ಕಚ್ಚುವುದು ಪ್ರಾಣಿಗಳ, ಕೀಟಗಳ ಸ್ವಾಭಾವಿಕ ಗುಣ. ಮನುಷ್ಯ ತನ್ನ ಪ್ರಯೋಗಗಳಿಗೆಲ್ಲ ಇಲಿ, ಹಂದಿ ಮುಂತಾದ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾನಂತೆ. ಆದರೆ ಈ ಪ್ರಾಣಿ, ಕೀಟಗಳು ಮನುಷ್ಯನಿಗೆ ಕಚ್ಚುವುದನ್ನು ಆತ ಜನ್ಮ ಎತ್ತಿದ ದಿನದಿಂದಲೇ ಹಕ್ಕುಪತ್ರ ಪಡೆದಿರುವ ಹಾಗೆ ಕಾಣುತ್ತದೆ. ಹಂದಿ, ಕೋತಿ, ಹಾವುಗಳಂತಹವು ಅತಿಥಿಗಳ ಹಾಗೆ ಆಗಾಗ ಮನುಷ್ಯರನ್ನು ಕಚ್ಚುವ ಸುದ್ದಿ, ಕಚ್ಚಿದಷ್ಟೇ ವೇಗದಲ್ಲಿ ಮಾಯವಾಗುತ್ತವೆ. ಆದರೆ ಶ್ವಾನಗಳ ಬಗ್ಗೆ ಹಾಗೆ ಹೇಳಲಾಗದು. ಕಚ್ಚುವುದರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದೇ ಈ ಬೀದಿನಾಯಿಗಳು. ದಿನಂಪ್ರತಿ ಅದೆಷ್ಟೋ ಕಡೆಗಳಲ್ಲಿ ಇವುಗಳು ಕಚ್ಚಿ, ದಾಳಿಮಾಡಿ, […]





