ಕುರುಕ್ಷೇತ್ರ ರಣರಂಗ. ಆ ಸಮರಭೂಮಿಯ ಕೊನೆಯ ಅಂಚಿನಲ್ಲಿದ್ದ ಅಶ್ವಶಾಲೆಯಲ್ಲಿ ಶ್ರೀಕೃ? ತನ್ನ ನಾಲ್ಕೂ ಅಶ್ವಗಳನ್ನು ಗೂಟಕ್ಕೆ ಕಟ್ಟಿದ. ಕೈದೀಪವನ್ನು ಮೂಲೆಗೆ ಇದ್ದ ಮೊಳೆಗೆ ತೂಗುಹಾಕಿದ. ಎಂದಿನಂತೆ ವಿದಾಯದ ಸಂಕೇತವಾದ ಸೀಟಿಯನ್ನು ತನ್ನ ತುಟಿಯಿಂದ ಹೊರಗೆ ತೆಗೆದ. ಆ ವಿಶಿ? ಧ್ವನಿಯನ್ನು ಕೇಳಿ ಆ ಶುಭ್ರಶ್ವೇತ ಅಶ್ವಗಳು ಸಂತೋಷದಿಂದ ಕೆನೆಯುತ್ತ ಗೋಣು ಹೊರಳಾಡಿಸಿದವು. ಬಾಲಗಳನ್ನು ತೊನೆದಾಡಿಸಿದವು. ಅವುಗಳ ಬೆನ್ನು ಮೇಲಿದ್ದ ಸುವರ್ಣವರ್ಣದ ಕೇಶರಾಶಿಗಳು, ಸಮುದ್ರದ ದಂಡೆಗೆ ಬಂದು ಅಪ್ಪಳಿಸುವ ಪ್ರಚಂಡ ತೆರೆಗಳಂತೆ ಮೇಲೆ ಕೆಳಗೆ ಹರಿದಾಡಿದವು. ಕೃಷ್ಣ ಹೊರಗೆ ಹೋಗುವಾಗ ಅಶ್ವಗಳ ಮೇಲೆ ಪ್ರೀತಿಯಿಂದ ಬೆರಳುಗಳಿಂದ ನೇವರಿಸುತ್ತ, ಹಿಂದಿನ ಪರದೆಯನ್ನು ಮೇಲಕ್ಕೆ ಎತ್ತಿ ಹೊರಗೆ ನೋಡಿದ. ಮೆಲ್ಲನೆ ಅಶ್ವಶಾಲೆಯನ್ನು ದಾಟಿ ಪೂರ್ವದಿಕ್ಕಿನಲ್ಲಿರುವ ಪಾಂಡವರ ಶಿಬಿರದ ಹತ್ತಿರ ಆಗಮಿಸಿ ಅರ್ಜುನನ ಶಿಬಿರವನ್ನು ಪ್ರವೇಶಿಸಿದ. ಶಿಬಿರದಲ್ಲಿ ಗವಾಕ್ಷದ ಹತ್ತಿರ ಅರ್ಜುನ ಓರೆಯಾಗಿ ನಿಂತಿದ್ದ. ಅಂಧಕಾರದಲ್ಲಿ ಅನತಿದೂರದಲ್ಲಿ ಪ್ರಕಾಶಿಸುತ್ತಿರುವ ವಸ್ತುವಿನ ಕಡೆಗೆ ಕುತೂಹಲದಿಂದ ನೋಡುತ್ತ ನಿಂತಿದ್ದ. ಮೂಲೆಯಲ್ಲಿದ್ದ ಪಂಜಿನ ಮಬ್ಬುಬೆಳಕಿನಲ್ಲೂ ಅವನ ಶರೀರ ಹೊಂಬಣ್ಣದಿಂದ ಮಿಂಚುತ್ತಿತ್ತು. ಅಗಲವಾದ ಹಣೆ, ಆಕ?ಕ ನೇತ್ರಗಳು, ಗೆರೆ ಹೊಡೆದಂತೆ ಕಣ್ಣುರೆಪ್ಪೆಗಳು, ಗರುಡನಂತಹ ಉದ್ದವಾದ ಮೂಗು, ಸುಂದರವಾದ ಬೆರಳುಗಳು,
ಕೃಷ್ಣ ಚೆಲುವನಾದ ತನ್ನ ಆಪ್ತ ಸ್ನೇಹಿತನನ್ನು ನೋಡುತ್ತಿದ್ದ. ಇಷ್ಟೆಲ್ಲ ಸೌಂದರ್ಯದ ಲಕ್ಷಣಗಳಿದ್ದರೂ, ಅರ್ಜುನನ ಮೊಗದ ಮೇಲೆ ಸೂಕ್ಷ್ಮವಾಗಿ ಹುದುಗಿಕೊಂಡಿರುವ, ಆದರೆ, ಸಾಮಾನ್ಯರಿಗೆ ಗೋಚರವಾಗದಿರುವ ಸ್ತ್ರೀತ್ವದ ಲಕ್ಷಣಗಳಾದ ಸುಕುಮಾರತೆ, ಲಾವಣ್ಯ ಅವನ ಕ್ಷತ್ರಿಯಗುಣಕ್ಕೆ ಕುಂದು ತಂದಿವೆಯೇನೋ ಎಂದು ಕೃಷ್ಣನಿಗೆ ಅನಿಸುತ್ತಿತ್ತು. ಅರ್ಜುನ ತನ್ನ ಆಜಾನುಬಾಹುಗಳನ್ನು ಟೊಂಕದ ಮೇಲೆ ಇಟ್ಟುಕೊಂಡು ನಿಂತಿದ್ದ. ಅವನ ಬಲಿಷ್ಠವಾದ ಬಾಹುಗಳನ್ನು ರತ್ನಜಡಿತ ಕಂಕಣಗಳು ಅಪ್ಪಿಕೊಂಡು ಥಳಥಳ ಹೊಳೆಯುತ್ತಿದ್ದವು. ಬಹಳಷ್ಟು ಹೊತ್ತು ಅರ್ಜುನ ಪುತ್ಥಳಿಯಂತೆ ನಿಶ್ಚಲನಾಗಿ ನಿಂತಿದ್ದ. ಕೃಷ್ಣ ಮನದಲ್ಲಿಯೇ ನಕ್ಕ. ನಿಃಸ್ಸಂಶಯವಾಗಿಯೂ, ಈ ನನ್ನ ಆಪ್ತಮಿತ್ರ ಯಾವುದೋ ಗೂಢ ಆಲೋಚನೆಯಲ್ಲಿ ಮಗ್ನನಾಗಿದ್ದಾನೆ.
ಒಮ್ಮೆಲೆ ಕೌರವರ ಪಾಳ್ಯದಿಂದ ಶಂಖವಾದ್ಯಗಳ ಪ್ರಚಂಡ ಧ್ವನಿ ಕೇಳಬಂದಿತು. ಕೊಂಬು ತುತ್ತೂರಿಗಳು ಗಗನ ಬಿರಿಯುವಂತೆ ಮೊಳಗಿದವು. ಆದರೆ ರಣನೀತಿಯಂತೆ ರಾತ್ರಿಯ ಮೊದಲನೆಯ ಪ್ರಹರವಾದ ಮೇಲೆ ಜಯಘೋಷ ಮಾಡುವುದಾಗಲೀ, ರಣವಾದ್ಯಗಳನ್ನು ಉಪಯೋಗಿಸುವುದಾಗಲೀ ನಿಷೇಧವಾಗಿತ್ತು. ಇಲ್ಲಿಯವರೆಗೆ, ಈ ನಿಯಮದ ಉಲ್ಲಂಘನೆ ಆಗಿರಲಿಲ್ಲ. ಇಂದು ಕರ್ಣ ಕೌರವ ಸೈನ್ಯದ ಸೇನಾಪತಿ ಸಾರಥ್ಯ ವಹಿಸಿದ್ದಕ್ಕೆ ಈ ರಣಕಹಳೆ ಆಗಲು ಕಾರಣವಾಗಿತ್ತು. ಕೆಲಕ್ಷಣ ಪಾಂಡವರ ಶಿಬಿರದಲ್ಲಿ ಶಾಂತತೆ ಪಸರಿಸಿತ್ತು. ಆದರೆ, ಪ್ರತಿಕ್ರಿಯೆ ಎಂಬಂತೆ ಹತ್ತು ಹದಿನೈದು ನಿಮಿ?ದ ನಂತರ ಅವರ ಶಿಬಿರದಲ್ಲಿಯೂ ಬೊಬ್ಬೆ, ಹುಯಿಲು, ಕೂಗಾಟಗಳು ಶುರುವಾಗಿ, ರಣಭೇರಿಗಳು ಮೊಳಗಿ, ಅತ್ತಿಂದಿತ್ತ, ಇತ್ತಿಂದತ್ತ ಓಡುವ ಸೈನಿಕರಿಂದ ಗೊಂದಲ ನಿರ್ಮಾಣವಾಯಿತು. ಕೌರವರಿಗೆ ಪ್ರತ್ಯುತ್ತರ ಕೊಡುವುದಕ್ಕಾಗಿ ಮೇಳಗಾರತಂಡದಿಂದ ರಣವಾದ್ಯಗಳು ಮೊಳಗಿದವು. ಸುತ್ತೆಲ್ಲ ಆವರಿಸಿದ್ದ ಅಂಧಕಾರ ಪಲಾಯನ ಮಾಡಿದಂತೆ ಅನಿಸಿತು.
ಕೃಷ್ಣ ಅರ್ಜುನರು ಒಬ್ಬರಿಗೊಬ್ಬರನ್ನು ನೋಡಿಕೊಂಡು ಭುಜ ಹಾರಿಸಿ ನಕ್ಕರು. “ಮಿತ್ರಾ, ಯಾವುದರಲ್ಲಿ ನೀನು ತಲ್ಲೀನನಾಗಿದ್ದಿ?”
“ವಿಚಾರ ಮಂಥನ ನಡೆದಿತ್ತು.”
“ಅಂಥ ಗಹನವಾದ ವಿಷಯ ಯಾವುದು?”
“ಸ್ಥಿತಪ್ರಜ್ಞನ ವಿಚಾರರಹಿತ ಅವಸ್ಥೆ ಹೇಗಿರಬಹುದು ಎಂದು ಯೋಚಿಸುತ್ತಿದ್ದೆ” ಅರ್ಜುನ ಮುಗುಳುನಗೆಯಿಂದ ನುಡಿದ.
“ಹೀಗೋ?” “ಈ ಅವಸ್ಥೆ, ನಿದ್ರಾವಸ್ಥೆಯಲ್ಲಿದ್ದಾಗ, ಸ್ವಪ್ನರಹಿತವಾದ ನಿದ್ದೆ ಇದ್ದರೆ ಮಾತ್ರ ಅನುಭವ ಉಂಟಾಗುತ್ತದೆ” – ಕೃಷ್ಣ ಅರ್ಜುನನ ಹತ್ತಿರ ಬಂದು ಅವನ ಭುಜವನ್ನು ಮೆಲ್ಲನೆ ಒತ್ತಿ ನುಡಿದ.
“ದಿಟವಾಗಿ ಹೇಳು, ಪಾರ್ಥಾ. ನಿನ್ನ ಮನದಲ್ಲಿ ಏನು ನಡೆಯುತ್ತಿತ್ತು?” ಅರ್ಜುನ ಗಂಭೀರನಾದ.
“ನಾನು ಅನೃತವನ್ನು ಎಂದಿಗೂ ನುಡಿಯಲಾರೆ, ಕೃಷ್ಣ. ಸತ್ಯವಾಗಿಯೂ, ನನಗೆ ಈ ಸಂದೇಹ, ಇಳಿಹೊತ್ತಿನಿಂದ ನನ್ನ ತಲೆಯಲ್ಲಿ ಹೊಕ್ಕು ಕ್ರಿಮಿಯಂತೆ ಕಡಿಯುತ್ತಿದೆ.”
“ಯಾಕೆ?” “ಸಂಜೆ ವೇಳೆಗೆ ಕದನ ನಿಂತಿತು. ದಿನನಿತ್ಯದಂತೆ ದ್ರೌಪದಿಯ ಶಿಬಿರಕ್ಕೆ ಹೋದೆ. ಆಕೆ ನನಗೆ ಆರತಿ ಮಾಡಿದಳು.
ನಾನು ಆಕೆಗೆ ಚೇಷ್ಟೆಯಿಂದ, “ಪಾಂಚಾಲೀ, ಇಂದು ನಿನಗೆ ಗಾಢವಾಗಿ ನಿದ್ದೆ ಬರುವುದೇ?” ಎಂದು ಕೇಳಿದೆ.
ಆಕೆ ಮಂದಹಾಸ ಬೀರುತ್ತ ಉತ್ತರಿಸಿದಳು: “ಸ್ವಯಂವರದ ಹಿಂದಿನ ದಿನದಂತೆ, ಇಂದು ಕೂಡ ನಿದ್ರೆ ನನ್ನನ್ನು ಅಪ್ಪಿಕೊಳ್ಳುವುದು ಖಂಡಿತ. ಆ ದಿನ ನನ್ನ ಅವಸ್ಥೆ ಹೇಗೆ ಇತ್ತೋ, ಇಂದೂ ಹಾಗೆಯೇ ಇದೆ. ಅಲ್ಲದೆ ಉತ್ಸುಕತೆ ಕೂಡ ಇದೆ.”
ಆಕೆಯ ಅಂತರಂಗದಲ್ಲಿ ನಡೆಯುತ್ತಿರುವ ತುಮುಲವನ್ನು ನಾನು ಚೆನ್ನಾಗಿ ಗ್ರಹಿಸಿದ್ದೆ. ಅವ್ಯಕ್ತ ಭಯ ಆಕೆಯನ್ನು ಹಿಂಸಿಸುತ್ತಿದೆ ಎಂದು ಅನಿಸಿತು. ನಾನು ಎ? ಒತ್ತಾಯ ಮಾಡಿದರೂ ಆಕೆ ತನ್ನ ಮನದಲ್ಲಿದ್ದದ್ದನ್ನು ಬಹಿರಂಗಗೊಳಿಸಲು ಸಿದ್ಧಳಾಗಲಿಲ್ಲ. ಆಕೆ ಹೇಳುವತನಕ ಅಲ್ಲಿಂದ ನಿರ್ಗಮಿಸಲು ನನಗೆ ಮನಸ್ಸಿರಲಿಲ್ಲ.
“ಕೊನೆಗೆ ಈ ಜಗಳದಲ್ಲಿ ಯಾರು ಗೆದ್ದರು?”
“ನಿರ್ವಾಹವಿಲ್ಲದೆ ನಾನೇ ಹಿಮ್ಮೆಟ್ಟಬೇಕಾಯಿತು.”
“ಕುಂತಿ ಮಾತೆಯ ಕಡೆಗೆ ಹೋಗಿದ್ದೆಯಲ್ಲ, ಅಲ್ಲಿ ಏನು ಸಂಭವಿಸಿತು? ಆಕೆಯ ಕಡೆಗೆ ಹೋಗುವ ಮುನ್ನ ನನ್ನನ್ನೇಕೆ ದೂರ ಮಾಡಿದೆ?” “ನಿನ್ನನ್ನು ದೂರ ಮಾಡುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಏಕಾಂಗಿಯಾಗಿ ಬರಬೇಕೆಂದು ಕುಂತಿಮಾತೆಯ ಆದೇಶವಿತ್ತು.”
ಕೃಷ್ಣ ಒಮ್ಮೆಲೆ ಸ್ತಬ್ಧನಾದ. ಅವನನ್ನು ನೋಡುತ್ತಿದ್ದ ಅರ್ಜುನನ ಮುಖದ ಮೇಲೆ ನಗೆ ಮೂಡಿ ಬಂದಿತು.
“ಅಲ್ಲಿ ಯಾವ ಸಂಗತಿಗಳು ಘಟಿಸಲಿಲ್ಲ, ಕೃಷ್ಣ. ಕುಂತಿಮಾತೆ ಅದೇ ವಿಶ್ವಾಸ, ಪ್ರೇಮದಿಂದ ನನಗೆ ಆರತಿ ಮಾಡಲು ಸುಭದ್ರೆಗೆ ಹೇಳಿದಳು. ಆದರೆ ಆಕೆಯ ನೋಟದಲ್ಲಿ ಮಾತ್ರ ಇಂದು….” ಅರ್ಜುನನ ಮಾತು ಮುಂದುವರಿಯಲಿಲ್ಲ.
ಭಯವೋ?”
“ಇಲ್ಲ ಕೃಷ್ಣ. ಅಲ್ಲಿ ಭಯವಾಗಲಿ, ಅಂಜಿಕೆಯಾಗಲಿ ಇರಲಿಲ್ಲ. ಕುಂತಿಯ ಕ್ಷಾತ್ರತೇಜ ದ್ರೌಪದಿಯ? ಪ್ರಖರವಾದದ್ದು ಎಂದು ನಿನಗೆ ಗೊತ್ತು. ಅಲ್ಲದೆ ಆಕೆಯ ಬುದ್ಧಿ, ವಿವೇಕ ದ್ರೌಪದಿಗಿಂತಲೂ ಆಳವಾದದ್ದು. ಆದರೆ ಇದು ಮಾತ್ರ ನಿಜ, ಇಂದು ಕುಂತಿ ದಿನನಿತ್ಯದ ಕುಂತಿ ಆಗಿರಲಿಲ್ಲ.” ಅರ್ಜುನ ಕೆಲಕ್ಷಣ ಸುಮ್ಮನೆ ನಿಂತ. ತುಟಿಯ ಮೇಲೆ ಬೆರಳು ಇಟ್ಟುಕೊಂಡು ವಿಚಾರಮಗ್ನನಾಗಿ, ತನ್ನ?ಕ್ಕೆ ತಾನೆ ಮಾತನಾಡಲಾರಂಭಿಸಿದ.
“ಕೃಷ್ಣ, ಮರಣವೆಂದರೇನು ಎಂಬುದು ನಮ್ಮೆಲ್ಲರಿಗಿಂತ ನಿನಗೇ ಚೆನ್ನಾಗಿ ಗೊತ್ತು. ಹಾಗೆಯೇ ಜನ್ಮದ ಮರ್ಮವೂ ಕೂಡ ನನ್ನ ಮಾತೆ ಕುಂತಿಗೆ ಚೆನ್ನಾಗಿ ಗೊತ್ತು. ಆದರೆ ಇಂದು ಆಕೆಯ ಕಣ್ಣುಗಳು….ಕೃ?, ಅಂಧನಾದವನ ಕಣ್ಣುಗಳು ಹೇಗೆ ವಿಲಕ್ಷಣ, ತೇಜಸ್ವಿ ಹಾಗೂ ಸ್ಥಿರವಾಗಿರುತ್ತವೆಯೋ, ಹಾಗೆ ಆಕೆಯ ಕಣ್ಣುಗಳು, ಮೇಲೇನೋ ತೇಜಸ್ಸು ಸ್ಫುರಿಸುತ್ತಿದ್ದರೆ, ಒಳಗೆ ಅಂಧಕಾರದಿಂದ ತುಂಬಿವೆ ಎಂದು ಅನಿಸುತಿತ್ತು.”
ಅರ್ಜುನ ಮೂಲೆಯ ಕಡೆಗೆ ಹೋದ. ಅಲ್ಲಿದ್ದ ಮಂಚದ ಮೇಲೆ ಅದ್ವಿತೀಯ ಗಾಂಢೀವ ಧನುಸ್ಸು ಇಡಲಾಗಿತ್ತು. ಅದರ ಸುತ್ತಮುತ್ತ ಬತ್ತಳಿಕೆಗಳು ಬಿದ್ದಿದ್ದವು. ಬತ್ತಳಿಕೆಯೊಂದರಲ್ಲಿದ್ದ ಹರಿತವಾದ ಬಾಣವನ್ನು ಎತ್ತಿಕೊಂಡು ಅದರಿಂದ ತನ್ನ ಮುಂಗೈಯ ಮೇಲೆ ಆಳವಾಗಿ ಚುಚ್ಚಿಕೊಂಡ.
“ಕೃಷ್ಣ, ನನ್ನ ಮಾತೆಯ ಆ ಕಣ್ಣುಗಳನ್ನು ಎದುರಿಸುವ ಧೈರ್ಯ ನನ್ನಲ್ಲಿರಲಿಲ್ಲ. ನಾನು ಆಕೆಗೆ ಕೊನೆಯ ವಚನ ಕೊಟ್ಟೆ. “ಮಾತೆ, ನಿನ್ನ ಪ್ರೀತಿಯ ಸೊಸೆಯಾದ ದ್ರೌಪದಿಗೆ ದಾಸಿ, ವೇಶ್ಯೆ ಎಂದೆಲ್ಲ ಅವಾಚ್ಯ ಶಬ್ದಗಳಿಂದ ದೂಷಿಸಿದ ಆ ಅಧಮ ಸೂತಪುತ್ರನ ವಧೆ ನನ್ನಿಂದ ಆಗುವದು ಖಂಡಿತ. ನಾನು ಜಾತಿವಂತ ಕ್ಷತ್ರಿಯನೆ ಆಗಿದ್ದರೆ, ಇದೇ ಬಾಣದಿಂದ ಆ ಸೂತಪುತ್ರನಾದ ಕರ್ಣನ ಶಿರವನ್ನು, ಮರದಿಂದ ಹಣ್ಣುಗಳನ್ನು ಉದುರಿಸಿದಂತೆ ಉದುರಿಸುತ್ತೇನೆ. ಯಾಕೆಂದರೆ ಈ ಬಾಣಕ್ಕೆ ಎಳೆಯನಾದ ನನ್ನ ಮಗ ಅಭಿಮನ್ಯುವಿನ ಮೃತ್ಯುವಿನ ವಾಸನೆ ಇದೆ.” ಅರ್ಜುನ ಬಾಣವನ್ನು ಬತ್ತಳಿಕೆಯಲ್ಲಿಟ್ಟು ಅಂಗೈಯಿಂದ ಒಸರುತ್ತಿರುವ ರಕ್ತವನ್ನು ತನ್ನ ಮೇಲ್ವಸ್ತ್ರದಿಂದ ಒರೆಸಿಕೊಂಡ.
“ಕೃಷ್ಣ, ನಿಮಗೆಲ್ಲರಿಗೂ ಕರ್ಣನ ಬಗ್ಗೆ ಏಕೆ ಭಯವೋ, ನನಗೆ ತಿಳಿಯದು.”
“ನನಗೂ” ಮಂದಹಾಸದಿಂದ ಕೃ? ಕೇಳಿದ.
“ಹೌದು, ನಿನಗೂ ಸಹ.”
“ಗೆಳೆಯಾ, ನೀನು ನನ್ನ ಮೇಲೆ ಅನ್ಯಾಯ ಮಾಡುತ್ತಿದ್ದಿ ಎಂದು ಅನಿಸುವುದಿಲ್ಲವೆ?” ಅರ್ಜುನನ ಮುಖದ ಮೇಲೆ ನಸುನಗೆ ಕಾಣಿಸಿತು.
“ಧರ್ಮರಾಜನೂ ಅಷ್ಟೆ, ಕರ್ಣನ ನೆನಕೆ ಮಾತ್ರದಿಂದ ಅವನ ಮನಸ್ಸು ಕಲುಕಿ ನಿದ್ದೆ ಪಲಾಯನ ಮಾಡುತ್ತದೆ; ದ್ರೌಪದಿಯ ಮನ ಅಸ್ಥಿರವಾಗುತ್ತದೆ; ಕರ್ಣನ ನಾಮ ಉಚ್ಚಾರಣೆ ಮಾಡಿದರೆ ಭೀಮನ ರಣಗರ್ಜನೆ ಮಂದ್ರ ಸಪ್ತಕಕ್ಕೆ ಜಾರುತ್ತದೆ. ನಿಜವಾದ ಸಂಗತಿಯೆಂದರೆ, ಘೋಷಯಾತ್ರೆಯ ವೇಳೆಯಲ್ಲೇ ಆಗಲಿ, ವಿರಾಟನ ಗೋವುಗಳ ಕಳುವಿನ ಪ್ರಸಂಗದ ವೇಳೆಯಲ್ಲೇ ಆಗಲಿ, ಇಲ್ಲವೇ ಇಲ್ಲಿಯವರೆಗೆ ಆದ ಯುದ್ಧಗಳಲ್ಲಿ ನಾನು ಅಜಿಂಕ್ಯನಾಗಿ ಮೆರೆದಿದ್ದೇನೆ. ಕರ್ಣನನ್ನು ಮಣ್ಣುಮುಕ್ಕಿಸಿ, ತಲೆಯೆತ್ತದಂತೆ ಅವನ ಅಪಮಾನ ಕೂಡ ಮಾಡಿದ್ದೇನೆ. ಆದರೂ ಆತನ ಬಗ್ಗೆ ಇಷ್ಟೊಂದು ಭೀತಿ?”
“ನೀನು ಈ ವಿ?ಯವನ್ನು ನಿರ್ಲಕ್ಷ್ಯ ಮಾಡಿದರೆ ಒಳಿತು.”
“ನಾನು ಇಂತಹ ಚಿಕ್ಕ-ಪುಟ್ಟ ವಿಷಯವನ್ನು ಗಣನೆಗೂ ತಂದುಕೊಳ್ಳುವುದಿಲ್ಲ. ಆದರೆ ಎಲ್ಲೋ, ನನ್ನ ಧನುರ್ಧಾರಿತ್ವಕ್ಕೇ ಅವಮಾನವಾಗುತ್ತಿದೆ; ಈ ವಿಷಯ ನನಗೆ ಸಹನವಾಗುತ್ತಿಲ್ಲ.” ಒಂದು ಕ್ಷಣದಲ್ಲಿ ಅರ್ಜುನನ ಮುಖದ ಮೇಲೆ ವಕ್ರವಾದ ನರವೊಂದು ಎದ್ದು ಕಾಣಿಸಿ, ಆತನ ಮುಖದ ಮೇಲಿದ್ದ ನಗು ಅದೃಶ್ಯವಾಯಿತು.
“ಆದರೆ ಕೃಷ್ಣ, ಈ ಎಲ್ಲವೂ ನನಗೆ ಮಾನ್ಯವಿದ್ದರೂ, ನಿಜ ಹೇಳಲೇ, ನನಗೆ ಕರ್ಣನ ಚಮತ್ಕಾರಿಕ ಸಾಮರ್ಥ್ಯದ ಕುರಿತು ವಿಲಕ್ಷಣ ಕುತೂಹಲವೂ ಇದೆ.” ಆ ಕ್ಷಣದಲ್ಲಿ ಕೃಷ್ಣನಿಗೆ ತನ್ನ ಮಿತ್ರನ ಮೇಲೆ ಪ್ರೀತಿ ಉಕ್ಕಿ ಬಂದಿತು. ಆತನ ಕಣ್ಣೆದುರು ಭೀಮ ಹಾಗೂ ಅರ್ಜುನರ ಭಾವಚಿತ್ರಗಳು ಬಂದು ನಿಂತ ಹಾಗೆ ಆಯಿತು. ಕ್ಷತ್ರಿಯರಾಗಿ ಇಬ್ಬರೂ ಅತುಳ ಬಲದವರೆ. ಆದರೆ ಗುಣಕ್ಕೆ ಏಕೆ ಮತ್ಸರ? ಭೀಮನಿಗೆ ತನ್ನ ಹುಟ್ಟು ವೈರಿಯಾದ ಕರ್ಣನ ಬಗ್ಗೆ ನಿರ್ಮಲವಾದ ಆಸಕ್ತಿ, ಕುತೂಹಲ, ಆತನ ಶೌರ್ಯದ ಬಗ್ಗೆ ಮೆಚ್ಚುಗೆ ಎಂದು ಹುಟ್ಟುವುದು? ಬಹುಶಃ ಇದು ಅಶಕ್ಯ, ಅಶಕ್ಯ.
“ನೋಡು ಅರ್ಜುನಾ, ಭೀಷ್ಮನೇನು ದ್ರೋಣನೇನು, ಇಬ್ಬರೂ ದ್ವಂದ್ವ ಮನೋಭಾವದವರು; ಉಭಯಸಂಕಟದಲ್ಲಿ ಸಿಕ್ಕಿಬಿದ್ದವರು; ಪ್ರಲೋಭಕ್ಕೆ ಒಳಗಾಗಿ ದುರ್ಯೋಧನನ ದಾಸ್ಯವನ್ನು ಒಪ್ಪಿಕೊಂಡವರು. ಆದರೆ, ನಿಮ್ಮ ಮೇಲೆ ಕೂಡ ಅತೀವ ಮೋಹವುಳ್ಳವರು. ಆದರೂ ಇಂತಹ ಇಬ್ಬಗೆಯ ಮನೋಭಾವ ಹೊಂದಿದವರ ಪತನ ನಿಶ್ಚಿತವಾಗಿರುತ್ತದೆ.”
“ಇದು ನನಗೆ ಮಾನ್ಯವಿಲ್ಲ ಕೃಷ್ಣ. ’ಕೋಹಂ’ ಎಂಬ ಈ ಪ್ರಶ್ನೆಯ ಉತ್ತರ ಕರ್ಣನಿಗೆ ಇಂದಿನವರೆಗೆ ಕಂಡುಕೊಳ್ಳಲಾಗಲಿಲ್ಲ. ಆತನೂ ದ್ವಂದ್ವ ಮನೋಭಾವನೆಯಿಂದ ಬಳಲುವವನೇ.”
“ಹಾಗೆಯೇ ಆಗಿದ್ದರೆ, ನಿನಗೆ ಅವನ ಸಾಮರ್ಥ್ಯದ ಬಗ್ಗೆ ಕುತೂಹಲ ಉಂಟಾಗುತ್ತಿರಲಿಲ್ಲ. ಅಲ್ಲದೇ ನಿನ್ನ ಅವನ ಕದನ ವೀಕ್ಷಿಸಲು ಸಹಸ್ರ ಕ್ಷತ್ರಿಯರು ಆಸಕ್ತಿಯಿಂದ ಎದುರುನೋಡುತ್ತಿರಲಿಲ್ಲ.”
“ಇರಲಿ. ಕೊನೆಗೂ ಓರ್ವ ಸೂತನು ಸೂತನೆ, ಕ್ಷತ್ರಿಯನು ಕ್ಷತ್ರಿಯನೇ ಎಂಬುದು ನಾಳೆ ಎಲ್ಲರಿಗೂ ತಿಳಿಯುತ್ತದೆ. ನಾಳಿನ ನಿರ್ಣಾಯಕ ಯುದ್ಧದ ನಂತರ ಇದರ ಬಗ್ಗೆ ಯಾರಿಗೂ ಶಂಕೆ ಇರಲಾರದು.”
“ಕೆಲವು ನಿಮಿ?ಗಳ ಹಿಂದೆ ನನ್ನ ಮೇಲೆ ಆರೋಪ ಮಾಡಿದ್ದೆ. ಇದರ ಬಗ್ಗೆ ನನಗೆಂದೂ ಅನುಮಾನವಿರಲಿಲ್ಲ, ಈಗಲೂ ಇಲ್ಲ. ನಾಳೆ ಮಹಾಭಾರತ ಯುದ್ಧ ಸಮಾಪ್ತಿಗೊಳ್ಳುತ್ತದೆ. ಅರ್ಜುನಾ, ಶಾಂತಮನಸ್ಕನಾಗಿ ನಿದ್ರೆ ಮಾಡು. ನಾನು ಕುಂತಿಯ ಕಡೆಗೆ ಹೋಗುತ್ತೇನೆ.”
ಅರ್ಜುನ ’ಯಾಕೆ, ಅಲ್ಲಿ ಹೋಗುವ ಕಾರಣವೇನು?’ ಎಂದು ಪ್ರಶ್ನೆ ಕೇಳುವ ಮುಂಚೆಯೇ ಕೃ? ನುಡಿದ,
“ಬಂದು ಭೆಟ್ಟಿಯಾಗು ಎಂದು ಕುಂತಿಯಿಂದ ಸಂದೇಶ ಬಂದಿದೆ.”
* * * * * *
ಪಂಜು ಹಿಡಿದು ಮುಂದೆ ಸಾಗುತ್ತಿದ್ದ ದೀವಟಿಗನ ಜೊತೆಗೆ ಕೃಷ್ಣ ಮುನ್ನಡೆದ. ಯಾದವರ ಶಿಬಿರದಿಂದ, ಮದ್ಯಪಾನ ಮಾಡಿ ಕೇಕೆಹಾಕುತ್ತಿರುವ ಸೈನಿಕರ ಒದರಾಟ, ಕೂಗಾಟ ಕೇಳಿಸಿದರೂ ಕೇಳಿಸದಂತೆ ಕೃಷ್ಣ ಮುಂದೆ ನಡೆದು, ರಾಜ ಪರಿವಾರದ ಸ್ತ್ರೀಯರ ಶಿಬಿರದ ಕಡೆಗೆ ಹೊರಳಿದ. ನಡುಗೆಯನ್ನು ತೀವ್ರ ಮಾಡಿದ. ಇಂದು ಯಾವುದೇ ಪರಿಸ್ಥಿತಿಯಲ್ಲಿ ಕುಂತಿಯನ್ನು ಭೆಟ್ಟಿಯಾಗಲೇಬೇಕಿತ್ತು. ಅರ್ಜುನ ತನಗಿಂತ ಮೊದಲು ಕುಂತಿಯ ಕಡೆಗೆ ಹೋದದ್ದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಎ?ಂದು ಅನರ್ಥ ಸಂಭವಿಸುತಿತ್ತು? ಪಾಂಡವರೆಲ್ಲ ಈ ವೇಳೆಯಲ್ಲಿ ಕುಂತಿಯ ಹತ್ತಿರದಲ್ಲಿ ಇರಬಾರದ ಹಾಗೆ ಆ ರೀತಿಯ ವ್ಯವಸ್ಥೆಯನ್ನು ಸಾತ್ಯಕಿಗೆ ತಾನೇ ಹೇಳಿ ಮಾಡಿಸಿದ್ದ. ಏಕೆಂದರೆ ಆತನಿಗೆ ಏಕಾಂಗಿಯಾಗಿ ಕುಂತಿಯನ್ನು ಭೆಟ್ಟಿಯಾಗಬೇಕಿತ್ತು. ಅಲ್ಲದೆ ವೇಳೆ ಅತ್ಯಂತ ಕಡಮೆ ಇತ್ತು. ಆಯು?ದಲ್ಲಿ ಒಂದು ಮಹತ್ತ್ವದ ನಿರ್ಣಯ ಹಾಗೂ ಅಂತಿಮನಿರ್ಣಯ ತೆಗೆದುಕೊಳ್ಳಬೇಕಾಗಿತ್ತು. ಇಲ್ಲಿಯವರೆಗೆ ಆತ ದೊಡ್ಡದೊಡ್ಡ ತೀರ್ಮಾನಗಳನ್ನು ತೆಗೆದುಕೊಂಡಿದ್ದ. ಗೋಕುಲದಿಂದ ಶಾಶ್ವತವಾದ ನಿರ್ಗಮನ, ಜರಾಸಂಧನ ವಧೆ, ಶಿಶುಪಾಲನ ಹತ್ಯೆ, ಕೌರವರ ಜೊತೆ ಮಧ್ಯಸ್ತಿಕೆ ಹಾಗೂ ಸಂಧಾನ, ಭೀ?ನ ವಧೆಗಾಗಿ ಶಿಖಂಡಿಯ ಉಪಯೋಗ, ಧರ್ಮರಾಜನಿಗೆ “ನರೋ ವಾ ಕುಂಜರೋ ವಾ” ಎಂಬ ಮಂತ್ರ, ಇತ್ಯಾದಿ. ಆದರೆ ಇಂದಿನ ನಿರ್ಣಯದ ಸ್ವರೂಪ ಬೇರೆಯೇ ಆಗಿದ್ದು, ಅತ್ಯಂತ ಸೂಕ್ಷ್ಮವಾಗಿತ್ತು. ಅ?ಮಿಯ ಅಂಧಕಾರದಲ್ಲಿ ಆ ಪ್ರಚಂಡ ಬಂಡೆಯ ಮೇಲೆ ನಿಂತು ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಕಾಶಿರಾಜ, ದ್ರುಪದ, ಪುರೂಜಿತ, ದೃ?ದ್ಯುಮ್ನ; ಮಗಧ, ಕಲಿಂಗ, ಸಿಂಧುದೇಶ, ಮದ್ರ….. ಈ ವೀರಾಧಿವೀರರ ಶಿಬಿರಗಳನ್ನು ದಾಟುತ್ತ
ಕೃಷ್ಣ ಮುಂದೆ ಸಾಗುತ್ತಿದ್ದ. ನೃತ್ಯ ಗೀತೆಗಳು, ನರ್ತಕಿಯರ ಗೆಜ್ಜೆಯ ನಿನಾದ, ನೋವು, ದುಃಖದಿಂದ ಬಳಲುತ್ತಿರುವವರ ಬಿಕ್ಕುಗಳು, ಈ ಎಲ್ಲವೂ ಮೇಳೈಸಿ ಅಸಂಬದ್ಧವಾಗಿ ಕೇಳಿಸುತ್ತಿದ್ದವು. ನಾಯಿಗಳ ಬೊಗಳುವಿಕೆ, ನರಿಗಳ ಊಳಿಡುವಿಕೆ, ಕುದುರೆಗಳ ಹೇ?ರವದಿಂದ ಪರಿಸರವೆಲ್ಲ ವಿಸಂಗತವಾಗಿ ಕಾಣುತ್ತಿತ್ತು. ರಕ್ತ ಮಾಂಸಗಳ ದುರ್ಗಂಧ ಮೂಗಿಗೆ ರಾಚುತ್ತಿತ್ತು. ಪಶ್ಚಿಮದ ದಿಶೆಯಲ್ಲಿ ಎಲ್ಲಿ ನೋಡಿದರೂ ಚಿತೆಗಳು ಉರಿಯುವ ಭಯಾನಕ ದೃಶ್ಯ ಕಾಣುತ್ತಿತ್ತು. ಮಸುಕಾದ ಅಂಧಕಾರದಲ್ಲಿ ಉರಿಯುತ್ತಿರುವ ಚಿತೆಯ ಹೊಗೆ ಮೆಲ್ಲನೆ ಬೀಸುತ್ತಿರುವ ಗಾಳಿಯ ಕೂಡ ಕರಗಿ ಸರ್ಪಾಕೃತಿ ಹೊಂದಿ ಮೇಲೆ ಹೋಗುತ್ತಿತ್ತು. ವೀರಸ್ವರ್ಗ ಪಡೆದ ಯೋಧರ ಆತ್ಮಗಳು ನಕ್ಷತ್ರಮಾರ್ಗದಿಂದ ಸ್ವರ್ಗದ ದಿಶೆಗೆ ಪ್ರಸ್ಥಾನಗೈದಂತೆ ಭಾಸವಾಗತೊಡಗಿತ್ತು.
ಪಾಂಡವರ ಸೈನಿಕಶಿಬಿರಗಳ ನಂತರ, ರಾಜಮನೆತನದ ಸ್ತ್ರೀಯರ ಶಿಬಿರಗಳು ಪ್ರಾರಂಭವಾದವು. ಅದರಲ್ಲಿ ಮೊದಲನೆಯದು ಕುಂತಿಯದು. ದೀವಟಿಗ ಅಲ್ಲಿಗೆ ನಿಂತ. ಕೃಷ್ಣ ಆತನಿಗೆ ಹೋಗಲು ಬೆರಳುಗಳಿಂದ ಸನ್ನೆ ಮಾಡಿದ. ಆತ ಅದೃಶ್ಯನಾದ. ಕೃಷ್ಣ ಒಳಗೆ ಪ್ರವೇಶಿಸಿದ. ಶಿಬಿರದೊಳಗೆ ಎತ್ತರವಾದ ನೀರಾಂಜನದಲ್ಲಿ ದೀಪ ಬೆಳಗುತ್ತಿತ್ತು. ಕುಂತಿ ಅದರ ಹತ್ತಿರ ಇರುವ ಮಂಚಕ್ಕೆ ಬೆನ್ನು ಒರಗಿಸಿ ವಿಶ್ರಮಿಸುತ್ತಿದ್ದಳು. ಆಕೆಯ ಶರೀರದ ಮೇಲೆ ಕೇಸರಿಬಣ್ಣದ ಮೇಲ್ವಸ್ತ್ರ ಇತ್ತು. ಮುಖ ಪರದೆಯಿಂದ ಅರ್ಧ ಮುಚ್ಚಿತ್ತು. ಅರ್ಧಮುಖ ಬೆಳ್ಳಗೆ ಹೊಳೆಯುತ್ತಿತ್ತು. ನೀಳವಾದ ಜಡೆ ಜೋತು ಬಿದ್ದಿತ್ತು. ಈಗ ತಾನೆ ಅರ್ಜುನನನ್ನು ಭೆಟ್ಟಿಯಾಗಿ ಬಂದಿದ್ದರೂ, ಆಕೆಯ ಮುಖದ ಮೇಲೆ ಯಾವುದೇ ಒತ್ತಡಗಳು ಕಾಣಿಸಲಿಲ್ಲ. ಶ್ರೀಕೃಷ್ಣನಿಗೆ ತನ್ನ ಸೋದರತ್ತೆಯ ಬಗ್ಗೆ ಆದರವೂ ಆಶ್ಚರ್ಯವೂ ಆಯಿತು. ತನ್ನ ಅತ್ತೆ ಎಷ್ಟೊಂದು ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದಳು? ಒಂದು ಮಣ್ಣಿನಗೊಂಬೆ ಕೊಡುವಂತೆ ಈಕೆಯ ಜನಕ ಆಕೆಯನ್ನು ಕುಂತೀಭೋಜನಿಗೆ ಕೊಟ್ಟ. ಮುಂದೆ ಮೂರು ವರ್ಷ ವಿಚಿತ್ರ, ವಿಕ್ಷಿಪ್ತ ಮನಸ್ಸಿನ ದುರ್ವಾಸ ಮಹರ್ಷಿಯ ಕೂಡ ಸಹವಾಸ, ಆತನ ಸೇವೆ. ಪತಿ ಮಹಾಶಯನೋ ಪಾಂಡುರೋಗ ಪೀಡಿತನಾದ ರೋಗಿ?. ಸೊಸೆ ದ್ರೌಪದಿಗೆ ಆದ ಅವಮಾನ, ಮಕ್ಕಳ ಜೊತೆ ವನವಾಸ, ಆಪ್ತರು ಸಂಬಂಧಿಕರಿಂದ ದೂರವಾಗಿ ಅನುಭವಿಸಿದ ಅಜ್ಞಾತವಾಸ, ಈಗ ಎರಡೂ ವಂಶಗಳನ್ನು ನಿರ್ನಾಮ ಮಾಡಲು ಹೊರಟಿರುವ ಮಹಾಯುದ್ಧ, ಅದರಲ್ಲೂ ಈವತ್ತಿನ ಕೊನೆಯ ಕರಾಳ ರಾತ್ರಿ. ಅರ್ಜುನ, ಕರ್ಣ ಆಕೆಯ ಹೃದಯದ ಎರಡು ಕವಾಟಗಳು. ಈ ಇಬ್ಬರಲ್ಲಿ ನಾಳೆಯ ಯುದ್ಧದಲ್ಲಿ ಉಳಿಯುವವರು ಯಾರು? ಈ ಪ್ರಶ್ನೆ ಆಕೆಯ ಎದೆಯ ಮೇಲೆ ಬಂಡೆಗಲ್ಲಿನಂತೆ ಕುಳಿತಿದೆ. ಇದನ್ನೆಲ್ಲ ಆಕೆ ಓರ್ವ ಸಾಮ್ರಾಜ್ಞಿಯಂತೆ ಎದುರಿಸಬೇಕಾಗಿದೆ. ಆಸನದ ಮೇಲೆ ಒರಗಿದ್ದ ಆಕೆಯ ಕೈಗಳು ಕೊಂಚವೂ ಅಲುಗಾಡದಂತೆ ಕುಳಿತಿವೆ.
ಹಠಮಾರಿಯೂ, ಪಾತಿವ್ರತ್ಯವನ್ನು ಕಣ್ಣಿಗೆ ಕಟ್ಟಿಕೊಂಡವಳೂ, ಬುದ್ಧಿ ಸ್ತಿಮಿತದಲ್ಲಿ ಇರದವಳು, ಒಣಗಿದ ಶಾಲ್ಮಲೀ ವೃಕ್ಷದ ಹಾಗೆ ರೂಕ್ಷಳೂ ಆದ ಗಾಂಧಾರಿ; ಬೇಸಿಗೆಯ ಉರಿಬಿಸಿಲಿನಲ್ಲಿ ಕಾದಬಂಡೆಯ ಮೇಲೆ ಹೆಡೆ ತೆಗೆದು ಫೂತ್ಕರಿಸಿ ನರ್ತಿಸುವ ಕಾಳಿಂಗಸರ್ಪದಂತೆ ಇರುವ ದ್ರೌಪದಿ; ಆದರೆ ಕಣ್ಣುಕುಕ್ಕುವಂತೆ ಪ್ರಖರವಾಗಿ ಪ್ರಜ್ಜ್ವಲಿಸುತ್ತಿರುವ ದೀಪದಂತಿರುವ ಕುಂತಿ.
ಕುಂತಿ ಕಣ್ಣು ತೆರೆದಳು.
“ಬಾ, ಮಾಧವಾ.” ಆಕೆ ಮೇಲೆ ಎದ್ದಳು. ಕೃಷ್ಣನನ್ನು ಮೂಲೆಯಲ್ಲಿದ್ದ ಅಭಿ?ಕಪಾತ್ರೆಯ ಕಡೆಗೆ ಕರೆದುಕೊಂಡು ಹೋದಳು. ಕೃಷ್ಣ ವಿನಯದಿಂದ ಆಕೆಯನ್ನು ಹಿಂಬಾಲಿಸಿದ. ಉದಕದಿಂದ ಆಚಮನ ಮಾಡಿ ಕಣ್ಣಿಗೆ ನೀರು ಹಚ್ಚಿಕೊಂಡ. ಕುಂತಿಯ ಪಾದ ಸ್ಪರ್ಶ ಮಾಡಿ ನಮಸ್ಕರಿಸಿದ.
“ಏಳು ಮಾಧವಾ. ನೀನು ಬರುವೆ ಎಂದು ನನಗೆ ಅನಿಸಿತ್ತು.”
“ಕುಂತಿ, ನೀನು ನನ್ನ ಆಗಮನದ ಪ್ರತೀಕ್ಷೆಯಲ್ಲಿ ಇರುತ್ತಿ ಎಂದು ನಾನು ಬಲ್ಲೆ” ಕುಂತಿಯ ಮುಗುಳ್ನಗೆಯಿಂದ ಕೂಡಿದ ನೇತ್ರಗಳನ್ನು ನೋಡುತ್ತ ಕೃಷ್ಣ ವಿಚಾರಿಸಿದ.
“ಯಾಕೆ ನಗುತ್ತಿರುವೆ ಕುಂತಿ? ನಾನು ಕಾರ್ಯವಿದ್ದರೆ ಮಾತ್ರ ಪರರ ಮನೆಗೆ ಹೋಗುತ್ತೇನೆಂದು ನಿನ್ನ ಭಾವನೆಯೋ? ಪರಸ್ಪರ ಪ್ರೇಮ, ಪ್ರೀತಿಗಳನ್ನು ಕೊಡುಕೊಳ್ಳುವುದು ಇದ್ದೇ ಇರುತ್ತದಲ್ಲ.”
“ನೀನೆ? ಕಪಟಿಯೋ?”
“ಇಲ್ಲ ಕುಂತಿ, ನೀನು ತಿಳಿದುಕೊಂಡ ಹಾಗೆ ನಾನು ಇಲ್ಲ. ಒಂದು ವೇಳೆ ನಾನು ಹಾಗಿದ್ದರೂ, ಅದಕ್ಕೆ ನೀವಿಬ್ಬರು ಅಂದರೆ, ಪಾಂಡವರು ಕೌರವರು ಕಾರಣ. ನಾನು ಕಪಟವೇ? ಕಳಚಿ, ಮನು?ನ ನಿಜರೂಪ ಧರಿಸಿ ಭೆಟ್ಟಿಯಾಗುವುದು ಇಬ್ಬರು ವ್ಯಕ್ತಿಗಳನ್ನು ಮಾತ್ರ. ಅದರಲ್ಲಿ ನೀನೂ ಒಬ್ಬಳು.”
“ಇದು ಸತ್ಯವೆಂದು ನಾನು ನಂಬಲೇ?”
“ನಂಬಲು ಏನು ಅಡ್ಡಿಯಾಗಿದೆ?”
“ಮಾಧವಾ, ನಿನ್ನ ಮುಖದಿಂದ, ಮನು?ನಾಗಿ ಈ ಶಬ್ದಗಳು ಶೋಭಿಸುವದಿಲ್ಲ. ಇವು ಕ್ಷತ್ರಿಯ ಭಾ?ಯ ಶಬ್ದಗಳಲ್ಲ. ಅದರಲ್ಲೂ ನಿನ್ನವಂತೂ ಅಲ್ಲವೇ ಅಲ್ಲ.” ಈ ಕುಂತಿ ಯಾವಾಗಲೂ ಹೀಗೆಯೇ. ಸ್ಪಷ್ಟವಾದಿ, ನೇರ ನುಡಿಯುವವಳು. ಮನದಲ್ಲಿ ಯಾವುದನ್ನೂ ಬಚ್ಚಿಟ್ಟುಕೊಳ್ಳುವುದು ಆಕೆಗೆ ಅಸಾಧ್ಯ. ಭಲೇ ಕುಂತಿ, ಭಲೆ.
“ನಾನು ನಿರ್ಗಮಿಸಲೇ ಕುಂತೀ?”
“ಬೇಡ, ನಿಲ್ಲು. ನಿನ್ನ ರುಕ್ಮಿಣಿ ಸತ್ಯಭಾಮೆಯರಂತೆ ನಾನೇನು ಮುಗ್ಧಳೆಂದು ತಿಳಿಯಬೇಡ. ಆದರೆ ಮಾಧವಾ, ನೀನು ಭೆಟ್ಟಿಯಾಗುವ ಆ ಎರಡನೇ ಅದೃ?ಶಾಲಿ ಯಾರು ಎಂದು ಕೇಳಬಹುದೇ?”
“ಕೆಲವು ಪ್ರಹರಗಳ ಮುಂಚೆ, ಏಕಾಂಗಿಯಾಗಿ ನಿನ್ನನ್ನು ಭೆಟ್ಟಿಯಾಗಲು ಬಂದಿದ್ದನಲ್ಲ ಕುಂತಿ.”
ಧನಂಜಯನ ಹೆಸರು ಕೇಳಿ ಕುಂತಿ ಒಮ್ಮೆಲೆ ವಿಚಲಿತಳಾದಳು. ಆಕೆಯ ಭವ್ಯವಾದ ಶರೀರ ಬರಿದಾದ ಮೂಟೆಯಂತೆ ಆಯಿತು. ಪ್ರಫುಲ್ಲವಾದ ಸಂಪಿಗೆಯಂತಿರುವ ಆಕೆಯ ಮುಖ ಕಳಾಹೀನವಾಯಿತು. ನಾಲ್ಕು ದಶಕಗಳ ಕುಮಾರಿ ಮಾತೆಯ ದುಃಖದಭಾರ ಹೊತ್ತ ಕುಂತಿಗೆ, ಅದನ್ನು ಹೊತ್ತುಕೊಂಡು ಹೋಗುವಾಗ, ಏರುಪೇರಾಗಿ ನಿಯಂತ್ರಣ ತಪ್ಪುವುದು ಸಹಜವೇ. ಆದರೆ ಹೀಗೆ ಆಗಲೇಬೇಕೆಂದು ಹಣೆಬರಹದಲ್ಲಿ ಬರೆದಾಗ, ಅದಕ್ಕಾಗಿ ದುಃಖಪಡುವ ಕಾರಣವಿಲ್ಲ, ಬಂದದ್ದನ್ನು ಅನುಭವಿಸಬೇಕು ಎಂಬುದು ಕೃ?ನ ಸಾಂತ್ವನ. ಈಗ ಆತ, ಆಕೆಯ ಮನಕ್ಕೆ ಆಘಾತ ಕೊಡುವವನಿದ್ದ. ಅದನ್ನು ಎದುರಿಸಲು ಆಕೆಯನ್ನು ಸಿದ್ಧಗೊಳಿಸುವುದು ಆತನ ಉದ್ದೇಶವಾಗಿತ್ತು. ವೇಳೆಯೂ ಕೂಡಿ ಬಂದಿತ್ತು.
ಕುಂತಿ ದೀರ್ಘವಾದ ನಿಃಶ್ವಾಸಬಿಟ್ಟು ನುಡಿದಳು, “ಮಾಧವಾ, ಬಂದಿರುವ ಕಾರಣವನ್ನು ಹೇಳು.”
“ಅನೇಕ ವ?ಗಳ ಹಿಂದೆ, ಒಂದು ರಾತ್ರಿ, ನಾನು ನಿನ್ನ ಕಡೆಗೆ ಬಂದಿದ್ದೆ. ಆಗ ನೀನು ಪರಮೇಶ್ವರನ ಪ್ರಾರ್ಥನೆಯಲ್ಲಿ ನಿರತಳಾಗಿದ್ದೆ. ನಾನು ’ಪರಮಾತ್ಮನ ಹತ್ತಿರ ಏನು ಬೇಡುತ್ತಿದ್ದಿ?’ ಎಂದು ಕೇಳಿದೆ. ನೀನು ಉತ್ತರ ಕೊಟ್ಟೆ. “ದುಃಖ. ದೇವರ ಸ್ಮರಣೆ ನಿರಂತರವಾಗಿ ಇರುವಂತೆ ನನಗೆ ದುಃಖವನ್ನು ಮಾತ್ರ ಕೊಡು, ಎಂದು ಪ್ರಾರ್ಥಿಸಿದ್ದು ನೆನಪಿದೆಯೇ?”
“ಚೆನ್ನಾಗಿ ನೆನಪಿದೆ.”
“ಈಗಲಾದರೂ ಅದನ್ನೆ ಬೇಡುವೆಯೋ?”
“ಹೌದು, ಆಯು?ದ ಈ ಅಪರಕಾಲದಲ್ಲಿ ನನಗೆ ಭಗವಂತನ ಸ್ಮರಣೆಯ ಆವಶ್ಯಕತೆ ಇದೆ.”
“ವಿಚಾರ ಮಾಡು, ಇಲ್ಲವೆನ್ನು, ಬೇಕಾದರೆ ನಾನು ಇಲ್ಲಿಯೇ ನಿಲ್ಲುತ್ತೇನೆ.”
“ನಾನು ಎರಡೆರಡು ಬಾರಿ ವಿಚಾರ ಮಾಡುವುದಿಲ್ಲ. ಹಾಗಾಗಿಯೇ ನನ್ನ ಜೀವನದಲ್ಲಿ ಏನೇನೋ ಘಟನೆಗಳು ನಡೆದು ಹೋಗಿವೆ. ನಿನಗೆ ಗೊತ್ತಲ್ಲವೇ?”
“ಆಗಲಿ ಕುಂತಿ, ನೀನು ಈಗಲೇ ನನ್ನ ಕೂಡ ಹೊರಗೆ ಬರುವೆಯಾ?”
“ಎಲ್ಲಿಗೆ?”
“ಕರ್ಣನ ಕಡೆಗೆ” ಕುಂತಿಯ ಶರೀರ ಆಸನದಿಂದ ಜಾರಿತು. ಆಕೆ ಭೂಮಿಯ ಮೇಲೆ ಬೀಳುವುದೊಂದೇ ಉಳಿದಿತ್ತು. ಆಕೆ ಮತ್ತೆ ತನ್ನನ್ನು ತಾನೇ ಸಂಭಾಳಿಸಿಕೊಂಡು ಮೇಲೆ ಎದ್ದು ಆಸನದ ಮೇಲೆ ಕುಳಿತುಕೊಂಡು ವಸ್ತ್ರದಿಂದ ಮುಖ ಒರೆಸಿಕೊಂಡಳು.
“ಮಾಧವಾ, ಮಾಧವಾ.” ಕುಂತಿ ಬಿಕ್ಕಿಬಿಕ್ಕಿ ಅಳುತ್ತಳಿದ್ದಳು. ಕೆಲ ನಿಮಿ?ದ ನಂತರ ಅಳುವಿನ ಧ್ವನಿ ಅಡಗಿಹೋಯಿತು. ಆಕೆಗೆ ವಿಚಾರಮಾಡಲು ಆಸ್ಪದ ಕೊಡುವುದು ಗಂಡಾಂತರಕ್ಕೆ ಎಡೆಮಾಡಿದಂತೆ ಆಗುತ್ತಿತ್ತು. ಒಂದೊಂದು ಕ್ಷಣವೂ ಅಮೂಲ್ಯವಾಗಿದ್ದವು.
“ಕುಂತಿ, ಕರ್ಣನಿಗೆ ಮನವರಿಕೆ ಮಾಡಲು ಯತ್ನಿಸು. ’ಕರ್ಣಾ, ಈಗಲೂ ವೇಳೆ ಕಳೆದುಹೋಗಿಲ್ಲ. ನಿಮ್ಮ ವಂಶದ ನಾಶ ನಿಲ್ಲಿಸಲು ಈಗಲೂ ಸಾಧ್ಯವಿದೆ. ನೀನು ನಮ್ಮ ಪಕ್ಷಕ್ಕೆ ಬಂದರೆ ಭರತವ?ದ ರಾಜಾಧಿರಾಜನಾಗುವೆ. ಧರ್ಮರಾಜ, ನಿನ್ನ ತಲೆಯ ಮೇಲೆ ಛತ್ರಿ ಹಿಡಿಯುತ್ತಾನೆ. ನನ್ನ ಪ್ರೀತಿಯ ಸಹೋದರ ಎಂದು ಭೀಮ ಚಾಮರ ಬೀಸುತ್ತಾನೆ. ಪ್ರಥಮ ಪಾಂಡವನೆಂದು ನಿನ್ನ ಹೆಸರಿನಿಂದ ರಾಜವಂಶ ಮುಂದುವರಿಯುತ್ತದೆ. ಕೃ?ರ್ಜುನರ ಜೋಡಿಯಂತೆ, ಕರ್ಣಾರ್ಜುನರ ಜೋಡಿಯ ಕೀರ್ತಿ ಭಾರತದ ದಶದಿಕ್ಕಿಗೂ ಹರಡುತ್ತದೆ’ ಎಂದು ಆಮಿ? ತೋರಿಸು, ಅಲ್ಲದೆ ಅವನ ಜನ್ಮರಹಸ್ಯವನ್ನು ಅವಶ್ಯ ಹೇಳು.”
“ಮಾಧವಾ, ಕರ್ಣನಿಗೆ ಹಸ್ತಿನಾಪುರ ಸಾಮ್ರಾಜ್ಯದ ಲಾಲಸೆ, ಛತ್ರ ಚಾಮರಗಳ ಲಾಲಸೆ ಇದೆ ಎಂದು ನನಗೆ ಅನಿಸುವುದಿಲ್ಲ. ಆತನದೋ ದಾನ ಮಾಡುವ ಪ್ರವೃತ್ತಿ. ಪ್ರಸಂಗ ಬಂದರೆ ತನ್ನ ಅಂಗದೇಶವನ್ನೇ ದಾನ ಮಾಡಲು ಹಿಂದೆ ಮುಂದೆ ನೋಡುವವನಲ್ಲ.”
“ನೀನು ನುಡಿಯುವುದೆಲ್ಲವೂ ಸತ್ಯವಲ್ಲ. ದರಿದ್ರ ಬ್ರಾಹ್ಮಣ ದಾನ ಕೊಡಲು ಅಸಮರ್ಥನಾಗಿರುತ್ತಾನೆ. ವೈಶ್ಯನು ದಾನ ಕೊಡಬಹುದು, ಆದರೆ ಆ ದಾನಕ್ಕೆ ತ್ಯಾಗದ ದೊಡ್ಡಸ್ತಿಕೆ ಬರುವುದು ಸಾಧ್ಯವಿಲ್ಲ. ಕೊನೆಗೂ ದಾನ ಕ್ಷತ್ರಿಯರಿಗೆ ಭೂ?ಣ. ಅದಕ್ಕಾಗಿಯೇ ಅಂಬರೀ?, ರಘು ಚಕ್ರವರ್ತಿ, ದಿಲೀಪ ಈ ರಾಜರ್ಷಿಗಳು ಮಾಡಿದ ದಾನಕ್ಕೆ ವೈಭವವಿದೆ, ಪ್ರಸಿದ್ಧಿ ಇದೆ. ಇವುಗಳನ್ನು ತುಲನೆ ಮಾಡುವುದು ಅಸಾಧ್ಯ. ಕರ್ಣನಿಗೆ ಹಸ್ತಿನಾಪುರದ ಸಿಂಹಾಸನದ ಲೋಭ ಇಲ್ಲವೆಂಬುದನ್ನು ಒಪ್ಪುವದಿಲ್ಲ.”
ಕೃ? ಕೆಲಕ್ಷಣ ಸುಮ್ಮನಿದ್ದ. ತಾನು ಮಾತನಾಡಿದ್ದು ಕುಂತಿಯ ಮೇಲೆ ಇನಿತೂ ಪರಿಣಾಮ ಮಾಡಿಲ್ಲ ಎಂದು ಆತನಿಗೆ ಕುಂತಿಯ ಮುಖಚರ್ಯೆಯಿಂದ ತಿಳಿಯಿತು. ಮತ್ತೆ ಮೂಲೆಯಲ್ಲಿದ್ದ ಪಾತ್ರೆಯೊಳಗಿನ ನೀರು ಕಣ್ಣಿಗೆ ಹಚ್ಚಿಕೊಂಡ. ಕುಂತಿಯ ಜೊತೆ ವಿಸ್ತೃತವಾಗಿ, ಸ್ಪ?ವಾಗಿ ಮಾತನಾಡುವುದೇ ಒಳಿತು ಎಂದುಕೊಂಡ.
“ಕುಂತಿ, ಕರ್ಣನಿಗೆ ತನ್ನ ಸೌಂದರ್ಯದ ಬಗ್ಗೆ, ಅದೂ ನೀನು ದಯಪಾಲಿಸಿದ್ದು, ಬಹಳ ಗರ್ವವಿದೆ. ಒಮ್ಮೆ ನನ್ನೆದುರು ಹೀಗೆ ನುಡಿದಿದ್ದ, ’ನನಗೆ ಮರಣ ಪ್ರಾಪ್ತವಾದರೆ ಯಾರೂ ನನ್ನ ದೇಹವನ್ನು ವಿದ್ರೂಪ ಮಾಡಬಾರದು. ನನ್ನ ಸೌಂದರ್ಯ ಹಾಗೂ ದಾನದ ಕೀರ್ತಿ ಸೂರ್ಯ ಚಂದ್ರರಂತೆ ಚಿರಕಾಲ ಉಳಿಯಬೇಕು.”
ಕೃ? ಕೆಲಕ್ಷಣ ಸುಮ್ಮನೆ ನಿಂತ. ನಂತರ ಕುಂತಿಯ ಕಡೆಗೆ ನೋಡುತ್ತ ನುಡಿದ,
“ಕರ್ಣನಿಗೆ ಅಹಂ ಹಾಗೂ ದುರಭಿಮಾನ ಇರುವುದು ಎರಡರಲ್ಲಿ. ಒಂದು ತನ್ನ ಸೌಂದರ್ಯದ ಬಗ್ಗೆ, ಎರಡನೆಯದು ತಾನು ಮಾಡುವ ದಾನದ ಬಗ್ಗೆ.”
“ನಿನ್ನ ಮನಸ್ಸಿನಲ್ಲಿ ಏನು ಅಡಗಿದೆ, ನೀನು ಏನು ಮಾತನಾಡುತ್ತಿದ್ದಿ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಚಕಿತಳಾಗಿ ಕುಂತಿ ನುಡಿದಳು.
ಈಗ ಕೃ? ಗಂಭೀರನಾದ. “ಕುಂತಿ, ಕರ್ಣನೇನಾದರೂ, ತನಗೆ ಪ್ರಾಪ್ತವಾಗಿದ್ದ ಸೇನಾಪತಿಪದ ಹಾಗೂ ದುರ್ಯೋಧನನ ಮೈತ್ರಿಯ ಘನತೆ ಬಗ್ಗೆ ಹೇಳುತ್ತಹೋದರೆ, ನೀನು ಆತನಿಗೆ ಸ್ಪ?ವಾಗಿ ಹೇಳು, ’ನೀನು ನಮ್ಮ ಪಕ್ಷ ವಹಿಸಿದರೆ ನಿನಗೆ ಪಾಂಚಾಲಿಯೂ ಪ್ರಾಪ್ತಳಾಗುವಳು’ ಎಂದು.” ಕುಂತಿ ದಿಗ್ಮೂಢಳಾದಳು. ಆಕೆಯ ಮುಖ ಬಿಳಿಚಿಕೊಂಡಿತು. ಸಿಡಿಲುಬಡಿದವಳಂತೆ ಆಕಾಶದ ಕಡೆಗೆ ನೋಡತೊಡಗಿದಳು. ಅತ್ಯಂತ ನೋವಿನಿಂದ ಆಕ್ರಂದನ ಮಾಡಿದಳು.
“ಶ್ರೀಕೃ?” ಕೃ? ಅವಾಕ್ಕಾದ. ಕುಂತಿ ಚಿಕ್ಕಂದಿನಿಂದ ಮಾಧವ ಎನ್ನುವ ನಾಮಧೇಯದಿಂದಲೆ ಕರೆಯುತ್ತಿದ್ದಳು. ಅದು ಆತನಿಗೆ ಇ?ವೂ ಆಗುತ್ತಿತ್ತು. ಬೇರೆ ಹೆಸರಿನಿಂದ ಕರೆಯುವುದು ಆತನಿಗೆ ಇ?ವಾಗುತ್ತಿರಲಿಲ್ಲ.
“ಕುಂತಿ ನಿನಗೆ ನಾನು, ಯಾವಾಗಲೂ ಮಾಧವನೇ.”
“ಇಲ್ಲ, ಇನ್ನು ಮುಂದೆ ಇಲ್ಲ. ಧುರಂಧರ, ಮುತ್ಸದ್ದಿ ಎಂದು ಲೋಕವೇ ನಿನ್ನನ್ನು ಗುರುತಿಸುತ್ತದೆ. ನಾನು ಇನ್ನು ಮುಂದೆ ಇದೇ ಹೆಸರಿನಿಂದ ಸಂಬೋಧಿಸುವೆ. ಕೃ? ಏನು ಮಾತನಾಡುತ್ತಿದ್ದಿ? ನನ್ನ ಪ್ರೀತಿಯ ಸೊಸೆಯನ್ನು, ಓರ್ವ ಪತಿವ್ರತೆಯನ್ನು ಸೇಡು ತೀರಿಸುವದಕ್ಕೆ ಉಪಯೋಗಿಸುವೆಯಾ? ನಿನ್ನ ಸಹೋದರಿಯಂತಿರುವ ನಾರಾಯಣಿಯನ್ನು ರಾಜಕಾರಣದ ಸಾಧನವಾಗಿ ಬಳಸುತ್ತಿದ್ದಿಯಾ? ಹಿಂದೆ ಧರ್ಮರಾಜ ಸತ್ಯದ ಹೆಸರಿನಲ್ಲಿ ದ್ರೌಪದಿಯನ್ನು ಬಲಿಕೊಟ್ಟರೆ, ಈಗ ನೀನೂ ಧರ್ಮದ ಹೆಸರಿನಲ್ಲಿ ಅದನ್ನೇ ಮಾಡುತ್ತಿದ್ದಿ.”
“ಕುಂತೀ” ಕೃ? ಅರಚಿದ. ತಕ್ಷಣವೇ ಶಾಂತನಾದ. ತನ್ನ ಸಂತಾಪ, ವಿ?ಣ್ಣತೆ ಪೂರ್ಣವಾಗಿ ಕರಗಿ ನೀರಾಗುವತನಕ ನಿಧಾನಿಸಿದ. ಆದರೆ ಕುಂತಿ ಸಂಕಟದಿಂದ ಅರಚತೊಡಗಿದಳು.
“ನೀನು ಧರ್ಮರಾಜ, ಭೀಮನನ್ನು ವಿಚಾರಿಸಿ ಬಂದಿದ್ದೀಯೇನು? ಅರ್ಜುನನಿಗೆ ಈ ಬಗ್ಗೆ ಕೇಳಿದ್ದೀಯಾ? ನನ್ನ ನೆಚ್ಚಿನ ಸೊಸೆ ದ್ರೌಪದಿಯ ಅನುಮತಿ ತೆಗೆದುಕೊಂಡು ಬಂದಿದ್ದೀಯೇನು? ಶ್ರೀಕೃ?, ತುಂಬಿದ ಸಭೆಯಲ್ಲಿ ದ್ರೌಪದಿಗೆ ವೇಶ್ಯೆಯೆಂದು ನಿಂದನೆ ಮಾಡಿದ ಕರ್ಣನನ್ನು ಪತಿಯೆಂದು ಒಪ್ಪಿಕೊಳ್ಳಲು ನೀನು ಮಾಡಿದ ವ್ಯಾಪಾರ ನನ್ನ ಸೊಸೆಗೆ ಮಾನ್ಯವಾಗುವದೇ? ನೀನು ಮೊದಲು ನನ್ನ ಸೊಸೆಯನ್ನು ಕೇಳಿಕೊಂಡು ಬಾ.”
“ಆದರೆ, ಈ ಪಂಚಪಾಂಡವರು ಮರಳಿ ನನ್ನನ್ನು ನಿನ್ನ ಬಳಿಗೆ ಕಳಿಸುತ್ತಿದ್ದರು. ಕೊನೆಗೂ ದ್ರೌಪದಿ ಪಂಚಪಾಂಡವರ ಪತ್ನಿ ಎಂಬ ನಿರ್ಣಯ ನಿನ್ನದಿತ್ತು.” ಕೃ? ಅತಿಶಯ ಮೃದುವಾಗಿ ಮಾತನಾಡುತ್ತಿದ್ದ. ಆದರೂ ಈ ವಿಲಕ್ಷಣ ಒಳಪೆಟ್ಟು ಕುಂತಿಗೆ ಸಹ್ಯವಾಗಲಿಲ್ಲ. ತನ್ನ ತಲೆಯನ್ನು ಎರಡೂ ಕೈಗಳಿಂದ ಹಿಡಿದು ಕೆಳಗೆ ಕುಳಿತಳು. ನಂತರ ಸಾವರಿಸಿಕೊಂಡು ಕೇಳಿದಳು.
“ಕೃ?, ಅರ್ಜುನನ ಪ್ರಾಣದ ಜೊತೆ ನನ್ನ ಪ್ರಾಣ ಹೋದರೂ ನಡೆಯುತ್ತದೆ. ದ್ರೌಪದಿಯ ವ್ಯಾಪಾರ ಮಾಡಲು ನಾನು ಸಿದ್ಧಳಿಲ್ಲ. ಇಂತಹ ಸಂಕಟದಲ್ಲಿ ನೀನು ನಮ್ಮ ಬೆನ್ನ ಹಿಂದೆ ಯಾಕೆ ಇರುವದಿಲ್ಲ?”
“ಸಮರ್ಪಣೆ, ಇದು ಅಂತಿಮ ಮೌಲ್ಯವಲ್ಲ; ಅದು ಸ್ತ್ರೀಯರಿಗೆ ಎ? ಪ್ರಿಯವಾಗಿದ್ದರೂ.”
“ನಿನ್ನ ದೃಷ್ಟಿಯಲ್ಲಿ ಯಾವ ಮೌಲ್ಯ ಅಂತಿಮವಾಗಿದೆ?”
“ಯಾವುದೇ ಮೌಲ್ಯ ಅಂತಿಮವಾದುದಲ್ಲ. ಯಾವುದೇ ಮೌಲ್ಯಕ್ಕೆ ಸ್ವಯಂಭೂ ಸ್ವತಂತ್ರ ಅರ್ಥವಿರುವುದಿಲ್ಲ. ಮೌಲ್ಯಕ್ಕೆ ಪರಮಾತ್ಮನಿಂದ ಅರ್ಥ ಬರುತ್ತದೆ, ಮಹತ್ತ್ವ ಹೆಚ್ಚುತ್ತದೆ. ಧರ್ಮವೂ ಇದಕ್ಕೆ ಅಪವಾದವಲ್ಲ. ಪ್ರಸಂಗ ಬಂದಾಗ, ಧರ್ಮಕ್ಕೆ ಅರ್ಥಪ್ರಾಪ್ತಿಯಾಗುವದಕ್ಕೆ, ಮಹತ್ತ್ವ ಹೆಚ್ಚಾಗುವುದಕ್ಕೆ, ಧರ್ಮದ ಮತ್ತೊಂದು ಮೌಲ್ಯವನ್ನು ಬಲಿ ಕೊಡಬೇಕಾಗುತ್ತದೆ.”
“ಹಾಗಾದರೆ ಕೊನೆಗೆ ಉಳಿಯುವುದೇನು? ಹೀಗೆ ಶೇ?ವಾಗಿ ಉಳಿಯುವುದಕ್ಕೆ ಏನೆಂದು ಕರೆಯಬೇಕು?”
“ಅದೂ ಧರ್ಮವೇ, ಆದರೆ ವಿಚಿತ್ರ ಗೂಢವಾದ ಅರ್ಥವುಳ್ಳದ್ದು.” ಕುಂತಿಗೆ ತನ್ನೆದುರು ನಿಂತ ಕೃ? ಅದೃಶ್ಯನಾದಂತೆ ಅನಿಸಿತು. ಆದರೆ ಆಕೆಯ ಕಣ್ಣುಗಳು ಮಾತ್ರ ತನ್ನ ಮುಂದೆ ನಿಂತ ಈ ಮಹಾಪುರು? ಯಾರು ಎಂದು ಕೇಳುತ್ತಿದ್ದವು.
“ಆದರೆ ಏತಕ್ಕಾಗಿ ಈ ಎಲ್ಲ ಮಾತುಗಳು? ದ್ರೌಪದಿ ಪಂಚಪಾಂಡವರ ಪತ್ನಿಯಾದ ದುರ್ದೈವಿ ಘಟನೆಯ ಅಂತ್ಯ ನಾನು ನಿನಗೆ ತೋರಿಸುತ್ತೇನೆ, ಅದೂ ತರ್ಕಬದ್ಧವಾಗಿ. ತಿಳಿದುಕೊ, ನೀನು ಕರ್ಣನನ್ನು ಅವನು ಹುಟ್ಟಿದಾರಭ್ಯ ಸ್ವೀಕರಿಸಿದ್ದರೆ, ಪಾಂಡು, ಧೃತರಾ? ಹಾಗೂ ಇತರ ರಾಜಪರಿವಾರದವರು ಮಾನ್ಯ ಮಾಡಿದ್ದರೆ ಏನಾಗುತ್ತಿತ್ತು? ನಾನು ಹೇಳಿದ್ದರಲ್ಲಿ ಏನೂ ವ್ಯತ್ಯಾಸವಾಗುತ್ತಿರಲಿಲ್ಲ.” ಕುಂತಿ ಕಣ್ಣಿನ ರೆಪ್ಪೆ ಬಡಿಯದೆ ಕೃ?ನನ್ನು ನೋಡುತ್ತಿದ್ದಳು.
“ಕುಂತಿ, ನನ್ನಿಂದ ನಿನಗೆ ಯಾವುದೇ ಅಪಚಾರವಾಗಿಲ್ಲ. ಆದರೆ ನೀನು ಮಾತ್ರ ನನ್ನ ಮನವನ್ನು ಬಹಳ ನೋಯಿಸಿರುವೆ. ಏನೇ ಆಗಲಿ ನನ್ನನ್ನು ಮಾಧವನೆಂದು ಮಾತ್ರ ಸಂಬೋಧಿಸು.”
“ಮಾಧವಾ” ಕುಂತಿ ದೀನಳಾಗಿ ನುಡಿದಳು, “ಕರ್ಣನ ಭೆಟ್ಟಿಗಾಗಿ ನನ್ನ ಹೃದಯ ಚಡಪಡಿಸುತ್ತದೆ. ಆದರೆ ಏನು ಮಾಡಲಿ? ಆತನ ಕಡೆಗೆ ಹೋಗುವ ವೇಳೆ ಕಳೆದುಹೋಗಿದೆಯೇನೋ ಎಂದು ನನ್ನ ಮನ ಮಿಡುಕುತ್ತದೆ.”
“ಇಲ್ಲ, ನನ್ನ ಪ್ರಕಾರ, ಅವನನ್ನು ಭೆಟ್ಟಿಯಾಗುವ ಸರಿಯಾದ ವೇಳೆ ಈಗ ಕೂಡಿ ಬಂದಿದೆ.”
“ನೀನು ಈವರೆಗೆ ಯಾಕೆ ಬರಲಿಲ್ಲ, ನಿನ್ನ ಕೋಮಲವಾದ ಕರಗಳಿಂದ ಬೆನ್ನ ಮೇಲೆ ನೇವರಿಸಿ ಸಾಂತ್ವನ ಏಕೆ ಹೇಳಲಿಲ್ಲ? ಕರ್ಣನ ಈ ಪ್ರಶ್ನೆಗೆ ನನ್ನ ಹತ್ತಿರ ಉತ್ತರ ಎಲ್ಲಿದೆ ಮಾಧವಾ?”
“ಈ ಪ್ರಶ್ನೆಯ ಯುಕ್ತಾಯುಕ್ತದ ಹೊಯ್ದಾಟದಲ್ಲಿ ಒಂದೊಂದು ದಿನವನ್ನು ಮುಂದೆ ಹಾಕುತ್ತ ನಿನ್ನ ಮಗನನ್ನು ಕಳೆದುಕೊಂಡೆ. ಯಾವುದೇ ಸುಕಾರ್ಯಕ್ಕೆ ತಡ ಮಾಡಬಾರದು. ಹೋಗು, ಆತನಿಗೆ ಹೇಳು, ’ಸೂತಪುತ್ರನೆಂಬ ತಪ್ತಮುದ್ರೆ ನಿನ್ನ ಹಣೆಯ ಮೇಲೆ ಮೂಡಿದೆ, ಅದನ್ನು ಅಳಿಸಲು ನಾನು ಬಂದಿರುವೆ’…. ಇ? ಮತ್ತೇ ಬೇರೇನೂ ಹೇಳುವ ಆವಶ್ಯಕತೆ ಇಲ್ಲ.”
“ಕರ್ಣನ ಭಯ ನನಗೆ. ಮಾಧವಾ, ಯಾಕೋ ಬಹಳ ಭೀತಿ ಉಂಟಾಗುತ್ತದೆ” ಕುಂತಿ ಕೈಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡಳು.
“ನೀನು, ಹೀಗೆಯೇ ಜನ್ಮದುದ್ದಕ್ಕೂ ಹೆದರುತ್ತಲೇ ನಡೆದಿರುವೆ. ನೀನು ಓರ್ವ ಕ್ಷತ್ರಿಯಳು ಎಂಬುದನ್ನು ಮರೆಯಬೇಡ. ನಿರಂತರ ದೇವರ ಸ್ಮರಣೆ ಇರಲಿ ಎಂದು ಸೃಷ್ಟಿಕರ್ತನಿಗೆ ದುಃಖವನ್ನು ಯಾಚಿಸುವ ಅಸಾಮಾನ್ಯ ಸ್ತ್ರೀ ನೀನು. ಆಯು?ದಲ್ಲಿ ಈವರೆಗೆ ಇಂತಹ ದುರ್ಭರ ಪ್ರಸಂಗವನ್ನು ಎದುರಿಸಿಲ್ಲ? ಕತ್ತಲೆಯ ಕೋಣೆಯಲ್ಲಿ ಅಡಗಿ ಕುಳಿತು, ನೀನು ಮಾಡಿದ ಕರ್ಮಫಲವನ್ನು ಈವರೆಗೆ ಸ್ವೀಕರಿಸಿರಲಿಲ್ಲ. ಈಗ ನೀನು ಹೋಗಿ ಅವನನ್ನು ಸ್ವೀಕರಿಸು. ಎಲ್ಲ ಅವಮಾನಗಳನ್ನು ನುಂಗು. ಕರ್ಣನಿಂದಾಗುವ ಪೆಟ್ಟುಗಳನ್ನು, ಆಘಾತಗಳನ್ನು ಸಹಿಸು. ನಿನ್ನ ಮಾತೃತ್ವವನ್ನು ಪಣಕ್ಕಿಡು. ಆದರೆ ಗಮನದಲ್ಲಿರಲಿ, ನೀನು ತಾಯಿಯಾಗಿ ಅವನನ್ನು ಕಂಡ ತಕ್ಷಣ ನಿನ್ನ ಮನದಲ್ಲಿರುವ ಶಂಕೆ, ಭಯಗಳೆಲ್ಲ ಕರಗಿಹೋಗುತ್ತವೆ. ಈ ಸಂಬಂಧವೇ ಹಾಗೆ ಇರುತ್ತದೆ ಕುಂತಿ.”
ಮಂಚದ ಮೇಲೆ ಒರಗಿಕೊಂಡ ಕುಂತಿಯ ಮುಖದ ಮೇಲೆ ಮುಗುಳ್ನಗೆ ಕಾಣಿಸಿತು. ಕೃ? ಆಕೆಯ ಕಡೆಗೆ ಹೋದ. ಮೇಲೆ ಎಬ್ಬಿಸಿ ಕೂಡಿಸಿದ. ಆಕೆಯ ಹೆಗಲ ಮೇಲೆ ಕೈ ಹಾಕಿ ಸ್ಮಿತನಗೆಯಿಂದ ನುಡಿದ. “ನಾನು ಇಬ್ಬರು ಮಾತೆಯರ ಮಡಿಲಲ್ಲಿ ಬೆಳೆದಿದ್ದೇನೆ. ಮಾತೃತ್ವದ ಬಗ್ಗೆ ಮಾತನಾಡಲು ನನಗೆ ನಿಮಗಿಂತ ಎರಡುಪಟ್ಟು ಹೆಚ್ಚು ಅಧಿಕಾರವಿದೆ.”
ಕುಂತಿ ಮೇಲೆ ನೋಡಿದಳು. ದಣಿದ ಆಕೆಯ ಕಣ್ಣುಗಳಲ್ಲಿ ನಗು ಕಾಣಿಸಿತು.
“ಕರ್ಣನ ಮುಖವನ್ನು ಯಾವುದೇ ಪಾಪಪ್ರಜ್ಞೆಯಿಂದ ನೋಡಬೇಡ. ಪರಿಶುದ್ಧ ಆನಂದದಿಂದ ನೋಡುವ ಅಮೂಲ್ಯ ಕ್ಷಣವಿದು. ಆತನ ಸುಂದರ ಕೇಶರಾಶಿಗಳ ಮೇಲೆ, ಮುಖದ ಮೇಲೆ ಮೃದುವಾಗಿ ನೇವರಿಸಿ ಮಾತೆಯ ಆನಂದವನ್ನು ಸವಿಯುವ ವೇಳೆ ಇದು. ಆಯು?ವೆಲ್ಲ ಈ ಮಗನನ್ನು ಏಕಾಂಗಿಯಾಗಿ ಕಡುಬಿಸಿಲಲ್ಲಿ ನಿಲ್ಲಿಸಿದೆ. ಅಪ್ಪಿಕೊಂಡು ಮುದ್ದಾಡಲಿಲ್ಲ, ಬಾಯಿಯಲ್ಲಿಯ ಜೊಲ್ಲನ್ನು ಒರೆಸಲಿಲ್ಲ, ಆತನ ಮೈಮೇಲೆ ಬಿದ್ದ ಧೂಳನ್ನು ಸ್ವಚ್ಛಗೊಳಿಸಲಿಲ್ಲ, ಸ್ತನಪಾನವಂತೂ ದೂರವೇ ಉಳಿಯಿತು. ಆದರೆ ಈಗ, ಈ ಎಲ್ಲ ವೇದನೆ, ನೋವುಗಳನ್ನು ಮರೆಯುವ ಕ್ಷಣ ಬಂದಿದೆ” ಕುಂತಿಯ ಕಣ್ಣುಗಳಿಂದ ಅಶ್ರುಗಳು ಧಾರಾಕಾರವಾಗಿ ಸುರಿದವು. ಕಣ್ಣುಗಳನ್ನು ಒರೆಸಿಕೊಳ್ಳುತ್ತ, ಅಂಜುತ್ತಲೇ ಕೇಳಿದಳು – “ಧರ್ಮರಾಜ ಅರ್ಜುನರನ್ನು ಹೇಗೆ ಎದುರಿಸಲಿ? ಅವರು ನನ್ನನ್ನು ಹರಿದುತಿಂದುಬಿಟ್ಟಾರು. ’ನೀನು ಈ ಮೊದಲೇ ಈ ವಿ?ಯವನ್ನು ಏಕೆ ಹೇಳಲಿಲ್ಲ?’ ಎಂಬ ಪ್ರಶ್ನೆಗಳ ಸುರಿಮಳೆ ಸುರಿಯುವುದಂತೂ ಖಂಡಿತ. ಆ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರವಿಲ್ಲ. ಅನೇಕ ವ?ಗಳಿಂದ ನಾನು ಪ್ರಶ್ನೆಗಳ ಮಡುವಿನಲ್ಲಿ ಸಿಕ್ಕು ಬಿದ್ದಿದ್ದೇನೆ ಮಾಧವಾ, ಇದು ನಿನಗೆ ಹೇಗೆ ತಿಳಿಯದು?” ಕೃ?ನ ಮುಖದ ಮೇಲೆ ಚಿಂತೆಯ ಗೆರೆ ಕಾಣಿಸಿತು. ಅದರೆ ಕ್ಷಣಾರ್ಧದಲ್ಲಿ ಅದು ಮಾಯವಾಯಿತು.
“ಕುಂತಿ, ಹೀಗೆ ಮಾಡು. ’ಈ ವಿ?ಯವನ್ನು ಯಾರಿಗೂ ಹೇಳಬಾರದೆಂದು’ ಕರ್ಣನಿಂದ ವಚನ ತೆಗೆದುಕೊ. ಆತ ನಿಶ್ಚಿತವಾಗಿಯೂ ವಚನ ಕೊಡುತ್ತಾನೆ. ಏಕೆಂದರೆ ಆತ ಉದಾರನಿದ್ದಾನೆ. ಈ ಉದಾರಮನಸ್ಸಿನವರ ಹೃದಯದ ಮೂಲೆಯಲ್ಲಿ ಭೋಳೆತನ ಅಡಗಿ ಕುಳಿತಿರುತ್ತದೆ. ಅಲ್ಲದೆ ಈ ರಹಸ್ಯ ಅವನ ಮರಣದೊಂದಿಗೆ ಭೂಮಿಯಲ್ಲಿ ಹುಗಿದು ಹೋಗುತ್ತದೆ” ಕೃ? ಕುಂತಿಯ ಕಣ್ಣುಗಳ ಕಡೆಗೆ ದಿಟ್ಟಿಸಿ ನೋಡಿದ. ಮುಖದಲ್ಲಿ ಪ್ರಸನ್ನತೆ ಕಾಣಿಸಿತು.
“ಕುಂತೀ, ನಾವು ಏಕಪಕ್ಷೀಯವಾಗಿ ವಿಚಾರ ಮಾಡುತ್ತಿದ್ದೇವೆಯೇನೋ? ನಾಳಿನ ಯುದ್ಧದಲ್ಲಿ ಅರ್ಜುನನಿಗೆ ಏನಾದರೂ. …..”
“ಮಾಧವಾ” ಕುಂತಿ ಕಿರುಚಿದಳು. “ನಿನ್ನ ನಾಲಿಗೆ ಹಾಗೂ ಶಂಕೆಯಲ್ಲಿ ಘನಘೋರ ವಿ? ತುಂಬಿದೆ.”
ಆಕೆಯನ್ನೆ ದಿಟ್ಟಿಸಿ ನೋಡುತ್ತ ಕೃ? ನುಡಿದ: “ನನ್ನ ನಾಲಿಗೆ ವಿ?ದಿಂದ ತುಂಬಿರಬಹುದು. ನನ್ನ ಶಂಕೆಯಲ್ಲಿ ಅಮಂಗಳ ಕಾಣಿಸಿರಬಹುದು. ಆದರೆ ಹಾಗೆ ಆಗುವ ಸಾಧ್ಯತೆಯೂ ಇದೆಯಲ್ಲ. ಇದನ್ನು ಮರೆಯಬೇಡ.”
“ಆದರೆ ಪಾಂಡವರ ಪಕ್ಷದಲ್ಲಿ ಧರ್ಮವಿದೆ, ಸತ್ಯವಿದೆ, ನ್ಯಾಯವಿದೆ. ’ಧರ್ಮೋ ರಕ್ಷತಿ ರಕ್ಷಿತಃ’ ಈ ಅಮರವಾಣಿಯನ್ನು ಶ್ರೇ? ತತ್ತ್ವಜ್ಞಾನಿಗಳೂ, ಪ್ರಾಜ್ಞರೂ ಹಾಡಿಹೊಗಳಿದ್ದಾರೆ.”
ಮೊದಲಬಾರಿಗೆ ಕೃ? ಗಹಗಹಿಸಿ ನಕ್ಕ. “ಸ್ತ್ರೀಯರು, ಋಷಿಗಳು ಒಂದೇ ಮಾಲೆಯ ಮಣಿಗಳು. ನಿಮ್ಮಂಥ ಸ್ತ್ರೀಯರಿಗೆ, ಸತ್ಕಾರ್ಯ, ಪುಣ್ಯಕಾರ್ಯಗಳಿಗೆ ಕೊನೆಗೂ ಜಯ ಲಭಿಸುತ್ತದೆ ಎಂದು ಅನಿಸುತ್ತದೆ. ಆಶ್ರಮದಲ್ಲಿ ದರ್ಭೆ, ಜಿಂಕೆಗಳ ನಡುವೆ ವೇಳೆ ಕಳೆಯುವ ಬ್ರಾಹ್ಮಣರು, ’ಧರ್ಮವನ್ನು ಯಾರು ರಕ್ಷಿಸುತ್ತಾರೋ, ಅವರನ್ನು ಧರ್ಮ ರಕ್ಷಿಸುತ್ತದೆ’ ಎಂದು ಭರವಸೆಯನ್ನು ಕೊಡುತ್ತ ಹೋಗುತ್ತಾರೆ. ಅವರ ಮಾತಿನಲ್ಲಿ ಶ್ರದ್ಧೆ, ಮುಗ್ಧತೆ ಇರುವುದೇನೋ ನಿಜ. ಒಂದು ಸುಂದರಪಕ್ಷಿಯನ್ನು ಅತಿಯಾಗಿ ಮುದ್ದುಮಾಡಿದರೆ ಅದು ಮರಣಹೊಂದುವದು ನಿಶ್ಚಿತವಲ್ಲವೇ? ಅದರಂತೆ ಸತ್ಯ, ನ್ಯಾಯ, ಧರ್ಮ, ಕರುಣೆ, ದಯೆಯ ಬಗ್ಗೆ ನೀವು ಸ್ತ್ರೀಯರು, ಬ್ರಾಹ್ಮಣರು ಭಾವನಾವಶರಾಗಿ ಮಾತನಾಡುತ್ತ ಹೋಗುತ್ತೀರಿ. ನೀವು ನನಗೆ ಧರ್ಮಜ್ಞ ಎಂದು ಹಾಡಿ ಹೊಗಳುತ್ತೀರಿ. ಒಂದು ವೇಳೆ ನಾನು ಭೀಮನಿಂದ ಜರಾಸಂಧನ ವಧೆಯನ್ನು ಅಧರ್ಮದಿಂದ ಮಾಡದಿದ್ದರೆ, ಜರಾಸಂಧ ಮಹಾಕಂಟಕನಾಗಿ ಇನ್ನೂ ಉಳಿಯುತ್ತಿದ್ದ, ಅಲ್ಲವೇ?”
“ಇಲ್ಲ, ಇಲ್ಲ ಮಾಧವಾ, ಕರ್ಣನ ಎದುರಿಗೆ ಅರ್ಜುನ ಅಜೇಯ ಹಾಗೂ ಅವಧ್ಯನಿದ್ದಾನೆ. ಇದು ನನ್ನ ಧೃಢವಾದ ವಿಶ್ವಾಸ. ಈ ವಿಶ್ವಾಸದಿಂದ ಲವಲೇಶವೂ ನಾನು ಹಿಂದೆ ಸರಿಯಲಾರೆ. ನೀನು ಕೂಡ ನನ್ನ ಅಭಿಪ್ರಾಯದವನು ಎಂದು ತಿಳಿದುಕೊಂಡಿದ್ದೇನೆ.”
“ಹೌದು ಕುಂತಿ, ನೀನು ಧೃತಿಗೆಡಬೇಡ. ಯಾಕೆಂದರೆ, ಶಕ್ಯತೆಯೊಳಗೆ ಅರ್ಧಸತ್ಯವೂ ಅಡಗಿಕೊಂಡಿರುತ್ತದೆ. ಅರ್ಜುನನಂತಹ ಧನುರ್ಧಾರಿ ಈ ಭರತಭೂಮಿಯಲ್ಲಿ ಜನ್ಮ ತಾಳಿಲ್ಲ, ಭವಿ?ದಲ್ಲಿಯೂ ಹುಟ್ಟಲಾರ. ನಾಳೆ ನಾನು ನನ್ನ ಸಾರಥ್ಯದ ಕೌಶಲವನ್ನು ಜಗತ್ತಿಗೆ ತೋರಿಸುತ್ತೇನೆ. ಅರ್ಜುನನಿಗಾಗಿ ನನ್ನ ಪ್ರಾಣವನ್ನೆ ಪಣಕ್ಕೆ ಇಡುತ್ತೇನೆ.” ಮಾತನಾಡುತ್ತ ಕೃ? ಯಾಕೋ ಖಿನ್ನನಾದ. “ಇದೆಲ್ಲ ನಿಜ ಕುಂತಿ. ಅಧರ್ಮದಲ್ಲಿಯೂ ವಿಲಕ್ಷಣ ಸಾಮರ್ಥ್ಯ ಇರುವುದು ಮಾನವನ ಜೀವನದಲ್ಲಿಯ
ದುರ್ದೈವೀ ಸತ್ಯವಾಗಿದೆ. ತೊಡಕು, ಗೋಜಲು ತುಂಬಿದ ಈ ವಿರಾಟ್ ವಿಶ್ವರಚನೆಯಲ್ಲಿ ಇದು ದುರ್ದೈವದ ಸಂಗತಿಯಾಗಿದೆ. ಕರ್ಣನ ಹತ್ತಿರ ಅಮಾನು? ಸಾಮರ್ಥ್ಯವೇನೋ ಇದೆ, ಆದರೆ ಅದು ಅಧರ್ಮಯುಕ್ತವಾಗಿದೆ. ಅದರಲ್ಲಿ ಸೇಡು ಕೂಡಿದೆ. ಕೇವಲ ಸೇಡಿನ ಅಂಧಕಾರದಲ್ಲಿ ಇರುವವನ ಸಾಮರ್ಥ್ಯ, ಧರ್ಮದ ಬೆಳಕಿನಲ್ಲಿ ಇದ್ದವನ ಸಾಮರ್ಥ್ಯದ? ಪ್ರಖರವೂ, ಬಲಶಾಲಿಯೂ ಆಗಿರುತ್ತದೆ. ಅಲ್ಲದೆ ಅದು ಇಮ್ಮಡಿಯಾಗಿರುತ್ತದೆ.”
“ಮತ್ತೆ ನನ್ನ ಅರ್ಜುನ…?”
“ಅವನೋ ಜಗದೇಕವೀರ, ಶ್ರೇ? ಬಿಲ್ಲುಗಾರ. ಆದರೆ ಆತನೋ ಜೀವನದಲ್ಲಿ ಎಂದೂ ನಿಶ್ಚಿತವಾದ ಲಕ್ಷ್ಯವನ್ನು ಸಾಧಿಸಲಿಲ್ಲ.” ಕುಂತಿ ಶ್ವಾಸವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದಳು.
“ಕುಂತಿ, ಇನ್ನೊಂದು ವಿ?ಯದಲ್ಲಿ ಕರ್ಣ ಮೇಲುಗೈ ಇದ್ದಾನೆ. ಅವನು ಈವರೆಗೆ ದೈವದ ವಿರುದ್ಧ ಜಿದ್ದಿನಿಂದ ಹೋರಾಡಿದ್ದಾನೆ. ದೈವವೂ, ನಿಯತ್ತೂ ಎರಡನೇ ಸತ್ಯವಾಗಿವೆ. ಈ ಭಯಂಕರ ಸತ್ಯದ ಜೊತೆ ಹೋರಾಡುವವರು, ನಿಶ್ಚಿತವಾಗಿಯೂ ತಮ್ಮ ಸರಿಸಮಾನರಿಗಿಂತ ಶೂರರೂ, ಧೀರರೂ ಇರುತ್ತಾರೆ. ಎದುರುಬದುರು ನಡೆದ ಯುದ್ಧದಲ್ಲಿ ಬಾಣಗಳ ಮಳೆ ಸುರಿಸಿ ಶತ್ರುಗಳ ತಲೆಯನ್ನು ಹಣ್ಣುಗಳಂತೆ ಬೀಳಿಸುವುದರಲ್ಲಿ ಪರಾಕ್ರಮವೇನೋ ಇದೆ. ಆದರೆ ಶರೀರದಲ್ಲಿ ಎಲ್ಲಿಂದಲೋ ಹೊಕ್ಕ ಒಂದೊಂದು ಬಾಣವನ್ನು ಕಿತ್ತು ಹೊರಗೆ ತೆಗೆದು ರಕ್ತದಿಂದ ತುಂಬಿದ ಮಾರ್ಗದಲ್ಲಿ ಧೈರ್ಯದಿಂದ ಮುನ್ನುಗ್ಗುವವನ ಪರಾಕ್ರಮ ಇನ್ನೂ ಹೆಚ್ಚಿನದು.”
ಕುಂತಿ ನೋಡುತ್ತಲೆ ಇದ್ದಳು. ಈ ಮಾಧವ ಹೀಗೆಯೇ ಮಾತನಾಡುತ್ತಲೇ ಇರಲಿ ಎಂದು ಆಕೆಗೆ ಅನಿಸುತ್ತಿತ್ತು. ಯೋಗೀಶ್ವರನ ಧ್ವನಿಯಲ್ಲಿ ಮೋಡಗಳ ಗಾಂಭೀರ್ಯವಿತ್ತು. ಇ? ಹೊತ್ತು ಮಾತನಾಡಿದರೂ ಅವನ ಮಾತಿನಲ್ಲಿಯ ಸ್ವರಗಳಲ್ಲಿ ಏರುಪೇರು ಆಗಿರಲಿಲ್ಲ. ಶಬ್ದಗಳೂ ಕೂಡ ಮಂದಿರದ ಜ್ಯೋತಿಯ ಹಾಗೆ ಶಾಂತ ಹಾಗೂ ಸತೇಜವಾಗಿದ್ದವು. ಆತನ ವಿಚಾರದ ಹಿಂದೆ ವಿಶಿ?ವಾದ ತರ್ಕದ ನೆಲೆಗಟ್ಟಿತ್ತು.
“ಕುಂತಿ, ಇನ್ನು ಅಪ್ಪಣೆಯೆ, ನಾನು ಹೋಗುತ್ತೇನೆ. ಈಗಾಗಲೇ ನನಗೆ ವಿಳಂಬವಾಗಿದೆ. ಮಧ್ಯರಾತ್ರಿ ದಾಟುವ ವೇಳೆ ಆಗಿದೆ. ಕರ್ಣನ ಕಡೆಗೆ ಹೋಗಲು ನೀನು ಸಿದ್ಧಳಿಲ್ಲ. ಏನೇನೋ ಕಾರಣಗಳನ್ನು ಹೇಳಿ ಜಾರಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಿಯೆಂದು ಕಾಣುತ್ತದೆ. ನಾನೇ ಅಲ್ಲಿಗೆ ಹೋಗಬೇಕಾಗಿದೆ. ನನಗೆ ಅನುಜ್ಞೆ ನೀಡು” ಕೃ? ಬಾಗಿಲಿನ ಕಡೆಗೆ ಹೊರಳಿದ.
“ನಿಲ್ಲು ಮಾಧವಾ” ಕುಂತಿ ಕೂಗಿದಳು. ಶಿಬಿರದ ಒಳಗೆ ಹೋಗಿ ಒಂದು ಶುಭ್ರವಾದ ಅವಗುಂಠನ ತೆಗೆದುಕೊಂಡು ಬಂದಳು. “ಕರ್ಣ ನನ್ನ ಮಗ. ನನ್ನ ರಕ್ತ- ಮಾಂಸದಿಂದ ಹುಟ್ಟಿದವನು. ಈ ಸತ್ಯ ಹೇಳಲು ನನಗೆ ಮಾತ್ರ ಅಧಿಕಾರವಿದೆ. ಬೇರೆಯವರಿಗೆ ಇಲ್ಲ. ಶ್ರೇ?ನಾದ ಶ್ರೀಕೃ?ನಿಗೂ ಇಲ್ಲ.” ಕೃ? ಎಂದಿನಂತೆ ಮುಗುಳ್ನಗೆ ಬೀರಿದ. ಶೀಘ್ರ ಕೋಪಿಯೂ, ನಿ?ರ ಮಾತಿನವಳೂ ಆದ ಅತ್ತೆಯ ಕಡೆಗೆ ಪ್ರೀತಿಯಿಂದ ನೋಡಿದ. ಕೃ? ಹಾಗೂ ಕುಂತಿ ಹೊರಗೆ ಹೊರಟರು. ಶಿಬಿರದಿಂದ ಹೊರಬಿದ್ದ ತಕ್ಷಣ ಕೃ? ನುಡಿದ:
“ಕುಂತಿ, ನೀನು ಈ ದೂತನ ಜೊತೆ ನಿನ್ನ ಮಾರ್ಗದಲ್ಲಿ ಹೋಗು. ನಾವಿಬ್ಬರು ಒಂದೇ ದಿಶೆಯ ಕಡೆಗೆ ಹೋಗುವುದು ಸರಿ ಅಲ್ಲ.” ಕುಂತಿ ತನ್ನ ಅವಗುಂಠನ ಸರಿ ಮಾಡಿಕೊಂಡಳು. ಕೃ? ತನ್ನ ಮುಖವನ್ನು ಉತ್ತರೀಯದಿಂದ ಮುಚ್ಚಿಕೊಂಡ. ಕುಂತಿ ಓರ್ವಳೇ ಕರ್ಣನ ಕಡೆಗೆ ಹೊರಟಳು.
*************
ಕುಂತಿ ದಕ್ಷಿಣದಿಕ್ಕಿನ ಕಡೆಗೆ ನಡೆದಳು. “ನಿನ್ನ ಮಾರ್ಗದಲ್ಲಿ ನೀನು ನಡೆ.” ಎಂಬ ಕೃ?ನ ಆದೇಶ, ಮನದಲ್ಲಿ ಆವರ್ತಿಸುತ್ತಿತ್ತು. ತಲೆಬಗ್ಗಿಸಿ ನಡೆಯತೊಡಗಿದಳು. ದೀವಟಿಗ ಹಿಡಿದಿದ್ದ ಪಂಜಿನ ಪ್ರಕಾಶ ಕಾಲಿನ ಸುತ್ತಮುತ್ತ ಕ್ಷೀಣವಾಗಿ ಬೀಳುತ್ತಲಿತ್ತು. ಅಲ್ಲಲ್ಲಿ ಉರಿಯುತ್ತಿರುವ ದೊಂಬಿಯ ಮಂದ ಬೆಳಕು, ಭಯಾನಕ ವಾತಾವರಣ, ಕ್ಷೀಣವಾಗಿ ಉರಿಯುತ್ತಿರುವ ಪ್ರೇತಗಳು, ಅಲ್ಲಲ್ಲಿ ಬಿಕ್ಕುವ ಧ್ವನಿ, ವಿಕೃತವಾಗಿ ನಗುವ ಸಪ್ಪಳ, ಮೈ ಕೊರೆವ ತಂಪುಗಾಳಿಯೊಡನೆ ಮೇಳೈಸಿ, ರಾಚುತ್ತಿರುವ ರಕ್ತ-ಮಾಂಸದ ಭೀಕರ ದುರ್ಗಂಧ, ಭಯಾನಕವಾಗಿ ರೋಧಿಸುತ್ತಿರುವ ನಾಯಿಗಳು ಹಾಗೂ ಕೋಪದಿಂದ ಗುರುಗುಟ್ಟುತ್ತಿರುವ ನರಿಗಳು….. ಇವೆಲ್ಲ ಏನು? ಈ ಅಸ್ತಿತ್ವದ ಕೂಡ ತನ್ನ ಸಂಬಂಧವೇನು? ಈ ಕ್ಷಣ ಅಂದರೇನು? ಮುಂದಿನ ಕ್ಷಣವೆಂದರೇನು? ಕರ್ಣ… ಕರ್ಣ… ಇಲ್ಲಿಯವರೆಗೆ ತನ್ನ ಮನದ ಮೇಲಿದ್ದ ಈ ಭಾರವನ್ನು ಕೃ? ಎತ್ತಿ ಬದಿಗೆ ಇಟ್ಟಿದ್ದಾನೆ. ಅನೇಕ ಭಾವನೆಗಳು ಮನದಲ್ಲಿ ಪರಸ್ಪರ ತಾಕಲಾಡುತ್ತಿವೆಯೇನೋ ನಿಜ, ಆದರೆ ಮಾತುಗಳು ಮೂಕವಾಗಿವೆ. ಮಾತನಾಡುವುದಾದರೂ ಏನು? ಅದನ್ನು ಪ್ರಾರಂಭಮಾಡುವುದು ಹೇಗೆ? ನಾಲ್ಕೈದು ಶಬ್ದಗಳಲ್ಲಿ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವುದು ಹೇಗೆ? ಅದೂ ಕೆಲವೇ ನಿಮಿ?ಗಳಲ್ಲಿ. ನಾಲ್ಕೈದು ಹೆಜ್ಜೆ ನಡೆದ ಮೇಲೆ ಈ ಶಬ್ದಗಳು ಒಮ್ಮೆಲೆ ಆಕೆಯ ಮನಃಪಟಲದ ಮೇಲೆ ಮೂಡಿ ಬಂದವು. ’ಕರ್ಣಾ, ನಾನು ನಿನಗೆ ಜನ್ಮವಿತ್ತವಳು. ನಿನ್ನನ್ನು ಹಡೆದ ತಾಯಿ’ ಅಯ್ಯೋ, ಈ ಕಟುಸತ್ಯವನ್ನು ಹೇಳಲು ಎ?ಂದು ಸಿದ್ಧತೆಗಳನ್ನು ಮಾಡಬೇಕಾಗುತ್ತದೆ.
ದೀವಟಿಗ ನಿಂತಿದ್ದ. ಕುಂತಿ ಆತನಿಗೆ ದೂರ ನಿಲ್ಲಲು ಹೇಳಿದಳು. ಮೇಲ್ವಸ್ತ್ರದಿಂದ ಕಣ್ಣುಗಳನ್ನು ಒರೆಸಿಕೊಂಡಳು. ಅವಗುಂಠನ ಸರಿಮಾಡುತ್ತ ತನ್ನ ಪುತ್ರನ ಶಿಬಿರದೊಳಗೆ, ಮೆಲ್ಲಗೆ ಬೆಕ್ಕಿನಂತೆ ಪ್ರವೇಶಿಸಿದಳು. ಆದರೆ ಒಳಗೆ ಕಂಡ ಭಯಾನಕ ದೃಶ್ಯವನ್ನು ನೋಡಿ ನಿಂತಲ್ಲಿಯೇ ಥರಥರ ನಡುಗಿದಳು. ಆಕೆಯ ಶರೀರ ಬೆವರಿನಿಂದ ತೋಯ್ದುಹೋಯಿತು.
ಮೂರೂ ಮೂಲೆಗಳಲ್ಲಿ ನಾಲ್ಕು ಪ್ರಚಂಡವಾದ ಕಾಳಿಂಗ ಭುಜಂಗಗಳು ಹೆಡೆ ತೆಗೆದು, ಹಿಂದೆ ಮುಂದೆ ತೊನೆದಾಡುತ್ತಿದ್ದವು. ಎರಡು ಸರ್ಪಗಳು, ಚಿನ್ನದಂತೆ ಹೊಂಬಣ್ಣ ಹೊಂದಿದ್ದರೆ, ಉಳಿದೆರಡು ಗಾಢವಾದ ಕಪ್ಪುವರ್ಣದವು ಆಗಿದ್ದವು. ಕರ್ಣನ ಕೈಯಲ್ಲಿ ಉದ್ದವಾದ ಬಾಣವಿತ್ತು. ಆತ ಆ ಬಾಣದಿಂದ ಒಂದೊಂದಾಗಿ ಅವುಗಳನ್ನು ರೇಗಿಸುತ್ತಿದ್ದ, ಪ್ರಚೋದಿಸುತ್ತಿದ್ದ. ಕೋಪಗೊಂಡ ನಾಗಗಳು ತನ್ನ ಮೊನಚಾದ ಹಲ್ಲುಗಳಿಂದ ಬಾಣದತುದಿಯನ್ನು ಕಚ್ಚಿ ವಿ?ವನ್ನು ಕಕ್ಕುತ್ತಿದ್ದವು. ಎರಡೆರಡು ನಾಲಿಗೆಯುಳ್ಳ ಆ ಸರ್ಪಗಳ ಫೂತ್ಕರಿಸುವಿಕೆ, ವಿಚಿತ್ರ ಭಯಾನಕವಾದ ಸಪ್ಪಳ, ಆಳೆತ್ತರಕ್ಕೆ ಸೆಟೆದು ನಿಲ್ಲುವ ಅವುಗಳ ಭಂಗಿ, ಸಿಂಬೆಯಂತೆ ಸುತ್ತಿಕೊಂಡು, ಹೆಡೆಯನ್ನು ಅರ್ಧವರ್ತುಳಾಕೃತಿಯಾಗಿ ಹೊಯ್ದಾಡುವ ಪರಿ ಹಾಗೂ ಅವುಗಳ ಕೆಂಪು ನೇತ್ರಗಳಲ್ಲಿ ಹೊರಬರುತ್ತಿರುವ ಕಿಡಿಗಳು….. ಎಲ್ಲವೂ ಭಯಾನಕ, ಭೀಭತ್ಸ.
ಕೆಲವು ಕ್ಷಣಗಳ ನಂತರ ಈ ಭಯಂಕರ ಕ್ರೀಡೆ ನಿಂತಿತು. ಕರ್ಣನ ಸಂಪೂರ್ಣ ಶರೀರ ಬೆವರಿನಿಂದ ತೊಯ್ದಿತ್ತು. ಮೂಲೆಯಲ್ಲಿ ಸಿಗಿಸಿದ್ದ ಮಶಾಲಿನ ನಸುಗೆಂಪು ಬೆಳಕಿನಲ್ಲಿ ಕರ್ಣನ ಸಂಪೂರ್ಣ ಶರೀರ ರಕ್ತದ ಹೊದ್ದಿಕೆ ಹಾಕಿದಂತೆ ಕಾಣಿಸಿತು. ಅತಿರಥಿ, ಆ ಶರವನ್ನು ಕೈಯಲ್ಲಿ ಹಿಡಿದು, ಎಡ ಮೂಲೆಯಲ್ಲಿದ್ದ ತನ್ನ ಗುರು ಪರಶುರಾಮನ ಉಗ್ರಮೂರ್ತಿಯೆದುರು ನಿಂತ. ಕೈ ಮುಗಿದು ಪ್ರಾರ್ಥನೆ ಮಾಡಿದ.
“ಗುರುವರ್ಯನೇ, ನಿಮಗೆ ಇಪ್ಪತ್ತೊಂದು ವೇಳೆ ಈ ಪೃಥ್ವಿಯನ್ನು ಕ್ಷತ್ರಿಯರಹಿತವಾಗಿ ಮಾಡಲು ಪ್ರಚೋದಿಸಿದ ಆ ಸೇಡಿನ ಕಿಡಿ, ನನ್ನ ಹೃದಯದಲ್ಲಿಯೂ ಸಹ ಕೊನೆಯತನಕ ಧಗಧಗವೆಂದು ಜ್ವಲಿಸುತ್ತಿರಲಿ. ಪ್ರಚಂಡ ಸಮುದ್ರವನ್ನು ತಡೆಹಿಡಿಯುವ, ದಡದ ಸಾಮರ್ಥ್ಯವನ್ನು ನೀನು ನನಗೆ ದಯಪಾಲಿಸು. ಈ ನಾಗದೇವತೆಗಳ ಸೇಡಿನ ವಿ? ನನ್ನ ಬಾಣದಲ್ಲಿ ಸಂಪೂರ್ಣವಾಗಿ ಇಳಿದು ಕರಗಿ ಹೋಗಲಿ. ನಾಳೆ ಈ ಜಾತಿವಂತ ಸೂತಪುತ್ರನ ಅಂಬುವಿಗೆ, ಸವ್ಯಸಾಚಿ ಅರ್ಜುನನು ಬಲಿಯಾಗುವ ದುರ್ಲಭ ಭಾಗ್ಯ ನನಗೆ ಪ್ರಾಪ್ತವಾಗಲಿ.” ಕರ್ಣ ಆ ಬಾಣವನ್ನು ತನ್ನ ಬತ್ತಳಿಕೆಯಲ್ಲಿಟ್ಟ. ಆಯಾಸಗೊಂಡ ನಾಗಗಳನ್ನು ಸಿಂಬೆಯಾಗಿ ಮಾಡಿ ಬಿದುರಿನ ಬುಟ್ಟಿಯಲ್ಲಿ ಇಟ್ಟ. ಮುಖ ಪ್ರಕ್ಷಾಲನ ಮಾಡಿಕೊಂಡು ಹೊರಗೆ ಬಂದ. ಕುಂತಿಯನ್ನು ನೋಡಿ ಸ್ತಂಭೀಭೂತನಾದ.
“ರಾಜಮಾತೆ ಕುಂತಿ! ತಾವು ಇಲ್ಲಿ?” ಕುಂತಿಗೆ ಕಂಠ ತುಂಬಿತ್ತು. ಧ್ವನಿಯೇ ಹೊರಡಲಿಲ್ಲ. ಮನದಲ್ಲಿದ್ದ ಮಾತುಗಳು ಒಳಗಡೆಯೇ ಮುರುಟಿಕೊಂಡವು.
“ತಾವು ಬಂದ ಕಾರಣವನ್ನು ಕೇಳಬಹುದೆ?”
“ಇಲ್ಲಿಗೆ ಬರಲು ಅಶುಭ, ಅಮಂಗಲ ವೇಳೆಯನ್ನು ಆರಿಸಿದಿರಿ ಏಕೆ?”
“ಕೃ?ನ ಕೂಡ ಪರ್ಯಾಲೋಚನೆ ಮಾಡಿ ಬಂದಿರುವಿರೋ, ಇಲ್ಲವೇ ಒಂಟಿಯಾಗಿ ಬಂದಿದ್ದೀರೋ?”
ಕೃ?ನ ಹೆಸರು ಕೇಳಿ ಬೆಚ್ಚಿಬಿದ್ದ ಕುಂತಿ ಒಮ್ಮೆಲೆ ನುಡಿದಳು, “ಇಲ್ಲ ಕರ್ಣಾ, ನಾನೊಬ್ಬಳೇ ಬಂದಿರುವೆ.”
“ಈಗ ತಾನೆ ನಾನು ಮಾಡುತ್ತಿರುವುದು ನಿಮ್ಮ ದೃಷ್ಟಿಗೆ ಬಿದ್ದಿರಬಹುದು. ಹಾಗೆಯೇ ನಾನು ಮಾಡಿದ ಪ್ರಾರ್ಥನೆ ಆಲಿಸಿರಬಹುದು.”
“ಆಲಿಸಿದೆ.”
“ಅವನ್ನೆಲ್ಲ ಕೇಳಿ, ನೋಡಿದ ಮೇಲೆಯೂ, ಇಲ್ಲಿಯೇ ನಿಲ್ಲಬೇಕೆಂದು ಅನಿಸುತ್ತಿದೆಯೇ?”
“ನಾನು ಬಂದಿರುವುದು ಬಹುಮುಖ್ಯ ಕಾರ್ಯಕ್ಕಾಗಿ.” “ನಿಮ್ಮ ಬಯಕೆ ಏನು ಹೇಳಿ?” ಕರ್ಣ ಪ್ರಸನ್ನಚಿತ್ತದಿಂದ ನುಡಿದ.
“ನಾನು ಯಾಚಕಳಾಗಿ ಇಲ್ಲಿಗೆ ಬಂದಿಲ್ಲ ಕರ್ಣ” ತನ್ನ ಅಪೇಕ್ಷೆ ಭಂಗ ಆದುದಕ್ಕೆ ಕರ್ಣ ಬೆಚ್ಚಿಬಿದ್ದ. ಮುಂದೆ ಬಂದ, “ನಿಲ್ಲಿ, ನೀವು ಬಂದ ಉದ್ದೇಶ ಹೇಳುವ ಮೊದಲು ನನ್ನನ್ನು ಕ್ಷಮೆ ಮಾಡಿ.”
“ಯಾಕೆ?”
“ನಿಮ್ಮನ್ನು ಈ ಸ್ಥಳದಲ್ಲಿ ನೋಡಿ ಮೂಕವಿಸ್ಮಿತನಾಗಿ ಲೋಕಾರೂಢ ಪದ್ಧತಿಗಳನ್ನು ಮರೆತು ಬಿಟ್ಟೆ.” ಕರ್ಣ ಮುಂದೆ ಬಂದು ಕುಂತಿಗೆ ನಮಸ್ಕಾರ ಮಾಡಲು ಬಾಗಿದ. ತನ್ನ ಹಸ್ತಗಳನ್ನು ಆಕೆಯ ಪಾದಗಳಿಗೆ ಸ್ಪರ್ಶಿಸಿದ. ಆಗ ಪೂರ್ವದಿಶೆಯಲ್ಲಿ ಉದ್ಭವಿಸುವ ತೇಜೋಮಯ ಕಿರಣದಂತಿರುವ, ಆಕೃತಿಯೊಂದು ಸರ್ಪಾಕೃತಿ ರೂಪ ಧರಿಸಿ, ಕುಂತಿಯ ಪಾದಗಳಿಂದ ಹೊರಬಿದ್ದು ಕರ್ಣನ ಸುತ್ತ ಪ್ರದಕ್ಷಿಣೆ ಹಾಕಿ ಗವಾಕ್ಷದಿಂದ ಸರಸರನೆ ಹೊರಟುಹೋಯಿತು. ಈ ತೇಜೋಮಯ ಆಕೃತಿ ಕ್ಷಣಾರ್ಧದಲ್ಲಿ ತಾಯಿ ಮಗನನ್ನು ಕಾಲದ ಅತೀತದ ಕಡೆಗೆ ಎಳೆದುಕೊಂಡು ಹೋಯಿತು. ಆನಂತರ ಕೆಲಕ್ಷಣದಲ್ಲಿ ಪರಿಸ್ಥಿತಿ ಮೊದಲಿನ ಸ್ಥಿತಿಗೆ ಮರಳಿತು. ಕರ್ಣ ಹಸ್ತಗಳಿಂದ ತನ್ನ ಪಾದಗಳನ್ನು ಮೃದುವಾಗಿ ಹಿಡಿದುಕೊಂಡಿದ್ದು ಕುಂತಿಯ ಲಕ್ಷ್ಯಕ್ಕೆ ಬಂದಿತು. ಆತನ ಬೆಚ್ಚಗಿನ ನಿಟ್ಟಿಸಿರು ಇನ್ನೂ ಆಕೆಯ ಪಾದಗಳಿಗೆ ತೀವ್ರವಾಗಿ ಅಪ್ಪಳಿಸುತ್ತಿತ್ತು.
“ಏಳು ವಸು?ಣಾ” ಉಕ್ಕುತ್ತಿದ್ದ ಪ್ರೀತಿಯಿಂದ ಕುಂತಿ ನುಡಿದಳು. ಕರ್ಣ ಮೇಲೆ ನೋಡಿದ. ಕುಂತಿ ಮಗನನ್ನೇ ಹೆಮ್ಮೆಯಿಂದ ನೋಡುತ್ತಿದ್ದಳು. ಆ ಅಗಲವಾದ ಬಾಯಿ, ಕೆಂಪು ಮೈ ಬಣ್ಣ, ಹಾವಿನಂತೆ ಹೊಯ್ದಾಡುವ ಅವನ ಹೊಂಬಣ್ಣದ ಕೂದಲುಗಳು, ದುಂಡಗಿನ ಮೂಗು, ರತ್ನದಲ್ಲಿ ಎರಕ ಹೊಯ್ದಂತೆ ನೇತ್ರಗಳು…..ಕರ್ಣ ಮೇಲಿಂದ ಮೇಲೆ ಕುಂತಿಯ ಪಾದಗಳನ್ನೇ ನೋಡುತ್ತಿದ್ದ.
“ಏಳು ಕರ್ಣಾ, ಎ? ವೇಳೆ ನಮಸ್ಕಾರ ಮಾಡುತ್ತಿರುವೆ?” ರಾಧೇಯ ಮೇಲೆ ಎದ್ದ. ಕುಂತಿಯ ಹಸ್ತಗಳನ್ನು ತನ್ನ ಹಸ್ತಗಳಿಂದ ಗಟ್ಟಿಯಾಗಿ ಹಿಡಿದು, ಬಿಗಿದ ಕಂಠದಿಂದ ಕೂಗಿ ಕರೆದ.
“ಮಾತೆ” ಪರಸ್ಪರರ ದೃಷ್ಟಿ ಒಂದಾದವು. ಎ?ಂದು ದಶಕಗಳಾದ ಮೇಲೆ ಈ ಅಪೂರ್ವ ಸಂಧಿಕಾಲ ಒದಗಿ ಬಂದಿತ್ತು.
“ಕರ್ಣಾ, ಕರ್ಣಾ,” ಕುಂತಿ ಗದ್ಗದಿತಳಾಗಿ ನುಡಿದಳು.
“ನನ್ನನ್ನು ಹೇಗೆ ಗುರುತಿಸಿದೆ ಮಗು?” ಕರ್ಣ ಮೌನವಾಗಿ ಆಕೆಯ ಕೈ ಹಿಡಿದುಕೊಂಡು ಬೆಳಕು ಇರುವಲ್ಲಿ ಬಂದ. ಆಕೆಯ ಪಾದದ ಎದುರು ತನ್ನ ಪಾದವನ್ನಿಟ್ಟ. ಕುಂತಿಗೆ ಅವುಗಳನ್ನು ನೋಡಿ ಆನಂದದ, ಆಘಾತದ ಸಮ್ಮಿಶ್ರ ಅನುಭವವಾಯಿತು. ಒಂದೇ ನಮೂನೆಯ, ಒಂದೇ ಆಕಾರದ ಬೆರಳುಗಳು, ಅದರ ಮೇಲೆ ಮೂಡಿದ, ಅದೇ ನಮೂನೆಯ ನರಗಳು, ಚಪ್ಪಟೆ ಆಕಾರದ ಗುಲಾಬಿವರ್ಣದ ಉಗುರುಗಳು ಹಾಗೂ ಭಿನ್ನವಲ್ಲದ ಕಾಲುಗಳ ಬಣ್ಣಗಳು. “ಈ ತನಕ ನಿನ್ನ ಪಾದಗಳ ಕಡೆಗೆ ನನ್ನ ಗಮನ ಹೇಗೆ ಹೋಗಿಲ್ಲವೆಂಬುದು ಆಶ್ಚರ್ಯವಾಗಿದೆ.” ಕರ್ಣ ಹೊಟ್ಟೆ ತುಂಬ ನಕ್ಕ. ಕುಂತಿಯ ಹೃದಯ ಕರಗಿ ನೀರು ನೀರಾಯಿತು.
“ತಾಯೀ, ಇಲ್ಲಿಯವರೆಗೆ ನಾನು ದೈವದ ಕೂಡ ಹೋರಾಡುತ್ತಿದ್ದೆ. ಆದರೆ ಇಂದು ಅದು ವಿಧಿಯದ್ದಾಗಿದೆ. ಕೊನೆಗೂ ಅದು ನನ್ನ ಮೇಲೆ ವಿಜಯ ಸಾಧಿಸಿತು.” ಕುಂತಿ ಕೃತಕೃತ್ಯಳಾದಳು. ಕರ್ಣ ಸ್ಥಿತಪ್ರಜ್ಞನಂತೆ ಶಾಂತಚಿತ್ತನಾಗಿ ಮಾತನಾಡುತ್ತಿದ್ದ. ಆತನಿಗೆ ಈ ಸತ್ಯದ ಅರಿವು ಮೊದಲಿನಿಂದಲೇ ಇತ್ತು ಎಂಬಂತೆ ಅವನ ವರ್ತನೆ ಇತ್ತು. ಆದರೆ ಕುಂತಿ ಹೆದರಿದ್ದಳು. ಈ ರಹಸ್ಯಸ್ಫೋಟವಾದರೆ ತನ್ನ ಶರೀರ ಛಿದ್ರ ವಿಚ್ಛಿದ್ರವಾಗುವದಲ್ಲದೆ, ಕರ್ಣನ ಹೃದಯದಲ್ಲಿ ಬಿರುಗಾಳಿ ಬೀಸಿ ಅಲ್ಲೋಲಕಲ್ಲೋಲ ಉಂಟಾಗುತ್ತದೆ ಎಂಬ ಭೀತಿ ಆಕೆಯನ್ನು ಕಾಡುತ್ತಿತ್ತು. ಆದರೆ ಕರ್ಣ ಬಹಳ ಆಯಾಸಗೊಂಡಿದ್ದ. ಮುಖದಲ್ಲಿ ದೈನ್ಯಭಾವ ತುಂಬಿತ್ತು.
“ಕರ್ಣಾ ನಿನ್ನ ದೀನತೆ ತುಂಬಿದ ಮುಖವನ್ನು ನಾ ನೋಡಲಾರೆ.”
“ಯಾಕೆ?” ಉಚ್ಚಸ್ವರದಲ್ಲಿ ಕರ್ಣ ಕೇಳಿದ. ಕುಂತಿ ಹೆದರಿದಳು.
“ಮಾತೆ. ನಾನು ಅತೀವ ಸಂತಾಪದಿಂದ ಉತ್ಕಂಠಿತನಾಗಿ, ಭ್ರಮಿ?ನಂತೆ ನಿನಗೆ ಏನೇನೋ ಹೀಯಾಳಿಸಬಹುದು, ಇಲ್ಲವೇ ಚಿಕ್ಕ ಬಾಲಕರಂತೆ, ಬಿಕ್ಕಿಬಿಕ್ಕಿ ಅತ್ತು ರಂಪಾಟ ಮಾಡಬಹುದು ಎಂದು ನಿನ್ನ ಅಪೇಕ್ಷೆ ಇತ್ತೆ? ಅದು ನಿನ್ನ ದೃಷ್ಟಿಯಲ್ಲಿ ಸರಿಯಾಗಿರಬಹುದು. ನಿನಗೆ ಮಾತೃತ್ವದ ವಿಜಯವಾಗಿದೆ ಎಂದು ನಿನಗೆ ಅನಿಸುವುದೂ ಸ್ವಾಭಾವಿಕ. ನನ್ನನ್ನು ರಮಿಸಿ, ಸಾಂತ್ವನಗೊಳಿಸಿದ್ದಕ್ಕೆ ನಿನಗೆ ಧನ್ಯತೆಯೂ ಉಂಟಾಗುತ್ತಿತ್ತು. ಆದರೆ, ಇದೆಲ್ಲ ಎ? ಬೇಗನೇ ಮುಗಿಯಿತು, ಹಾಗು ಇದರ ಅಂತ್ಯ, ಅತ್ಯಂತ ಶಾಂತ ಹಾಗೂ ಸುಲಲಿತವಾಯಿತು, ಇದಕ್ಕೆಲ್ಲ ನನ್ನ ಮಾತೃತ್ವವೇ ಕಾರಣ ಎಂದು ನೀನು ಹೆಮ್ಮೆಯಿಂದ ಬೀಗಿ ಧನ್ಯಳಾದೆ ಎಂದುಕೊಂಡಿರಬಹುದು.” ಕರ್ಣನ ಒಂದೊಂದು ಶಬ್ದ ಆಲಿಸುತ್ತ ಕುಂತಿ ಸುಖಿಸುತ್ತಿದ್ದಳು. ಆತ ಹೀಗೆಯೇ ಉಪಹಾಸಾತ್ಮಕವಾಗಿ ಮಾತನಾಡಲಿ. ಆಗ ಮಾತ್ರ ಅನೇಕ ವ?ಗಳಿಂದ ನನ್ನ ಹೃದಯದಲ್ಲಿರುವ ಹೊಯ್ದಾಟ ದೂರವಾಗಿ ಹೆಪ್ಪುಗೊಂಡಿರುವ ದುಃಖ ಜ್ವಲಿಸಿ ಕರಗಿಹೋಗುತ್ತದೆ.
“ನಾನು ಯಾವುದೇ ನಿಲವು, ಉದ್ದೇಶ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ ಕರ್ಣಾ. ಯಾವ ಮಧುರಕ್ಷಣ ನನ್ನ ಆಯು?ದಲ್ಲಿ ಬರಲಾರದು ಎಂದು ಭಾವಿಸಿದ್ದೇನೆಯೋ, ಅದು ಬಂದಿತು. ಸಾಕು, ನಾನು ಧನ್ಯಳಾದೆ. ನೀನು….?” ತುಂಬಿದ ಜಲಪಾತದಿಂದ ಧುಮ್ಮುಕ್ಕುವ ಜಲದಂತೆ, ಕುಂತಿಗೆ ಮಗನ ಮೇಲೆ ಮೋಹ ಉಕ್ಕಿ ಬಂದಿತು. ಆಲಿಂಗನಕ್ಕಾಗಿ ಆಕೆ ಕರಗಳನ್ನು ಮುಂದೆ ಚಾಚಿದಳು.
“ಮಾತೆ, ನೀನು ಹತ್ತಿರ ಬರಬೇಡ.”
“ಯಾಕೆ ಕರ್ಣಾ?” ಆಕೆಯ ಕೈಗಳು ಕೆಲಕ್ಷಣ ಹಾಗೆಯೇ ತೇಲಾಡುತ್ತಿದ್ದವು.
“ಯಾಕೆ ಕರ್ಣಾ? ನನ್ನ ಸ್ಪರ್ಶ ನಿನಗೆ ಅಮಂಗಲವಾಯಿತೆ? ನನಗೆ ಅರ್ಥವಾಯಿತು. ನಿನ್ನನ್ನು ಸ್ಪರ್ಶ ಮಾಡುವ ಅಧಿಕಾರ ನನಗೆ ಇಲ್ಲ ಎಂದು ನಿನ್ನ ಅಂಬೋಣವೇ? ಎ? ಅಹಂಕಾರ ನಿನಗೆ? ಈವರೆಗೆ ಬಾಗಿಲ್ಲ, ಮಣಿದಿಲ್ಲ, ಉಕ್ಕಿನಂತೆ ಕಠಿಣನಾಗಿದ್ದೇನೆ ಎಂದು ನಿನಗೆ ಜಗತ್ತಿಗೆ ತೋರಿಸಬೇಕಾಗಿದೆಯೇನು? ಜೀವನಾದ್ಯಂತ ಬೇಗೆಯಲ್ಲಿ ನಾನು ಬಳಲಿದ್ದೇನೆ. ನೀನೂ ಕೂಡ ಉಳಿದ ನಿನ್ನ ಆಯು?ವನ್ನು ದುಃಖದಲ್ಲಿ ಕಳೆ ಎಂದು ನಿನಗೆ ಹೇಳುವುದಿದೆಯೇ?”
“ಇಲ್ಲ ತಾಯಿ. ಯಾವ ಕ್ಷಣದಲ್ಲಿ ನನ್ನ ನಿನ್ನ ಸಂಬಂಧದ ಸತ್ಯ ತಿಳಿಯಿತೋ, ಅದೇ ಕ್ಷಣ, ನಿನಗೆ ಮಾತೆ ಎಂದು ಕರೆದಿದ್ದೇನೆ. ನಿನ್ನ ಹಾಗೆ ಮೂರು ತಪ ಕಾಯಲಿಲ್ಲ. ಈಗ ಕೂಡ ನಿನಗೆ ಮಾತೆ ಮಾತೆ ಎಂದು ಕೂಗುತ್ತಲೇ ಇದ್ದೇನೆ. ಆದರೆ ಸತ್ಯಸಂಗತಿ ಬಯಲಾದರೂ, ಸಂತೋ?ದಿಂದ ನನ್ನ ಮೈಗೂದಲು ನಿಮಿರಿ ನಿಲ್ಲಲಿಲ್ಲ. ನನ್ನ ನಿನ್ನ ನಂಟು, ನನ್ನ ಈ ಕೂದಲುಗಳನ್ನು ಸುಟ್ಟು ಕರಕಲಾಗಿ ಮಾಡಿದೆ. ನನ್ನ ಸಾಕುತಾಯಿ ರಾಧೆ, ರಕ್ತವನ್ನು ಬಿಟ್ಟು ಎಲ್ಲವನ್ನು ಕೊಟ್ಟಳು. ಜನ್ಮದಾತೆಯಾದ ನೀನು ರಕ್ತವನ್ನು ಬಿಟ್ಟು ಮತ್ತಿನ್ನೇನೂ ಕೊಡಲಿಲ್ಲ. ಪಾಂಡವವಂಶ ಮುಂದುವರಿಯಬೇಕಾದರೆ ನನ್ನ ಬಲಿ ಕೊಡಬೇಕಾಗುತ್ತದೆ ಎಂಬುದರ ಕಲ್ಪನೆ ನನಗೆ ಬಂದಿತು. ಅದಕ್ಕಾಗಿಯೇ, ಇ? ದಿನ ನೀನು ಎಲ್ಲಿ ಇದ್ದೆ, ಏನು ಮಾಡುತ್ತಿದ್ದೆ? ಎಂಬ ಮೂರ್ಖತನದ ಪ್ರಶ್ನೆಗಳನ್ನು ನಾನು ಕೇಳಲಿಲ್ಲ. ಸಾಮಾನ್ಯವಾಗಿ ಈ ರಕ್ತಸಂಬಂಧಗಳು ಸಾಂದ್ರವಾಗಬೇಕಾದರೆ, ಒಬ್ಬರಿಗೊಬ್ಬರು ಹತ್ತಿರ ಇರಬೇಕಾಗುತ್ತದೆ. ಆಗಲೇ ಅವರಿಬ್ಬರ ನಡುವೆ ಪ್ರೀತಿ ಮೊಳಕೆ ಒಡೆದು ಬೆಳೆಯುತ್ತ, ಅರಳುತ್ತ ಹೋಗುತ್ತದೆ. ಇದು
ದುರ್ದೈವದಿಂದ ನಮ್ಮಿಬ್ಬರ ಮಧ್ಯೆ ಆಗಲಿಲ್ಲ. ಕ್ಷಮೆ ಮಾಡು ಮಾತೆ, ನನ್ನ ನಿನ್ನ ಮಧ್ಯೆ ಇದ್ದ ಅಂತರ ಈ ರಾತ್ರಿಯಲ್ಲಿ ಕಡಮೆಯಾಗುವುದು ಅಸಾಧ್ಯ.” ತನ್ನ ಜೀವನದಲ್ಲಿ ಅತ್ಯಮೂಲ್ಯವಾದ ವಸ್ತುವನ್ನು ಕಳೆದುಕೊಂಡದ್ದು ಕುಂತಿಯ ಲಕ್ಷ್ಯಕ್ಕೆ ಬಂದಿತು. ತನ್ನ ಪುತ್ರ, ಮಾತಿನ ಪೆಟ್ಟಿನಿಂದ ತನ್ನ ಹೃದಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾನೆ. ಈಗ ತನ್ನ ಶರೀರ ಒಣಗಿದ, ಮರುಭೂಮಿಯಂತೆ ಆಗಿದೆ. ಇನ್ನು ಉಳಿದಿರುವವು ಕೆಲವೇ ಕ್ಷಣಗಳು. ಇ? ಅತ್ಯಲ್ಪ ಸಮಯದಲ್ಲಿ ಮಗನಿಗೆ ಏನೇನು ಹೇಳುವುದು? ಆ ಕಿಶೋರ ವಯಸ್ಸಿನಲ್ಲಿ, ಸೂರ್ಯದೇವನೊಡನೆ ಆದ ಅಚಾತುರ್ಯ… ಕರ್ಣನನ್ನು ಗಂಗೆಯಲ್ಲಿ ತೇಲಿ ಬಿಟ್ಟಿದ್ದಕ್ಕೆ ಗಂಗೆಯ ನೀರನ್ನು ಈವರೆಗೆ ಮುಟ್ಟದೆ ಇರುವುದು,…. ಊಟ ಮಾಡುವಾಗ, ಪ್ರತಿ ತುತ್ತು ತೆಗೆದುಕೊಳ್ಳುವಾಗ ಮನದಲ್ಲೇ ಮಗ ಕರ್ಣನಲ್ಲಿ ಬೇಡುತ್ತಿದ್ದ ಕ್ಷಮೆ…..ಒಂದೇ ಎರಡೇ, ಮನದಲ್ಲಿಯೇ ಇಟ್ಟುಕೊಂಡು ಕೊರಗುತ್ತಿದ್ದ ತಾನು, ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದೇನೆ. ಕುಂತಿ ಮುಂದೆ ಬಂದಳು. ಕರ್ಣನ ಮಸ್ತಕವನ್ನು ತನ್ನ ಎದೆಯ ಮೇಲೆ ಇಟ್ಟುಕೊಂಡಳು. ಆತನ ನಸು ಕೆಂಪು ವರ್ಣದ ಕೇಶಗಳ ಮೇಲೆ ಕೈ ಆಡಿಸಿ ಮೂಸಿ ನೋಡಿದಳು. ಕರ್ಣ ಶಾಂತನಾಗಿದ್ದ. ಆತನೂ ಆಕೆಯ ಬೆನ್ನ ಮೇಲೆ ಕೈ ಸವರುತ್ತಿದ್ದ.
“ಆದರೆ, ಮಾತೆ, ನನ್ನ ಕಡೆಗೆ ಬಂದ ಕಾರಣ ನೀನು ಹೇಳಲಿಲ್ಲ.” ಕುಂತಿ ಕರ್ಣನ ಕಡೆಗೆ ಓರೆಗಣ್ಣಿನಿಂದ ನೋಡಿದಳು. ಸೂರ್ಯಪುತ್ರನ ಸ್ವರದಲ್ಲಿ ಏನೋ ಬದಲಾವಣೆ ಆದ ಹಾಗೆ ಅನಿಸಿತು. ಅದರಲ್ಲಿ ಕೀಟಲೆ ಏನಾದರೂ ಅಡಗಿದೆಯೋ ಎಂದು ಶೋಧಿಸುವ ಪ್ರಯತ್ನ ಮಾಡಿದಳು. ಒಂದು ನಿಮಿ? ಕುಂತಿ ಕಣ್ಣು ಮುಚ್ಚಿಕೊಂಡಳು. ಭ್ರಮೆ ಆವರಿಸಿದಂತಾಯಿತು. ಮಾಧವ ಕಣ್ಣೆದುರು ಬಂದು ನಿಂತ.
“ಕುಂತೀ, ಇನ್ನೂ ವೇಳೆ ಕಳೆದು ಹೋಗಿಲ್ಲ. ನಿನ್ನ ಮಾತೃತ್ವದ ಸಾಮರ್ಥ್ಯವನ್ನು ಪಣಕ್ಕಿಡು. ಆತನಿಗೆ ಆಸೆಯ ಬಲಿ ಒಡ್ಡು, ’ನೀನು ಪ್ರಥಮ ಪಾಂಡವನಿರುವೆ. ಯುಧಿಷ್ಠಿರ ನಿನಗೆ ಛತ್ರ ಚಾಮರಗಳನ್ನು ಹಿಡಿಯುತ್ತಾನೆ.’ ಈ ಆಸೆಗೂ ಆತ ಬಲಿಯಾಗದಿದ್ದರೆ ಕೊನೆಗೆ, ಕೃ?ಯ ಆಮಿ?ವನ್ನು ತೋರಿಸು.”
ಕುಂತಿ ಗಡಗಡ ನಡುಗಿದಳು. ಕರ್ಣ ಅವಳ ಮಗನೇ ಆದರೂ ದ್ರೌಪದಿಯ ಪ್ರಲೋಭನೆ ತೋರಿಸುವುದೇ? ಛೇ, ಇಲ್ಲ, ಇಲ್ಲ ಎಂದಿಗೂ ಇಲ್ಲ. ಧರ್ಮಕ್ಕೆ ಜಯ ಇದು ಅಂತಿಮ ಮೌಲ್ಯ ಎಂದು ನಂಬುವುದಕ್ಕೂ ಒಂದು ಮಿತಿ ಇದೆ. ಆದರೆ ಮಾಧವ ಕೂಡ ಅದನ್ನು ಮೊದಲಬಾರಿಗೆ ದಾಟಿಬಿಟ್ಟ. ಆದರೆ ದ್ರ?ರನಾದ ಅವನ ಅಧಃಪತನ ಇತರರಿಗೆ ತೋರಗೊಡಬಾರದು. ಅವನ ಧವಲಕೀರ್ತಿಗೆ ಕಳಂಕದ ಕಪ್ಪು ಕಲೆ ಹಚ್ಚಬಾರದು.
“ಮಾತೆ, ಸರಳವಾದ ಪ್ರಶ್ನೆಗೆ ಉತ್ತರ ಕೊಡಲು ಇ? ವೇಳೆಯೇ?” ಕರ್ಣನ ಧ್ವನಿಯಲ್ಲಿ ತುಂಟತನ ಕಾಣಿಸುತ್ತಿತ್ತು.
“ಅರ್ಜುನನ ಪ್ರಾಣರಕ್ಷಣೆಗಾಗಿ ಅವನ ಪ್ರಾಣಭಿಕ್ಷೆ ಬೇಡಲು ನೀನು ಬಂದಿರುವೆ ತಾನೆ?” ಕುಂತಿ ಆಳವಾದ ನಿಃಶ್ವಾಸ ಬಿಟ್ಟಳು. ನಸುನಗೆ ಬೀರಿ ಗೋಣುಹಾಕಿದಳು.
“ಮಾತೆ, ನನ್ನನ್ನು ಕ್ಷಮೆ ಮಾಡು. ಅರ್ಜುನನ ರಕ್ಷಣೆಗೆ ಕೃ? ಹೇಗೆ ಕಟಿಬದ್ಧನೋ, ಅವನ ಪ್ರಾಣಹರಣ ಮಾಡಲಿಕ್ಕೆ ನಾನೂ ಅ? ಆತುರನಾಗಿದ್ದೇನೆ. ಅದನ್ನು ಬಿಟ್ಟು ಮತ್ತೆ ಏನಾದರೂ ಯಾಚಿಸು.” ಕುಂತಿ ಅವನ ಕಡೆಗೆ ಮೆಚ್ಚುಗೆಯಿಂದ ನೋಡುತ್ತಿದ್ದಳು.
“ಪಕ್ಷಿಗಳು ಹಿಂಡುಹಿಂಡಾಗಿ ಬಂದು ಎಲ್ಲಿ ವಾಸಿಸುತ್ತವೆಯೋ ಆ ಕಲ್ಪವೃಕ್ಷ ನಾನು ಎಂದು ದ್ವಿಜರು ನನ್ನ ಕೀರ್ತಿಯನ್ನು ಹಾಡಿ ಹೊಗಳುತ್ತಾರೆ. ನನ್ನ ಪ್ರಾಣರಕ್ಷಕಗಳಾದ ಕವಚ ಕುಂಡಲಿಗಳನ್ನು, ಇಂದ್ರನು ಬೇಡಿದ ತತ್ಕ್ಷಣ ತಿಲಮಾತ್ರವೂ ವಿಚಾರ ಮಾಡದೆ ದಾನ ಮಾಡಿದ್ದೇನೆ. ಹೆದರಬೇಡ. ನನ್ನಲ್ಲಿ ಸಂಕೋಚ ಬೇಡ. ನಾನು ಈವರೆಗೆ ’ಕೊಡುವೆ’ ಈ ಶಬ್ದ ಉಚ್ಚಾರಿಸುತ್ತ ಹೋಗಿದ್ದೇನೆ. ನನ್ನ ಬಾಯಿಂದ ’ಇಲ್ಲ’ ಎಂಬ ಶಬ್ದ ಯಾರಿಗೂ ಕೇಳಿ ಬಂದಿಲ್ಲ.” ಈಗ ಕರ್ಣ ಕುಂತಿಯ ಕಡೆಗೆ ನೋಡುತ್ತಿರಲಿಲ್ಲ. ಆತ ಅಭಿಮಾನದಿಂದ ಆಕಾಶದ ಕಡೆಗೆ ನೋಡುತ್ತಿದ್ದ.
“ಇರಲಿ. ನನಗೆ ಗೊತ್ತು, ಕೇಳಲು ನಿನಗೆ ಧೈರ್ಯ ಸಾಲುತ್ತಿಲ್ಲ. ಇಲ್ಲಿಯವರೆಗೆ ನಾನು ಬಹಳ? ದಾನ ಮಾಡಿರುವೆ. ಆದರೆ ಇಂದು ಮಾಡುವ ದಾನದಿಂದ ಉಂಟಾಗುವ ಆನಂದ ಹಿಂದೆ ಎಂದೂ ಆಗಿರಲಾರದು. ನಾಳಿನ ನಿರ್ಣಾಯಕ ಯುದ್ಧದಲ್ಲಿ ನಾನು ಅರ್ಜುನನನ್ನು ಬಿಟ್ಟು ಉಳಿದ ಪಾಂಡವರ ಗೊಡವೆಗೆ ಹೋಗುವುದಿಲ್ಲ, ಅವರ ಮೇಲೆ ಶಸ್ತ್ರಪ್ರಯೋಗ ಮಾಡುವುದಿಲ್ಲ. ನಿನ್ನ ಪಂಚಪಾಂಡವರು ಸುರಕ್ಷಿತರಾಗಿರುತ್ತಾರೆ. ಚಿಂತೆ ಮಾಡಬೇಡ.”
“ಕರ್ಣಾ, ನಿನಗೆ ನಿನ್ನ ತಾಯಿಗೆ ದಾನ ಮಾಡುವುದು ಆನಂದ ತಂದಿದೆಯೋ ಅಥವಾ ಈ ದುರ್ದೈವಿ ಭಿಕ್ಷುಕಿಯ ಮೇಲೆ ದಯೆ ಬಂದಿದೆಯೋ?”
“ಮಾತೆ!” ಕರ್ಣ ಬೆಚ್ಚಿಬಿದ್ದು ಹಿಂದೆ ಸರಿದ.
“ಅರ್ಜುನನ ಪ್ರಾಣವಾಗಲೀ, ನನ್ನ ಇತರ ಮಕ್ಕಳ ಪ್ರಾಣವಾಗಲೀ, ರೊಟ್ಟಿಯ ತುಣುಕೋ, ಅರಿವೆಯ ತುಂಡು ಎಂದು ತಿಳಿದುಕೊಂಡು ನನ್ನ ಕಡೆಗೆ ಎಸೆಯುತ್ತಿಯೋ? ನೀನು ನನ್ನ ಮೇಲೆ ದಯೆ ತೋರಿಸುವ ಆವಶ್ಯಕತೆ ಇಲ್ಲ. ಭಿಕ್ಷುಕರು, ದರಿದ್ರ ಬ್ರಾಹ್ಮಣರು, ಅನಾಥ ಸ್ತ್ರೀಯರಂತಹ ಅಸಹಾಯಕ ವ್ಯಕ್ತಿಗಳಿಂದ ಅವಿರತವಾಗಿ ಹೊಗಳಿಸಿಕೊಂಡು, ದಾನಶೂರನೆಂಬ ಗರ್ವ ಮದ್ಯದ ಅಮಲಿನಂತೆ ನಿನ್ನ ನೆತ್ತಿಗೇರಿದೆ. ಕುಂತಿ ಈ ಜನರ ಸಾಲಿನಲ್ಲಿ ಇಲ್ಲವೆಂಬುದನ್ನು ಚೆನ್ನಾಗಿ ತಿಳಿದುಕೊ.”
“ಮಾತೆ.” ಅಪಾರ ಆದರದಿಂದ ಕರ್ಣನ ಹೃದಯ ತುಂಬಿ ಬಂದಿತು.
“ಕರ್ಣಾ, ಮೊದಲು ನಾನು ಕ್ಷತ್ರಿಯ ಸ್ತ್ರೀ, ಆಮೇಲೆ ಜನನಿ. ನಾನು ತಾಯಿ ಆಗಿದ್ದರೂ, ಯಾವ ವಾತ್ಸಲ್ಯದಲ್ಲಿ ಸಾಮರ್ಥ್ಯವಿಲ್ಲವೋ, ಸಕಾರಣವಿಲ್ಲವೋ ಅದು ನಿರರ್ಥಕ ಇರುತ್ತದೆ. ಪ್ರಸಂಗ ಬಂದರೆ ನನ್ನ ಹೃದಯವನ್ನು ಉಕ್ಕಿನ ಹಾಗೆ ಬಲಿ?ಗೊಳಿಸುವ ಸಾಮರ್ಥ್ಯ ನನ್ನಲ್ಲಿದೆ ಎಂಬುದು ನಿನ್ನ ನಿದರ್ಶನಕ್ಕೆ ಬಂದಿದೆ.”
“ಮಾತೆ…” ಕರ್ಣನ ಮುಖಕಮಲ ಆನಂದದಿಂದ ಅರಳಿತು.
“ನಿನ್ನ ಜನ್ಮರಹಸ್ಯವನ್ನು ಪಾಂಡವರಿಗೆ ತಿಳಿಸಬೇಡ ಎಂದು ನಿನ್ನ ಕಡೆಯಿಂದ ಇದೊಂದೇ ವಚನ ತೆಗೆದುಕೊಳ್ಳುವವಳಿದ್ದೆ.”
“ನೀಡಿದೆ, ತಾಯಿ, ನೀಡಿದೆ.” ಪ್ರಸನ್ನಚಿತ್ತದಿಂದ ಕರ್ಣ ನುಡಿದ.
“ಕರ್ಣ, ಈ ವಚನ ದಾನವೆಂದು ನಾನು ಸ್ವೀಕರಿಸುವುದಿಲ್ಲ.”
“ಯಾಕೆ?” ಆತ ಆಶ್ಚರ್ಯದಿಂದ ನುಡಿದ.
“ಇನ್ನು ಕೇವಲ ಹನ್ನೆರಡು ಪ್ರಹರ ಬಾಕಿ ಉಳಿದಿದೆ. ನನ್ನ ಐವರು ಪುತ್ರರು ಪರಾಕ್ರಮಿಗಳು. ಕ್ಷಾತ್ರತೇಜ ಅವರಲ್ಲಿ ತುಂಬಿ ತುಳುಕುತ್ತದೆ. ರಾಜಧರ್ಮ ಪಾಲಿಸುವುದರಲ್ಲಿ ಸರ್ವರೂ ನಿಸ್ಸೀಮರೇ. ಅರ್ಜುನನಂತೂ ವೀರಾಧಿವೀರನಿದ್ದಾನೆ. ನನ್ನ ಆಶೀರ್ವಾದ ನಿನ್ನ ಮೇಲೂ ಇದ್ದೇ ಇದೆ. ಆದರೆ ನಾಳೆ ನಿನ್ನ ಪರಾಭವ ಹಾಗೂ ವಧೆ ನಿಶ್ಚಿತ ಎಂದು ನನ್ನ ಅಂತರಾತ್ಮ ಹೇಳುತ್ತಿದೆ.”
“ಯಾಕೆ?” ಕರ್ಣ ಚೇ?ಯಿಂದ ಕೇಳಿದ.
“ಕೊನೆಗೂ ಧರ್ಮ ಎಲ್ಲಿದೆಯೋ, ಖಂಡಿತ ಅಲ್ಲಿ ವಿಜಯವಿದೆ. ನಿನ್ನ ರಕ್ತದ ಕಣಕಣಗಳಲ್ಲಿ ದ್ವೇ?, ಸೇಡು ಆವರಿಸಿದೆ. ನಿನ್ನ ಕೌರವನ ಪಕ್ಷದಲ್ಲಿ ಕೇವಲ ಅಧರ್ಮ ತುಂಬಿ ತುಳುಕುತ್ತಿದೆ. ಗಾಂಧಾರಿ, ದ್ರೌಪದಿ, ನಾನು, ಕುರುಕುಲ ಸ್ತ್ರೀಯರೆಲ್ಲ, ಶ್ರದ್ಧೆಯಲ್ಲಿ, ಧರ್ಮದಲ್ಲಿ ನಂಬಿಕೆ ಉಳ್ಳವರು. ಯುದ್ಧದಲ್ಲಿ ಅಂತಿಮವಾಗಿ ಧರ್ಮಕ್ಕೆ ವಿಜಯವಾಗುವದು ನಿಶ್ಚಿತ.”
“ಮಾತೆ, ಮಾತೆ, ನನ್ನ ಪರಾಭವ, ವಧೆ ಈ ಕಾರಣಕ್ಕಾಗಿ ಅಲ್ಲ. ಧರ್ಮ-ಅಧರ್ಮಕ್ಕೂ, ಜಯ- ವಿಜಯಕ್ಕೂ ಏನಾದರು ಸಂಬಂಧ ಇದೆಯೇ ಎಂಬುದನ್ನು ನಿನ್ನ ಕೃ?ನಿಗೆ ಕೇಳಿಕೊಂಡು ಬಾ. ನೀವು ಸ್ತ್ರೀಯರು ಈ ಎರಡೂ ವಿ?ಯಗಳಿಗೆ ತಳಕು ಹಾಕುತ್ತೀರಿ. ಆದರೆ ಶ್ರದ್ಧೆಯ ಸಾಮರ್ಥ್ಯ ಅತುಲವಾದದ್ದು ಎಂದು ನಾನು ನಂಬುತ್ತೇನೆ. ಧನ್ಯನಾದೆ ಮಾತೆ, ಇಂದು ನಾನು ಧನ್ಯನಾದೆ.” ಕರ್ಣನ ಹೃದಯ ಮಾತೃಪ್ರೇಮದಿಂದ ಉಕ್ಕಿ ಹರಿಯಿತು. ತಾಯಿಯನ್ನು ಬಲವಾಗಿ ಆಲಂಗಿಸಿದ. ಆ ಮಹಾರಥಿ, ಆಯು?ದಲ್ಲಿಯೇ ಪ್ರಥಮ ಬಾರಿಗೆ ಶಿಶುವಿನಂತೆ ಬಿಕ್ಕಿಬಿಕ್ಕಿ ರೋಧಿಸತೊಡಗಿದ.
“ಮಾತೆ, ನೀನು ಏಕೆ ಬಂದೆ ನನ್ನ ಕಡೆಗೆ?” ತನ್ನ ಹೆಗಲ ಮೇಲೆ ಒರಗಿಕೊಂಡ ಕರ್ಣನ ತಲೆಗೂದಲಗಳ ಮೇಲೆ ಕುಂತಿ ಕೈ ಆಡಿಸಿದಳು.
“ಕರ್ಣಾ, ನಿನ್ನನ್ನು ನೋಡಲು, ಅದೂ ಕೊನೆಯ ಬಾರಿ ನನ್ನ ನಿನ್ನಲ್ಲಿದ್ದ ಅನೂಹ್ಯ ಸಂಬಂಧ ಅರುಹಿಕೊಳ್ಳಲು ನಿನ್ನ ಹತ್ತಿರ ಬಂದೆ.”
“ಮಾತೆ” ಕುತೂಹಲದಿಂದ ಕೇಳಿದ.
“ನೀನು ಜನ್ಮದುದ್ದಕ್ಕೂ ಎರಡು ಹಸ್ತಗಳಿಂದ ದಾನ ಮಾಡುತ್ತಲೇ ಹೋದೆ. ಈ ಕ್ಷಣದವರೆಗೆ ನೀನು ದಾನ ನೀಡುವ ನಿನ್ನ ಗುಣಕ್ಕೆ ಕುಂದುಂಟಾಗಿಲ್ಲ. ದಾನವೆಂದರೆ ಮೋಹ ಮಾಯೆಗಳ ತ್ಯಾಗ. ’ಇದಮ್ ನ ಮಮ’ – ಎಂದರೆ ಇದು ನನ್ನದಲ್ಲ ಎಂದು ಎಲ್ಲ ವಾಸನೆಗಳಿಂದ ದೂರವಾಗುವುದು. ಕರ್ಣಾ, ನಾನು ಮೋಹವನ್ನು ಗೆಲ್ಲುವುದಾಗದೇ, ಮುಗ್ಗರಿಸುತ್ತ ಹೋದೆ. ಆದರೆ ನೀನು ಮಾತ್ರ ಆಶೆ ಆಕಾಂಕ್ಷೆಗಳನ್ನು ತುಳಿಯುತ್ತ, ಧಿಕ್ಕರಿಸುತ್ತ, ಜೀವನದ ಪ್ರತಿ ಕ್ಷಣ ಕ್ಷಣಗಳಲ್ಲಿ ಮೋಹ ಮಾಯೆಗಳ ಮೇಲೆ ವಿಜಯ ಸಾಧಿಸುತ್ತ ಹೋದೆ. ಆದರೆ ಒಂದು ರೀತಿಯಿಂz ನನ್ನ ಜೀವನವನ್ನು ಒಂದು ದಡಕ್ಕೆ ತಂದು ಹಚ್ಚಿದೆ. ಕರ್ಣಾ, ಇದೇ ಕಾರಣಕ್ಕಾಗಿ ಪಾಂಡವರಲ್ಲಿ ನೀನು ನನಗೆ ಅತ್ಯಂತ ಪ್ರಿಯನು.”
“ಮಾತೆ, ಇದನ್ನು ಹೇಳಲು ಈ ಮೊದಲು ಯಾಕೆ ಬರಲಿಲ್ಲ? ಬೇಗನೆ ಏಕೆ ಬರಲಿಲ್ಲ? ನಿನ್ನೆ ರಾತ್ರಿ ನೀನು ಬರಬೇಕಾಗಿತ್ತು. ಇ?ಕೆ ತಡ ಮಾಡಿದೆ?” ಕುಂತಿ ಮಗ್ಗಲು ಇದ್ದ ಆಸನದಲ್ಲಿ ಸುಮ್ಮನೆ ಕುಳಿತಳು.
“ಹೇಡಿತನ, ಶುದ್ಧ ಹೇಡಿತನ. ಕ್ಷತ್ರಿಯಳಾಗಿದ್ದೂ ಯಾಕೀ ಅಂಜುಬುರುಕುತನ? ಆಯು?ದಲ್ಲಿ ಎಲ್ಲವನ್ನು ಸ್ವೀಕರಿಸಿದೆ, ಆದರೆ ಇದನ್ನೇಕೆ ಸ್ವೀಕರಿಸಲಿಲ್ಲ? ನಿನ್ನನ್ನು ಭೆಟ್ಟಿಯಾಗುವ ಕಾಲ ಕಳೆದುಹೋಗಿದೆ” ಎನ್ನುತ್ತ ಕರ್ಣ, “ನೀನು ಸಾಧಿಸಿಬಿಟ್ಟೆ. ಚಾಂಡಾಲಿ. ಜನ್ಮಜಾತ ವೈರಿಯಂತೆ ಹಗೆ ಸಾಧಿಸಿಬಿಟ್ಟೆ” ಜೋರಾಗಿ ಕಿರುಚಿದ. “ನೀನು ಮತ್ತೊಮ್ಮೆ ನನ್ನ ಬಲಿ ತೆಗೆದುಕೊಂಡೆ.” ಆತ ಈಗ ಭಯಾನಕವಾಗಿ ಕಾಣಿಸುತ್ತಿದ್ದ. ಅವನ ಕೆಂಪಾದ ಕಣ್ಣುಗಳಿಂದ ಜ್ವಾಲೆಗಳು ಹೊರಬೀಳುತ್ತಿದ್ದವು. ತನ್ನ ಮುಷ್ಠಿಯನ್ನು ಬಲವಾಗಿ ಹಿಡಿದಿದ್ದ. ತಾಯಿಯ ಕಡೆಗೆ ನೋಡುತ್ತ ನುಡಿದ. “ಈ ನನ್ನ ಪಾದಗಳನ್ನು ಅಗ್ನಿಯಿಂದ ದಹಿಸಿ ಕರಕು ಮಾಡಬೇಕೆಂದು ಅನಿಸುತ್ತದೆ.”
“ಕರ್ಣಾ, ಕರ್ಣಾ” ಎಂದು ಆಕ್ರಂದಿಸುತ್ತ ಕುಂತಿ ಮೇಲೆ ಎದ್ದಳು. ಜನ್ಮದಾತೆಯ ಆರ್ತನಾದ ಕೇಳಿ ಕರ್ಣನ ಹೃದಯದಲ್ಲಿ ಕಸಿವಿಸಿ ಉಂಟಾಗಿ, ಅವನ ಸಂತಾಪವೆಲ್ಲ ಸುಡುಸುಡು ಕೆಂಡದ ಮೇಲೆ ನೀರು ಹಾಕಿದಾಗ ಆರಿದಂತೆ ತಣ್ಣಗಾಯಿತು. ಆತ ಕುಂತಿಯ ಸಮೀಪ ಹೋದ. ಸಂಮ್ಮಾನದಿಂದ ಆಕೆಯನ್ನು ಕೈ ಹಿಡಿದು ಆಸನದ ಮೇಲೆ ಕೂಡಿಸಿದ. ಆಕೆಯ ಮಗ್ಗಲು ಕುಳಿತು, ಕಂಪಿಸುತ್ತಿರುವ ಆಕೆಯ ತಲೆಯನ್ನು ಹಿಡಿದುಕೊಂಡು ಮೆಲ್ಲನೆ ನೇವರಿಸತೊಡಗಿದ.
“ಮಾತೆ, ನೀನು ಒಂದು ಕ್ಷಣ ಭೂತಕಾಲದ ಚಕ್ರದಲ್ಲಿ ಸಿಕ್ಕು, ಉಸಿರು ಕಟ್ಟಿ ಒದ್ದಾಡುತ್ತಿದ್ದಿ. ಆದರೆ ನೀನು ಸ್ವತಂತ್ರಳಾಗಿದ್ದೆ. ಆದರೆ ನಾನು ಮಾತ್ರ ಶಾಶ್ವತವಾಗಿ ಬಂದಿ ಆಗಿದ್ದೆ.”
“ನಿನ್ನ ಮಾತು ನನಗೆ ಅರ್ಥವಾಗಲಿಲ್ಲ ಕರ್ಣಾ.”
“ವಿಚಿತ್ರವಾದ ನನ್ನ ಜನ್ಮದ ರಹಸ್ಯ, ಅದರ ನಂತರ ಇಡೀ ಜೀವನವೆಲ್ಲ ನನ್ನನ್ನು ಆವರಿಸಿದ್ದ ಅಂಧಕಾರ. ಅಯ್ಯೋ! ರಣರಂಗದಲ್ಲಿ ಅರ್ಜುನನಿಗೆ ಆಹ್ವಾನ ಕೊಡುವಾಗ, ದ್ರೌಪದೀ ಸ್ವಯಂವರದ ವೇಳೆ ಮತ್ಸಭೇದದ ವೇಳೆಯಲ್ಲಿ, ದ್ರೋಣಾಚಾರ್ಯರು ಬ್ರಹ್ಮಾಸ್ತ್ರ ನಿರಾಕರಿಸಿದಾಗ, ಭೀ?ಚಾರ್ಯರು ನನಗೆ ಸೇನಾಧಿಪತಿಸ್ಥಾನ ನಿರಾಕರಿಸಿದಾಗ, ಈ ಎಲ್ಲ ಬಾರಿಯೂ ಒಂದೇ ಪ್ರಶ್ನೆ ಉದ್ಭವವಾಗುತ್ತಿತ್ತು. ’ನೀನು ಯಾರು ಕರ್ಣಾ, ನೀನು ಯಾರು?’ ಅಲ್ಲದೆ ಶೂಲದಂತೆ ಚುಚ್ಚುತ್ತಿರುವ ಆ ಎರಡು ಶಾಪಗಳು,…ಅಂತ್ಯಕಾಲದಲ್ಲಿ ನೀನು ಕಲಿತ ಬ್ರಹ್ಮವಿದ್ಯೆಯ ವಿಸ್ಮರಣೆ ಆಗಲಿ….ನಿನ್ನ ರಥದ ಚಕ್ರ ಕೆಸರಿನಲ್ಲಿ ಹುದುಗಿ ಅದೇ ಕ್ಷಣ ಶತ್ರುವಿನಿಂದ ನಿನ್ನ ಶಿರಛ್ಛೇದವಾಗಲಿ…..ಇವೇ ಗತಕಾಲದ ತಲ್ಲಣಿಸುವ, ಘೋರವಾದ ನೆನಪುಗಳು. ಇನ್ನು ಮೇಲೆ ನನ್ನ ಬಳಿಯಲ್ಲಿ ಆತ್ಮರಕ್ಷಣೆ ಮಾಡುವ ಕವಚ ಕುಂಡಲಗಳಿಲ್ಲ. ಕಪಟನಾಟಕ ಸೂತ್ರಧಾರಿ ಕೃ?ನಿಂದ ನನ್ನ ಶರೀರದಲ್ಲಿ ಸಂಚಯವಾಗಿದ್ದ ಶಕ್ತಿಯೆಲ್ಲ ಹ್ರಾಸವಾಗಿದೆ. ಈಗ ಖಂಡಿತವಾಗಿಯೂ ಅರ್ಜುನ ನನಗಿಂತ ಹೆಚ್ಚು ಬಲಶಾಲಿಯಾಗಿದ್ದಾನೆ” ಕರ್ಣ ಕ್ಷಣ ಹೊತ್ತು ವಿಶ್ರಮಿಸಿದ.
“ಮಾತೆ, ಇದನ್ನು ಕೇಳಿ ನಿನಗೆ ಆಶ್ಚರ್ಯವಾಗಬಹುದು. ಕೇವಲ ಅರ್ಜುನನ ಸಾಮರ್ಥ್ಯ ಕಂಡು ನನ್ನ ಮನದಲ್ಲಿ ಈ? ನಿರ್ಮಾಣವಾಗಿಲ್ಲ, ಆದರೆ ಕೃ?ನ ಸಾಮರ್ಥ್ಯ ಕಂಡು ನನಗೆ ಈ? ನಿರ್ಮಾಣವಾಗಿದೆ.”
“ಕೃ?ನ…?” ಶ್ವಾಸ ತಡೆಹಿಡಿದುಕೊಂಡು ಕೇಳಿದಳು.
“ಹೌದು, ಅರ್ಜುನನ ಶೌರ್ಯತನ ಹಿರಿದಾದುದು. ಎಲ್ಲರಿಗೂ ಕಾಣಿಸುವಂತಹದ್ದು. ಭೀ?, ದ್ರೋಣ, ನನ್ನ ಮಿತ್ರ ದುರ್ಯೋಧನ ಈ ಎಲ್ಲರೂ ಈತನ ಹಾಗೆ ಶೂರರು, ಧೀರರು. ಆದರೆ ಕೃ?ನ ಸಾಮರ್ಥ್ಯ ಅದೃಶ್ಯ, ಅಗಮ್ಯವಾದದ್ದು. ಆತನ ಮನದಲ್ಲಿ ಭೂತಕಾಲಕ್ಕೆ ಸ್ಥಳವಿಲ್ಲ. ಆತ ವರ್ತಮಾನವನ್ನು ಕೈಯಿಂದ ಜಾರಿ ನುಣುಚಿಕೊಂಡು ಪಾರಾಗುವುದಕ್ಕೆ ಬಿಡುವುದಿಲ್ಲ. ಪಕ್ಷಿಗೆ ಹವೆಯ ದಿಶೆ ಗೊತ್ತಾಗುವಂತೆ ಆತನಿಗೆ ಭವಿ?ತ್ಕಾಲ ಗೊತ್ತಾಗುತ್ತದೆ. ನನಗೆ, ಪರಿಪೂರ್ಣ ಪುರು?ತ್ತಮನಾದ ಅವನಂತೆ ಶಕ್ತಿ ಪ್ರಾಪ್ತಿ ಮಾಡಿಕೊಳ್ಳಬೇಕೆಂಬ ಪ್ರಬಲ ಆಕಾಂಕ್ಷೆ ಇತ್ತು” ಕರ್ಣನ ಮುಖ ಸಂತೋ?ದಿಂದ ಅರಳಿತ್ತು. ತನ್ನ ಮುಷ್ಟಿಯಿಂದ ಕಪಾಳಕ್ಕೆ ಗುದ್ದಿಕೊಂಡು ನುಡಿದ, “ಮಾತೆ, ನಾನು ಬಂಧನದಿಂದ ಮುಕ್ತನಾಗಿದ್ದೆ. ನೀನು ಈ ವೇಳೆಯಲ್ಲಿ ಆಗಮಿಸಿ ನನ್ನನ್ನು ಬಂಧಿಯಾಗಿ ಮಾಡಿದೆ.”
“ನಾನೇ?”
“ಹೌದು ಮಾತೆ. ನಿನ್ನೆ ಎಂದಿನಂತೆ ನಸುಕಿನಲ್ಲಿ ಪುರಶ್ಚರಣಕ್ಕಾಗಿ ಹೋಗಿದ್ದೆ. ಉದಯಿಸುತ್ತಿರುವ ಸೂರ್ಯನಿಗೆ ಅರ್ಘ್ಯ ಕೊಡುವಾಗ, ಅಂತಿಮ ಪ್ರಾರ್ಥನೆ ಮಾಡಿದೆ. “ಹೇ ಭಾಸ್ಕರನೇ ನಿನ್ನ ಪ್ರಕಾಶ ಅಕ್ಷಯವಾಗಿದೆ. ನಿನ್ನ ತೇಜಸ್ಸು ಅವಿನಾಶಿಯಾಗಿದೆ. ಈ ವಿಶ್ವದ ಆತ್ಮ ನೀನಾಗಿರುವೆ. ಹೇ ಆದಿತ್ಯನೆ, ನನ್ನ ಜನ್ಮದ ರಹಸ್ಯ, ನನಗೆ ತಟ್ಟಿದ ಶಾಪ, ನಾನು ಮಾಡಿದ ದಾನಗಳಿಂದ ಆದ ಎಡವಟ್ಟುಗಳು ನನ್ನ ಹಿಂದೆ ನೆರಳಿನಂತೆ ಹಿಂಬಾಲಿಸುತ್ತಿವೆ. ನನ್ನ ಅಸ್ತಿತ್ವಕ್ಕೆ ಅಂಟಿಕೊಂಡಿರುವ ಈ ಕಹಿನೆನಪುಗಳನ್ನು ನಿನ್ನ ಕಿರಣಗಳಿಂದ ಸುಟ್ಟು ಹಾಕು. ಭವಿ?ದಲ್ಲಿ, ನಿನ್ನ ನಿತ್ಯ ನೂತನ ಕಿರಣಗಳಂತೆ ಜೀವಿಸುವಂತೆ ನನಗೆ ಅನುಗ್ರಹಿಸು. ಅದೂ ನಾಳೆಯ ನಿರ್ಣಾಯಕ ಯುದ್ಧಕ್ಕಾಗಿ.”
ಅದೇ ಕ್ಷಣ ಸೂರ್ಯಭಗವಾನರು ಪ್ರತ್ಯಕ್ಷರಾಗಿ ನನ್ನ ಮುಂದೆ ನಿಂತರು. ಖಿನ್ನರಾಗಿದ್ದ ಅವರು ವಿಚಿತ್ರವಾಗಿ ನಕ್ಕು ನುಡಿದರು. “ವತ್ಸನೆ, ನಿನ್ನ ಅಂತಿಮ ಪ್ರಾರ್ಥನೆಯನ್ನೂ, ನಿನಗೆ ನನ್ನ ಮೇಲಿದ್ದ ಅಪಾರ ಶ್ರದ್ಧೆಯನ್ನೂ ಕಂಡು ಪ್ರಸನ್ನನಾದೆ. ವಿಶ್ವದ ಸ್ಥಿರತೆಯನ್ನು ನಿರ್ಮಾಣ ಮಾಡಿದವನು ನಾನೇ ಅಲ್ಲವೇ? ನಾನು ನಿನಗೆ ಒಂದು ಅಪೂರ್ವವಾದ ವರ ದಯಪಾಲಿಸುತ್ತೇನೆ; ಆದರೆ ಒಂದು ಕರಾರಿನ ಮೇಲೆ. ಬರಲಿರುವ ಹನ್ನೆರಡು ಪ್ರಹರದಲ್ಲಿ ಸ್ಥಿರತೆಯ ಯಾವುದೇ ಚಿಹ್ನೆ ಇಲ್ಲವೇ ಗುರುತು ನಿನಗೆ ಕಾಣಿಸಬಾರದು. ಹಾಗೆ ಕಂಡ ತಕ್ಷಣ ನಾನು ನೀಡಿದ ಈ ವರದ ಶಕ್ತಿ ನಾಶವಾಗುವುದು.” ಮಾತೆ, ಅಪೂರ್ವ ವರವೊಂದು ಪ್ರಾಪ್ತವಾಗಿತ್ತು. ನಾನು ಧನ್ಯನಾಗಿ ಶಿಬಿರಕ್ಕೆ ಮರಳಿದೆ. ಆಗ ನಾನು ಭೂತಕಾಲದ ದಾಸ್ಯದಿಂದ ಮುಕ್ತನಾಗಿದ್ದೆ. ನನ್ನನ್ನು ಬಂಧಿಸಿದ್ದ ಬೇಡಿಗಳು ಕಳಚಿ ಬಿದ್ದು ಹೊಸ ಮನು?ನಾಗಿದ್ದೆ. ನಾನು ಜಗದೇಕವೀರನಾಗಿದ್ದೆ. ವರದ ಪ್ರಭಾವದಿಂದ ಸೂತಪುತ್ರನಾದ ನನ್ನಿಂದ ನಾಳೆ ಸರ್ವಶ್ರೇ? ಧನುರ್ಧಾರಿಯ ವಧೆ ಖಂಡಿತ ಆಗುವದಿತ್ತು. ಆದರೆ ಅ?ರಲ್ಲಿ ನಿನ್ನ ಆಗಮನವಾಯಿತು. ನಿನಗೆ ರೂಢಿಯಂತೆ ನಾನು ನಮಸ್ಕರಿಸಿದೆ. ಹಾಗೆ ಮಾಡುವಾಗ ನಿನ್ನ ಪಾದಗಳಂತೆ ನನ್ನ ಪಾದಗಳಿರುವ ಸಾದೃಶ್ಯ ನನ್ನ ಗಮನಕ್ಕೆ ಬಂದಿತು. ಅದೇ ಕ್ಷಣ ಇವು ನನ್ನ ಜನ್ಮದಾತೆಯ ಪಾದಗಳು ಎಂದು ಗುರುತಿಸಿಬಿಟ್ಟಿದ್ದೆ. ಮಾತೆ ಸ್ಥಿರತೆಯ ಪ್ರತೀಕವಲ್ಲವೇ? ಈಗ ನಾನು ನನ್ನ ಅಸ್ತಿತ್ವವನ್ನು ಕಳೆದುಕೊಂಡಂತೆ ಭಾಸವಾಯಿತು. ನಾಳೆ ಯುದ್ಧಭೂಮಿಯಲ್ಲಿ, ಈ ಶಾಪ, ದಾನಗಳು ನನ್ನನ್ನು ಅಟ್ಟಿಸಿಕೊಂಡು ಬೆನ್ನುಹತ್ತುತ್ತವೆ” ಇ? ವೇಳೆ ಆವೇಗದಿಂದ ಮಾತನಾಡುತ್ತಿದ್ದ ಕರ್ಣ ಸ್ವಲ್ಪ ಹೊತ್ತು ಸುಮ್ಮನೆ ನಿಂತ. ತನ್ನ ತಲೆಯನ್ನು ಮೇಲಿಂದ ಮೇಲೆ ಹೊರಳಾಡಿಸುತ್ತ ನುಡಿದ.
“ಅರ್ಜುನ ನನ್ನ ಸಹೋದರನೇ? ಅಂದರೆ ದ್ರೌಪದಿ… ತುಂಬಿದ ಸಭೆಯಲ್ಲಿ ನನ್ನ ಅತ್ತಿಗೆಯನ್ನು… ಅಯ್ಯೋ, ಮಾತೆ, ನನ್ನನ್ನು ಕ್ಷಮಿಸು.” ಕುಂತಿ ಮೇಲೆ ಎದ್ದಳು. ಸಂಪೂರ್ಣವಾಗಿ ಉಧ್ವಸ್ತನಾದ ತನ್ನ ಪುತ್ರನ ತಲೆಯ ಮೇಲೆ ಕೊನೆಯ ಬಾರಿಗೆ ಪ್ರೀತಿಯಿಂದ ಕೈ ಆಡಿಸಿದಳು. ಆಶ್ಚರ್ಯ, ಆನಂದ, ಖಿನ್ನತೆ, ವಿರಕ್ತಿ ಆಕೆಯ ಮನವನ್ನು ಸುತ್ತುವರಿದಿದ್ದವು, ಅಶ್ರುತುಂಬಿದ ಕಣ್ಣುಗಳನ್ನು ಒರೆಸುತ್ತ ಆಕೆ ನುಡಿದಳು. “ಉತ್ತರರಾತ್ರಿ ಕಳೆದು ಹೋಗಿದೆ. ನಾನು ನಿರ್ಗಮಿಸಲೇಬೇಕು.”
“ನಿಲ್ಲು ಮಾತೆ, ಎ?ಂದು ಸಮಯದ ನಂತರ ನಿನ್ನ ಆಗಮನವಾಗಿದೆ. ನೀನು ಏನನ್ನೂ ಸ್ವೀಕರಿಸಲಿಲ್ಲ. ನನಗೆ ಏನನ್ನು ನೀಡಲಿಲ್ಲ. ನಾನು ನಿನ್ನ ಜೊತೆಗೆ ಬರುತ್ತೇನೆ. ಕೆಲಕ್ಷಣದವರೆಗೆ ನಿನ್ನ ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ನಡೆಯುವ ಸೌಭಾಗ್ಯವಾದರೂ ನನಗೆ ಪ್ರಾಪ್ತವಾಗಲಿ.” ಕರ್ಣ ಒಳಗೆ ಹೋಗಿ ಉತ್ತರೀಯವನ್ನು ಹೊದ್ದುಕೊಂಡು ಹೊರಗೆ ಬಂದ. ಅವರಿಬ್ಬರು ಹೊರಗೆ ಬಿದ್ದರು. ಇಬ್ಬರೂ ಮೌನಧಾರಣೆ ಮಾಡಿದ್ದರು. ಕೇವಲ ಅವರಿಬ್ಬರ ಹೆಜ್ಜೆಯ ಅನುರಣನ ಕೇಳಿಬರುತ್ತಿತ್ತು. ಶಿಬಿರದ ಕೊನೆಯವರೆಗೆ ಬಂದರು. ಕರ್ಣ ಅಲ್ಲಿಯೆ ನಿಂತ.
“ಮಾತೆ, ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವ ಈ ಎಲ್ಲ ಸಹೋದರರಿಗೆ ನನ್ನ ನಲುಮೆಯ ಆಶೀರ್ವಾದಗಳನ್ನು ಹೇಳು. ಇವರಲ್ಲಿ ಒಬ್ಬರನ್ನಾದರೂ ನಾನು ಆಲಂಗಿಸಿದ್ದರೆ, ನನಗೆ ಬಹಳ ಸಂತೋ?ವಾಗುತ್ತಿತ್ತು. ಹಾಗೆಯೇ ದ್ರೌಪದಿಗೆ ಹೇಳು, ’ನಾಳಿನ ಅಂತಿಮ ಯುದ್ಧದಲ್ಲಿ ಅರ್ಜುನನನ್ನು ಬಿಟ್ಟು, ಆಕೆಯ ಉಳಿದ ಪತಿಗಳನ್ನು ನಾನು ಎದುರಿಸುವುದಿಲ್ಲ.’ ನನ್ನ ಜೀವನದಲ್ಲಿಯ ಈ ಶ್ರೇ? ಹಾಗೂ ಕೊನೆಯ ದಾನವನ್ನು ಆಕೆಗೆ ನೀಡುತ್ತೇನೆ. ಅಂತಿಮವಾಗಿ, ನಿಮ್ಮ ಬೆನ್ನ ಹಿಂದೆ ಇದ್ದು, ಸದಾ ನಿಮ್ಮನ್ನು ರಕ್ಷಿಸುತ್ತಿರುವ ನಿಮ್ಮ ಆ ಯೋಗೀಶ್ವರ ಕೃ?ನಿಗೆ,……” ಕರ್ಣ ಇದ್ದಕಿದ್ದಂತೆ ಬೆಚ್ಚಿಬಿದ್ದ. ಅಧೋಮುಖವದನಳಾಗಿ ನಿಂತಿದ್ದ ಕುಂತಿಯ ಮಣಿಗಟ್ಟನ್ನು ಬಿರುಸಿನಿಂದ ಹಿಡಿದು ವಿಚಾರಿಸಿದ.
“ಮಾತೆ, ದಿಟವನ್ನೇ ಹೇಳು, ನೀನಾಗಿಯೇ ಬಂದೆಯೋ, ಇಲ್ಲವೆ ಕೃ?ನ ಆದೇಶದಂತೆ ಇಲ್ಲಿಗೆ ಬಂದಿದ್ದೀಯೋ?” ಕುಂತಿ ಮುಖವನ್ನು ಮೇಲೆ ಮಾಡಲಿಲ್ಲ. ಆಕೆ ತನ್ನ ವಸ್ತ್ರವನ್ನು ಬಾಯಿಯಲ್ಲಿ ಹಿಡಿದು ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು. ಕರ್ಣನಿಗೆ, ಬಾಣವೊಂದು ತನ್ನ ಕಿವಿಯ ಸಮೀಪ ಅನಿತ ವೇಗದಿಂದ ಸರ್ರ್ ಎಂದು ಹಾಯ್ದು ಹೋದಂತೆ ಅನಿಸಿತು. ಅದನ್ನು ತಪ್ಪಿಸಿಕೊಳ್ಳಲು ತನ್ನ ತಲೆಯನ್ನು ಸರಿಸಿದ. ಆದರೆ ಒಂದರ ಹಿಂದೆ ಮತ್ತಿ? ಬಾಣಗಳು ಅವನ ಕಿವಿಯ ಹತ್ತಿರ ಹಾಯ್ದು ಹೋಗುತ್ತಲೇ ಇದ್ದವು.
ಕರ್ಣ ಕಣ್ಣು ತೆರೆದು ಸುತ್ತಲೂ ಕಣ್ಣು ಹಾಯಿಸಿದ. ಕುಂತಿ ಮಗ್ಗಲಲ್ಲಿ ಇರಲಿಲ್ಲ. ದೂರದಲ್ಲಿ ಆಕೆಯ ಎತ್ತರವಾದ ರೂಹು ಮರೆಯಾಗುತ್ತ ಹೊರಟಿತ್ತು. ಪಡುವಣ ದಿಕ್ಕಿನಲ್ಲಿ ಅ?ಮಿಯ ಚಂದ್ರ ಅಸ್ತಂಗತವಾಗುತ್ತಿದ್ದರೆ, ಪೂರ್ವ ಕ್ಷಿತಿಜದಲ್ಲಿ ನೇಸರ ತನ್ನ ಹೊಂಬಣ್ಣ ಪಸರಿಸುತ್ತ ನಡೆದಿದ್ದ.