ಕುರುಕ್ಷೇತ್ರ ರಣರಂಗ. ಆ ಸಮರಭೂಮಿಯ ಕೊನೆಯ ಅಂಚಿನಲ್ಲಿದ್ದ ಅಶ್ವಶಾಲೆಯಲ್ಲಿ ಶ್ರೀಕೃ? ತನ್ನ ನಾಲ್ಕೂ ಅಶ್ವಗಳನ್ನು ಗೂಟಕ್ಕೆ ಕಟ್ಟಿದ. ಕೈದೀಪವನ್ನು ಮೂಲೆಗೆ ಇದ್ದ ಮೊಳೆಗೆ ತೂಗುಹಾಕಿದ. ಎಂದಿನಂತೆ ವಿದಾಯದ ಸಂಕೇತವಾದ ಸೀಟಿಯನ್ನು ತನ್ನ ತುಟಿಯಿಂದ ಹೊರಗೆ ತೆಗೆದ. ಆ ವಿಶಿ? ಧ್ವನಿಯನ್ನು ಕೇಳಿ ಆ ಶುಭ್ರಶ್ವೇತ ಅಶ್ವಗಳು ಸಂತೋಷದಿಂದ ಕೆನೆಯುತ್ತ ಗೋಣು ಹೊರಳಾಡಿಸಿದವು. ಬಾಲಗಳನ್ನು ತೊನೆದಾಡಿಸಿದವು. ಅವುಗಳ ಬೆನ್ನು ಮೇಲಿದ್ದ ಸುವರ್ಣವರ್ಣದ ಕೇಶರಾಶಿಗಳು, ಸಮುದ್ರದ ದಂಡೆಗೆ ಬಂದು ಅಪ್ಪಳಿಸುವ ಪ್ರಚಂಡ ತೆರೆಗಳಂತೆ ಮೇಲೆ ಕೆಳಗೆ ಹರಿದಾಡಿದವು. ಕೃಷ್ಣ ಹೊರಗೆ […]
ಕೊನೆಯ ದಿನ
Month : November-2017 Episode : Author : ಪ್ರಕಾಶ ಪರ್ವತೀಕರ