ನಾಡು ನಮ್ಮದು, ಕರುನಾಡು ನಮ್ಮದು
ದಾಸ ಶರಣ ಸಂತ ಕವಿ , ಗುಡಿಯು ನಮ್ಮದು
ಕೃಷ್ಣ ತುಂಗೆ ಕಾವೇರಿ
ಹರಿವ ಸೊಬಗು ನೋಡಿರಿ
ಶಾರದೆ ಚಾಮುಂಡಿ ದುರ್ಗೆ
ಹರಸೊ ವರವ ಬೇಡಿರಿ
ಗೀತ ನಾಟ್ಯ ಸಾಹಿತ್ಯ ಶಿಲ್ಪ
ಶಿಕ್ಷಣಾದಿ ಕಾಶಿಯು
ತಾಯ ಮಡಿಲಲ್ಲಿ ಇಹುದು
ಅನ್ನ ಹೊನ್ನ ರಾಶಿಯು
ದೂರ ಹಬ್ಬಿ ನಿಂತ ತೀರ
ಪಡುವಣದ ಸಾಗರ
ತೆಂಗು ಕಂಗು ನಂದಿ ಸುರಗಿ
ಶ್ರೀಗಂಧ ಹೊನ್ನೆಯಾಗರ
ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ
ಗಂಗ ಕದಂಬರ ಸಿರಿ ಮುಡಿಯು
ಚೆನ್ನಮ್ಮಾಜಿ ರಾಯಣ್ಣರಿಟ್ಟ
ಸ್ವಾತಂತ್ರ್ಯ ಧೀರ ಕಿಡಿಯು
ಹಸಿರನುಟ್ಟ ಘಟ್ಟ ಬೆಟ್ಟ
ಬಯಲು ಮಲೆಯ ನಾಡು
ಆನೆ ಜಿಂಕೆ ಚಿರತೆ ಹುಲಿ
ಪಕ್ಷಿ ಮೆರೆವ ಕಾಡು
ಭಿನ್ನ ಭಿನ್ನವಿರೆ ಪ್ರದೇಶ
ಕನ್ನಡ ನಾಡು ಸುಂದರ
ಚೆನ್ನ ಭಿನ್ನ ಆಡುಭಾ?
ಬೆಸೆವ ಭಾವಬಂಧುರ!
ಚಂದ್ರೇಗೌಡಾ ನಾರಮ್ನಳ್ಳಿ