ಗುಂಡಣ್ಣ ಬೆಳಗ್ಗಿನ ಪತ್ರಿಕೆ ಬಿಡಿಸಿಕೊಂಡು ಕುಳಿತಿದ್ದ. ಮುಖಪುಟದಲ್ಲಿ ರ್ಯಾಂಕ್ ವಿಜೇತರ ಭಾವಚಿತ್ರಗಳು. ಮಗ ಬಂಡಣ್ಣನಲ್ಲಿ “ನೀನು ಶಾಲೆಗೆ ಹೋಗಿ, ಚೆನ್ನಾಗಿ ಓದಿ ಹೀಗೆ ಹೆಸರು ಗಳಿಸಬೇಕು” ಗುಂಡಣ್ಣ ವಿವರಿಸಿದ. ಆಯಿತು; ದಿನಾಲೂ ಇದೊಂದು ನಿತ್ಯಕ್ರಮವೆನಿಸಿತು. ಒಂದು ದಿನಪತ್ರಿಕೆಯಲ್ಲಿ ಪ್ರವೀಣ್ ಆಮ್ರೆ ಶತಕ ಬಾರಿಸಿದಾಗ ಆತನ ಭಾವಚಿತ್ರವು ಪ್ರಕಟವಾಗಿತ್ತು. ಗುಂಡಣ್ಣ, “…ನೋಡು ಹ್ಯಾಂಗ್ ಮಸ್ತ್ ಆಗಿ ಬಂದದ ಫೋಟೋ! ನೀನೂ ದೊಡ್ಡವನಾಗಿ ಕ್ರಿಕೆಟ್ ವೀರನಾಗಿ ಶತಕ ಬಾರಿಸಿದರೆ ನಿನ್ನ ಫೋಟೋ ಸಹ ರ್ತದೆ ಪತ್ರಿಕೆಗಳಲ್ಲಿ, ತಿಳೀತಾ ಬಂಡಣ್ಣ?” – ಎಂದ.
ಮಗು ಎಂದರೆ ಮನುಕುಲದ ತಂದೆ’ ಎಂಬ ನಾಣ್ಣುಡಿ ಒಂದಿದೆ ಆಂಗ್ಲಭಾಷೆಯಲ್ಲಿ, ಭುವಿಯಲ್ಲಿ ಮಗುವಿನ ಅವತರಣಕ್ಕೆ ಕಾರಣವಾದ ತಂದೆಯನ್ನು ಮಗು ಬಾಯಿ ಬಂದೊಡನೆ “ಯಾಕೆ ತಂದೆ?” “ಏನು ತಂದೆ?” ಎಂದು ತನ್ನ ಪ್ರಶ್ನಾವಳಿಯೊಂದಿಗೆ ಹೈರಾಣ್ ಮಾಡ್ತದೆ. ಮಗುವಿಗೆ ಯಾವತ್ತಿಗೂ ಎಲ್ಲಿಲ್ಲದ ಜಿಜ್ಞಾಸೆ. ಅದು ಪ್ರತಿಯೊಂದಕ್ಕೂ ಯಾಕೆ, ಏನು, ಎತ್ತ? ಎಂಬಿತ್ಯಾದಿಯಾಗಿ ಪ್ರಶ್ನೆಗಳನ್ನು ಕೇಳುತ್ತದೆ. ಪ್ರಶ್ನೆ ಕೇಳುವವರು ವರಿಷ್ಠರು ಉತ್ತರಿಸುವವರು ಕನಿಷ್ಠರು! ಆದ್ದರಿಂದಲೇ ಬಹುಶಃ ‘Child is father of man’ ಎಂಬ ಉಕ್ತಿ ಇದೆ ಏನೋ ಆಂಗ್ಲಭಾಷೆಯಲ್ಲಿ!
ನಮ್ಮ ಗುಂಡಣ್ಣನಿಗೆ ಬಹಳ ದಿನಗಳ ಮೇಲೆ ಒಬ್ಬ ಮಗ ಹುಟ್ಟಿದ. ಗುಂಡಣ್ಣನಿಗೆ ಆನಂದವೋ ಆನಂದ. ಆತ ತನ್ನ ಮಗನಿಗೆ ಬಂಡಣ್ಣ ಎಂದು ಹೆಸರಿಡಿಸಿದ. ಆತನ ಮಡದಿ ಸತ್ಯಭಾಮಾಬಾಯಿ ಪ್ರಚಲಿತ ಫ್ಯಾಶನ್ನಿಗೆ ಅನುಗುಣವಾಗಿ ಯಾವುದಾದರೊಂದು ಬಂಗಾಲಿ, ಅಸಾಮೀ ಹೆಸರನ್ನಿಡಬೇಕೆಂದು ಮಾಡಿದ್ದಳು. ಆದರೆ ಗುಂಡಣ್ಣನ ಅಪ್ಪಟ ಕನ್ನಡ ಪ್ರೇಮ ಅಪ್ಪಣೆ ಕೊಡಿಸಿತು.
“ಆ ಪ್ರಾಂತದವರು ನಮ್ಮವರಂತೆ ಗುಂಡಣ್ಣ, ಕಿಟ್ಟಣ್ಣ, ಪೂವಯ್ಯ, ಹೊನ್ನಮ್ಮ ಅಂತ ಹೆಸರಿಡ್ತಾರೇನು ತಮ್ಮ ಮಕ್ಕಳಿಗೆ? ನಾವು ಯಾಕೆ ನಿರಭಿಮಾನಿಗಳಾಗಿ ಪರಪ್ರಾಂತೀಯರ ಹೆಸರಿಡಬೇಕು ನಮ್ಮ ಈ ಮಣ್ಣಿನ ಮಕ್ಕಳಿಗೆ? ಅದೇನಿಲ್ಲ; ನನ್ನ ಹೆಸರು ಗುಂಡು, ನನ್ನ ಮಗನಿಗೆ ಬಂಡು ಅಂತ ಹೆಸರಿಡೋಣ. ಪ್ರಾಸವೂ ಹೊಂದುತ್ತದೆ ಅನ್ನಲಿಕ್ಕೆ ತ್ರಾಸವೂ ಇಲ್ಲ”
‘ಬಂಡು, ಬಂಡಾಯ ಅಂತಂದ್ರ ಚಳವಳಿ ದಂಗೆ ಅಂತ ಅಲ್ಲವೇನ್ರಿ? ಈಗಿಂದ ನಮ್ಮ ಮಗುವಿಗೆ ಬಂಡು ಅಂತಂದ್ರ ಎಷ್ಟು ಹೊಸ್ಟ್ರೆಲ್ ಆಗ್ತದ. ದೊಡ್ಡಾಂವ ಆದ ಮ್ಯಾಗ ಮತ್ತೂ ಬಂಡಾಯ ಮಾಡ್ಯಾನು.
‘ಬಂಡು ಅಂದ್ರ ಬಂಡಾಯ ಅಂತ ಒಂದಽ ಅರ್ಥ ಅಲ್ಲ ಮಕರಂಧ, ಮಧು, ಪರಾಗ ಅಂತಾನೂ ಆಗ್ತದ’ ಎಂದು ರಾಗ ಎಳೆದು ಗುಂಡಣ್ಣ ತಾನು ಸೂಚಿಸಿದ ಹೆಸರಿನಲ್ಲಿಯ ಸವಿಯನ್ನು ಸಾರಿದ.
ಸತ್ಯಭಾಮಾಬಾಯಿ ಬಾಯಿ ಮುಚ್ಚಿಕೊಂಡು ಅಡುಗೆಮನೆಗೆ ಮರಳಿದಳು.
ಗುಂಡಣ್ಣನ ಮನೆಯಲ್ಲಿ ಬಂಡಣ್ಣ ಬಿದಿಗೆ ಚಂದ್ರಮನಂತೆ ಬೆಳೆಯತೊಡಗಿದ. ಕಾಲಾನುಕ್ರಮದಲ್ಲಿ ಆತನಿಗೆ ಮಾತು ಬಂದಿತು. ಶುರು ಆಯಿತು ಏಕೆ, ಏನು ಎಂತು ಎಂಬ ಪ್ರಶ್ನಾವಳಿಯ ಸುರಿಮಳೆ.
ಗುಂಡಣ್ಣ ಬೆಳಗ್ಗಿನ ಪತ್ರಿಕೆ ಬಿಡಿಸಿಕೊಂಡು ಕುಳಿತಿದ್ದ. ಮುಖಪುಟದಲ್ಲಿ ರ್ಯಾಂಕ್ ವಿಜೇತರ ಭಾವಚಿತ್ರಗಳು.
“ಅಪ್ಪಾಜೀ ಇದೇನು?” ಬಂಡಣ್ಣನ ಪ್ರಶ್ನೆ.
“ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿ ತೇರ್ಗಡೆಯಾದವರ ಚಿತ್ರಗಳು. ನೀನು ಶಾಲೆಗೆ ಹೋಗಿ, ಚೆನ್ನಾಗಿ ಓದಿ ಹೀಗೆ ಹೆಸರು ಗಳಿಸಬೇಕು” ಗುಂಡಣ್ಣ ವಿವರಿಸಿದ. ಆಯಿತು; ದಿನಾಲೂ ಇದೊಂದು ನಿತ್ಯಕ್ರಮವೆನಿಸಿತು. ಒಂದು ದಿನ ಪತ್ರಿಕೆಯಲ್ಲಿ ಪ್ರವೀಣ್ ಆಮ್ರೆ ಶತಕ ಬಾರಿಸಿದಾಗ ಆತನ ಭಾವಚಿತ್ರವು ಪ್ರಕಟವಾಗಿತ್ತು. ಗುಂಡಣ್ಣ ವಿವರಿಸಿದ.
“…ನೋಡು ಹ್ಯಾಂಗ್ ಮಸ್ತ್ ಆಗಿ ಬಂದದ ಫೋಟೋ! ನೀನೂ ದೊಡ್ಡವನಾಗಿ ಕ್ರಿಕೆಟ್ ವೀರನಾಗಿ ಶತಕ ಬಾರಿಸಿದರೆ ನಿನ್ನ ಫೋಟೋ ಸಹ ರ್ತದೆ ಪತ್ರಿಕೆಗಳಲ್ಲಿ ತಿಳೀತಾ ಬಂಡಣ್ಣ?”
ಬಂಡು ಎಲ್ಲ ತಿಳಿದವರಂತೆ ಗೋಣು ಹಾಕಿದ.
ಮಗುದೊಂದು ದಿನಪತ್ರಿಕೆಯಲ್ಲಿ ಆರನೇ ವರ್ಷದಲ್ಲಿ ಘಟಂ ನುಡಿಸುವುದರಲ್ಲಿ ಪ್ರಾವೀಣ್ಯ ಪಡೆದ ಬಾಲಕನ ಚಿತ್ರವಿತ್ತು. ಗುಂಡಣ್ಣ ಬಂಡಣ್ಣನಿಗೆ ಅಂದ,
“ನೋಡು ಹ್ಯಾಂಗ ಠೀವಿಯಲ್ಲಿ ಮೂಡಿದೆ ಈ ಹುಡುಗನ ಚಿತ್ರ. ನಿನ್ನದು ಫೋಟೋ ಹೇಗೆ ಪತ್ರಿಕೆಗಳಲ್ಲಿ ಎಂದು ರ್ತದೋ?”
೪-೫ ವರ್ಷದ ಬಂಡಣ್ಣ ಏನೆಂದು ಉತ್ತರಿಸಿಯಾನು? ಪೆಚ್ಚು ಪೆಚ್ಚಾಗಿ ನಕ್ಕು ಸುಮ್ಮನುಳಿದ.
ಇನ್ನೊಮ್ಮೆ ಪತ್ರಿಕೆಯಲ್ಲಿ ಎಂಟು ವರ್ಷದ ಬಾಲಕನೋರ್ವ ಸಮುದ್ರ ಈಸಿದ ಭಾವಚಿತ್ರ ಬಂದಿತ್ತು. ಗುಂಡಣ್ಣ ಬಂಡಣ್ಣನಿಗೆ ಆ ಈಜುವೀರನ ಭಾವಚಿತ್ರ ತೋರಿಸಿ ಸುದ್ದಿಯ ವಿವರ ತಿಳಿಸಿ ಯಥಾಪ್ರಕಾರ ಕೇಳಿದ.
“…ಬಂಡಣ್ಣ ನೀನೂ ಹೀಂಗ ಪ್ರಾವೀಣ್ಯ ಗಳಿಸಿದರ ನಿಂದೂ ಹೀಂಗ ಫೋಟೋ ರ್ತದ ಎಲ್ಲ ಪತ್ರಿಕೆಯೊಳಗೆ. ನಿನ್ನ ಫೋಟೋ ಹೀಂಗ ಪತ್ರಿಕೆಯೊಳಗೆ ಮೂಡೋದನ್ನು ನೋಡಬೇಕೆಂಬ ಆಸೆ ನನಗೆ”
ಬಂಡಣ್ಣ ದಿಟ್ಟಿಸಿ ಪತ್ರಿಕೆ ನೋಡಿದ. ಈಗ ಆತ ಐದಾರು ವರ್ಷದ ಬಾಲಕ. ‘ಏನು, ಯಾಕೆ?’ ಎಂಬ ಒಂದೇ ಪದದ ಮಾತುಗಳಿಗಿಂತ ಮುಂದುವರಿದಿತ್ತು. ಆತನ ಮಾತುಗಾರಿಕೆ, ಆತ ಪತ್ರಿಕೆಯಲ್ಲಿಯ ಇನ್ನೊಂದು ಮೂಲೆಯಲ್ಲಿ ಪ್ರಕಟವಾದ ಭಾವಚಿತ್ರವನ್ನು ತದೇಕಚಿತ್ತದಿಂದ ನೋಡಿದ. ಸರಿಸುಮಾರು ಗುಂಡಣ್ಣನ ವಾರಿಗೆಯ ವ್ಯಕ್ತಿಯ ಭಾವಚಿತ್ರವದು. ಚೆನ್ನಾಗಿ ಅಚ್ಚಾಗಿತ್ತು. ಬಂಡಣ್ಣ ಅದರ ಮೇಲೆ ಬೆರಳು ಇಟ್ಟು ತೊದಲಿದ.
“…ಅಪ್ಪಾಜೀ, ಅಪ್ಪಾಜೀ ಮತ್ತ ನಿಂದೂ ಹೀಂಗ ಯಾವಾಗ ಫೋಟೋ ಬರೂದು ಪೇಪರಿನಾಗ? ನಾ ನೋಡಬೇಕಂತೀನಿ ನಿನ್ನ ಫೋಟೋ ಪೇಪರದಾಗ!”
ಗುಂಡಣ್ಣ ಪತ್ರಿಕೆಯಲ್ಲಿಯ ಆ ಭಾವಚಿತ್ರ ನೋಡಿದ; ಹೌಹಾರಿದ! ಯಾವುದೋ ವ್ಯಕ್ತಿಯ ವೈಕುಂಠ ಸಮಾರಾಧನೆಯ ಜಾಹೀರಾತು! ಪತ್ರಿಕೆಯನ್ನು ಮಡಚಿ ಅತ್ತ ತಳ್ಳಿ ಗುಂಡಣ್ಣ ಗುಡುಗಿದ.
“…ಹೋಗು ಶಾಣ್ಯಾ ಇದ್ದೀದಿ. ಹೊರಗ ಹೋಗಿ ಆಡು ಹೋಗು. ದನಾ ಕಾಯಾಂವನ್ನ ತಂದಕ್ಯಾರೆಂದ…” ಆತನ ದನಿಗೆ ಹೆದರಿ ಜಾಗ ಬಿಟ್ಟ ಅಮಾಯಕದ ಆ ಐದಾರು ವರ್ಷದ ಮಗು ಬಂಡಣ್ಣ.
ಬಹುಶಃ ಇಂಥ ಪ್ರಸಂಗದಿಂದಲೇ ‘ಬಾಪ್ ಸೇ ಬೇಟ ‘Child is father of man’ ಎಂಬಂಥ ನಾಣ್ಣುಡಿಗಳು ಹುಟ್ಟಿರಬಹುದು ಅಲ್ಲವೇ?