ನಮ್ಮ ಮನೆಗೂ ನನ್ನ ಆಫೀಸಿಗೂ ದೂರ ಸುಮಾರಾಗಿದೆ. ಸ್ವಚಾಲಿತ ಕಾರಿನಲ್ಲಿ ಅದೂ ಬೆಂಗಳೂರು ರಸ್ತೆಯಲ್ಲಿ ಓಡಾಡೋದು ಸ್ವಲ್ಪ ಕಷ್ಟವಾಗಿಯೇ ತೋರಿತು. ಹೆಸರಿಗೆ ‘ರಸ್ತೆ’ ಅಂತ ಕರೆದರೂ ವಾಸ್ತವವಾಗಿ ನಮ್ಮ ರೋಡುಗಳೆಲ್ಲಾ ಹಳ್ಳಕೊಳ್ಳಗಳೇ! ಅದರಿಂದಾಗಿ ದಕ್ಕಿದ ಕುಕ್ಕಾಟದಿಂದ ಬಂದ ಮೂಳೆ ನೋವು, ಟೂ ವ್ಹೀಲರ್ ಸಾರಥಿಗಳಿಂದ ಆಗೋ ಬೈಗುಳ, ರೋಡ್ ಬ್ಲಾಕ್ಗಳು… ಇತ್ಯಾದಿಗಳಿಂದ ಬೇಜಾರಾಗಿ ಒಬ್ಬ ಡ್ರೈವರ್ನ ಇಟ್ಕೊಳ್ಳೋದೇ ವಾಸಿ ಅಂತ ಕೆಲವು ಅಭ್ಯರ್ಥಿಗಳನ್ನು ಇಂಟರ್ವ್ಯೂ ಮಾಡ್ದೆ. ಅದರ ಸಂಕ್ಷಿಪ್ತ ವರದಿ ಹೀಗಿದೆ:
ಅಭ್ಯರ್ಥಿ ನಂ. 1: ಹ್ಹಿ ಹ್ಹಿ ಹ್ಹಿ! ಏನ್ಸಾರ್ ಲೈಸೆನ್ಸ್ ಎಲ್ಲಿಂದ ತರಲೀ ಸಾರ್? ಕಳೆದುಹೋಗಿ ಎಷ್ಟೋ ದಿನಗಳಾಗ್ಹೋಯ್ತು! ಸದ್ಯಕ್ಕೆ ನನ್ನ ತಮ್ಮನ ಲೈಸೆನ್ಸ್ ಉಪಯೋಗಿಸ್ತಿದೀನಿ ಸಾರ್. ನಾವಿಬ್ರೂ ನೋಡೋದಕ್ಕೆ ಒಂದೇ ತರಹ ಇದೀವಿ. ಯಾವ ಪೊಲೀಸ್ ಪ್ಯಾದೆಗೆ ಗೊತ್ತಾಗುತ್ತೆ?
(ಅಭ್ಯರ್ಥಿ rejected).
ಅಭ್ಯರ್ಥಿ ನಂ. 2: ನಮ್ಮನೆ ನಿಮ್ಮ ಮನೆಯಿಂದ ಸ್ವಲ್ಪ ದೂರ ಆಗೋಯ್ತಲ್ಲಾ ಸಾರ್? ಒಂದು ಕೆಲಸ ಮಾಡಿ ಸಾರ್. ನೀವೇ ನನ್ನನ್ನ ನಮ್ಮ ಮನೆಯಿಂದ Piಛಿಞuಠಿ ಮಾಡಿ ಸಂಜೆ ಮೇಲೆ drop ಮಾಡ್ಬಿಡಿ. ಮಿಕ್ಕಿದ ಟೈಮ್ನಲ್ಲೆಲ್ಲಾ ನಾನೇ ಓಡಿಸ್ತೀನಿ. ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡ್ರಾಯ್ತು ಸಾರ್.
(ಅಭ್ಯರ್ಥಿ dropped)
ಅಭ್ಯರ್ಥಿ ನಂ. 3 : ಸಾರ್, ನಿಮ್ಮ ಕಂಪೆನಿ ಸಾಫ್ಟ್ವೇರೋ ಹಾರ್ಡ್ವೇರೋ? ಹಾರ್ಡ್ವೇರಾ…? ನಿಮ್ಮ ಮುಖ. ನಿಮ್ಮ ಕಾರು ನೋಡ್ತಾನೇ ನನಗೆ ಗೊತ್ತಾಯ್ತು ಬಿಡಿ. ಈ ಹಾರ್ಡ್ವೇರಿನವರ ಕಾರುಗಳ ಕ್ವಾಲಿಟಿ, ಅವರು ಕೊಡೋ ಸಂಬಳ ನಮಗೆ ಸರಿಹೋಗಲ್ಲ ಸಾರ್.
(ಅಭ್ಯರ್ಥಿ kicked out!)
ಅಭ್ಯರ್ಥಿ ನಂ. 4: ನಿಮ್ಮ ಕಾರು ಯಾವುದು ಸಾರ್? ಫಿಯಟ್
ಅಂದ್ರಾ?…ಈಗ ಇಂತಹ ಕಾರುಗಳನ್ನೆಲ್ಲಾ ಯಾರು ಸಾರ್ ಓಡಿಸ್ತಾರೆ?… ಅದೂ ಡ್ರೈವರ್ ಇಟ್ಕೊಂಡು?
(ಅಭ್ಯರ್ಥಿ thrown out)
ಅಭ್ಯರ್ಥಿ ನಂ. 5: ಸಂಬಳ ಹೇಗೋ ಅಡ್ಜಸ್ಟ್ ಮಾಡ್ಕೋತೀನಿ ಸಾರ್. ಆದರೆ ನಿಮ್ಮ ಕಾರಿನಲ್ಲಿ ಸ್ಟೀರಿಯೋ ಇಲ್ಲಾ… ಸೆಲ್ಫೋನ್ ಚಾರ್ಜರ್ ಇಲ್ಲಾ…. AC ಇಲ್ಲಾ… ಸ್ಟೆಪ್ನೀನೂ ಇಲ್ಲಾ… ಬರೀ ನಾಲ್ಕು ಚಕ್ರಗಳು ಸ್ಟೀರಿಂಗ್ ಇದ್ರೆ ಸಾಕೇ ಸಾರ್? ಸಾರಿ ಸಾರ್!
(ಅಭ್ಯರ್ಥಿ rejected and kicked out)
ಅಭ್ಯರ್ಥಿ ನಂ. 6: ಸ್ವಲ್ಪ ಕಣ್ಣಿನ ಪ್ರಾಬ್ಲಮ್ ಇದೆ ಸಾರ್. ಟ್ರಾಫಿಕ್ ಜಂಕ್ಷನ್ಗಳಲ್ಲಿ ಕೆಂಪು ಬಣ್ಣ ಹಸಿರಾಗಿ ಕಾಣುತ್ತೆ ಹಸಿರು ಕೆಂಪಾಗಿ ಕಾಣುತ್ತೆ. ‘ನಿಂತ್ಕೋ’, ‘ಹೊರಡು’ ಅಂತ ಪಕ್ಕ ಕೂತ್ಕೊಂಡು ನೀವೆ ಹೇಳ್ತಾ ಇರಿ ಸಾರ್. ಮಿಕ್ಕಿದ ಡ್ರೈವಿಂಗ್ನೆಲ್ಲಾ ನಾನೇ ಮಾಡ್ತೀನಿ.
(ಅಭ್ಯರ್ಥಿ ಡಿeರಿeಛಿಣeಜ)
ಅಭ್ಯರ್ಥಿ ನಂ. 7: ನೀವು ಹೇಳೋ ಸಂಬಳ ತೀರಾ ಜುಜುಬಿ ಆಗ್ಹೋಯ್ತಲ್ಲಾ ಸಾರ್…? ಹೋಗ್ಲಿ ಬಿಡಿ. ಶನಿವಾರ ಭಾನುವಾರ oಜಿಜಿ ಕೊಟ್ಬಿಡಿ ಸಾರ್. ಬೇರೆ ಯಾವುದಾದ್ರೂ ಟ್ಯಾಕ್ಸೀನೋ ಲಾರೀನೋ ಓಡಿಸ್ಕೋತೀನಿ. (ಅಭ್ಯರ್ಥಿ rejected)
ಅಭ್ಯರ್ಥಿ ನಂ. 8: ಸಾರ್, ನಿಮ್ಮ ಕಾರನ್ನು ನಾನೇ ಪೂರ್ತಿ ಓಡಿಸ್ತೀನಿ. ನನಗೆ ಯಾವ ಸಂಬಳಾನೂ ಬೇಡ. ಯಾವ overtime ಬೇಡ. ಕಾರನ್ನು ದಿನಾ ತೊಳೆದು ಕ್ಲೀನಾಗಿಟ್ಟಿರ್ತೀನಿ. ಲೈಸೆನ್ಸ್ ಇದೆ. ಪೆಟ್ರೋಲ್ನ ದೇವರಾಣೆ ಕದಿಯೋದಿಲ್ಲ. ರಾತ್ರಿ ಬೆಳಗ್ಗೆ ಡ್ಯೂಟಿಯಲ್ಲಿರ್ತೀನಿ. ನಿಮ್ಮ ಕಾರನ್ನು ನಿಮ್ಮ ಮನೆಯವರನ್ನು ನೀವು ಎಷ್ಟು ಪ್ರೀತಿಸ್ತೀರೋ, ಅಷ್ಟೇ ನಾನೂ ಪ್ರೀತಿಸ್ತೀನಿ. ಏನೋ ಒಂದಿಷ್ಟು ಹೊತ್ತಿಗ್ಹೊತ್ತಿಗೆ ತಿಂಡಿ, ಕಾಫಿ, ಊಟ ಕೊಟ್ಬುಡಿ ಸಾರ್, ಸಾಕು. ಅಂದ್ಹಾಗೆ, ನಾನು ಕನ್ನಡದವನು ಸಾರ್!
(ಅಭ್ಯರ್ಥಿ immediately selected!)
ಅಭ್ಯರ್ಥಿ ನಂ. 8- ಅಂತಹಾ ಒಳ್ಳೆ ಮನುಷ್ಯ – ಯಾರೂ
ಅಂದ್ರಾ? ಅವನು ನಾನೇನೆ!!
ಯಥಾ ಪ್ರಕಾರ ನಾನೇ ನನ್ನ ಕಾರನ್ನ ಓಡಿಸ್ತಿದೀನಿ. ತಿಂಡಿ, ಕಾಫಿ, thanks to my wife; ದಿನ ನಿತ್ಯ ಸಿಗ್ತಾ ಇದೆ. ಸಂಬಳ ಇಲ್ಲ ಅಷ್ಟೆ. ಆದರೆ ಒಂದೇ ಒಂದು ಬೋನಸ್ಸು. ಡ್ರೈವ್ ಮಾಡಿ ಮಾಡಿ ಬೇಜಾರಾದಾಗ ಮನೆಯವರ ಯಜಮಾನ್ತಿಯನ್ನು ಆವಾಗವಾಗ ಪ್ರೀತಿ ಮಾಡ್ತಿರಬಹುದು!