ಮೊದಲ ನೋಟ ಹಾಗೂ ಸ್ಪರ್ಶಕ್ಕೇ ಆದಿತ್ಯನಿಗೆ ತಿಳಿದದ್ದು ಇಂದು ಎಲ್ಲರಿಗೂ ಪರಿಚಿತವೇ ಆಗಿರುವ ಶಿವಲಿಂಗದಂತಹದೇ ಆದ ಆ ಅರ್ಧ ಅಡಿಯ ಮರದ ವಸ್ತು ನೈಸರ್ಗಿಕವಲ್ಲದಷ್ಟು ನಯವಾಗಿದೆ ಎಂದು. ಅಂದರೆ ಇದು ಎಂದೋ ಯಾರಿಂದಲೋ ನಯಗೊಳಿಸಲ್ಪಟ್ಟಿದೆ! ಇದು ವಾಸ್ತವವಾಗಿಯೂ ತಾನು ಶೋಧಿಸಿರುವ ಪ್ರಾಚೀನ ನಗರದ್ದೇ ಅಥವಾ ಇತ್ತೀಚಿನ ದಿನಗಳಲ್ಲೇ ಗಂಗಾವಳಿ ನದಿಯ ಮೂಲಸ್ಥಾನದಿಂದ ಸಮುದ್ರದವರೆಗಿನ ಯಾವುದಾದರೂ ದೇವಾಲಯದಿಂದಲೋ ಮನೆಯಿಂದಲೋ ಯಾವ ಕಾರಣಕ್ಕೋ ಹೊರಬಿದ್ದು ಪ್ರವಾಹದಲ್ಲಿ ತೇಲಿಬಂದು ಹೇಗೋ ನೂರಿಪ್ಪತ್ತು ಅಡಿಗಳಳಾಕ್ಕೆ ಸೇರಿದ್ದೋ? ಯುವ ಪುರಾತತ್ತ್ವಶಾಸ್ತ್ರಜ್ಞ ಕಣ್ಣುಗಳನ್ನು ಕಿರಿದುಗೊಳಿಸಿಕೊಂಡ. ಇರಲಿ, […]