ಮನಸಾಪಿ ಯದಸ್ಪೃಷ್ಟಂ ದೂರಾದಪಿ ಯದುಜ್ಝಿತಮ್ | ತದಪ್ಯುಪಾಯೈರ್ವಿವಿಧೈರ್ವಿಧಿರಿಚ್ಛನ್ ಪ್ರಯಚ್ಛತಿ || – ಸುಭಾಷಿತಸುಧಾನಿಧಿ “ಯಾವುದನ್ನು ಮನಸ್ಸಿನಿಂದ ಕೂಡ ಮುಟ್ಟಲಾಗಲಾರದೋ, ಯಾವುದು ನಿರಾಶೆಯಿಂದ ತಿರಸ್ಕರಿಸಲ್ಪಟ್ಟಿದೆಯೋ, ಅಂಥದನ್ನೂ ಸಹ ಬಗೆಬಗೆಯ ಮಾರ್ಗಗಳಿಂದ ವಿಧಿಯು ನಿಶ್ಚಯಿಸಿ ನೀಡುತ್ತದೆ.” ತನಗೆ ಯಾವುದು ಸಲ್ಲಬೇಕು, ತಾನು ಹೇಗೆ ಸಾಗಬೇಕು ಎಂದು ಮನುಷ್ಯನಿಗಿರುವ ನಿರ್ಣಯಾಧಿಕಾರವು ಪರಿಮಿತವಾದದ್ದು. ಅಂತಿಮವಾಗಿ ಎಲ್ಲವೂ ನಡೆಯುವುದು ದೈವವು ವಿಧಿಸಿರುವಂತೆಯೇ – ಎಂಬ ನಮ್ರಭಾವವನ್ನು ರೂಢಿಸಿಕೊಂಡು ದೈವಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುವುದು ಆಂತರಂಗಿಕ ಸ್ವಾಸ್ಥ್ಯಕ್ಕೆ ಅನುಕೂಲಕರವಾಗುತ್ತದೆ. ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚ್ ಭಾ?ಯಲ್ಲಿ ರಮ್ಯಕಾವ್ಯಪ್ರಸ್ಥಾನದ ಆದ್ಯನೆಂದು […]
ದೀಪ್ತಿ
Month : November-2017 Episode : Author :