
ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಈಗೀಗ ಹೆಚ್ಚುತ್ತಿದೆ, ಆರೋಗ್ಯದ ಬಗ್ಗೆ ಹಲವು ವಿಶ್ಲೇಷಣೆಗಳೂ ಇವೆ. ಆರೋಗ್ಯ ಗಳಿಸಬೇಕೆಂಬ ತುಡಿತ ಜನರಲ್ಲಿ ಹೆಚ್ಚುತ್ತಿದೆ. ಆರೋಗ್ಯದ ಗಳಿಕೆಗಾಗಿ, ರಕ್ಷಣೆಗಾಗಿ ನಾವು ಹಾಗೂ ಸರ್ಕಾರ ಅಪಾರ ಹಣ ಖರ್ಚು ಮಾಡುತ್ತಿದ್ದೇವೆ. ನಾವು ಸಮಾಧಾನದಿಂದ ಯೋಚಿಸಿ, ಆರೋಗ್ಯದ ಬಗ್ಗೆ ನಿಜವಾದ ಅರಿವು ಪಡೆದುಕೊಂಡು ಪ್ರಾಮಾಣಿಕವಾಗಿ ಪ್ರಯತ್ನಿಸಿದಲ್ಲಿ, ಸರಿಯಾದ ಜೀವನಶೈಲಿ ಅಳವಡಿಸಿಕೊಂಡಲ್ಲಿ ನಮ್ಮ ಹಾಗೂ ಸಮಾಜದ ಸ್ವಾಸ್ಥ್ಯ ಸುಧಾರಿಸಬಹುದು. ಯಾರು ಸ್ವಸ್ಥ? ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ || ಆರೋಗ್ಯ ಕಾಪಾಡಲು […]