
ದೇಶಭಕ್ತರು ಯಾರು? ದೇಶದ್ರೋಹಿಗಳು ಯಾರು? ಬ್ರಿಟಿಷರಿಂದ ಮುಕ್ತಗೊಂಡು; ತನ್ನದೇ ಆದ ಸಂವಿಧಾನ ರೂಪಿಸಿ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆ ಹೆಗಲಿಗೇರಿಸಿಕೊಂಡು ೬೦ ವರ್ಷಗಳು ಕಳೆದ ನಂತರವೂ ಭಾರತದಲ್ಲಿ ಈ ಪ್ರಶ್ನೆ ಪ್ರಸ್ತುತವಾಗಿಯೇ ಉಳಿದಿದೆ. ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿದೆಯೆ? ಪ್ರಸ್ತುತ ಬಹಳ ಚರ್ಚೆಯಲ್ಲಿರುವುದು ‘ಜೆಎನ್ಯು ಘಟನೆ’. ಭಾರತದ ಪ್ರಜಾಪ್ರಭುತ್ವದ ದೇಗುಲ ಸಂಸದ್ಭವನದ ಮೇಲೆ ದಾಳಿ ಮಾಡಿದ ಉಗ್ರ ಅಫ್ಜಲ್ಗೆ ಜೈಕಾರ; ಅಫ್ಜಲ್ ನೀನು ಕೈಗೊಂಡ ಕಾರ್ಯ ಸಫಲವಾಗುವ ತನಕ ನಾವು ವಿರಮಿಸೆವು – […]