“ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆದುಕೊಂಡು ಬಂದಂತೆ” ಎಂದು ಕನ್ನಡದ ಒಂದು ಗಾದೆ ಇದೆ; ದೇಶಾದ್ಯಂತ ನಡೆದ ಖಿಲಾಫತ್ ಚಳವಳಿ, ಅದಕ್ಕೆ ಸಂಬAಧಿಸಿದ ಹಿಂಸಾಚಾರ, ಮತ್ತು ಮುಖ್ಯವಾಗಿ ಕೇರಳದ ಕೆಲವು ಭಾಗಗಳಲ್ಲಿ ನಡೆದ ಮೋಪ್ಲಾ ಹತ್ಯಾಕಾಂಡವನ್ನು ಗಮನಿಸುವಾಗ ಮೇಲಣ ಗಾದೆ ಎಷ್ಟು ನಿಜ ಅನ್ನಿಸದಿರದು. ಹಲವು ತಿಂಗಳು ನಡೆದ ಮೋಪ್ಲಾ ಹತ್ಯಾಕಾಂಡವಂತೂ ಹಿಂದೆAದೂ ಕಂಡಿರದಂಥ ಅತ್ಯಂತ ಅಮಾನವೀಯ ಹಿಂಸಾಕಾಂಡವಾಗಿತ್ತು.
ಮುಸಲ್ಮಾನರಿಗೆ ಸ್ವರಾಜ್ ಎಂದರೆ ಖಿಲಾಫತ್ ವಿಷಯವನ್ನು ಪರಿಣಾಮಕಾರಿಯಾಗಿ ಎದುರಿಸುವ ಭಾರತದ ಸಾಮರ್ಥ್ಯ. ಅವರ ಈ ನಿಲವಿಗೆ ಸಹಾನುಭೂತಿಯನ್ನು ತೋರಿಸದಿರಲು ಅಸಾಧ್ಯ. ಖಿಲಾಫತ್ ಹಿತಾಸಕ್ತಿಯನ್ನು ಮುಂದಿರಿಸಿಕೊಳ್ಳುವುದಾದರೆ ಸ್ವರಾಜ್ ಚಟುವಟಿಕೆಯನ್ನು ಮುಂದೂಡಿ ಎಂದು ನಾನು ಸಂತೋಷದಿಂದ ಹೇಳುತ್ತೇನೆ – ಇದು ಗಾಂಧಿಯವರ ಮಾತು. ಸಂದರ್ಭ ೧೯೧೯ರ ಅಸಹಕಾರ ಚಳವಳಿಯ ಸಿದ್ಧತೆಯ ದಿನಗಳು. ಆ ಹೊತ್ತಿಗೆ ಅವರಿಗೆ ದೇಶದ ಸ್ವರಾಜ್ಯ (ಸ್ವಾತಂತ್ರ್ಯ)ಕ್ಕಿAತ ಭಾರತದ ಮುಸ್ಲಿಮರ ಗಮನ ಸೆಳೆದಿದ್ದ ಟರ್ಕಿಯ ಖಿಲಾಫತ್ (ಖಲೀಫರ ಮುಂದುವರಿಕೆ) ವಿಷಯವೇ ಮುಖ್ಯವೆನಿಸಿತ್ತು.
ಅದೇನೂ ಆಕಸ್ಮಿಕವಲ್ಲ. ಅದಕ್ಕಿಂತ ಬಹಳ ಹಿಂದೆಯೇ ಅವರೊಮ್ಮೆ ಹೀಗೆ ಹೇಳಿದ್ದರು: “ಸತ್ಯದ ಒಬ್ಬ ಮನುಷ್ಯನಾಗಿ ನನ್ನ ಪ್ರಾಮಾಣಿಕ ನಂಬಿಕೆ ಎಂದರೆ ಮಹಮ್ಮದೀಯರ ಅಪೇಕ್ಷೆ ಏನೇ ಇದ್ದರೂ ಅದನ್ನು ಒಪ್ಪಿಕೊಳ್ಳಬೇಕು; ಅದರಲ್ಲಿ ಅವರು ಸಂತೋಷಪಡಬೇಕು. ಪರಸ್ಪರ ಅಂತಹ ವಿಶಾಲ ಹೃದಯ ಇದ್ದರೆ ಮಾತ್ರ ನಾವು (ಹಿಂದೂ-ಮುಸ್ಲಿಂ) ಒಗ್ಗಟ್ಟನ್ನು ನಿರೀಕ್ಷಿಸಬಹುದು.” ಇನ್ನೊಂದು ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದರು: “ನಾವು ಹಿಂದೂ-ಮುಸ್ಲಿA ಏಕತೆಯ ಬಗ್ಗೆ ಮಾತನಾಡುತ್ತೇವೆ. ಮುಸ್ಲಿಮರ ಹಿತಾಸಕ್ತಿಗಳು ಅಪಾಯಕ್ಕೆ ಗುರಿಯಾದಾಗ ಹಿಂದುಗಳು ಮಹಮ್ಮದೀಯರಿಂದ ದೂರವಿದ್ದಲ್ಲಿ (ಹಿಂದೂ-ಮುಸ್ಲಿA) ಏಕತೆ ಒಂದು ಖಾಲಿ ನುಡಿಗಟ್ಟು (ಫ್ರೇಸ್) ಆಗುತ್ತದೆ.”
“ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಯೊಳಗೆ ಕರೆದುಕೊಂಡು ಬಂದಂತೆ” ಎಂದು ಕನ್ನಡದಲ್ಲಿ ಒಂದು ಗಾದೆ ಇದೆ. ದೇಶಾದ್ಯಂತ ನಡೆದ ಖಿಲಾಫತ್ ಚಳವಳಿ, ಅದಕ್ಕೆ ಸಂಬAಧಿಸಿದ ಹಿಂಸಾಚಾರಗಳು, ಮತ್ತು ಮುಖ್ಯವಾಗಿ ಕೇರಳದ ಕೆಲವು ಭಾಗಗಳಲ್ಲಿ ನಡೆದ ಮೋಪ್ಲಾ ಹತ್ಯಾಕಾಂಡವನ್ನು (Mopla Rebellion) ಗಮನಿಸುವಾಗ ಮೇಲಣ ಗಾದೆ ಎಷ್ಟು ನಿಜ ಅನ್ನಿಸದಿರದು. ಹಲವು ತಿಂಗಳು ನಡೆದ ಮೋಪ್ಲಾ ಹತ್ಯಾಕಾಂಡವಂತೂ ಹಿಂದೆAದೂ ಕಂಡಿರದAಥ ಅತ್ಯಂತ ಅಮಾನವೀಯ ಹಿಂಸಾಕಾAಡವಾಗಿತ್ತು. ಸಾವಿರಾರು ಹಿಂದುಗಳು ಅದರಲ್ಲಿ ಪ್ರಾಣಕಳೆದುಕೊಂಡರು; ಮಹಿಳೆಯರ ಮೇಲೆ ನಾನಾ ಬಗೆಯ ದೌರ್ಜನ್ಯಗಳು ನಡೆದವು. ಕೊನೆಗೆ ಅದನ್ನು ನಿಯಂತ್ರಿಸಲು ಸೇನೆಯನ್ನೇ ನಿಯೋಜಿಸಲಾಯಿತು.
ಬ್ರಿಟಿಷರ ಜೊತೆ ಸಾಕಷ್ಟು ಉತ್ತಮ ಸಂಬAಧವನ್ನು ಹೊಂದಿದ್ದ ಭಾರತೀಯ ಮುಸ್ಲಿಮರು ಮೊದಲನೇ ಮಹಾಯುದ್ಧದ ವೇಳೆ (೧೯೧೪-೧೮) ಅವರಿಗೆ ವಿರುದ್ಧವಾಗುತ್ತಾ ಹೋದರು. ಭಾರತ ಮತ್ತು ಮುಸ್ಲಿಂ ಜಗತ್ತಿನ ಘಟನೆಗಳು ಭಾರತೀಯ ಮುಸ್ಲಿಮರನ್ನು ಆ ದಿಕ್ಕಿನಲ್ಲಿ ನಡೆಸಿದವು. ಮೈತ್ರಿಗೆ ಸಂಬಂಧಿಸಿ ಅವರು ಬ್ರಿಟಿಷರೊಂದಿಗೆ ಸಶದ್ತ್ರ ಒಪ್ಪಂದವನ್ನು ಕೂಡ ಮಾಡಿಕೊಂಡಿದ್ದರು. ಆದರೆ ಮಹಾಯುದ್ಧದ ವೇಳೆ ದೇಶದ ಮುಸ್ಲಿಮರು ಕ್ರಮೇಣ ಬ್ರಿಟಿಷರಿಗೆ ವಿರೋಧಿಗಳಾದರು. ಅಂದಿನ ಜಾಗತಿಕ ಘಟನೆಗಳನ್ನು ಗಮನಿಸುವುದರ ಜೊತೆಗೆ ಅದಕ್ಕೆ ಭಾರತೀಯ ಮುಸ್ಲಿಮರ ಪ್ರತಿಕ್ರಿಯೆ ಹೇಗಿತ್ತೆಂದು ನೋಡುವುದೂ ಕುತೂಹಲಕರವೆನಿಸುತ್ತದೆ.
ಮೊದಲನೇ ಮಹಾಯುದ್ಧದ ಕೊನೆಯ ವೇಳೆಗೆ ಟರ್ಕಿಯ ಪುರಾತನ ಒಟ್ಟೊಮನ್ ಸಾಮ್ರಾಜ್ಯದ ಪತನವು ಸಂಭವಿಸಿತು, ಮತ್ತು ಅದೇ ಕಾರಣದಿಂದ ಖಿಲಾಫತ್ ಚಳವಳಿ ಆರಂಭವಾಯಿತಾದರೂ ಅದರ ಲಕ್ಷಣಗಳು ಮಹಾಯುದ್ಧದಲ್ಲಿ ಟರ್ಕಿಯ ಖಲೀಫರ ಅದೃಷ್ಟ ಇಳಿಮುಖವಾಗುವಾಗಲೇ ಕಾಣತೊಡಗಿತ್ತು. ಮಹಾಯುದ್ಧದ ಕೊನೆಯನ್ನೇ (ನವೆಂಬರ್ ೧೯೧೮) ೧೯೧೧-೨೪ರ ಆ ಸಂಬAಧದ ಘಟನಾವಳಿಗಳ ಮಧ್ಯಬಿಂದು ಎಂದು ಪರಿಗಣಿಸಬಹುದು.
ಒಂದನೇ ಮಹಾಯುದ್ಧದಲ್ಲಿ ಟರ್ಕಿ
ಒಂದನೇ ಮಹಾಯುದ್ಧವು ಎರಡು ಕೂಟಗಳ ನಡುವೆ ನಡೆದಿದ್ದು, ಮಿತ್ರರಾಷ್ಟçಗಳು ಮತ್ತು ಕೇಂದ್ರೀಯ ಶಕ್ತಿಗಳೇ ಆ ಕೂಟಗಳು. ಮಿತ್ರರಾಷ್ಟçಗಳಲ್ಲಿ ಬ್ರಿಟನ್, ರಷ್ಯಾ, ಇಟಲಿ, ರೊಮೇನಿಯ, ಜಪಾನ್ ಮತ್ತು ಅಮೆರಿಕಗಳಿದ್ದರೆ, ಕೇಂದ್ರೀಯ (ಸೆಂಟ್ರಲ್) ದೇಶಗಳಲ್ಲಿ ಜರ್ಮನಿ, ಆಸ್ಟಿçಯ, ಹಂಗೆರಿ, ಬಲ್ಗೇರಿಯ ಮತ್ತು ಒಟ್ಟೊಮನ್ ಟರ್ಕಿ ಸಾಮ್ರಾಜ್ಯಗಳಿದ್ದವು. ಯುದ್ಧ ಮುಗಿಯುವ ಹೊತ್ತಿಗೆ ಮಿತ್ರರಾಷ್ಟ್ರಗಳಿಗೆ ಜಯ ಲಭಿಸಿತು. ನಾಗರಿಕರು, ಸೈನಿಕರು ಸೇರಿ ಒಟ್ಟು ೧.೬ ಕೋಟಿ ಜನ ಯುದ್ಧದಲ್ಲಿ ಸಾವಿಗೀಡಾದರು; ವಿವಿಧ ಹಂತದಲ್ಲಿ ವಿವಿಧ ದೇಶಗಳು ಯುದ್ಧಕ್ಕೆ ಸೇರಿಕೊಳ್ಳಬೇಕಾಯಿತು.
ಕ್ರಿ.ಶ. ೧೨೯೯ರಲ್ಲಿ ಸ್ಥಾಪನೆಗೊಂಡ ಒಟ್ಟೊಮನ್ ಸಾಮ್ರಾಜ್ಯವು ತನ್ನ ಉನ್ನತಸ್ಥಿತಿಯಲ್ಲಿದ್ದಾಗ (೧೫೨೦-೧೫೬೬) ಮಧ್ಯಪೂರ್ವದ ಹಲವಾರು ಭಾಗಗಳನ್ನು ಆಳುತ್ತಿತ್ತು; ಅರೇಬಿಯ, ಸಿರಿಯ, ಲೆಬನಾನ್, ಪ್ಯಾಲೆಸ್ತೀನ್, ಜೋರ್ಡಾನ್, ಈಜಿಪ್ಟ್ ಮತ್ತು ಟರ್ಕಿ, ಗ್ರೀಸ್, ಬಲ್ಗೇರಿಯ, ಹಂಗೇರಿ, ಮ್ಯಾಸಿಡೋನಿಯ ಮತ್ತು ರೊಮೇನಿಯಗಳನ್ನು ಒಳಗೊಂಡ ಪೂರ್ವ ಯೂರೋಪ್ ಹಾಗೂ ಉತ್ತರ ಆಫ್ರಿಕ (ಕರಾವಳಿ)ಗಳು ಅದರಲ್ಲಿ ಸೇರಿದ್ದವು. ಜ್ಞಾನಪುನರುಜ್ಜೀವನ (ರಿನೈಸಾನ್ಸ್) ಮತ್ತು ಕ್ರೈಸ್ತ ಯೂರೋಪಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ಆರಂಭದೊಂದಿಗೆ ಕ್ರಿ.ಶ. ೧೬೦೦ರ ಹೊತ್ತಿಗೆ ಅದರ ಅವರೋಹಣವು ಆರಂಭಗೊAಡಿತು. ಮುಂದಿನ ನೂರು ವರ್ಷಗಳಲ್ಲಿ ಒಟ್ಟೊಮನ್ ಸಾಮ್ರಾಜ್ಯವು ತನ್ನ ಬಹಳಷ್ಟು ಭೂಭಾಗಗಳನ್ನು ಕಳೆದುಕೊಂಡಿತು.
ಒAದನೇ ಮಹಾಯುದ್ಧದ ಆರಂಭದ ಹೊತ್ತಿಗೇ ಒಟ್ಟೊಮನ್ ಸಾಮ್ರಾಜ್ಯ ಶಿಥಿಲವಾಗಿತ್ತು; ಭೂಭಾಗಗಳು ನಷ್ಟವಾಗಿದ್ದವು. ಆಂತರಿಕ ಭಿನ್ನಾಭಿಪ್ರಾಯಗಳು, ದುರ್ಬಲ ಆರ್ಥಿಕತೆಯಲ್ಲದೆ ನೈತಿಕ ಸ್ಥೈರ್ಯ ಕೂಡ ಕುಸಿತವಾಗಿತ್ತು. ಸಾಮ್ರಾಜ್ಯದ ಮುಖ್ಯಸ್ಥ ಸುಲ್ತಾನ್ ಮೆಹಮೆಟ್-ಗಿ ರಾಷ್ಟ್ರೀಯ ಜಾಗೃತಿಗೆ ಕರೆ ನೀಡಿದ. ಯುದ್ಧಕಾಲದ ಮಂತ್ರಿ ಅನ್ವರ್ ಪಾಷಾನ ಕೆಳಗಿನ ಒಟ್ಟೊಮನ್ ಸರ್ಕಾರದ ಸೇನೆ ಮತ್ತು ನೌಕಾಪಡೆಗಳ ಪುನರ್ವ್ಯವಸ್ಥೆಗೆ ಕ್ರಮ ಕೈಗೊಂಡಿತು. ಮೊದಲಿಗೆ ಟರ್ಕಿಯು ಜರ್ಮನಿ ಮತ್ತು ಬ್ರಿಟನ್ ಎರಡರಲ್ಲಿ ಯಾವುದೇ ಒಂದರ ಜೊತೆ ಮೈತ್ರಿಗೆ ಮುಕ್ತವಿತ್ತು. ಬ್ರಿಟನ್ ಜೊತೆ ದೀರ್ಘಾವಧಿ ಮೈತ್ರಿ ಅಸಾಧ್ಯ ಎನಿಸಿದ್ದರೆ, ಜರ್ಮನಿ ಯಾವುದೇ ಕಾಲದಲ್ಲಿ ಒಟ್ಟೊಮನ್ ಸಾಮ್ರಾಜ್ಯದ ನೆಲದ ಮೇಲೆ ಕಣ್ಣಿಟ್ಟಿರಲಿಲ್ಲ. ಇದು ಮತ್ತು ಹಿಂದಿನ ಸೇನಾಸಂಬAಧದ ಕಾರಣದಿಂದ ಟರ್ಕಿ ಜರ್ಮನಿಯ ಜೊತೆ ಕೈಜೋಡಿಸಲು ನಿರ್ಧರಿಸಿತು.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಟರ್ಕಿ ಜರ್ಮನಿಯಿಂದ ೫೦ ಲಕ್ಷ ಟರ್ಕಿಶ್ ಪೌಂಡ್ ಹಣ ಕೇಳಿತು. ಆಗ ಜರ್ಮನಿ ಯುದ್ಧದ ವೇಳೆ ತನ್ನ ಕಡೆ ಸಕ್ರಿಯವಾಗಿ ಇರುವುದಾದರೆ ಮಾತ್ರ ಅದನ್ನು ಕೊಡುವುದಾಗಿ ಹೇಳಿತು. ೧೯೧೪ರ ಅಕ್ಟೋಬರ್ನಲ್ಲಿ ರಷ್ಯಾದ ಒಂದು ಬಂದರಿನ ಮೇಲೆ ದಾಳಿ ಮಾಡುವ ಮೂಲಕ ಒಟ್ಟೊಮನ್ ಸಾಮ್ರಾಜ್ಯವು ಯುದ್ಧಕ್ಕೆ ಇಳಿಯಿತು. ೧೯೧೫ರ ಮಧ್ಯದ ಹೊತ್ತಿಗೆ ಟರ್ಕಿಗೆ ಮತ್ತೆ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಎರಡು ಕಡೆ ಬ್ರಿಟನ್ ಮೇಲೆ ಟರ್ಕಿ ಜಯಗಳಿಸಿತಾದರೂ ೧೯೧೬ರ ಹೊತ್ತಿಗೆ ಚಳಿಗಾಲದಲ್ಲಿ ಮತ್ತು ಜೆರುಸಲೇಂಗಳಲ್ಲಿ ಬ್ರಿಟನ್ ನಡೆಸಿದ ದಾಳಿಗಳಿಂದ ಒಟ್ಟೊಮನ್ ಟರ್ಕಿಶ್ ಸೇನೆಯ ಕಾಲು ಮುರಿದಂತಾಯಿತು.
ಪಾನ್–ಇಸ್ಲಾಮಿಸ್ಟ್ ಖಿಲಾಫತ್
ಈ ನಡುವೆ ಮಹಾಯುದ್ಧದ ಆರಂಭಕ್ಕೆ ಮುನ್ನ ಟರ್ಕಿಶ್ ಸಾಮ್ರಾಜ್ಯದ ಅರಬ್ ಪ್ರಜೆಗಳಲ್ಲಿ ಸಂಚಲನ ಉಂಟಾಯಿತು. ಅಬ್ಬಾಸಿದ್ ಖಿಲಾಫತ್ನ ಗತವೈಭವವನ್ನು ಕಣ್ಣಿನಲ್ಲಿ ತುಂಬಿಕೊAಡಿದ್ದ ಮೆಕ್ಕಾದ ಶರೀಫ್ ಹುಸೇನ್ (೧೮೫೩-೧೯೩೧) ಮತ್ತು ಆತನ ಮಕ್ಕಳು ತಮ್ಮ ಕುಟುಂಬದ ಅಡಿಯಲ್ಲಿ ವಿಶಾಲ ಅರಬ್ ಒಕ್ಕೂಟವನ್ನು ನಿರ್ಮಿಸುವ ಕನಸು ಕಂಡರು. ಹುಸೇನ್ ಪ್ರವಾದಿಯವರ ೩೭ನೇ ಉತ್ತರಾಧಿಕಾರಿ ಎನ್ನಲಾಗಿದೆ. ಆತ ಮೆಕ್ಕಾಗೆ ಬಂದಾಗ ಅರಬ್-ವಿರೋಧಿ ಟರ್ಕಿಶ್ ಗವರ್ನರ್ ವಹೀಬ್ ಬೇ ಎಂಬಾತ ಶರೀಫ್ನ ಗಾರ್ಡ್ಗಳ ಬಳಿ ಇದ್ದ ರೈಫಲ್ಗಳಲ್ಲಿ ನೂರನ್ನು ಒಪ್ಪಿಸಬೇಕೆಂದು ಆಜ್ಞೆ ಮಾಡಿದ. ಈ ಅವಮಾನದಿಂದಾಗಿ ಒಂದು ಗಲಭೆ ಉಂಟಾಯಿತು. ಅರೇಬಿಯ ಮತ್ತು ಸಿರಿಯಗಳಲ್ಲಿ ಸ್ವತಂತ್ರ ಅರಬ್ ದೇಶ ಬೇಕೆಂದು ಬಯಸಿದ ಬ್ರಿಟಿಷರು ಆ ಗಲಭೆಗೆ ಬೆಂಬಲ ನೀಡಿದರು. ಟರ್ಕಿ ಜಿಹಾದ್ (ಧರ್ಮಯುದ್ಧ) ಘೋಷಿಸಿದರೆ ಶರೀಫ್ ಬ್ರಿಟನ್ ಕಡೆ ಇರಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ಶರೀಫ್ ಹುಸೇನ್ ಪ್ರವಾದಿಯವರ ಉತ್ತರಾಧಿಕಾರಿ ಎಂದರೂ ಕೂಡ ಖಿಲಾಫತ್ ಮೇಲೆ ಹಿಡಿತ ಸಾಧಿಸಲು ಆತನಿಗೆ ಕಷ್ಟವಿತ್ತು. ೧೯೧೫ರ ಜನವರಿಯಲ್ಲಿ ಜಿಹಾದ್ ಘೋಷಿಸುವ ಬಗ್ಗೆ ಟರ್ಕಿಶರು ಶರೀಫ್ ಹುಸೇನ್ ಮೇಲೆ ಒತ್ತಡ ತಂದರು. ಆದರೆ ಬ್ರಿಟನ್ನ ಒತ್ತಡಕ್ಕೆ ಸಿಲುಕಿದ ಆತ ಅದನ್ನು ಮಾಡಲಿಲ್ಲ.
೧೯೧೬ರ ಆರಂಭದಲ್ಲಿ ಸಿರಿಯದಲ್ಲಿ ನಡೆಯುತ್ತಿದ್ದ ಅರಬ್ ಹೋರಾಟವನ್ನು ಬಗ್ಗುಬಡಿಯಲು ಟರ್ಕಿಶ್ ಸೇನೆ ಅಲ್ಲಿಗೆ ನುಗ್ಗಿತು; ಮತ್ತು ಶಂಕಿತ ಬಂಡುಕೋರರನ್ನು ನಾಶಪಡಿಸಿತು. ಆಗ ಚಿಕ್ಕ ಜರ್ಮನ್ ಸೇನಾ ತುಕಡಿ ಸಹಿತ ಮೆಕ್ಕಾಗೆ ನುಗ್ಗಿದುದಕ್ಕೆ ಬಂಡುಕೋರರನ್ನು ಬೆದರಿಸುವ ಉದ್ದೇಶ ಇತ್ತು. ೧೯೧೬ರ ಜೂನ್ನಲ್ಲಿ ಅರಬ್ ದಂಗೆ ಶುರುವಾಯಿತು; ಶರೀಫನೇ ಅದರ ನಾಯಕ; ಆತನ ಜೊತೆಗೆ ೫೦ ಸಾವಿರ ಅರಬ್ ಸೈನಿಕರಿದ್ದರು. ದಂಗೆಯ ಫಲವಾಗಿ ಮೆಕ್ಕಾ, ಜೆಡ್ಡಾ, ತೈಫೆ ಮುಂತಾದ ಭಾಗಗಳು ಟರ್ಕಿಯ ಕೈತಪ್ಪಿದವು.
ಶರೀಫ್ ಹುಸೇನ್ ತಾನೇ ಹಿಜಾಜ್ನ ರಾಜ ಎಂದು ಘೋಷಿಸಿಕೊಂಡ. ಅದಾದ ಎರಡು ದಿನಗಳಲ್ಲಿ, ಟರ್ಕಿಶ್ ಖಿಲಾಫತನ್ನು ರದ್ದುಪಡಿಸಲಾಯಿತು. ತಾನೇ ಖಲೀಫ್ ಎಂದು ಕೂಡ ಆತ ಘೋಷಿಸಿಕೊಂಡ. ಆದರೆ ಅದನ್ನೊಪ್ಪದೆ ಅಂತಿಮವಾಗಿ ಆತನನ್ನು ಸೌದಿ ವಂಶದವರು ಅರೇಬಿಯದಿಂದ ಹೊರಹಾಕಿದರು. ಹೀಗೆ ಪ್ರವಾದಿಯವರ ಓರ್ವ ಉತ್ತರಾಧಿಕಾರಿ (ವಂಶಸ್ಥ) ತಥಾಕಥಿತ ವಿಶಾಲ ಇಸ್ಲಾಮಿಕ್ ಜಗತ್ತಿನ ಖಲೀಫರ ವಿರುದ್ಧ ದಂಗೆ ಎದ್ದದ್ದು ಪಾನ್-ಇಸ್ಲಾಮಿಸಮ್ ಮತ್ತು ಖಿಲಾಫತ್ನ ನಕಲಿ ಸ್ವರೂಪಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ‘ಆರ್ಗನೈಸರ್’ ಸಾಪ್ತಾಹಿಕದಲ್ಲಿ ಸಂಶೋಧಕ-ಲೇಖಕ ಡಾ| ಶ್ರೀರಂಗ ಗೋಡ್ಬೋಲೆ ಅವರು ವಿವರಿಸಿದ್ದಾರೆ.
ದೇಶದ ಹೊರಗೆ ಸೇವೆ; ಒಳಗಿಲ್ಲ
ಭಾರತದ ಅಂದಿನ ಮುಸ್ಲಿಂ ನಾಯಕರ ನೈಜ ಕಾಳಜಿ ಯಾವ ಕಡೆಗಿತ್ತು ಎಂಬುದನ್ನು ತೋರಿಸುವ ಒಂದು ಘಟನೆ ಇಲ್ಲಿದೆ. ೧೯೧೧ರಲ್ಲಿ ಮೌಲಾನಾ ಮಹಮ್ಮದ್ ಆಲಿ ಟ್ರಿಪೋಲಿ ಮತ್ತು ಬಾಲ್ಕನ್ ಯುದ್ಧಗಳ ಟರ್ಕಿಶ್ ಯುದ್ಧ ಸಂತ್ರಸ್ತರಿಗಾಗಿ ಪರಿಹಾರ ನಿಧಿಯೊಂದನ್ನು ಸ್ಥಾಪಿಸಿದರು. ಅದರ ಅಡಿಯಲ್ಲಿ ಡಾ|| ಎಂ.ಎ. ಅನ್ಸಾರಿ ಅವರ ನೇತೃತ್ವದ ವೈದ್ಯಕೀಯ ತಂಡವು ೧೯೧೨ರ ಡಿಸೆಂಬರ್ನಲ್ಲಿ ಭಾರತದಿಂದ ಹೊರಟು ಮುಂದಿನ ವರ್ಷ ಜುಲೈನಲ್ಲಿ ಮರಳಿತು. ೧೮೯೮-೧೯೧೮ರ ನಡುವೆ ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲಿ ಒಂದು ಕೋಟಿಗೂ ಅಧಿಕ ಜನ ಪ್ಲೇಗ್ನಿಂದ ಸತ್ತರು. ಮುಂಬಯಿ, ಕಲ್ಕತ್ತಾದಂತಹ ದೊಡ್ಡ ನಗರಗಳಲ್ಲೂ ಪ್ಲೇಗ್ನ ಹಾವಳಿ ಜೋರಾಗಿಯೇ ಇತ್ತು. ಆಗ ಡಾ|| ಅನ್ಸಾರಿ ಅವರ ತಂಡ ರೋಗನಿವಾರಣೆಗೆ ಕೆಲಸ ಮಾಡಿದ ಯಾವುದೇ ದಾಖಲೆ ಇಲ್ಲ. ಅಂದರೆ ಅವರ ಹೃದಯ ಯುದ್ಧಪೀಡಿತ ಟರ್ಕಿಗಾಗಿ ಮಾತ್ರ ಅಳುತ್ತಿತ್ತು.
ಆಲಿ ಸಹೋದರರಲ್ಲಿ ಒಬ್ಬರಾದ ಮೌಲಾನಾ ಮಹಮ್ಮದ್ ಆಲಿ (ಇನ್ನೊಬ್ಬರು ಶೌಕತ್ ಆಲಿ) ಪ್ರತಿ ಹೆಜ್ಜೆಯಲ್ಲೂ ತಮ್ಮ ನಿಧಿ ಮತ್ತು ಕೆಲಸಗಳಿಗೆ ಬ್ರಿಟಿಷರಿಂದ ಅಧಿಕೃತ ಮತ್ತು ವೈಯಕ್ತಿಕ ಸಹಕಾರವನ್ನು ಪಡೆಯುತ್ತಲೇ ಇದ್ದರು. ಅಂದಿನ ವೈಸರಾಯ್ನನ್ನು ತಮ್ಮ ದೆಹಲಿ ರೆಡ್ ಕ್ರೆಸೆಂಟ್ ಸೊಸೈಟಿಯ ಪೋಷಕ (ಪೇಟ್ರನ್)ರಾಗಿ ಸೇರಿಸಿಕೊಂಡಿದ್ದರು.
೧೯೧೪ರ ಜುಲೈನಲ್ಲಿ ಸರ್ಬಿಯ ಮತ್ತು ಆಸ್ಟಿçಯಗಳ ನಡುವೆ ಯುದ್ಧ ಶುರುವಾದಾಗ ಭಾರತದ ಮುಸ್ಲಿಮರು ಆಸ್ಟಿçಯದ ಪರ ಇದ್ದರು. ಏಕೆಂದರೆ ಬಾಲ್ಕನ್
ಯುದ್ಧದಲ್ಲಿ ಸರ್ಬಿಯವು ಟರ್ಕಿ ವಿರುದ್ಧ ಇತ್ತು. ಮುಂದೆ ಜರ್ಮನಿ ಮತ್ತು ರಷ್ಯಾಗಳು ಯುದ್ಧಕ್ಕೆ ಇಳಿದಾಗ ಭಾರತದ ಮುಸ್ಲಿಮರು ಜರ್ಮನಿ ಪರ ಆದರು. ಕಾರಣ ರಷ್ಯಾ-ಟರ್ಕಿ ಯುದ್ಧದ ನೆನಪು. ಕ್ರೆöÊಸ್ತ ದೇಶಗಳು ಪರಸ್ಪರ ಯುದ್ಧ ಮಾಡುವುದನ್ನು ನೋಡಿದಾಗ ಭಾರತದ ಮುಸ್ಲಿಮರಿಗೆ ಖುಷಿಯಾಗಿತ್ತು. ಟರ್ಕಿಗೆ ತೊಂದರೆ ಕೊಟ್ಟದ್ದಕ್ಕಾಗಿ ಅದು ಅವರಿಗೆ ಅಲ್ಲಾ ನೀಡಿದ ಶಿಕ್ಷೆ ಎಂದವರು ನಂಬಿದ್ದರು. ಯುದ್ಧದಿಂದ ಕ್ರೆöÊಸ್ತ ಸಾಮ್ರಾಜ್ಯ ಮತ್ತು ಮತಗಳ ಪತನವಾಗುತ್ತದೆ; ಹಾಗೂ ಯೂರೋಪಿನಲ್ಲಿ ಇಸ್ಲಾಮ್ನ ಪುನರುಜ್ಜೀವನ ಆಗುತ್ತದೆ – ಎಂದು ಹಲವರು ನಂಬಿದ್ದರು.
ಆದರೆ ೧೯೧೪ರ ಆಗಸ್ಟ್ನಲ್ಲಿ ಬ್ರಿಟನ್ ಸರ್ಬಿಯ ಮತ್ತು ರಷ್ಯಾ ಪರ ವಹಿಸಿದಾಗ ಜರ್ಮನಿಯು ಟರ್ಕಿಯ ಪರ ಎಂದಿದ್ದರೂ ಕೂಡ ಮುಸ್ಲಿಮರು ಬ್ರಿಟನ್ ಪರ ಆದರು. ಟರ್ಕಿ ಬ್ರಿಟನ್ ಪರ ಆಗಬೇಕು ಅಥವಾ ನಿರ್ಲಿಪ್ತ ಆಗಿರಬೇಕೆಂದು ಭಾರತದ ಮುಸ್ಲಿಮರು ಬಯಸಿದ್ದರು. ಇದಕ್ಕೆ (ಬ್ರಿಟಿಷರ ಪರ ಆದುದಕ್ಕೆ) ಬಹುಶಃ ಕಾರಣವೆಂದರೆ ಟರ್ಕಿ ನಿರ್ಲಿಪ್ತತೆಯನ್ನು ಘೋಷಿಸಿದ್ದಿರಬೇಕು. ಲಕ್ನೋದ ಮೌಲಾನಾ ಅಬ್ದುಲ್ ಬಾರಿ ಟರ್ಕಿಯ ಸುಲ್ತಾನನಿಗೆ ತಂತಿ ಸಂದೇಶ ಕಳುಹಿಸಿ ನಿರ್ಲಿಪ್ತರಾಗಿರಿ (ನ್ಯೂಟ್ರಲ್) ಅಥವಾ ಬ್ರಿಟನ್ ಪರ ಸೇರಿಕೊಳ್ಳಿ ಎಂದು ಒತ್ತಾಯಿಸಿದ್ದರು; ಮತ್ತು ವೈಸರಾಯ್ ಅವರಿಗೊಂದು ಮನವಿ ಸಲ್ಲಿಸಿ, ಟರ್ಕಿ ವಿಷಯದಲ್ಲಿ ನಿರ್ಲಿಪ್ತತೆಗೆ ಪೂರಕವಾಗಿರಿ ಎಂದು ಒತ್ತಾಯಿಸಿದ್ದರು.
ಮುಸ್ಲಿಂ ನಾಯಕರ ನಿಲವು
೧೯೧೪ರ ಹೊತ್ತಿಗೆ ಅಬ್ದುಲ್ ಬಾರಿ, ಆಲಿ ಸಹೋದರರು, ಜಾಫರ್ ಅಲಿಖಾನ್, ಹಜ್ರತ್ ಮೊಹಾನಿ, ಅಬುಲ್ ಕಲಾಂ ಆಜಾದ್ – ಇಂತಹ ಖಿಲಾಫತ್ ಚಳವಳಿಯ ನಾಯಕರೆಲ್ಲ ಪಾನ್-ಇಸ್ಲಾಮಿಸ್ಟ್ (ವಿಶಾಲ ಇಸ್ಲಾಮಿಸ್ಟ್) ಆಗಿದ್ದರೇ ಹೊರತು ಬ್ರಿಟಿಷ್-ವಿರೋಧಿಗಳಾಗಿರಲಿಲ್ಲ. ಯುದ್ಧದಲ್ಲಿ (ಮಿತ್ರಕೂಟದ ಜೊತೆ ಸೇರಲು ಆಗದಿದ್ದರೆ) ನಿರ್ಲಿಪ್ತರಾಗಿರಿ ಎಂದು ಟರ್ಕಿಯ ಮುಖ್ಯಸ್ಥರಿಗೆ ಮಹಮ್ಮದಾಲಿ ನೀಡಿದ ಸಲಹೆಯಿಂದ ತಿಳಿಯುವ ಅಂಶವೆAದರೆ, ತುಂಬ ಕಾಲ ಭಾರತದ ಮುಸ್ಲಿಂ ನಾಯಕರು ಬ್ರಿಟಿಷ್-ವಿರೋಧಿ ಮಾರ್ಗವನ್ನು ಹಿಡಿಯಲಿಲ್ಲ; ಮತ್ತು ಭಾರತದಲ್ಲಿ ವಿಶಾಲ-ಇಸ್ಲಾಮಿಸಮ್ ಬ್ರಿಟಿಷ್-ವಿರೋಧಿ ನಿಲವನ್ನು ತೆಗೆದುಕೊಂಡಿರಲಿಲ್ಲ. ಬ್ರಿಟಿಷರು ನೇರವಾಗಿ ಶಾಮೀಲಾಗುವವರೆಗೂ ಇದು ಮುಂದುವರಿದಿತ್ತು.
ಆದರೆ ಬ್ರಿಟಿಷರು ಟರ್ಕಿಶ್ ಭೂಭಾಗವನ್ನು ವಶಪಡಿಸಿಕೊಳ್ಳುತ್ತಿದ್ದಾರೆ; ಮತ್ತು ಒಟ್ಟೊಮನ್ ಸಾಮ್ರಾಜ್ಯವನ್ನು ಮತ್ತು ಖಲೀಫನನ್ನು ದುರ್ಬಲಗೊಳಿಸಿದ್ದಾರೆಂದು ತಿಳಿದಾಗ (ಯುದ್ಧಾನಂತರ) ಭಾರತದ ಪಾನ್-ಇಸ್ಲಾಮಿಸ್ಟರು ಬ್ರಿಟಿಷ್-ವಿರೋಧಿ ಮಾರ್ಗವನ್ನು ಹಿಡಿದರು. ಮುಂದೆ ೧೯೨೨ರ ಮಾರ್ಚ್ನಲ್ಲಿ ಬ್ರಿಟನ್ ರಾಜ್ಯಾಂಗ ಕಾರ್ಯದರ್ಶಿ ಮಾಂಟೆಗ್ಯೂ, ಒಟ್ಟೊಮನ್ ಸಾಮ್ರಾಜ್ಯದ ರದ್ದತಿಯ ಬಗೆಗಿನ ಭಾರತ ಸರ್ಕಾರದ ಮನವಿಯ ಮರುಪರಿಶೀಲನೆಗೆ ಸಮ್ಮತಿಸಿದಾಗ ಮಾತ್ರ ಬಾರಿ ಮತ್ತು ಮೊಹಾನಿ ಬ್ರಿಟಿಷರ ಜೊತೆಗಿನ ಅಸಹಕಾರವನ್ನು ಕೈಬಿಡಲು ಒಪ್ಪಿದರು. ಅಂದರೆ, ಟರ್ಕಿ ಮತ್ತು ಖಿಲಾಫತ್ಗಳ ಭವಿಷ್ಯ ಎನ್ನುವ ಪಾನ್-ಇಸ್ಲಾಮಿಸ್ಟ್ ಗುರಿಗಳೇ ಖಿಲಾಫತ್ ಚಳವಳಿಯ ಕೇಂದ್ರ ಆಗಿದ್ದವು.
ದೊಡ್ಡ ಯು–ಟರ್ನ್
ರಷ್ಯಾಕ್ರಾಂತಿ (೧೯೧೭) ಮತ್ತು ಜರ್ಮನಿ ಜೊತೆ ಪ್ರತ್ಯೇಕ ಶಾಂತಿ ಒಪ್ಪಂದದ ಬಳಿಕ ಒಟ್ಟೊಮನ್ ಸಾಮ್ರಾಜ್ಯದ ವಜಾ ಬಗೆಗಿನ ಮಿತ್ರರಾಷ್ಟçಗಳ ರಹಸ್ಯ ಒಪ್ಪಂದವು ಬಯಲಾಗತೊಡಗಿತು. ಪ್ರಮುಖ ಪಾನ್-ಇಸ್ಲಾಮಿಸ್ಟ್ ಪತ್ರಿಕೆಗಳಾದ ಮಹಮ್ಮದ್ ಅಲಿ ಅವರ ‘ಕಾಮ್ರೇಡ್’ ಮತ್ತು ಮೌಲಾನಾ ಆಜಾದ್ ಅವರ ‘ಅಲ್-ಹಿಲಾಲ್’ಗಳು “ಯುದ್ಧದಲ್ಲಿ (ಒಂದನೇ ಮಹಾಯುದ್ಧ) ಮಿತ್ರರಾಷ್ಟçಗಳು ಟರ್ಕಿಯನ್ನು ಸೋಲಿಸಿದರೂ ಕೂಡ ಯುದ್ಧಾನಂತರ ಆ ದೇಶವನ್ನು ಉಳಿಸಿಕೊಳ್ಳಲಾಗುವುದೆಂದು ಬ್ರಿಟನ್ ಘೋಷಿಸಬೇಕು” ಎಂದು ಸಲಹೆ ನೀಡಿದವು. ಕೆಲವು ಉಲೇಮಾಗಳು ಒಂದು ಫತ್ವಾ ಹೊರಡಿಸಿ, ಟರ್ಕಿಯ ಜೊತೆಗಿನ ಯುದ್ಧವು ರಾಜಕೀಯದ್ದೇ ಹೊರತು ಮತೀಯವಲ್ಲ, ಮತ್ತು ಬ್ರಿಟಿಷರ ಜೊತೆಗಿನ ಯುದ್ಧವು ಮತೀಯವಾಗಿ ಕಾನೂನುಬಾಹಿರ ಎಂದು ಘೋಷಿಸಿದವು.
ರಷ್ಯಾ ಬ್ರಿಟನಿನ ಜೊತೆ ಸೇರಿದಾಗ ಭಾರತದ ಮುಸ್ಲಿಮರು ಮತ್ತಷ್ಟು ಬ್ರಿಟಿಷ್ ವಿರೋಧಿಗಳಾದರು. ಅಬ್ದುಲ್ ಕಲಾಂ ಆಜಾದ್, ಮಹಮ್ಮದ್ ಅಲ್-ಹಸನ್, ಹಕೀಂ ಅಜ್ಮಲ್ಖಾನ್, ಡಾ|| ಅನ್ಸಾರಿ, ಆಲಿ ಸಹೋದರರು – ಹೀಗೆ ಎಲ್ಲರೂ ಖಿಲಾಫತ್ಗೆ ಸಹಾಯವಾಗುವ ಚಟುವಟಿಕೆಗಳನ್ನು ಆರಂಭಿಸಿದರು. ಖಿಲಾಫತ್ ಚಳವಳಿ ೧೯೧೪ರಷ್ಟು ಹಿಂದೆ ಕೂಡ ಹೋಗುತ್ತದೆ ಎಂದರೆ ತಪ್ಪಲ್ಲ; ಆಗ ಟರ್ಕಿ ಬ್ರಿಟನ್ ವಿರುದ್ಧ ಯುದ್ಧಕ್ಕೆ ಪ್ರವೇಶಿಸಿತ್ತಲ್ಲವೆ?
ದೇವಬಂದ್ನ ಕೆಲವು ಉಲೇಮಾಗಳು ಗುಡ್ಡಗಾಡು ಜನರು, ಟರ್ಕಿ ಮತ್ತು ಆಫಘನಿಸ್ತಾನದ ನೆರವಿನೊಂದಿಗೆ ಭಾರತದ ಬ್ರಿಟಿಷ್ ಆಳ್ವಿಕೆಯ ಪದಚ್ಯುತಿಗೆ ಯತ್ನಿಸಿದರು. ಅದನ್ನು ‘ರೇಷ್ಮೆ ಕಾಗದದ ಪಿತೂರಿ’ (ಸಿಲ್ಕ್ ಲೆಟರ್ಸ್ ಕಾನ್ಸ್ಪಿರೆಸಿ) ಎಂದು ಕರೆಯುತ್ತಾರೆ. ಇದು ಕೇಂದ್ರ ಏಷ್ಯಾ, ಹಿಜಾಜ್, ಮೆಸೊಪೊಟೇಮಿಯಗಳಿಗೂ ಹಬ್ಬಿತ್ತು. ಹಿಜಾಜ್ನಲ್ಲಿ ಮಹಮದ್ ಅಲ್-ಹಸನ್ ಟರ್ಕಿಶರ ಜೊತೆ ಸಂಪರ್ಕ ಸಾಧಿಸಿದರು. ಹಿಜಾಜ್ನ ಒಟ್ಟೊಮನ್ ಗವರ್ನರ್ ಘಾಲಿಬ್ ಪಾಷಾ ಮೂಲಕ ಬ್ರಿಟಿಷರ ವಿರುದ್ಧ ‘ಧರ್ಮಯುದ್ಧ’ (ಜಿಹಾದ್) ಘೋಷಣೆಗೆ ಒಪ್ಪಿಗೆ ಪಡೆದರು; ಅದರ ಹೆಸರು ‘ಘಾಲಿಬ್ನಾಮ’. ಅದು ಗುಟ್ಟಾಗಿ ಭಾರತಕ್ಕೆ ಬಂದಿದ್ದು, ಇಲ್ಲಿ ಅದರ ಪ್ರತಿಗಳನ್ನು ವಿತರಿಸಲಾಯಿತು. ಬ್ರಿಟಿಷ್ ಭಾರತದ ಸೇನೆಯ ಒಳಗೂ ಜಿಹಾದಿ ಪ್ರಚಾರ ನಡೆಯಿತು. ಮುಂಬಯಿ (ಬಾಂಬೆ, ಬೊಂಬಾಯಿ) ಮತ್ತಿತರ ಕಡೆ ಕೆಲವು ಹಿಂಸಾತ್ಮಕ ಘಟನೆಗಳು ಕೂಡ ನಡೆದವು.
ಬ್ರಿಟಿಷರು ಮಹಮ್ಮದ್ ಅಲ್-ಹಸನ್ರನ್ನು ಬಂಧಿಸಿ ಸೆರೆಮನೆಯಲ್ಲಿಟ್ಟರು. ಮೌಲಾನಾ ಆಜಾದ್ರನ್ನು ಗಡೀಪಾರು ಮಾಡಿದರು. ಮೊಹಾನಿ ಅವರನ್ನು ಕೂಡ ಬಂಧಿಸಿದರು.
ಪಾನ್–ಇಸ್ಲಾಮಿಸA ಪಂಕ್ಚರ್
೧೯೧೬ರಲ್ಲಿ ಒಟ್ಟೊಮನ್ ಸಾಮ್ರಾಜ್ಯದಲ್ಲಿ ನಡೆದ ಅರಬ್ ದಂಗೆ ಭಾರತೀಯ ಮುಸ್ಲಿಂ ನಾಯಕರಿಗೆ ಆಘಾತ ನೀಡಿತು. ಏಕೆಂದರೆ ಅದು ಪಾನ್-ಇಸ್ಲಾಮಿಸಂ ಅನ್ನು ಪಂಕ್ಚರ್ ಮಾಡಿತ್ತು. ನಾಟಕ ಪ್ರವೀಣರಾದ ಈ ನಾಯಕರು ಅರಬ್ ಆಶೋತ್ತರವನ್ನು ಅಲಕ್ಷಿಸಿದರು; ಅದು ‘ಬ್ರಿಟಿಷರ ತಂತ್ರ’ ಎನ್ನುವ ವಿವರಣೆ ನೀಡಿದರು. ‘ಅಖಿಲ ಭಾರತ ಮುಸ್ಲಿಂ ಲೀಗ್’ನ ಕೌನ್ಸಿಲ್ ಜೂನ್ ೨೬, ೧೯೧೬ರಂದು ಲಕ್ನೋದಲ್ಲಿ ಸಭೆ ನಡೆಸಿ ಹುಸೇನ್ ಅವರ ‘ಉದ್ರೇಕಕಾರಿ’ ನಡತೆಯನ್ನು ಖಂಡಿಸಿ, ಅದರಿAದಾಗಿ ಪವಿತ್ರ ಸ್ಥಳಗಳು ಅಪಾಯಕ್ಕೀಡಾಗಿವೆ ಎಂದು ಆರೋಪಿಸಿತು. ಹುಸೇನ್ ಮತ್ತವರ ಬೆಂಬಲಿಗರನ್ನು ಅಬ್ದುಲ್ ಬಾರಿ ಇಸ್ಲಾಮ್ನ ಶತ್ರುಗಳೆಂದು ಟೀಕಿಸಿದರು. ಹುಸೇನ್ಗೆ ನೆರವು ನೀಡುವ ಬ್ರಿಟಿಷರ ನೀತಿ ದೊಡ್ಡ ತಪ್ಪು; ಅದನ್ನು ಸರಿಪಡಿಸಿಕೊಳ್ಳಬೇಕೆಂದು ಅಜ್ಮಲ್ಖಾನ್ ವೈಸರಾಯ್ಗೆ ನೇರವಾಗಿ ಹೇಳಿದರು.
ಜನವರಿ ೫, ೧೯೧೮ರಂದು ಬ್ರಿಟಿಷ್ ಪ್ರಧಾನಿ ನೀಡಿದ ಹೇಳಿಕೆಯಲ್ಲಿ “ಟರ್ಕಿಗೆ ಅದರ ರಾಜಧಾನಿ ತಪ್ಪಿಹೋಗಲೆಂದು ನಾವು ಯುದ್ಧ ಮಾಡುತ್ತಿಲ್ಲ; ಏಷ್ಯಾ ಮೈನರ್ನ ಭಾರೀ ಸಂಪತ್ತು ಮತ್ತು ಭೂಭಾಗವನ್ನು ಕಸಿಯುವುದು ಕೂಡ ನಮ್ಮ ಉದ್ದೇಶವಲ್ಲ” ಎಂದು ಘೋಷಿಸಿದರು. ಅವು ಜನಾಂಗೀಯವಾಗಿ ಟರ್ಕಿಶ್ ಎಂದವರು ಹೇಳಿದ್ದು, ಭಾರತದ ಮುಸ್ಲಿಮರು ಅದನ್ನು ಬದಲಾಗದ ಪ್ರತಿಜ್ಞೆ ಎಂದು ಸ್ವೀಕರಿಸಿ ಅದಕ್ಕೆ ಅಂಟಿಕೊAಡರು.
ಯುದ್ಧದ ಕೊನೆ
ಮಿತ್ರರಾಷ್ಟçಗಳು ಮತ್ತು ಟರ್ಕಿಗಳು ಅಕ್ಟೋಬರ್ ೩೦, ೧೯೧೮ರಂದು ಒಂದು ಒಪ್ಪಂದಕ್ಕೆ ಬಂದವು. ನವೆಂಬರ್ ೧೧ರಂದು ಜರ್ಮನಿ ಶರಣಾಗತವಾಯಿತು; ಟರ್ಕಿ ಬೇಷರತ್ ಶರಣಾಯಿತು. ರಹಸ್ಯ ಒಪ್ಪಂದ ಹಾಗೂ ಯುದ್ಧಕಾಲದ ಒಪ್ಪಂದಗಳಿಗೆ ಅನುಗುಣವಾಗಿ “ಮಿತ್ರರಾಷ್ಟçಗಳು ಟರ್ಕಿಶ್ಗಳ ಕ್ರೂರ ಹಿಂಸೆಗೆ ಗುರಿಯಾಗಿದ್ದ ಜನರನ್ನು ಮುಕ್ತಗೊಳಿಸಲು ಬದ್ಧವಾಗಿದ್ದವು. ಅದೇ ರೀತಿ ಒಟ್ಟೊಮನ್ ಸಾಮ್ರಾಜ್ಯವು ಪಾಶ್ಚಾತ್ಯ ನಾಗರಿಕತೆಗೆ ಪರಕೀಯವಾದ ಕಾರಣ ಅದನ್ನು ಹೊರಹಾಕಬೇಕು” ಎಂದು ಕೂಡ ಅದರಲ್ಲಿತ್ತು.
ಈ ಒಪ್ಪಂದಗಳ ಪ್ರಕಾರ, ಮಿತ್ರರಾಷ್ಟçಗಳು ಟರ್ಕಿ ಯೂರೋಪಿನಲ್ಲಿ ಹೊಂದಿದ್ದ ಎಲ್ಲ ಆಸ್ತಿಗಳನ್ನು (ಕಾನ್ಸ್ಟಾಂಟಿನೋಪಲ್ ಸಹಿತ) ವಶಪಡಿಸಿಕೊಂಡವು; ಮೆಸೊಪೊಟೇಮಿಯ, ಪ್ಯಾಲೆಸ್ತೀನ್, ಅರೇಬಿಯ ಮತ್ತು ಸಿರಿಯದ ಭಾಗಗಳನ್ನು ಕೂಡ ಟರ್ಕಿ ಕಳೆದುಕೊಳ್ಳಬೇಕಾಯಿತು. ಒಟ್ಟಿನಲ್ಲಿ ಟರ್ಕಿಗೆ ಅಲ್ಲಿ ವಸ್ತುಶಃ ಏನೂ ಉಳಿಯಲಿಲ್ಲ. ಸಮುದ್ರಕ್ಕೆ ಮುಖ್ಯವಾದ ಒಂದು ಪ್ರವೇಶ ಕೂಡ ಉಳಿಯಲಿಲ್ಲ. ಅದಕ್ಕಿಂತ ಮುಖ್ಯವಾಗಿ ಟರ್ಕಿಯ ಸಾರ್ವಭೌಮತೆ ಹೋಯಿತು. ಒಟ್ಟೊಮನ್ ಸಾಮ್ರಾಜ್ಯದ ಅವಶೇಷಗಳಿಂದ ೧೯೨೩ರಲ್ಲಿ ಟರ್ಕಿಶ್ ಸೆಕ್ಯುಲರ್ ರಿಪಬ್ಲಿಕ್ ಉದಯಿಸಿತು. ಅಧಿಕಾರಕ್ಕೆ ಬಂದ ಮುಸ್ತಫಾ ಕೆಮಾಲ್ ಅತಾತುರ್ಕ್ (ರಿಪಬ್ಲಿಕ್ನ ಮುಖ್ಯಸ್ಥ) ಖಲೀಫನನ್ನು ಗಂಟುಮೂಟೆ ಸಹಿತ ಹೊರಹಾಕಿದ, ಆ ಮೂಲಕ ಪಾನ್-ಇಸ್ಲಾಮಿಸಂಗೆ ಮರಣಾಂತಿಕ ಹೊಡೆತ ನೀಡಿದ.
ಮಹಾಯುದ್ಧದ ಹೊತ್ತಿಗೆ ಟರ್ಕೋ-ಬ್ರಿಟಿಷ್ ಸಂಬAಧಗಳು ಬದಲಾದಂತೆ ಬ್ರಿಟಿಷರ ಬಗ್ಗೆ ಭಾರತದ ಮುಸ್ಲಿಮರ ಪ್ರತಿಕ್ರಿಯೆ ಬದಲಾಗುತ್ತಾ ಹೋಯಿತು. ಮೊದಲಿಗೆ ಬ್ರಿಟಿಷರಿಗೆ ವಿಧೇಯತೆಯನ್ನು ಪ್ರಕಟಿಸಿದರೆ, ಬಳಿಕ ಟರ್ಕಿ ವಿಷಯದಲ್ಲಿ ತಟಸ್ಥರಾಗಿರಿ (ನಿರ್ಲಿಪ್ತರಾಗಿ) ಎಂದು ಒತ್ತಾಯಿಸಿದರು. ಅಂತಿಮವಾಗಿ, ಬ್ರಿಟಿಷರು ಒಟ್ಟೊಮನ್ ಸಾಮ್ರಾಜ್ಯ ಮತ್ತು ಖಲೀಫನನ್ನು ಅಂತ್ಯಗೊಳಿಸಿದರೆAದು ಅವರ ವಿರುದ್ಧ ಬಿಗಿಯಾದ ನಿಲವನ್ನು ತಳೆದರು. ಬ್ರಿಟಿಷರಿಂದ ಏನಾದರೂ ಲಾಭ ಆಗುವುದಿದ್ದರೆ ಈ ನಾಯಕರು ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಿಂದ ಪೂರ್ತಿಯಾಗಿ ದೂರವಿರಲು ಸಿದ್ಧವಿದ್ದರು. ಒಂದೇ ಒಂದು ಸಲ ಕೂಡ ಅವರ ನಿಲವು ಭಾರತದ ಹಿತಾಸಕ್ತಿಯಿಂದ ಕೂಡಿರಲಿಲ್ಲ. ಮುಂದೆ ಅವರು ತೆಗೆದುಕೊಂಡ ಬ್ರಿಟಿಷ್-ವಿರೋಧಿ ನಿಲವು ಆಕಸ್ಮಿಕವೆನಿಸುತ್ತದೆ; ಮತ್ತು ಟರ್ಕಿಶ್ ಹಿತಾಸಕ್ತಿಗೆ ಬಂದ ಬೆದರಿಕೆಯೇ ಅದಕ್ಕೆ ಕಾರಣ. ಹೀಗೆ ಅಂದಿನ ಭಾರತೀಯ ಮುಸ್ಲಿಂ ನಾಯಕರು ಕೇವಲ ಹುಟ್ಟಿನಿಂದ ಆಕಸ್ಮಿಕವಾಗಿ ಭಾರತೀಯರಾದವರು, ಅವರ ಆತ್ಮ ಮತ್ತು ಹೃದಯಗಳು ಟರ್ಕಿಯಲ್ಲಿದ್ದವು ಎಂದರೆ ತಪ್ಪಿಲ್ಲ.
ಚಳವಳಿ ಆರಂಭ
ಸುಮಾರು ಐದು ವರ್ಷಗಳ ಕಾಲ ನಡೆದ ಖಿಲಾಫತ್ ಚಳವಳಿ ಅಕ್ಟೋಬರ್ ೨೭, ೧೯೧೯ರಂದು ಆರಂಭಗೊAಡಿತು. ಅಂದು ದೇಶಾದ್ಯಂತ ‘ಖಿಲಾಫತ್ ದಿನ’ವನ್ನು ಆಚರಿಸಿದರು. ವರ್ಷದೊಳಗೆ ಕಾಂಗ್ರೆಸ್ನ ಅಂದಿನ ಅತಿದೊಡ್ಡ ನಾಯಕ ಬಾಲಗಂಗಾಧರ ತಿಲಕ್ ನಿಧನ ಹೊಂದಿದರು; ಮತ್ತು ಮೋಹನದಾಸ ಕರಮಚಂದ ಗಾಂಧಿ ರಂಗದ ಮಧ್ಯಕ್ಕೆ ಬಂದರು. ಡಾ|| ಬಿ.ಆರ್. ಅಂಬೇಡ್ಕರ್ ಅವರ ಮಾತಿನಲ್ಲಿ ಹೇಳುವುದಾದರೆ “ಖಿಲಾಫತ್ ಗಾಂಧಿ ಅವರು ತಮ್ಮ ಸಾಮರ್ಥ್ಯ ಮತ್ತು ನಂಬಿಕೆಯೊAದಿಗೆ ಅದನ್ನು
ಎತ್ತಿಕೊಂಡಾಗ ಹಲವು ಮಹಮ್ಮದೀಯರಿಗೂ ಆಶ್ಚರ್ಯ ಉಂಟಾಗಿರಬೇಕು.” (Pakistan or the Partition of India). ಗಾಂಧಿಯವರು ಖಿಲಾಫತ್ ಚಳವಳಿಯನ್ನು ಬೆಂಬಲಿಸಿದ್ದಷ್ಟೇ ಅಲ್ಲ; ಇಡೀ ಕಾಂಗ್ರೆಸ್ಸನ್ನು ತಮ್ಮ ಹಿಂದೆ ಎಳೆದುಕೊಂಡರು.
ಗಮನಿಸಬೇಕಾದ ಒಂದು ಅಂಶವೆAದರೆ, ಖಿಲಾಫತ್ ಚಳವಳಿಯ ಹೊತ್ತಿನಲ್ಲಿ ಕಂಡುಬAದ ಕೆಲವು ಹಿಂದೂ-ಮುಸ್ಲಿA ನಾಯಕರ ವರ್ತನೆ, ನಡತೆಗಳು ದಿಢೀರಾಗಿ ಬಂದAಥವಲ್ಲ. ಅದು ೧೮೫೭ರಲ್ಲಿ ಆರಂಭವಾದ ಒಂದು ವಿನ್ಯಾಸದ ಮುಂದುವರಿಕೆ ಎನ್ನಬಹುದು. ಯಾರಿಗಾದರೂ ಖಿಲಾಫತ್ ಚಳವಳಿಯು ಅರ್ಥ ಆಗಬೇಕಿದ್ದರೆ ಬ್ರಿಟಿಷರ ಪಾಲು ಏನೆಂಬುದರ ಜೊತೆಗೆ ೧೮೫೭-೧೯೧೯ರ ಅವಧಿಯಲ್ಲಿ ದೇಶದಲ್ಲಿ ಮುಸ್ಲಿಮರ ಆಟ ಏನಿತ್ತು ಎಂಬುದನ್ನು ಅರ್ಥೈಸಿಕೊಳ್ಳಬೇಕು; ಅಲ್ಲದೆ ಅಲ್ಲಿನ ಹಿಂದೂ ನಾಯಕರ ಅಮಾಯಕತೆಯನ್ನು ಕೂಡ ಗಮನಿಸಬೇಕು.
* * *
ಬ್ರಿಟಿಷರ ಕಾರ್ಯತಂತ್ರ
ಹಿAದುಗಳು ಮತ್ತು ಮುಸ್ಲಿಮರ ಬಗೆಗಿನ ಬ್ರಿಟಿಷರ ನೀತಿಯು ಒಡೆದು ಆಳುವಂಥದು ಎನ್ನುವ ವಿವರಣೆ ಅಥವಾ ಮಾತು ಹಿಂದುಗಳ ಮಾನಸಿಕತೆಯಲ್ಲಿ ಹೇಗೆ ಗಟ್ಟಿಯಾಗಿ ಕುಳಿತಿದೆ ಎಂದರೆ ಹಿಂದೂ-ಮುಸ್ಲಿA ದ್ವೇಷಕ್ಕೆ ಅದೇ ತಳಹದಿ ಎಂದು ನಂಬುವ ಮಟ್ಟದಲ್ಲಿ ನಾವಿದ್ದೇವೆ. ಈ ವಾದ ಅಥವಾ ನಂಬಿಕೆಯ ಪರೀಕ್ಷೆ ಈಗ ನಡೆಯಬೇಕಾಗಿದೆ. ಈ ಮಾತಿನ ಮೂಲವನ್ನು ಪ್ರಾಚೀನ ರೋಮನರು ಬಳಸಿದ ಡಿವೈಡ್ ಆ್ಯಂಡ್ ಕಾಂಕರ್ (ಒಡೆದು ಜಯಿಸುವುದು) ಎಂಬುದರಲ್ಲಿ ಕಾಣಬಹುದು. ಕಾಂಗ್ರೆಸ್ ಸ್ಥಾಪಕರಲ್ಲಿ ಒಬ್ಬರಾದ ಎ.ಓ. ಹ್ಯೂಮ್ ಒಮ್ಮೆ ಗಾಂಧಿಯವರ ಬಳಿ “ಭಾರತದಲ್ಲಿ ಬ್ರಿಟಿಷ್ ಸರ್ಕಾರ ಉಳಿದಿರುವುದು ಒಡೆದು ಆಳುವ ನೀತಿಯಿಂದ” ಎಂದು ಹೇಳಿದ್ದರಂತೆ.
ಆದರೆ ನಿಜವೆಂದರೆ, ಹಿಂದೂ-ಮುಸ್ಲಿಮರ ನಡುವಣ ದ್ವೇಷ ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ಇತ್ತು. ಸ್ವಾತಂತ್ರ್ಯ ಹೋರಾಟದ ವೇಳೆ ಹಿಂದೂ-ಮುಸ್ಲಿA ಏಕತೆ (ಒಗ್ಗಟ್ಟು) ಎನ್ನುವ ಪರಿಕಲ್ಪನೆಯನ್ನು ರೂಪಿಸಬೇಕಾದುದರ ಅರ್ಥವೆಂದರೆ, ಹಿಂದುಗಳು ಮತ್ತು ಮುಸ್ಲಿಮರು ಪ್ರತ್ಯೇಕ ಘಟಕಗಳಾಗಿದ್ದರು; ಅವರ ಏಕತೆ ಬೇಕು ಎನ್ನುವ ಆಶಯವಲ್ಲವೆ? ಇನ್ನೊಂದು ರೀತಿಯಿಂದ ನೋಡುವುದಾದರೆ, ನಾವು ಹಿಂದೂ-ಮುಸ್ಲಿA ಏಕತೆ ಎಂಬುದನ್ನು ಮಾತ್ರ ಏಕೆ ಕೇಳುತ್ತೇವೆ? ಸ್ವಾತಂತ್ರö್ಯ ಹೋರಾಟದ ನೇತಾರರು ಹಿಂದೂ-ಕ್ರೆöÊಸ್ತ ಏಕತೆ, ಹಿಂದೂ-ಪಾರ್ಸಿ ಏಕತೆ, ಹಿಂದೂ-ಯಹೂದಿ ಏಕತೆ ಎಂಬ ಘೋಷಣೆಗಳನ್ನು ಏಕೆ ಮಾಡಲಿಲ್ಲ? ಹಿಂದೂ-ಮುಸ್ಲಿA ದ್ವೇಷಕ್ಕೆ ಬ್ರಿಟಿಷರೇ ಕಾರಣವಾಗಿದ್ದರೆ ಅವರು ದೇಶದಿಂದ ಹೋದ ಮೇಲೂ ಇಲ್ಲಿ ಅದು ಏಕೆ ಉಳಿದುಕೊಂಡಿದೆ? ಈ ಸಂಬAಧವಾಗಿ ಇಬ್ಬರು ಮಹಾನ್ ನಾಯಕರ ಮಾತುಗಳನ್ನಿಲ್ಲಿ ಪರಿಶೀಲಿಸಬಹುದು; ವಿನಾಯಕ ದಾಮೋದರ ಸಾವರ್ಕರ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಆ ನಾಯಕರು.
೧೯೩೯ರಲ್ಲಿ ನಡೆದ ಅಖಿಲ ಭಾರತ ಹಿಂದೂ ಮಹಾಸಭಾದ ಸಮಾವೇಶದ ಅಧ್ಯಕ್ಷ ಭಾಷಣದಲ್ಲಿ ವೀರ ಸಾವರ್ಕರ್ ಅವರು, “ಹಿಂದೂ-ಮುಸ್ಲಿA ದ್ವೇಷದ ವಿಷಯದಲ್ಲಿ ಮೂರನೇ ತಪ್ಪಿತಸ್ಥರಿದ್ದಾರೆಂದು ಕಾಂಗ್ರೆಸ್ನವರು ಹೇಳುತ್ತಾರೆ. ಆ ರೀತಿ ಆರೋಪಿಗಳಾದ ಮೂರನೇ ವ್ಯಕ್ತಿಗಳು ಇದ್ದಾರೆಂಬುದು ಕಾಂಗ್ರೆಸ್ನ ಭ್ರಮೆ ಅಥವಾ ಮೂಢನಂಬಿಕೆ. ಮುಸ್ಲಿಮರನ್ನು ಅವರಷ್ಟಕ್ಕೆ ಬಿಟ್ಟರೆ ಅವರು ಎಂದೂ ರಾಷ್ಟçವಿರೋಧಿಯಾದ ಕೆಡುಕು ಅಥವಾ ಹಿಂದೂವಿರೋಧಿ ಕೆಲಸ ಮಾಡುವುದಿಲ್ಲ ಎಂಬ ಭ್ರಮೆ ಕಾಂಗ್ರೆಸ್ನವರಲ್ಲಿತ್ತು. ಈ ತೀರಾ ಕೊಳಕು ರಾಜಕೀಯ ಮೂಢನಂಬಿಕೆಯಿAದ ಸಾವಿರಾರು ಹಿಂದೂ ಕಾಂಗ್ರೆಸ್ಸಿಗರು ಮೋಸ ಹೋಗಿದ್ದಾರೆ. ಮಹಮ್ಮದ್ ಕಾಸಿಂಗಳು, ಘಜ್ನಿಗಳು, ಘೋರಿಗಳು, ಅಲ್ಲಾವುದ್ದೀನ್ಗಳು, ಔರಂಗಜೇಬ್ ಎಲ್ಲರಿಗೂ ಭಾರತದ ಮೇಲೆ ದಾಳಿ ಮಾಡಲು, ಲೂಟಿ ನಡೆಸಲು ಬ್ರಿಟಿಷರೇ (ಮೂರನೇ ವ್ಯಕ್ತಿ) ಪ್ರಚೋದನೆ ನೀಡಿದರು ಎಂದು ಹೇಳಲು ಸಾಧ್ಯವೆ? ಕಳೆದ ಹತ್ತು ಶತಮಾನಗಳ ದೇಶದ ಇತಿಹಾಸವೆಂದರೆ ಹಿಂದೂ-ಮುಸ್ಲಿಮರ ನಡುವಣ ನಿರಂತರ ಯುದ್ಧ ಎಂದರೆ ತಪ್ಪೆನ್ನಬಹುದೆ? ಆಲಿ, ಸಿಕಂದರ್, ಜಿನ್ನಾಗಳೆಲ್ಲ ಕೇವಲ ಶಾಲಾಮಕ್ಕಳೆ? ಅವರಿಗೆ ಪೆಪ್ಪರ್ಮಿಂಟ್ ನೀಡಿ ನೆರೆಮನೆಗೆ ಕಲ್ಲು ಹೊಡೆಯಿರಿ ಎಂದು ಹೇಳಬಹುದೆ? ಬ್ರಿಟಿಷರು ಬರುವುದಕ್ಕೆ ಮುನ್ನ ಹಿಂದೂ-ಮುಸ್ಲಿA ಗಲಭೆಗಳು ಇರಲೇ ಇಲ್ಲವೆಂದು ಕಾಂಗ್ರೆಸ್ನವರು ಹೇಳುತ್ತಾರೆ; ಗಲಭೆಗಳು ಇರಲಿಲ್ಲ; ಯುದ್ಧಗಳು ನಡೆಯುತ್ತಿದ್ದವು, ಅಷ್ಟೆ.” ಇದು ಸಾವರ್ಕರ್ ಅವರ ವಿಶ್ಲೇಷಣೆ.
ಅಸಾಮಾನ್ಯ ಒಳನೋಟದಿಂದ ಕೂಡಿದ ಒಂದು ವಿಶ್ಲೇಷಣೆಯಲ್ಲಿ ಬಿ.ಆರ್. ಅಂಬೇಡ್ಕರ್ ಹೀಗೆ ಹೇಳುತ್ತಾರೆ: “ಹಿಂದೂ-ಮುಸ್ಲಿA ಏಕತೆ ವಿಫಲವಾಗಲು ಬ್ರಿಟಿಷರ ‘ಒಡೆದು ಆಳುವ ನೀತಿ’ ಕಾರಣವೆಂದು ಹಿಂದುಗಳು ಹೇಳುತ್ತಾರೆ. ಆದರೆ ಹಿಂದುಗಳಿಗೆ ಅತ್ಯಂತ ಪ್ರೀತಿಯ ಈ ನಕಲಿ ವಿವರಣೆಯನ್ನು ಕೈಬಿಡುವ ಕಾಲ ಈಗ ಬಂದಿದೆ. ಬ್ರಿಟಿಷರು ಒಡೆದಾಳುವ ನೀತಿಯನ್ನು ಅನುಸರಿಸಿದರು ಎನ್ನುವ ವಾದದ ಬಗ್ಗೆ ಹೇಳುವುದಾದರೆ, ವಿಭಜನೆಗೆ ಪೂರಕವಾದ ಅಂಶಗಳು ಇಲ್ಲವಾದರೆ ಈ ವಾದ ಯಶಸ್ವಿ ಆಗುವುದಿಲ್ಲ. ಈ ನೀತಿ(ವಾದ) ತುಂಬ ಕಾಲ ಯಶಸ್ವಿ ಆಗುವುದಾದರೆ ವಿಭಜಿಸುವ ಅಂಶಗಳು ಬಹುತೇಕ ಶಾಶ್ವತ. ಮೇಲ್ಮೆöÊಯದ್ದು ಅಥವಾ ಬದಲಾಗುವಂಥದಲ್ಲ. ಹಿಂದುಗಳು ಮತ್ತು ಮುಸ್ಲಿಮರ ನಡುವೆ ಇಲ್ಲದಿರುವುದು ಕೇವಲ ವ್ಯತ್ಯಾಸವಲ್ಲ. ಇವರ ನಡುವಣ ದ್ವೇಷಕ್ಕೆ ಕಾರಣ ಭೌತಿಕ ಅಂಶಗಳು ಕೂಡ ಅಲ್ಲ; ಅದು ಆಂತರಿಕ ಸ್ವರೂಪದ್ದು. ಅದರ ಕಾರಣಗಳ ಮೂಲ ಐತಿಹಾಸಿಕ, ಮತೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ದ್ವೇಷದಲ್ಲಿದೆ. ಅದರಲ್ಲಿ ರಾಜಕೀಯ ದ್ವೇಷವು ಕೇವಲ ಪ್ರತಿಫಲನ. ಈ ದ್ವೇಷವು ಹೋಗಿ ಒಗ್ಗಟ್ಟು ಬರಬೇಕೆಂದು ನಿರೀಕ್ಷಿಸುವುದು ಅಸಹಜವೇ ಸರಿ. ಆದ್ದರಿಂದ ನಾವು ನೀತಿಯನ್ನು ಬಿಟ್ಟು ಕಾರ್ಯತಂತ್ರಕ್ಕೆ ಬದಲಾಗಬೇಕು.” ಅಂಬೇಡ್ಕರ್ ಇಲ್ಲಿ ಪರೋಕ್ಷವಾಗಿ ಗಾಂಧಿ ಅವರಿಗೆ ಪ್ರಹಾರ ಮಾಡಿದಂತಿದೆಯಲ್ಲವೆ?
ಪ್ರತ್ಯೇಕವಾಗುಳಿದ ಮುಸ್ಲಿಮರು
ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಬ್ರಿಟಿಷರ ಬೆಂಬಲದೊAದಿಗೆ ಡಿಸೆಂಬರ್ ೨೮, ೧೮೮೫ರಂದು ಸ್ಥಾಪನೆಗೊಂಡಿತು. ಲಾರ್ಡ್ ಡಫರಿನ್ ಆಗ ವೈಸರಾಯ್ ಆಗಿದ್ದರು. ಸ್ಥಾಪಕರಲ್ಲಿ ಪ್ರಮುಖರಾದ ಎ.ಓ. ಹ್ಯೂಮ್ ಮಾಜಿ ಬ್ರಿಟಿಷ್ ಪೌರಸೇವಕರು (ಸಿವಿಲ್ ಸರ್ವೆಂಟ್). ೧೮೯೦ರ ಅನಂತರ ಕಾಂಗ್ರೆಸಿಗೆ ಬ್ರಿಟಿಷರ ಅಧಿಕೃತ ಬೆಂಬಲ ವಾಪಸಾಯಿತು. ಆದರೂ ೧೯೦೫ರವರೆಗೆ ಕಾಂಗ್ರೆಸ್ ಬ್ರಿಟಿಷ್ ಸರ್ಕಾರಕ್ಕೆ ವಿಧೇಯವಾಗಿಯೇ ಇತ್ತು. ಅದಕ್ಕೆ ಸಮಾನಾಂತರವಾಗಿ ಕ್ರಾಂತಿಕಾರಿಗಳ ಚಳವಳಿ ನಡೆಯುತ್ತಿತ್ತು. ಗಮನಾರ್ಹವಾದ ಒಂದು ಅಂಶವೆAದರೆ, ಕಾಂಗ್ರೆಸ್ನ ಚಳವಳಿಯಲ್ಲಿ ಮುಸ್ಲಿಮರು ಇರಲೇ ಇಲ್ಲ. ೧೯೦೦ರ ನಂತರ ಕಾಂಗ್ರೆಸ್ನಲ್ಲಿ ಮುಸ್ಲಿಮರ ಸಂಖ್ಯೆ ಗಮನಾರ್ಹವಾಗಿ ಕುಸಿದಿತ್ತು; ಅವರು ಬಹುತೇಕ ಕಾಂಗ್ರೆಸ್ನಿAದ ದೂರವೇ ಇದ್ದರು.
ಮೊದಲ ಕಾಂಗ್ರೆಸ್ ಅಧಿವೇಶನದ ಬಗ್ಗೆ ವರದಿ ಮಾಡಿದ ‘ಟೈಮ್ಸ್ ಆಫ್ ಇಂಡಿಯ’ ದಿನಪತ್ರಿಕೆ ಫೆಬ್ರುವರಿ ೫, ೧೮೮೬ರ ಸಂಚಿಕೆಯಲ್ಲಿ ಹೀಗೆ ಬರೆದಿತ್ತು: “ಗಮನಾರ್ಹವಾದ ಒಂದು ಅಂಶವೆAದರೆ ಅಧಿವೇಶನದಲ್ಲಿ ಒಂದು ದೊಡ್ಡ ಜನಾಂಗದ ಗೈರುಹಾಜರಿ ಎದ್ದುತೋರುತ್ತಿತ್ತು. ದೇಶದ ಮುಸ್ಲಿಮರು ಅಲ್ಲಿ ಇರಲಿಲ್ಲ. ಅವರು ತಮ್ಮ ಸ್ವಾಭಾವಿಕ ಪ್ರತ್ಯೇಕತೆಯಲ್ಲಿ ಗಟ್ಟಿಯಾಗಿ ನಿಂತಿದ್ದರು.” ಮುಸ್ಲಿಮರು ಹೀಗೆ ಪೂರ್ತಿಯಾಗಿ ಬಹಿಷ್ಕರಿಸಿದ್ದು ಕಾಂಗ್ರೆಸ್ ನಾಯಕರಿಗೆ ಕಿರಿಕಿರಿ ಉಂಟುಮಾಡಿತು.
ಕಲ್ಕತ್ತಾದಲ್ಲಿ ನಡೆದ ಎರಡನೇ ಕಾಂಗ್ರೆಸ್ ಅಧಿವೇಶನಕ್ಕೆ (೧೮೮೬) ಕೆಲವು ಮುಸ್ಲಿಂ ಮುಂದಾಳುಗಳು ಹೋದಾಗ ಇತರ ಮುಸ್ಲಿಮರು ಅವರಿಗೆ ಹೀಗೆ ಹೇಳಿದರಂತೆ: “ಹಿಂದುಗಳು ನಮಗಿಂತ ಮುಂದಿದ್ದಾರೆ. ನಾವು ಅವರಿಗಿಂತ ತುಂಬ ಹಿಂದೆ ಇದ್ದೇವೆ. ನಾವು ಇನ್ನು ಕೂಡ ಸರ್ಕಾರದ ಪೋಷಕತ್ವವನ್ನು ಬಯಸಬೇಕಾಗಿದೆ. ಅವರ (ಕಾಂಗ್ರೆಸ್ನವರ) ಜೊತೆಗೆ ಹೋದರೆ ನಮಗೆ ಏನೂ ಸಿಗುವುದಿಲ್ಲ.”
ಕಾಂಗ್ರೆಸ್ ಅಧ್ಯಕ್ಷತೆ ನೀಡಿಕೆ
ಮುಂದೆ ಮುಸ್ಲಿಮರನ್ನು ಕಾಂಗ್ರೆಸ್ ಕಡೆಗೆ ಸೆಳೆಯುವ ಪ್ರಯತ್ನದ ಅಂಗವಾಗಿ ಅವರನ್ನು ಸಂಸ್ಥೆಯ ಅಧ್ಯಕ್ಷರಾಗಿ ಆರಿಸಲಾಯಿತು. ನ್ಯಾಯವಾದಿ ಬದ್ರುದ್ದೀನ್ ತೈಯಬ್ಜಿ ಅವರು ಕಾಂಗ್ರೆಸ್ ಅಧ್ಯಕ್ಷರಾದರು (೧೮೮೮). ಅದನ್ನು ಬಹಳವಾಗಿ ಸ್ವಾಗತಿಸಲಾಯಿತು. ಆದರೆ ಪ್ರತ್ಯೇಕತೆಯ ಮೂಲಪುರುಷ ಎಂದು ಗುರುತಿಸಲ್ಪಟ್ಟ ಸರ್ ಸಯ್ಯದ್ ಅಹಮದ್ ಖಾನ್ ಅವರಿಗೆ ಬರೆದ ಪತ್ರದಲ್ಲಿ ತೈಯಬ್ಜಿ ಅವರ ನಿಜ ಬಣ್ಣ ಕಾಣಿಸುತ್ತದೆ (೧೮-೦೨-೧೮೮೮ರ ಪತ್ರ) – “ಕಾಂಗ್ರೆಸ್ಗೆ ನಿಮ್ಮ ಆಕ್ಷೇಪವೆಂದರೆ, ಅದು ಭಾರತವನ್ನು ಒಂದು ರಾಷ್ಟçವೆಂದು ಪರಿಗಣಿಸುತ್ತದೆ ಎಂಬುದು. ಅದನ್ನು ಯಾರಾದರೂ ಒಂದು ರಾಷ್ಟçವೆಂದು ಪರಿಗಣಿಸುವುದು ನನಗೆ ಗೊತ್ತೇ ಇಲ್ಲ. ನೀವು ನನ್ನ ಉದ್ಘಾಟನಾ ಭಾಷಣವನ್ನು ಓದಿದರೆ ಅದರಲ್ಲಿ ಸ್ಪಷ್ಟವಾಗಿ ಹೇಳಿರುವುದು ನೋಡಬಹುದು. ‘ಭಾರತದಲ್ಲಿ ಹಲವಾರು ಸಮುದಾಯಗಳು ಅಥವಾ ರಾಷ್ಟçಗಳು ಇವೆ. ಅವುಗಳಿಗೆ ವಿಲಕ್ಷಣವಾದ ತಮ್ಮದೇ ಸಮಸ್ಯೆಗಳಿವೆ. ಉದಾಹರಣೆಗೆ ವಿಧಾನಪರಿಷತ್ಗಳ ವಿಷಯಗಳನ್ನು ತೆಗೆದುಕೊಳ್ಳಿ. ಮುಸ್ಲಿಮರು ಒಂದು ಘಟಕವಾಗಿ ಅದನ್ನು ಇಷ್ಟಪಡದಿದ್ದರೆ ಅಂದರೆ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸದಸ್ಯರ ಆಯ್ಕೆ ನಡೆಯಬೇಕೆಂದು ಅವರು ಇಷ್ಟಪಟ್ಟರೆ ಅದನ್ನು ಸುಲಭವಾಗಿ ಬದಲಿಸಲು ಅವಕಾಶವಿರಬೇಕು. ಆದ್ದರಿಂದ ನನ್ನ ನೀತಿ (ಪಾಲಿಸಿ) ನನಗೆ ಒಳಗಿನಿಂದ ಏನನ್ನಿಸುತ್ತದೋ ಹಾಗೆ ನಡೆಯುವುದೇ ಹೊರತು ಹೊರಗಿನಿಂದ ಬರುವ ಪ್ರೇರಣೆ (ಒತ್ತಡ) ಪ್ರಕಾರ ಅಲ್ಲ’ ಎಂದು ಹೇಳಿದ್ದೇನೆ.” ಅಂದರೆ ಅವರು ಕಾಂಗ್ರೆಸಿಗೆ ಬಂದರೂ ಪ್ರತ್ಯೇಕತೆಯನ್ನು ಉಳಿಸಿಕೊಂಡಿದ್ದರು.
ಹ್ಯೂಮ್–ತೈಯಬ್ಜಿ ವರದಿ
ಮುಸ್ಲಿಮರು ಹೀಗೆ ಪ್ರತ್ಯೇಕವಾಗಿ ನಿಂತುದನ್ನು ಸರಿಪಡಿಸಲು ಹ್ಯೂಮ್ ಮತ್ತು ತೈಯಬ್ಜಿ ಹಿಂದುಗಳ ಮಾನಸಿಕತೆಯನ್ನು ಆಳುವಂತಹ ಕೆಲವು ನಿಯಮಗಳನ್ನು ಹಾಕಿಕೊಂಡರು, ಅವು ಈಗಲೂ ಆಳುತ್ತಿವೆ. ವೈಸರಾಯ್ ಡಫರಿನ್ ಕಾಂಗ್ರೆಸ್-ವಿರೋಧಿ ಸರ್ ಸಯ್ಯದ್ ಅಹಮದ್ಖಾನ್ ಮತ್ತು ಎ.ಓ. ಹ್ಯೂಮ್ ಇಬ್ಬರಿಗೂ ಸಲಹೆ-ಸೂಚನೆಗಳನ್ನು ನೀಡುತ್ತಿದ್ದ. ಅಂದು ರೂಪಿಸಿದ ಆ ನಿಯಮಗಳು ಹೀಗಿವೆ:
೧) ಒಂದು ಚಳವಳಿಯನ್ನು ‘ರಾಷ್ಟಿçÃಯ’(National) ಎಂದು ಕರೆಯಬೇಕಿದ್ದರೆ ಮುಸ್ಲಿಮರ ಸಹಭಾಗಿತ್ವ ಕಡ್ಡಾಯವಾಗಿದೆ. ಅಕ್ಟೋಬರ್ ೨೭, ೧೮೮೮ರಂದು ಹ್ಯೂಮ್ಗೆ ಬರೆದ ಪತ್ರದಲ್ಲಿ ತೈಯಬ್ಜಿ ಹೀಗೆ ಹೇಳಿದ್ದರು: “ಮುಸ್ಲಿಮರಲ್ಲಿ ಬಹುಮತೀಯರು ಚಳವಳಿಗೆ ವಿರುದ್ಧವಾಗಿದ್ದಾರೆ. ಹೀಗಿರುವಾಗ ಇಡೀ ಮುಸ್ಲಿಂ ಸಮುದಾಯ ಕಾಂಗ್ರೆಸ್ಗೆ ವಿರುದ್ಧವಾಗಿದೆ ಎಂಬುದಕ್ಕೆ ಮಹತ್ತ್ವವಿಲ್ಲ.
ಆದ್ದರಿಂದ ಚಳವಳಿ ಸಾಮಾನ್ಯ(ಜನರಲ್) ಅಥವಾ ರಾಷ್ಟಿçÃಯ ಕಾಂಗ್ರೆಸ್ನದು ಎಂದಾಗುವುದಿಲ್ಲ; ಮತ್ತು ಏನಾದರೂ ಮಾಡುವ ಶಕ್ತಿಯಿಂದ ಅದು ಬಹಳಷ್ಟು ವಂಚಿತವಾಗುತ್ತದೆ.”
೨) ಮುಸ್ಲಿಮರ ಬೆಂಬಲ ಪಡೆಯಲು ಏನು ಮಾಡಬೇಕು ಎಂಬುದಕ್ಕೆ ಸಂಬAಧಿಸಿ ಜನವರಿ ೨೨, ೧೮೮೮ರ ಪತ್ರದಲ್ಲಿ ಹ್ಯೂಮ್-ತೈಯಬ್ಜಿಗೆ ಹೀಗೆ ಹೇಳಿದ್ದರು: ನಾವು ಯಶಸ್ವಿ ಆಗಬೇಕಿದ್ದರೆ ಓರ್ವ ಮುಸ್ಲಿಂ ಕಾಂಗ್ರೆಸ್ನ ಅಧ್ಯಕ್ಷರಾಗಬೇಕು. ನೀವೇ ಆ ಹುದ್ದೆಯನ್ನು ಸ್ವೀಕರಿಸಬೇಕು. ನೀವು ಅಧ್ಯಕ್ಷರಾದರೆ ಸಯ್ಯದ್ ಅಹಮದ್ಖಾನ್ ಅವರ ಟೀಕೆಗಳು ಉತ್ತರ ಭಾರತದ ಮುಸ್ಲಿಮರ ಮೇಲೆ ಪ್ರಭಾವ ಬೀರುವುದಿಲ್ಲ.” (ಇದು ತೈಯಬ್ಜಿ ಆಯ್ಕೆಯ ಹಿನ್ನೆಲೆ).
೩) ಸಾರ್ವಜನಿಕ ವಿಚಾರಗಳಲ್ಲಿ ‘ಮುಸ್ಲಿಂ ವೀಟೋ’: ಪಯನೀರ್ ಪತ್ರಿಕೆಯ ಸಂಪಾದಕರಿಗೆ ಬರೆದ ಪತ್ರದಲ್ಲಿ ತೈಯಬ್ಜಿ ಕಾಂಗ್ರೆಸ್ ಸಂವಿಧಾನದಲ್ಲಿ ಕೆಲವು ನಿಯಮಗಳನ್ನು ತರಲು ತಾನೇನು ಮಾಡಿದೆ ಎಂದು ಬರೆದಿದ್ದಾರೆ: “ಮುಸಲ್ಮಾನ್ ಪ್ರತಿನಿಧಿಗಳು ಅವಿರೋಧವಾಗಿ ಅಥವಾ ಅವಿರೋಧಕ್ಕೆ ಸಮೀಪ ಇರುವಂತೆ ಯಾವುದಾದರೂ ವಿಷಯದ ಪ್ರಸ್ತಾಪ ಮಾಡಿದರೆ ಅಥವಾ ವಿರೋಧಿಸಿದರೆ, ಯಾವುದಾದರೂ ನಿರ್ಣಯವನ್ನು ವಿರೋಧಿಸಿದರೆ ಅಥವಾ ಕೈಬಿಡಬೇಕೆಂದು ಬಯಸಿದರೆ ಅದೇ ರೀತಿ ಮಾಡಬೇಕೆಂದು ತೀರ್ಮಾನಿಸಲಾಗಿದೆ.”
೪) ಪಾನ್-ಇಸ್ಲಾಮಿಸ್ಟ್ ಭಾವನೆಯನ್ನು ಸಹಜಗೊಳಿಸುವುದು ಅಥವಾ ಅದಕ್ಕೆ ಮಂಜೂರಾತಿಯನ್ನು ಪಡೆಯುವುದು ತೈಯಬ್ಜಿ ಅವರಿಗೆ ಆಗಸ್ಟ್ ೨೦, ೧೮೮೮ರಂದು ಬರೆದ ಪತ್ರದಲ್ಲಿ ಓರ್ವ ಬ್ರಿಟಿಷ್ ವ್ಯಕ್ತಿ ಹೀಗೆ ಹೇಳಿದ್ದ: “ಕಾಂಗ್ರೆಸ್ ರಾಷ್ಟಿçÃಯ ಸಂಸ್ಥೆಯಾದರೆ ಅದು ಎಲ್ಲರ ಹಿತಾಸಕ್ತಿಗಳನ್ನು ಗಮನಿಸಬೇಕು; ಮತ್ತು ಹಿಂದುಗಳು ತಮ್ಮ ಮುಸ್ಲಿಂ ಸಹೋದರರ ಹಿತಾಸಕ್ತಿಗಳಲ್ಲಿ ಆಸಕ್ತಿ ವಹಿಸಬೇಕು. ಜಗತ್ತಿನ ಇತರ ಭಾಗದಲ್ಲಿರುವ ಇತರ ಮುಸ್ಲಿಮರ ಸ್ಥಿತಿಯ ಬಗ್ಗೆ ದೇಶದ ೫ ಕೋಟಿಗೂ ಅಧಿಕ ಇರುವ ಮುಸ್ಲಿಮರು ಅಲಕ್ಷ್ಯ ತಳೆಯಬಾರದು. ಜಗತ್ತಿನ ಇತರ ಭಾಗಗಳಲ್ಲಿ ಮುಸ್ಲಿಮರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಬಗ್ಗೆ ಭಾರತದ ಮುಸ್ಲಿಂ ಸಹೋದರರಿಗೆ ದುಃಖ ಮತ್ತು ನಾಚಿಕೆ ಆಗುತ್ತಿದೆ ಎಂದು ಕಾಂಗ್ರೆಸ್ ತನ್ನ ಮುಂದಿನ ಸಭೆಯಲ್ಲಿ ಹೇಳಬೇಕು.”
ಮುಸ್ಲಿಂ–ಬ್ರಿಟಿಷ್ ಕೂಟ
ಭಾರತದ ರಾಷ್ಟಿçÃಯ ಶಕ್ತಿಗಳನ್ನು ದುರ್ಬಲಗೊಳಿಸಲು ಮುಸ್ಲಿಂ-ಬ್ರಿಟಿಷ್ ದುಷ್ಟಕೂಟವು ಶ್ರಮಿಸಿದ್ದರಲ್ಲಿ ಯಾವುದೇ ರಹಸ್ಯ ಇಲ್ಲ. ಮುಸ್ಲಿಮರು ತಮಗೆ ಪ್ರತ್ಯೇಕ ಮತಕ್ಷೇತ್ರ ಮತ್ತು ತಮ್ಮ ಸಂಖ್ಯೆಗಿAತ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯವನ್ನು ಕೇಳಿದರು. ಅದು ಬ್ರಿಟಿಷರಿಗೆ ತುಂಬ ಆಸಕ್ತಿಯ ವಿಷಯವಾಗಿತ್ತು. ಬ್ರಿಟಿಷರ ವಿರುದ್ಧ ರಾಷ್ಟಿçÃಯ ರಂಗವನ್ನು ರಚಿಸುವ ಬಗ್ಗೆ ಮುಸ್ಲಿಮರನ್ನು ಒಲಿಸಿಕೊಳ್ಳುವುದಕ್ಕಾಗಿ ಹಿಂದೂ ನಾಯಕರು ಬ್ರಿಟಿಷರ ಮತ್ತು ಮುಸ್ಲಿಮರ ಈ ಆಟವನ್ನು ಒಪ್ಪಿಕೊಂಡರು; ಮಾತ್ರವಲ್ಲ, ಮುಸ್ಲಿಮರ ಬೇಡಿಕೆಗಿಂತ ಹೆಚ್ಚಿನದನ್ನೇ ನೀಡಿದರು.
ಅಖಿಲ ಭಾರತ ಮುಸ್ಲಿಂ ಲೀಗ್ನ (೩೦-೧೨-೧೯೦೬ರಂದು ಸ್ಥಾಪನೆ) ಕರಾಚಿ ಅಧಿವೇಶನದ (೧೯೦೭) ಅಧ್ಯಕ್ಷ ಭಾಷಣದ ಬಗ್ಗೆ ಲೇಬರ್ ಪಾರ್ಟಿಯ ಸ್ಥಾಪಕ ಹಾಗೂ ಮೂರು ಬಾರಿಯ ಬ್ರಿಟನ್ ಪ್ರಧಾನಿ ಜೇಮ್ಸ್ ರ್ಯಾಮ್ಸೇ ಮೆಕ್ಡೊನಾಲ್ಡ್ ಹೀಗೆ ಬರೆದಿದ್ದರು: “ಮುಸ್ಲಿಂ ಚಳವಳಿಗೆ ಸ್ಫೂರ್ತಿಯೆಂದರೆ ಅದಕ್ಕೆ ಎದುರಾಗುವ ತೊಂದರೆಗಳೇ. ಭಾರತ ಸರ್ಕಾರದಲ್ಲಿ ಮುಸ್ಲಿಮರಿಗಿರುವ ಹಕ್ಕುಗಳನ್ನು ಆಧರಿಸಿ ಅವರು ತಮ್ಮ ನಿಲವನ್ನು ತೆಗೆದುಕೊಳ್ಳುತ್ತಾರೆ. ಅವರ ಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ನೀಡಿದರೆ ಅವರಿಗೆ ಸಮಾಧಾನವಾಗುವುದಿಲ್ಲ. ನಮ್ಮ ಸಾಮ್ರಾಜ್ಯದಲ್ಲಿ ಅವರು ತಮ್ಮನ್ನು ನಮ್ಮ ವಿಶೇಷ ಮಿತ್ರರೆಂದು (Allies) ಭಾವಿಸುತ್ತಾರೆ. ಭಾರತದಲ್ಲಿ ತಮ್ಮ ಸ್ಥಾನಮಾನಕ್ಕೆ ಸಂಬAಧಿಸಿ ಪಾನ್-ಇಸ್ಲಾಮಿಸಂನ ಭಾಗವಾಗಿ ತಮಗೆ ಹೆಚ್ಚಿನ ಪ್ರಭಾವ(ವರ್ಚಸ್ಸು) ಇದೆ ಎಂದವರು ತಿಳಿಯುತ್ತಾರೆ. ಈ ದೇಶವನ್ನು ಹಿಂದೆ ಆಳಿದವರೆನ್ನುವ ವಿಶೇಷತೆಯನ್ನು ನೀಡಬೇಕೆಂದು ಅವರು ಬಯಸುತ್ತಾರೆ. ಅದಕ್ಕಾಗಿ ಹೆಚ್ಚಿನ ಪ್ರಾತಿನಿಧ್ಯ (ಜನಸಂಖ್ಯೆಗಿAತ ಅಧಿಕ) ನೀಡಬೇಕೆಂದು ಅವರು ಕೇಳುತ್ತಾರೆ. ಮುಸ್ಲಿಂ ನಾಯಕರು ಕೆಲವು ಆಂಗ್ಲೋ-ಇAಡಿಯನ್ ಅಧಿಕಾರಿಗಳಿಂದ ಸ್ಫೂರ್ತಿ ಪಡೆದಿದ್ದಾರೆ ಎಂಬAತಹ ಪ್ರಭಾವ ಕೂಡ ಕಾಣಿಸುತ್ತಿದೆ. ಈ ಅಧಿಕಾರಿಗಳು ಶಿಮ್ಲಾ ಮತ್ತು ಲಂಡನ್ನಿAದ ಹಗ್ಗ ಎಳೆಯುತ್ತಿದ್ದಾರೆ. ಮುಸ್ಲಿಮರಿಗೆ ವಿಶೇಷ ಫೇವರ್(ಅನುಕೂಲ) ತೋರಿಸುವ ಮೂಲಕ ಹಿಂದೂ-ಮುಸ್ಲಿಮರ ನಡುವೆ ವೈಮನಸ್ಸು ತರುತ್ತಾರೆ.
ಅವರ ಸಂಖ್ಯೆಗಿಂತ ತುಂಬ ಹೆಚ್ಚು ಪ್ರಾತಿನಿಧ್ಯ ಅವರಿಗೆ ಸಿಕ್ಕಿದೆ; ಹಿಂದುಗಳಿಗಿAತ ಬಹಳಷ್ಟು ಹೆಚ್ಚು ಉದಾರವಾದ ಫ್ರಾಂಚೈಸಿ(ಲಾಭ) ಅವರಿಗೆ ದೊರೆತಿದೆ.”
ಇದು ಬ್ರಿಟನ್ನಿಂದಲೇ ಬಂದ ಅಧಿಕೃತ ಮಾತು. ಬ್ರಿಟಿಷರ ಒಡೆದು ಆಳುವ ನೀತಿ, ಅವರ (ಮುಸ್ಲಿಮರ) ಸಂಖ್ಯೆಗಿAತ ಹೆಚ್ಚಿನ ಕೋಮು ಮತಕ್ಷೇತ್ರ ನೀಡಿಕೆ, ರಾಜಕೀಯ ಪ್ರಾತಿನಿಧ್ಯದ ಕಾರ್ಯತಂತ್ರ ಇವೆಲ್ಲ ಇಲ್ಲಿ ಬಹಿರಂಗಗೊAಡಿವೆ ಎನ್ನಬಹುದು.
ಮುಸ್ಲಿಮರ ಹೆಚ್ಚಿದ ಬೇಡಿಕೆ
ಡಾ|| ಅಂಬೇಡ್ಕರ್ ತಮ್ಮ ಪುಸ್ತಕದ ‘ಕೋಮುವಾದಿ ದಾಳಿ’ ಎನ್ನುವ ಅಧ್ಯಾಯದಲ್ಲಿ ಮುಸ್ಲಿಮರ ಕೊನೆಯಿಲ್ಲದ ಬೇಡಿಕೆಗಳ ಬಗ್ಗೆ (ಡಾ|| ಗೋಡ್ಬೋಲೆ ಅವರ ಉಲ್ಲೇಖ) ಹೀಗೆ ಬರೆಯುತ್ತಾರೆ: “ಭಾರತದ ಕೌನ್ಸಿಲ್ ಕಾಯ್ದೆ (೧೮೯೨) ಪ್ರಕಾರ ಮುಸ್ಲಿಮರಿಗೆ
ಪ್ರತ್ಯೇಕ ಪ್ರಾತಿನಿಧ್ಯದ ತತ್ತ್ವವನ್ನು ಭಾರತದ ರಾಜಕೀಯ ಸಂವಿಧಾನದಲ್ಲಿ ಮೊದಲ ಬಾರಿಗೆ ಸೇರಿಸಲಾಯಿತು. ೧೮೮೮ರಷ್ಟು ಹಿಂದೆಯೇ ವೈಸರಾಯ್ ಡಫರಿನ್ “ಭಾರತದಲ್ಲಿ ವಿಧಾನಪರಿಷತ್ಗಳಲ್ಲಿ (ಲೆಜಿಸ್ಲೇಟಿವ್ ಕೌನ್ಸಿಲ್ – ಎಲ್.ಸಿ.) ಪ್ರಾತಿನಿಧ್ಯವು ಬ್ರಿಟನ್ನ ಹಾಗಲ್ಲ; ಇಲ್ಲಿ (ಕೆಲವರ) ಹಿತಾಸಕ್ತಿಗಳಿಗೆ ಅನುಸಾರವಾಗಿ ಅದನ್ನು ಮಾಡಬೇಕಾಗುತ್ತದೆ” ಎಂದು ಹೇಳಿದ್ದ.
ಪ್ರತ್ಯೇಕ ಪ್ರಾತಿನಿಧ್ಯದ ಸಲಹೆ ಬಂದದ್ದು ಬ್ರಿಟಿಷರಿಂದ ಆದರೂ ಮುಸ್ಲಿಮರು ಅದರ (ಪ್ರತ್ಯೇಕ ರಾಜಕೀಯ ಹಕ್ಕು) ಸಾಮಾಜಿಕ ಮಹತ್ತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡರು. ೧೯೦೯ರಲ್ಲಿ ಕೌನ್ಸಿಲ್ಗಳ ಮುಂದಿನ ಸುಧಾರಣೆಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂಬುದು ಮುಸ್ಲಿಮರಿಗೆ ತಿಳಿಯಿತು. ಒಂದು ಮುಸ್ಲಿಂ ನಿಯೋಗವು ವೈಸರಾಯ್ ಮಿಂಟೋನನ್ನು ಭೇಟಿಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿತು. ಅದಕ್ಕೆ ಕೂಡಲೇ ಒಪ್ಪಿಗೆ ನೀಡಿದರು. ಅದರಂತೆ ಮುಸ್ಲಿಮರಿಗೆ ಈ ಕೆಳಗಿನವುಗಳನ್ನು ನೀಡಲಾಯಿತು.
೧) ಅವರ ಪ್ರತಿನಿಧಿಗಳನ್ನು ಆರಿಸುವ ಹಕ್ಕು
೨) ಅದಕ್ಕಾಗಿ ಪ್ರತ್ಯೇಕ ಮತಕ್ಷೇತ್ರಗಳು
೩) ಸಾಮಾನ್ಯ ಮತಕ್ಷೇತ್ರದಲ್ಲಿ ಕೂಡ ಮತದಾನದ ಹಕ್ಕು
೪) ಪ್ರಾತಿನಿಧ್ಯದಲ್ಲಿ ವಿಶೇಷತೆ (ವೈಟೇಜ್) ನೀಡುವ ಹಕ್ಕು
೧೯೧೬ರ ಅಕ್ಟೋಬರ್ನಲ್ಲಿ ಇಂಪೀರಿಯಲ್ ಕೌನ್ಸಿಲ್ನ ಸದಸ್ಯರು ವೈಸರಾಯ್ಗೊಂದು ಮನವಿ ನೀಡಿದರು. ಅದರಲ್ಲಿ ಈ ಕುರಿತು ಕೇಳಲಾಗಿತ್ತು:
ಎ) ಪ್ರತ್ಯೇಕ ಪ್ರಾತಿನಿಧ್ಯ ತತ್ತ್ವವನ್ನು ಪಂಜಾಬ್ ಮತ್ತು ಸೆಂಟ್ರಲ್ ಪ್ರಾವಿನ್ಸ್ಗಳಿಗೆ ವಿಸ್ತರಿಸಬೇಕು.
ಬಿ) ಪ್ರಾಂತ ಮತ್ತು ಇಂಪೀರಿಯಲ್ ಎಲ್.ಸಿ.ಗಳಲ್ಲಿ ಮುಸ್ಲಿಂ ಪ್ರತಿನಿಧಿಗಳ ಸಂಖ್ಯೆಯನ್ನು ನಿಗದಿಪಡಿಸಬೇಕು.
ಸಿ) ಮುಸ್ಲಿಮರ ಮತಕ್ಕೆ ಹಾನಿ ಎಸಗುವ ಶಾಸನಗಳಿಂದ ಅವರಿಗೆ ರಕ್ಷಣೆ ನೀಡಬೇಕು.
ಇದಕ್ಕೆ ಸಂಬAಧಿಸಿ ಹಿಂದೂ-ಮುಸ್ಲಿಂ ನಡುವೆ ‘ಲಕ್ನೋ ಒಪ್ಪಂದ’ ನಡೆಯಿತು. ಅದರಂತೆ ಮುಸ್ಲಿಮರಿಗೆ ಅವರ ಸಂಖ್ಯೆಗಿAತ ತುಂಬ ಹೆಚ್ಚಿನ ಪ್ರತ್ಯೇಕ ಪ್ರಾತಿನಿಧ್ಯ ನೀಡಲಾಯಿತು. ಸೆಂಟ್ರಲ್ ಪ್ರಾವಿನ್ಸ್ನಲ್ಲಿ ಶೇ. ೩೪೦, ಮದ್ರಾಸ್ ಪ್ರಾಂತದಲ್ಲಿ ಶೇ. ೨೩೧, ಯುನೈಟೆಡ್ ಪ್ರಾವಿನ್ಸಸ್ನಲ್ಲಿ ಶೇ. ೨೧೪, ಬೊಂಬಾಯಿ ಪ್ರಾಂತದಲ್ಲಿ ಶೇ. ೧೬೩, ಬಿಹಾರ ಹಾಗೂ ಒರಿಸ್ಸಾಗಳಲ್ಲಿ ಶೇ. ೨೬೮ರಷ್ಟು ಹೆಚ್ಚಿನ ಪ್ರಾತಿನಿಧ್ಯ ಮುಸ್ಲಿಮರಿಗೆ ದೊರೆಯಿತು. ಈ ಬಗ್ಗೆ ಬಿ.ಆರ್. ಅಂಬೇಡ್ಕರ್ ಅವರು ನೇರಮಾತುಗಳಲ್ಲೇ ಹೇಳಿದ್ದಾರೆ: “ಹಿಂದುಗಳ ದೌರ್ಬಲ್ಯಗಳ ಲಾಭ ಪಡೆಯುವ ಗುಣ ಮುಸ್ಲಿಮರಲ್ಲಿ ಯಾವಾಗಲೂ ಇರುತ್ತದೆ. ಹಿಂದುಗಳು ಯಾವುದಕ್ಕಾದರೂ ಆಕ್ಷೇಪ ಸೂಚಿಸಿದರೆ ಅದು ಬೇಕೆಂದು ಒತ್ತಾಯ ಮಾಡುವುದು ಮುಸ್ಲಿಮರ ಕ್ರಮ ಮತ್ತು ಆ ಬಗ್ಗೆ ಅವರಿಗೆ ಬೇರೇನಾದರೂ ರಿಯಾಯಿತಿ ತೋರಿಸಿದರೆ ಮಾತ್ರ ಅದರಿಂದ ಹಿಂದೆ ಸರಿಯುವುದು ಅವರ ಕಾರ್ಯ ವಿಧಾನ.”
ಕೊಡುಗೆಗಳ ಸುರಿಮಳೆ
೧೮೮೫ರಿಂದ ೧೯೧೯ರ ವರೆಗೂ ಕಾಂಗ್ರೆಸ್ನ ಹಿಂದೂ ನಾಯಕರು ಮುಸ್ಲಿಮರ ಬೆಂಬಲ ಪಡೆಯಲು ಬಗೆಬಗೆಯ ಕೊಡುಗೆಗಳನ್ನು ನೀಡುತ್ತಾ ಹೋದರು. ಮುಸ್ಲಿಂ ನಾಯಕರು ಬ್ರಿಟಿಷರ ಒತ್ತಾಸೆಯೊಂದಿಗೆ ಬಿಗಿಯಾದ ಚೌಕಾಸಿ ಮಾಡಿದರು. ಅವರ ಗಮನ ತಮ್ಮ ಸಮುದಾಯದ ಹಿತಾಸಕ್ತಿ ಮಾತ್ರ. ೧೯೧೯ಕ್ಕೆ ಮುನ್ನ ಹಿಂದೂ-ಮುಸ್ಲಿA ಏಕತೆ ಮತ್ತು ಸ್ವಾತಂತ್ರ್ಯ ಗಳಿಕೆಗಳು ಗುರಿಯಾಗಿದ್ದರೆ ಅಲ್ಲಿಂದ ಮುಂದೆ ಈ ಪಾಲಿಸಿಯೇ ಡಾಕ್ಟಿçನ್ (ತತ್ತ್ವ) ಆಯಿತು ಹಾಗೂ ಸ್ವಾತಂತ್ರ್ಯ ಗಳಿಕೆಗಿAತ ಡಾಕ್ಟಿçನ್ ಮುಖ್ಯ ಆಯಿತು. ಅದರಿಂದ ಧೈರ್ಯ ಹೊಂದಿದ ಮುಸ್ಲಿಂ ನಾಯಕರು ತಮ್ಮ ಪಾನ್-ಇಸ್ಲಾಮಿಸ್ಟ್ ಗುರಿಗಾಗಿ ಸ್ವಾತಂತ್ರ್ಯ ಹೋರಾಟವನ್ನೇ ಬಳಸಿಕೊಂಡರು. ಅದೇ ಖಿಲಾಫತ್ ಚಳವಳಿ.
ಖಿಲಾಫತ್ ಆರಂಭ
ದೇಶದಲ್ಲಿ ಖಿಲಾಫತ್ ಚಳವಳಿಯು ಎರಡು ಹಂತಗಳಲ್ಲಿ ನಡೆಯಿತು. ಮೊದಲ ಹಂತವು ಡಿಸೆಂಬರ್ ೧೯೧೮ರಿಂದ ಜುಲೈ ೧೯೨೦ರ ವರೆಗಿತ್ತು. ಅದು ಮನವಿ ಸಲ್ಲಿಕೆ ಮತ್ತು ಒತ್ತಾಯದ ಹಂತವಾಗಿದ್ದು, ಜನಾಭಿಪ್ರಾಯ ರೂಪಿಸುವುದು, ಸಂಘಟನೆಯನ್ನು ಕಟ್ಟುವುದು, ನಿರ್ಣಯಗಳ ಅಂಗೀಕಾರ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುವುದು ಅದರ ಪ್ರಮುಖ ಅಂಗಗಳಾಗಿದ್ದವು.
ಖಿಲಾಫತ್ ಚಳವಳಿಯ ಎರಡನೇ ಹಂತವು ೧೯೨೦ರ ಆಗಸ್ಟ್ನಿಂದ ೧೯೨೨ರ ಮಾರ್ಚ್ ವರೆಗೆ ನಡೆಯಿತು. ಬಲಾತ್ಕಾರ ಮತ್ತು ಹಿಂಸಾಚಾರಗಳು ಅದರಲ್ಲಿ ವಿಜೃಂಭಿಸಿದವು. ಅವು ಇಸ್ಲಾಮಿಕ್ ಮತೀಯ ಆಚರಣೆಗಳ ಪ್ರಕಾರವೇ ನಡೆದವು. ಮುಸ್ಲಿಂ ಸಮುದಾಯ (ಉಮ್ಮಾ) ದುರ್ಬಲವಿದ್ದಾಗ ಬೋಧನೆ (ಪ್ರಚಾರ) ನಡೆಸುವುದು ಮತ್ತು ಅದಕ್ಕೆ ಬಲ ಬರುತ್ತಲೇ ವ್ಯಾಪಕ ಹಿಂಸಾಚಾರಕ್ಕೆ ಇಳಿಯುವುದು ಅವರ ಒಂದು ಕ್ರಮ ಎನ್ನಬಹುದು. ಈ ಹಿಂಸಾಚಾರವು ಆಕ್ರಮಣದ ಸ್ವರೂಪವನ್ನು ಕೂಡ ಪಡೆದುಕೊಳ್ಳಬಹುದು.
ಮುಸ್ಲಿಮರ ಅಸಮಾಧಾನ
ಒಂದನೇ ಮಹಾಯುದ್ಧದ ವೇಳೆ ೧೯೧೫-೧೮ರ ಅವಧಿಯಲ್ಲಿ ಹಲವು ರಹಸ್ಯ ಒಪ್ಪಂದಗಳು ಮತ್ತು ಯುದ್ಧಕಾಲದ ಒಪ್ಪಂದಗಳು ನಡೆದವು. ಅವುಗಳ ಪರಿಣಾಮವಾಗಿ ಟರ್ಕಿಯ ಒಟ್ಟೊಮನ್ ಸಾಮ್ರಾಜ್ಯದ ಪತನವಾಯಿತು. ಆ ಪತನದ ಜೊತೆಗೆ ಖಿಲಾಫತ್ ಮತ್ತು ಇಸ್ಲಾಂನ ಪವಿತ್ರ ಸ್ಥಳಗಳ ರಕ್ಷಣೆಯ ವಿಷಯ ಕೂಡ ಸೇರಿಕೊಂಡಿತ್ತು. ಈಗಾಗಲೇ ಗಮನಿಸಿರುವಂತೆ ಆ ವಿಷಯಗಳು ಭಾರತದ ಮುಸ್ಲಿಮರಿಗೂ ಆಪ್ತವಾಗಿದ್ದವು. ಒಟ್ಟೊಮನ್ ಸಾಮ್ರಾಜ್ಯದ ಪತನದಿಂದಾಗಿ ಭಾರತದಲ್ಲಿ ತಮ್ಮ ಮಹತ್ತ್ವಕ್ಕೆ ಚ್ಯುತಿ ಬರಬಹುದೆಂದು ಅವರು ಭಾವಿಸಿದರು. ಬ್ರಿಟಿಷರಿಗೆ ವಿಧೇಯರಾಗಿದ್ದುದರಿಂದ ತಮಗೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದವರು ಅಸಮಾಧಾನವನ್ನು ಸೂಚಿಸಿದರು.
೧೯೧೮ರಲ್ಲಿ ಸಂವಿಧಾನ ಸುಧಾರಣೆ ಬಗೆಗಿನ ವರದಿ ಬಂತು. ವೈಸರಾಯ್ ಚೆಮ್ಸ್ಫರ್ಡ್ ಮತ್ತು ಭಾರತದ ರಾಜ್ಯಾಂಗ ಕಾರ್ಯದರ್ಶಿ ಎಡ್ವಿನ್ ಮಾಂಟೆಗ್ಯೂ ಸೇರಿ ಈ ಜಂಟಿ ವರದಿಯನ್ನು ಸಿದ್ಧಪಡಿಸಿದ್ದು ಅದು ಮಾಂಟೆಗ್ಯೂ-ಚೆಮ್ಸ್ಫರ್ಡ್ ವರದಿ ಎನ್ನುವ ಹೆಸರಿನಿಂದ ಪರಿಚಿತ (ಕುಪ್ರಸಿದ್ಧವಾಗಿದೆ).
ವರದಿಯಲ್ಲಿ ಮುಸ್ಲಿಮರ ಬೇಡಿಕೆಗಳ ಕುರಿತು ಹೇಳುತ್ತಾ “ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರಗಳ ಸಹಿತ ವಿಶೇಷ ಪ್ರಾತಿನಿಧ್ಯವನ್ನು ೧೯೦೯ರಲ್ಲೇ ನೀಡಲಾಗಿದೆ. ಅವರು ಇದನ್ನು ತೀರ್ಮಾನವಾದ ವಿಷಯವೆಂದು ಭಾವಿಸುತ್ತಾರೆ. ಆದ್ದರಿಂದ ಈಗಿನ ವ್ಯವಸ್ಥೆ ಮುಂದುವರಿಯಬೇಕೆAಬುದು ನಮ್ಮ ಭಾವನೆ. ಅದರಿಂದ ಹಿಂದೆ ಸರಿದರೆ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಗಬಹುದು; ಬ್ರಿಟಿಷ್ ಸಾಮ್ರಾಜ್ಯದ ಕಡೆಗೆ ಅವರ ವಿಧೇಯತೆ ಕಡಮೆ ಆಗಬಹುದು. ಪ್ರತ್ಯೇಕ ಪ್ರಾತಿನಿಧ್ಯ ಮತ್ತು ಕೋಮುವಾರು ಮತಕ್ಷೇತ್ರವನ್ನು ಅವರು ತಮಗಿರುವ ಏಕೈಕ ರಕ್ಷಣೆ ಎಂದು ನಂಬಿದ್ದಾರೆ. ಆದ್ದರಿಂದ ಈಗಿನ ವ್ಯವಸ್ಥೆ ಮುಂದುವರಿಯಬೇಕೆAದು ನಮ್ಮ ಭಾವನೆ. ಯಾವುದೇ ಪ್ರಾಂತದ ಮತದಾರರಲ್ಲಿ ಅವರು ಬಹುಸಂಖ್ಯಾತರಾಗಿದ್ದರೆ ಅಲ್ಲಿ ಕೋಮುವಾರು ಪ್ರಾತಿನಿಧ್ಯ ಬೇಕೆಂದು ನಮಗೆ ಅನ್ನಿಸುವುದಿಲ್ಲ. ಒಟ್ಟಿನಲ್ಲಿ ಮುಸ್ಲಿಂ ಪ್ರಾತಿನಿಧ್ಯವನ್ನು ನಿಲ್ಲಿಸುವುದಿಲ್ಲ” – ಎಂದವರು ಪ್ರಕಟಿಸಿದರು.
ಪತ್ರಿಕೆಗಳಿಂದ ಟೀಕೆ
ಆದರೂ ಮುಸ್ಲಿಂ ನಾಯಕರು ಸಿಟ್ಟಿಗೆದ್ದರು; ಅವರ ಪತ್ರಿಕೆಗಳು ಸರ್ಕಾರದ ವಿರುದ್ಧ ಖಾರವಾಗಿ ಬರೆದವು. ಸರ್ಕಾರ ಪತ್ರಿಕಾ ಕಾಯ್ದೆ (೧೯೧೦), ಭಾರತದ ರಕ್ಷಣೆ ಕಾಯ್ದೆಗಳನ್ನು (೧೯೧೫) ಮುಸ್ಲಿಂ ಪತ್ರಿಕೆಗಳ (ಕಾಮ್ರೇಡ್, ಹಂದರ್ದ್, ಅಲ್-ಹಿಲಾಲ್, ಅಲ್-ಬಲಾಗ್, ಜಮೀನ್ದಾರ್ ಇತ್ಯಾದಿ) ಪ್ರಕಟಣೆಯ ವಿರುದ್ಧ ಬಳಸಿತು. ಮಹಮ್ಮದ್ ಅಲ್ಹಸನ್, ಆಲಿ ಸಹೋದರರು, ಅಬ್ದುಲ್ ಕಲಾಂ ಆಜಾದ್, ಹಜ್ರತ್ ಮೊಹಾನಿ ಅಂತಹ ಪ್ರಮುಖ ನಾಯಕರು ಬಂಧನದಲ್ಲಿದ್ದರು. ಮಹಾಯುದ್ಧದ ವೇಳೆ ಬಂಧನದಿAದ ಪಾರಾಗಿದ್ದ ನಾಯಕರಲ್ಲಿ ಮೌಲಾನಾ ಅಬ್ದುಲ್ ಬಾರಿ, ಡಾ|| ಅನ್ಸಾರಿ, ಹಕೀಂ ಅಜ್ಮಲ್ಖಾನ್ ಮತ್ತು ಮುಶೀರ್ ಹುಸೇನ್ ಕಿದ್ವಾಯಿ ಅವರು ಮಾತ್ರ ರಾಜಕೀಯವಾಗಿ ಸಕ್ರಿಯವಾಗಿದ್ದರು. ಬಂಧಿತ ಮುಸ್ಲಿಂ ನಾಯಕರ ಬಿಡುಗಡೆಗಾಗಿ ೧೯೧೭ರ ಪ್ರಾರಂಭದಿAದ ಚಳವಳಿ ಶುರುವಾಗಿತ್ತು. ಭಾರತದ ರಾಜಕೀಯ ರಂಗಕ್ಕೆ ಗಾಂಧಿ ಪ್ರವೇಶದೊಂದಿಗೆ ಚಿತ್ರಣ ಬದಲಾಯಿತು.
ಗಾಂಧಿ ಪ್ರವೇಶ
ದಕ್ಷಿಣ ಆಫ್ರಿಕದಲ್ಲಿ ಅಲ್ಲಿನ ವರ್ಣದ್ವೇಷ ನೀತಿಯ ಸರ್ಕಾರದ ವಿರುದ್ಧ ಯಶಸ್ವಿ ಸತ್ಯಾಗ್ರಹ ಆಂದೋಲನವನ್ನು ನಡೆಸಿದ್ದ ಎಂ.ಕೆ. ಗಾಂಧಿ ಅವರು ೧೯೧೫ರಲ್ಲಿ ಭಾರತಕ್ಕೆ ಮರಳಿದರು. ಬಂಧಿತ ಮುಸ್ಲಿಂ ನಾಯಕರ ಬಿಡುಗಡೆಗೆ ಆಗ್ರಹಿಸುತ್ತಿದ್ದ ಚಳವಳಿಯಲ್ಲಿ ಭಾಗವಹಿಸುವಂತೆ ಗಾಂಧಿಯವರನ್ನು ಕೋರಲಾಯಿತು. ಅವರ ಮುಸ್ಲಿಂ ಸ್ನೇಹಿತರ ವಲಯವು ವಿಸ್ತಾರವಾಗಿ, ಆಲಿ ಸಹೋದರರು, ಹಕೀಂ ಅಜ್ಮಲ್ಖಾನ್ ಮತ್ತು ಮೌಲಾನಾ ಅಬ್ದುಲ್ ಬಾರಿ ಅದರಲ್ಲಿ ಸೇರ್ಪಡೆಗೊಂಡರು. ೧೯೧೮ರ ಏಪ್ರಿಲ್ನಲ್ಲಿ ದೆಹಲಿಯಲ್ಲಿ ನಡೆದ ಇಂಪೀರಿಯಲ್ ವಾರ್ ಕಾನ್ಫರೆನ್ಸ್ನಲ್ಲಿ (ಸಾಮ್ರಾಜ್ಯದ ಯುದ್ಧ ಸಮಾವೇಶ) ಗಾಂಧಿಯವರು ಟರ್ಕಿ ಬಗೆಗಿನ ಮುಸ್ಲಿಂ ದೃಷ್ಟಿಕೋನವನ್ನು ಬಲವಾಗಿ ಸಮರ್ಥಿಸಿ ಮಾತನಾಡಿದ ಕಾರಣ ಆ ನಾಯಕರ ಕೃತಜ್ಞತೆ ಇವರಿಗೆ ಲಭಿಸಿತು.
೧೯೧೯ರ ಫೆಬ್ರುವರಿಯಲ್ಲಿ ಸರ್ಕಾರದಿಂದ ರೌಲೆಟ್ ಆ್ಯಕ್ಟ್ (ಲಷ್ಕರಿ ಶಾಸನ) ಜಾರಿಗೆ ಬಂತು. ಅದರ ಪ್ರಕಾರ ರಾಜಕೀಯ ಕೇಸುಗಳನ್ನು ನ್ಯಾಯಾಂಗ ಅಧಿಕಾರಿಗಳಿಲ್ಲದೆ (ಜ್ಯೂರಿ) ವಿಚಾರಣೆ ನಡೆಸಬಹುದಿತ್ತು; ಮತ್ತು ಶಂಕಿತರನ್ನು ವಿಚಾರಣೆ ಇಲ್ಲದೆಯೆ ಬಂಧನದಲ್ಲಿ ಇಡಬಹುದಿತ್ತು. ಇದಕ್ಕೆ ದೇಶಾದ್ಯಂತ ವ್ಯಾಪಕ ಅಸಮಾಧಾನವು ಕಂಡುಬAತು. ಕೊನೆಗೆ ಏಪ್ರಿಲ್ ೧೩ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ನಡೆದು ಅಪಾರ ಸಾವು-ನೋವುಗಳಾದವು.
ಹಿಂದೂ-ಮುಸ್ಲಿಂ ಏಕತೆಯ ಭ್ರಮೆ
ಗಾಂದಿ ತಮ್ಮ ರಾಜಕೀಯ ಜೀವನದ ಆರಂಭದಿAದಲೇ ಹಿಂದೂ-ಮುಸ್ಲಿA ಏಕತೆಯ ಭ್ರಮೆಯಲ್ಲಿದ್ದರು. ಅವರ ಈ ವಿಚಿತ್ರ ಸ್ವಭಾವವನ್ನು ಅಂಬೇಡ್ಕರ್ ಹೀಗೆ ವಿವರಿಸಿದ್ದಾರೆ: “ಭಾರತದಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತಲೇ ಅವರು ಕೇವಲ ಆರು ತಿಂಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರುತ್ತೇನೆಂದು ಜನರನ್ನು ಆಶ್ಚರ್ಯದಲ್ಲಿ ಕೆಡವಿದರು. ತಾನು ಹೇಳಿದ ಷರತ್ತನ್ನು ಪೂರೈಸಿದರೆ ಆ ಪವಾಡ ಮಾಡಿ ತೋರಿಸುತ್ತೇನೆ ಎಂದರು. ಹಿಂದೂ-ಮುಸ್ಲಿA ಏಕತೆ ಆ ಶರತ್ತುಗಳಲ್ಲೊಂದು. ಹಿಂದೂ-ಮುಸ್ಲಿA ಏಕತೆಯಿಲ್ಲದೆ ದೇಶಕ್ಕೆ ಸ್ವಾತಂತ್ರö್ಯ ಬರದೆಂದು ಗಾಂಧಿ ಆಗಾಗ ಹೇಳುತ್ತಲೇ ಇದ್ದರು. ಭಾರತದ ರಾಜಕೀಯದಲ್ಲಿ ಅವರು ಅದನ್ನು ಕೇವಲ ಚಲಾವಣೆಯ ನಾಣ್ಯವಾಗಿ ಬಳಸಿದ್ದಲ್ಲ. ಅದು ಕಾರ್ಯಗತವಾಗುವುದಕ್ಕೆ ಅವರು ತೀವ್ರ ಪ್ರಯತ್ನವನ್ನೇ ನಡೆಸಿದರು. ೧೯೧೯ರ ಮಾರ್ಚ್ನಲ್ಲಿ ರೌಲೆಟ್ ಆ್ಯಕ್ಟ್ ವಿರುದ್ಧ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ ಅವರು, ಆ ಸಭೆಗಳಲ್ಲಿ ಭಾಗವಹಿಸುವ ಜನರು ಹಿಂದೂ-ಮುಸ್ಲಿA ಏಕತೆಯ ಪ್ರತಿಜ್ಞೆ ಕೈಗೊಳ್ಳಬೇಕೆಂದು ನಿಬಂಧನೆ ವಿಧಿಸಿದರು. ಹಿಂದೂ-ಮುಸ್ಲಿಮರ ನಡುವೆ ಘರ್ಷಣೆಗೆ ದಾರಿ ಆಗುವಂಥದ್ದು ಏನೂ ಇರಲಿಲ್ಲ. ಆದರೂ ಗಾಂಧಿಯವರು ಸಭೆಗಳಲ್ಲಿ ಭಾಗವಹಿಸುವ ಜನ ಅಂತಹ ಪ್ರತಿಜ್ಞೆ ಕೈಗೊಳ್ಳಬೇಕೆಂದು ನಿಬಂಧನೆ ವಿಧಿಸಿದರು. ಆರಂಭದಿAದಲೇ ಅವರು ಹಿಂದೂ-ಮುಸ್ಲಿA ಏಕತೆಯ ಬಗ್ಗೆ ಎಷ್ಟೊಂದು ಒತ್ತು ನೀಡುತ್ತಿದ್ದರು ಎಂಬುದು ಇದರಿಂದ ತಿಳಿಯುತ್ತದೆ” ಎಂದು ಡಾ|| ಅಂಬೇಡ್ಕರ್ ವಿಶ್ಲೇಷಿಸಿದ್ದಾರೆ.
೧೯೧೭ರ ಚಳಿಗಾಲದಲ್ಲಿ ಮುಸ್ಲಿಂ ನಾಯಕರ ಜೊತೆಗೆ ನಡೆಸಿದ ವ್ಯವಹಾರದಿಂದ ಅವರಲ್ಲಿ ಹಿಂದೂ-ಮುಸ್ಲಿA ಏಕತೆಯ ಭ್ರಮೆ ಉಂಟಾಗಿ ಜೀವಮಾನ ಪರ್ಯಂತ ಇತ್ತು ಎನ್ನುವುದು ಸರಿ ಎನಿಸುತ್ತದೆ.
ಸಂತ ಅಲ್ಲ, ರಾಜಕಾರಣಿ
“ಗಾಂಧಿ ಕಾಲದ ಇತಿಹಾಸವನ್ನು ಅಧ್ಯಯನ ಮಾಡುವವರಿಗೊಂದು ವಿಚಿತ್ರ ಸಮಸ್ಯೆ ಎದುರಾಗುತ್ತದೆ” ಎಂದು ನವರತ್ನ ಎಸ್. ರಾಜಾರಾಮ್ ಅವರು ತಮ್ಮ ‘Gandhi, Khilafat and the National Movement’ ಶೀರ್ಷಿಕೆಯ ಪುಸ್ತಕದಲ್ಲಿ ವಿಶ್ಲೇಷಿಸುತ್ತಾರೆ. “ರಾಜಕಾರಣಿ ಎಂಬ ನೆಲೆಯಲ್ಲಿ ಗಾಂಧಿ ಅವರ ಸಂಕೀರ್ಣತೆಗಳನ್ನು ಅನಾವರಣ ಮಾಡಲು ಹೊರಟಾಗ ಸಂತ ಗಾಂಧಿ ಮಧ್ಯಪ್ರವೇಶಿಸುತ್ತಾರೆ. ಆದರೆ ಸ್ವಾತಂತ್ರ್ಯಪೂರ್ವದ ದಶಕಗಳಲ್ಲಿ ದೇಶವನ್ನು ಮುನ್ನಡೆಸಿದ್ದು ರಾಜಕಾರಣಿ ಗಾಂಧಿಯೇ ಹೊರತು ಸಂತ ಗಾಂಧಿ ಅಲ್ಲ.
ಸ್ವರಾಜ್ಯ (ಸ್ವಾತಂತ್ರ್ಯ)ವನ್ನು ಖಿಲಾಫತ್ನ ಮತೀಯ ಗುರಿಗಳಿಗೆ ಬೆಂಬಲ ನೀಡಲು ಬಳಸಿ ಅದನ್ನೊಂದು ಚಳವಳಿಯಾಗಿಸಿದ್ದು ರಾಜಕಾರಣಿ ಗಾಂಧಿ. ಕಾಂಗ್ರೆಸ್ ಅಧ್ಯಕ್ಷರಾಗಿ ಗೆದ್ದುಬಂದ ಸುಭಾಷ್ಚಂದ್ರ ಬೋಸ್ರನ್ನು ಹೊರಹಾಕಿದ್ದು ರಾಜಕಾರಣಿಗಾಂಧಿಯೇ ವಿನಾ ಸಂತ ಗಾಂಧಿ ಅಲ್ಲ. ಪಕ್ಷದ ಆಶಯಕ್ಕೆ ವಿರುದ್ಧವಾಗಿ ಸರ್ದಾರ್ ಪಟೇಲ್ ಅವರ ಬದಲಾಗಿ ನೆಹರು ಅವರನ್ನು ಪ್ರಧಾನಿಯಾಗಿ ದೇಶದ ಮೇಲೆ ಹೊರೆಸಿದ್ದು ರಾಜಕಾರಣಿ ಗಾಂಧಿಯೇ ಹೊರತು ಸಂತ ಗಾಂಧಿ ಅಲ್ಲ; ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದಾಗ ಹೊಸದಾಗಿ ರಚನೆಯಾಗಿದ್ದ ದೇಶದ ಕಾಂಗ್ರೆಸ್ ಸರ್ಕಾರದ ಮೇಲೆ ಪಾಕಿಸ್ತಾನಕ್ಕೆ ಭಾರೀ ಮೊತ್ತ ನೀಡುವಂತೆ ಒತ್ತಡ ತಂದು ಅದನ್ನು ಕೊಡಿಸಿದ್ದು ರಾಜಕಾರಣಿ ಗಾಂಧಿಯೇ ಹೊರತು ಸಂತ ಗಾಂಧಿ ಅಲ್ಲ” ಎಂದು ಅವರು ವಿವರಿಸುತ್ತಾರೆ.
ಆದರೆ ಯಾರಾದರೂ ಅವರ ರಾಜಕೀಯ ಜೀವನದ ಇಂತಹ ವಿವಾದಾಸ್ಪದ ಅಂಶಗಳನ್ನು ಮುಂದೆ ತರುತ್ತಲೇ ‘ಸಂತತನ’ ಎದುರು ಬಂದು ಗಮನವನ್ನು ಬೇರೆ ಕಡೆಗೆ ಸೆಳೆಯುತ್ತದೆ. ನಿಜವೆಂದರೆ ಗಾಂಧಿಯವರು ಮುಖ್ಯವಾಗಿ ಒಬ್ಬ ರಾಜಕಾರಣಿ. ರಾಜಕೀಯದಲ್ಲಿ ಅವರ ಮಹತ್ತ್ವದ ಕಾರಣದಿಂದ ಅವರ ಸಂತತನ, ಫಿಲಾಸಫಿಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಆದರೆ ಶ್ರೀ ಅರವಿಂದರಿಗೆ ಸೋಲಿಸಿದರೆ ಅವರ ವರ್ಚಸ್ಸುಗಳ ವ್ಯತ್ಯಾಸ ತಿಳಿಯುತ್ತದೆ ಎನ್ನುವ ಎನ್.ಎಸ್. ರಾಜಾರಾಮ್, ಸಂತನಾಗಿ ಗಾಂಧಿಯವರ ವರ್ಚಸ್ಸು ಯಾವಾಗಲೂ ಕಣ್ಣಿಗೆ ರಾಚುತ್ತದೆ. ಅದಲ್ಲದೆ ಅವರು ರಾಜಕಾರಣ ಮತ್ತು ವಿದ್ವತ್ ವಲಯದ (ಅಕಾಡೆಮಿಕ್) ಹಿತಾಸಕ್ತಿ ಗುಂಪುಗಳಿಗೆ ಅವರ ಬೇಳೆ ಬೇಯಿಸಿಕೊಳ್ಳಲು ಅಮೂಲ್ಯ ಆಸ್ತಿ ಆಗಿದ್ದಾರೆ. ಅವರ ವೃತ್ತಿಜೀವನ ಮತ್ತು ಸಾಧನೆಗಳ ಮರು ಮೌಲ್ಯಮಾಪನಕ್ಕೆ ಹೊರಟರೆ ಈ ವರ್ಗಗಳಿಂದ ತೀವ್ರ ವಿರೋಧ ಬರುತ್ತದೆ. ಆ ಉನ್ನತ ಸ್ಥಾನದಿಂದ ಅವರ ಪದಚ್ಯುತಿ ಆಗಬಹುದೆಂದು ಈ ಜನ ಭಯಪಡುತ್ತಾರೆ. (ಅದರಿಂದ ಈ ಜನರ ಪದಚ್ಯುತಿಯೂ ಆಗುತ್ತದೆ). ಈ ಕೋಟೆ ಮುರಿದವರು ತೀರಾ ವಿರಳ; ಈಚಿನ ವರ್ಷಗಳಲ್ಲಿ ಯಾರೂ ಇಲ್ಲ; ಅದಕ್ಕೆ ಆ ಕಾಲದ ಪುಸ್ತಕಗಳಿಗೆ ಹೋಗಬೇಕು. ಸಿ. ಶಂಕರನ್ ನಾಯರ್ ಅವರ Gandhi and Anarchy (ಗಾಂಧಿ ಮತ್ತು ಅರಾಜಕತೆ) ಅಂತಹ ಒಂದು ಕೃತಿ – ಎಂದು ತಿಳಿಸುತ್ತಾರೆ.
(ಮುಂದುವರಿಯಲಿದೆ…)
ಮೋಪ್ಲಾ ಕಾಂಡದ ಎರಡನೇ ಭಾಗ: https://utthana.in/wp-admin/post.php?post=8886&action=edit