ಎಂದಿನಿಂದಲೋ ನಮ್ಮ ಮಾತಿನಲ್ಲಿ ‘ಪೈ’ ಅಂಬೋದು ಜೈಕಾರದೊಂದಿಗೆ ಸ್ವೀಕಾರಗೊಂಡದ್ದು, ಈಗ ಪೈ ಸರಿಸಿ ಪೈಲಿಗೆ ವಾಲಿದೆ; ಮೂಲೆಗುಂಪಾಗಲಿದೆ. ಪೈ ಹೋಯ್ತು, ರೂಪಾಯಿ ಸ್ಥಿರಗೊಂಡಿದೆ. ಪೈಜಾಮ ಹೋಯ್ತು; ಬದಲಿಗೆ ಷರಾಯಿ, ಪ್ಯಾಂಟು ಟೆಂಟು ಹಾಕಿವೆ. ಪೈರಣ ಹೋಗಿ ಅಂಗಿ, ಷರ್ಟು ಅಂಗೀಕೃತಗೊಂಡು ಜಂಗೀ ಜನಪ್ರಿಯವಾಗಿವೆ. ಇದರರ್ಥವೇನೆಂದರೆ ‘ಪೈ’ದ ಪೈಕಕ್ಕೆ ಯಾನೇ ಪರಿವಾರಕ್ಕೆ ಪೈತ್ಯಜ್ವರ ಬಡಕೊಂಡು ಇಷ್ಟರಲ್ಲಿಯೇ ಪೈತೃಕಕ್ಕೆ ಅಂದರೆ ಶ್ರಾದ್ಧಕ್ಕೆ ಸಜ್ಜಾಗಿದೆ. ಅಯ್; ಬೆಳಗು ಹರಿಯೂದ್ರಾಗsರ್ತಾ ಇದ್ದಾರೆ ನೋಡ್ರಿ ಗುಂಡೂಭಾವ!” ಎಂದು ನನ್ನ ಮಡದಿ ಉದ್ಗರಿಸಿದೊಡನೆ ನಾನು ಪತ್ರಿಕೆಯೊಳಗಿಂದ […]
ಐದಲ್ಲಿ ಐತಾ ಐಬು?
Month : February-2024 Episode : Author : ಅನಂತ ಕಲ್ಲೋಳ