ಎಷ್ಟು ಎಂಬುದೇ ಖಚಿತವಾಗಿ ಗೊತ್ತಿರಲಿಲ್ಲ. ಪ್ರಧಾನಿ ಕಾರ್ಯಾಲಯದ ಕೋರಿಕೆ ಮೇರೆಗೆ ಇಸ್ರೋ 2015ರಲ್ಲಿ ದ್ವೀಪಗಳ ನಕಾಶೆ ರಚಿಸುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಪರಿಣಾಮವಾಗಿ ಇಡೀ ದ್ವೀಪ ಮಾಹಿತಿ ವ್ಯವಸ್ಥೆಯು ರೂಪುಗೊಂಡಿತು.

* 2014ಕ್ಕೆ ಮುನ್ನ ಕೇಂದ್ರಸರ್ಕಾರದಲ್ಲಿ ಇಸ್ರೋ ಅಂಕಿ-ಅಂಶಗಳನ್ನು ಬಳಸಿಕೊಳ್ಳುವ ಸಚಿವಾಲಯಗಳ ಸಂಖ್ಯೆ ತುಂಬ ಕಡಮೆಯಿತ್ತು. ಮೋದಿ ಸರ್ಕಾರದ ಅಡಿಯಲ್ಲಿ ವಿವಿಧ ಸಚಿವಾಲಯಗಳ ಹಲವು ಇಲಾಖೆಗಳು ಇಸ್ರೋ ಕೊಡುವ ಅಂಕಿ-ಅಂಶಗಳನ್ನು ಬಳಸಿಕೊಳ್ಳುತ್ತಿವೆ. ಇದರಿಂದಾಗಿ ಸಂಸ್ಥೆಯ ಕೆಲಸದ ವ್ಯಾಪ್ತಿ ತುಂಬ ಹೆಚ್ಚಾಗಿದೆ.

* ಕಳೆದ ನಾಲ್ಕು ವರ್ಷಗಳಲ್ಲಿ ಕಕ್ಷೆಗೆ ಸೇರಿಸಿದ ಪ್ರಮುಖ ಉಪಗ್ರಹಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಗಾ ಇಡುವ ‘ರಿಸೋರ್ಸ್ ಸ್ಯಾಟ್-2ಎ’,

ಚಂಡಮಾರುತಗಳನ್ನು ಮುಂಚಿತವಾಗಿ ತಿಳಿಸುವ ಮತ್ತು ಸಾಗರ ಅಧ್ಯಯನಕ್ಕೆ ಸಂಬಂಧಿಸಿದ ‘ಸ್ಕ್ಯಾಟ್‍ಸ್ಯಾಟ್’, ಹವಾಮಾನವನ್ನು ತಿಳಿಸುವ ‘ಇನ್ಸಾಟ್ 3 ಡಿಲ್’ಗಳು ಸೇರಿವೆ.

* ದೇಶದ ಮಾನವಸಹಿತ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಕ್ಕೆ ಪ್ರಧಾನಿ ಮೋದಿ 2022ನ್ನು ನಿಗದಿಪಡಿಸಿ, ಅಗತ್ಯವಾದ ಹಣ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಆಡಳಿತದಲ್ಲಿ ಇಸ್ರೋ ಕೆಲಸ ವ್ಯಾಪ್ತಿಯ ವಿಸ್ತರಣೆ

ಆಡಳಿತದಲ್ಲಿ ದಕ್ಷತೆಯನ್ನು ತರುವುದಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಬಗೆಗಿನ ಪ್ರಧಾನಿ ಮೋದಿಯವರ ತುಡಿತ ಎಲ್ಲರಿಗೂ ತಿಳಿದದ್ದೇ. ಅದರಿಂದಾಗಿ ರಾಷ್ಟ್ರನಿರ್ಮಾಣದಲ್ಲಿ ಇಸ್ರೋದ ಸಾಧ್ಯತೆಯನ್ನು ಪೂರ್ತಿಯಾಗಿ ಬಳಸಿಕೊಳ್ಳುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ಕೆಲವು ಉದಾಹರಣೆಗಳನ್ನು ಕೊಡುವುದಾದರೆ: ‘ಜಿಯೋ ಎಂ ನರೇಗಾ’ದ ಅಡಿಯಲ್ಲಿ ಒಂದು ಕೋಟಿಗೂ ಅಧಿಕ ಆಸ್ತಿಯನ್ನು ಜೋಡಿಸಲಾಗಿದೆ; ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ಯ ಅಡಿಯಲ್ಲಿ ಬರುವ ಮನೆಗಳನ್ನು ಭೌಗೋಳಿಕವಾಗಿ ಜೋಡಿಸಲಾಗಿದೆ; ಅದಲ್ಲದೆ ಹಲವಾರು ಕೆಲಸಗಳು ಪ್ರಗತಿಯಲ್ಲಿವೆ. ಉದಾ – ಮೀನುಗಾರರಿಗೆ ನೆರವಾಗಲು ತಾಂತ್ರಿಕ ಸಹಕಾರ ನೀಡುವುದು; ಸಮುದ್ರದಲ್ಲಿನ ಅಂತಾರಾಷ್ಟ್ರೀಯ ಗಡಿಗಳನ್ನು ತಿಳಿಸುವ ಮೂಲಕ ಸಮುದ್ರಕ್ಕೆ ಮೀನುಗಾರಿಕೆಗೆ ಹೋದ ಮೀನುಗಾರರು ಅನ್ಯರಾಷ್ಟ್ರದ ಬಂಧನಕ್ಕೊಳಗಾಗುವುದನ್ನು ತಪ್ಪಿಸುವುದು. ಇದು ಮೂಲಭೂತವಾಗಿ ಇಸ್ರೋದ ಸಾಧನೆಯಾಗಿದ್ದು, ಹಿಂದೆ ಅಸಂಭವವಾಗಿದ್ದ ಕೆಲಸಗಳು ಈಗ ಸಾಧ್ಯವಾಗುತ್ತಿವೆ.

ಪ್ರಸ್ತುತ ಕೇಂದ್ರಸರ್ಕಾರವು ಇಸ್ರೋದೊಂದಿಗೆ ನಿರಂತರ ಸಂಪರ್ಕವನ್ನು ಇರಿಸಿಕೊಂಡಿದೆ ಎಂದು ಮಾಧ್ಯಮದ ವರದಿಗಳು ಮತ್ತು ವಿಶ್ಲೇಷಣೆಗಳು ಖಚಿತಗೊಳಿಸುತ್ತವೆ.

ತಾಂತ್ರಿಕ ಉಪಕ್ರಮದ ಮೂಲಕ ಆಡಳಿತವನ್ನು ಪರಿವರ್ತಿಸಬೇಕು ಎನ್ನುವ ಪ್ರಧಾನಿ ಮೋದಿ ಅವರ ಮುನ್ನೋಟ ಹಾಗೂ ಇಸ್ರೋ ಮಾಡುತ್ತಿರುವ ಕೆಲಸಗಳ ನಡುವೆ ಅಪೂರ್ವ ಹೊಂದಾಣಿಕೆಯಿದೆ. ಈಚೆಗೆ ಇಸ್ರೋ ಯಶಸ್ವಿಯಾಗಿ ಹಾರಿಸಿದ ಎಚ್‍ವೈಎಸ್‍ಐಎಸ್‍ನ ಉದ್ದೇಶ ದೇಶದ ಮಾಲಿನ್ಯ, ಮಣ್ಣು ಹಾಗೂ ನೀರಿನ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಅಂತಹ ಮಾಹಿತಿಯನ್ನು ಆಡಳಿತ ಮತ್ತು ರಾಷ್ಟ್ರನಿರ್ಮಾಣಗಳಿಗೆ ಬಳಸಿಕೊಂಡಲ್ಲಿ ದೇಶದಲ್ಲಿ ಭಾರೀ ಪರಿವರ್ತನೆ ಆಗಲಿದೆ; ಅದರಿಂದ ಭಾರತದ ಮುಂದೆ ಅಪಾರ ಸಾಧ್ಯತೆಗಳು ತೆರೆದುಕೊಳ್ಳಲಿವೆ.

(ಸೌಜನ್ಯ: ‘ದ ಟ್ರೂ ಪಿಕ್ಚರ್’)

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat