ಜೀವನದ ನಡೆ ಅನಂತತೆಯ ಕಡೆ ಇರಬೇಕು. ಅನಂತತೆ ಎಂದರೆ ಪರಮಾತ್ಮಭಾವ, ಸಾಯುಜ್ಯ, ಮೋಕ್ಷ. ಇದು ಒಂದೇ ಜನ್ಮದಲ್ಲಿ ಪಡೆಯಲು ಸಾಧ್ಯವೆನ್ನಲಾಗದು. ಅನೇಕ ಜನ್ಮ ಬೇಕಾದೀತು. ತಡವಾಗಿ ಸಿಕ್ಕಿದರೂ ಸರಿ. ಅದೇ ನಮ್ಮ ಪರಮಲಕ್ಷ್ಯ. ಅದರಲ್ಲಿ ನಮ್ಮ ಸತತ ಪ್ರಯತ್ನ ಸಾಗಬೇಕು. ಆ ಪರಮಾತ್ಮಭಾವವನ್ನು ಹೊಂದಲು ವ್ರತ ನಿಯಮಗಳು ಸಹಕಾರಿ. ಅದು ನಮ್ಮ ಮನಸ್ಸಿಗೆ ನಿಯತ್ತನ್ನು ಕಲಿಸುತ್ತದೆ, ಅನಂತತೆಯೆಡೆಗೆ ಒಯ್ಯುತ್ತದೆ. ಇದಲ್ಲದೆ ನಿಯತವಾದ ಮನಸ್ಸು ದುಃಖ, ದುಗುಡ, ಸಂಕಷ್ಟ ಸಮಸ್ಯೆಗಳು ಏನೇ ಬಂದರೂ ಸಹಿಸಿಕೊಳ್ಳಬಲ್ಲದು, ಎದುರಿಸಬಲ್ಲದು. ಜೀವನದಲ್ಲಿ ಹಲವು […]
“ಜೀವನದ ನಡೆ ಅನಂತತೆಯ ಕಡೆ ಇರಬೇಕು”
Month : September-2021 Episode : Author : ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸ್ವರ್ಣವಲ್ಲೀ ಸಂಸ್ಥಾನ