ನೀನು ಆಗಿಂದ ಇದೇ ತಪ್ಪು ಮಾಡ್ತಿರೋದು. ಸ್ವಲ್ಪ ಸಮಾಧಾನದಲ್ಲಿ ಹೇಳದನ್ನ ಕೇಳಿಸ್ಕಳೋ ಮಾರಾಯಾ. ನಿಂಗೆ ಸಂಬ್ಳದ ಚಿಂತೆನೇ ಬೇಡ. ನನ್ನ ಮಗ ಮುಕುಂದನಿಗೆ ನಿನ್ನ ಎನ್ಜಿಓದಲ್ಲೊಂದು ಏನಾದ್ರೂ ಹುದ್ದೆ ಹುಟ್ಸಿ ಕೆಲ್ಸ ಕೊಡು… ಬೆಳ್ಗಿಂದ ಸಂಜೆ ಮಾಡ್ತಾನೆ. ಅವ್ನಿಗೆ ಖರ್ಚಿಗೆ, ಸಂಸಾರಕ್ಕೆ ಎಲ್ಲ ದುಡ್ಡು ನಾನೇ ಬ್ಯಾಂಕಿಗೆ ಹಾಕ್ತೆ. ದೇವ್ರ ದಯೆಯಿಂದ ನಮ್ಗೇನೂ ಕೊರತೆ ಇಲ್ಲ ಇಲ್ಲಿ. ಆದ್ರೆ ಎಂತ ಸಾಯೋದು, ಈ ಮಳ್ ಹುಣ್ಮಕ್ಳಿಗೆ ದೊಡ್ಡ ನಗರದಲ್ಲಿಪ್ಪ ಹುಡ್ಗನೇ ಬೇಕು ಮದ್ವೆಗೆ. ಸ್ವಲ್ಪ ಸಮಯ ಅಲ್ಲಿದ್ದು […]
ಹಾರುವ ಬೇರು
Month : September-2023 Episode : Author : ತೇಜಸ್ವಿನಿ ಹೆಗಡೆ