ಫ್ರಾನ್ಸ್, ಇಟಲಿ ದೇಶಗಳ ಎಲ್ಲೆ ಪ್ರದೇಶದ ಮೆಡಿಟರೇನಿಯನ್ ಸಮುದ್ರದ ತೀರದ ಮೇಲಿದೆ ಈ ಪುಟ್ಟ ದೇಶ -‘ಮಾನುಕೋ.’ ಅನೇಕ ದೇಶಗಳ ರಾಜ್ಯಗಳೇ ಈ ದೇಶಕ್ಕಿಂತ ಹೆಚ್ಚು ದೊಡ್ಡದಾಗಿವೆ ಎಂದು ಹೆಮ್ಮೆ ಪಡಬಹುದು. ಈ ಮಹಾಸಾಮ್ರಾಜ್ಯದ ಜನಸಂಖ್ಯೆ ಕೇವಲ ಏಳುಸಾವಿರವನ್ನೂ ಮೀರಲಿಕ್ಕಿಲ್ಲ. ಈ ದೇಶದ ಭೂಪ್ರದೇಶವನ್ನು ಸಮನಾಗಿ ಹಂಚಿದರೆ ಒಬ್ಬೊಬ್ಬ ಪ್ರಜೆಗೂ ಒಂದೊಂದು ಎಕರೆಯನ್ನು ಮೀರದಷ್ಟು ಸಿಕ್ಕಬಹುದೇನೋ! ಈ ಅಟಿಕೆ ರಾಜ್ಯಕ್ಕೊಬ್ಬ ರಾಜ. ಅವನಿಗೊಂದು ಅರಮನೆ, ಸಂಸ್ಥಾನಿಕರು, ಮಂತ್ರಿಗಳು, ಸೈನಿಕರು, ಅವರಿಗೊಬ್ಬ ದಂಡನಾಯಕ. ಸೈನ್ಯ ದೊಡ್ಡದೇನಲ್ಲ; ಕೇವಲ ಅರವತ್ತು […]
ದುಬಾರಿ ಕೈದಿ
Month : July-2019 Episode : Author : ಎಸ್.ಎನ್. ಪ್ರಸಾದ್