
ಸಂನ್ಯಾಸಿಗಳು, ಮಠಾಧೀಶರು ಪಾದುಕೆ ಅಥವಾ ಹಾವುಗೆಗಳನ್ನು ಪಾದಗಳಿಗೆ ಧರಿಸಿಯೇ ಓಡಾಡುವುದು. ಚರ್ಮದಿಂದ ಮಾಡಿದವನ್ನು ಹಾಕಿ ನಡೆದಾಡಿದರೆ ಅದು ಭೂತಾಯಿಗೆ ಮಾಡುವ ಅಪಚಾರವೆಂಬ ಕಾರಣವಷ್ಟೇ ಅಲ್ಲ, ಚಪ್ಪಲಿ ತಯಾರಿಕೆಯ ಹಿಂದಿರುವ ಪ್ರಾಣಿಹತ್ಯೆಯ ಪಾಪಪ್ರಜ್ಞೆಯೂ ಇದ್ದೀತು. ಸುಮ್ಮನೆ ಚಪ್ಪಲಿ ಎಂದರೆ ಅರ್ಥವಾಗುತ್ತಲ್ಲಾ, ಬಹುವಚನವೇಕೆ? ಆಕ್ಷೇಪಣೆಯಿದ್ದರೆ ಮುಂದೆ ಓದಿ. ರೂಢಿಗತ ಭಾಷೆಯಲ್ಲಿ ಈ ಪ್ರಯೋಗ ಸರಿಯೇ ಆದರೂ, ಚಪ್ಪಲಿ ಒಂಟಿಯಾಗಿರುವುದನ್ನು ಒಪ್ಪಿಕೊಳ್ಳಲಾಗದಷ್ಟೆ! ಪ್ರಾಯಶಃ ಒಂಟಿಕಾಲಿಗನೂ ಸಹ ಒಂದೇ ಚಪ್ಪಲಿಯನ್ನು ಕೊಳ್ಳಲಾರ. ಹಾಕಿಕೊಳ್ಳೋದು ಒಂದೇ ಕಾಲಿಗೇ ಆಗಿದ್ದರೂ ಹಣವನ್ನಂತೂ ಜೋಡಿ ಚಪ್ಪಲಿಗಳಿಗೇ ನೀಡಬೇಕು. […]