
1920ರಲ್ಲಿ ಗಾಂಧಿ ಕರನಿರಾಕರಣೆಯ ಅಸಹಕಾರ ಚಳವಳಿಗೆ ಮುಂದಾಗಲು ಕರೆ ನೀಡಿದ್ದೇ ಕನ್ನೆಗಂಟಿ ಹನುಮಂತುವಿನ ಬಂಡಾಯಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿತು. ಯಾವೊಬ್ಬ ರೈತ ಕೂಡ ಬ್ರಿಟಿಷ್ ಸರಕಾರಕ್ಕೆ ಈ ಸುಂಕವನ್ನು ನೀಡಬಾರದೆಂದು ಅವರು ನಾಲ್ಕಾರು ಗ್ರಾಮಗಳ ರೈತರನ್ನು ಒಗ್ಗೂಡಿಸಿದರು. ಆಗ ಬ್ರಿಟಿಷ್ ಅಧಿಕಾರಿಗಳು ಗ್ರಾಮಕ್ಕೆ ಬಂದು ಸುಂಕ ನಿರಾಕರಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಭಾರತದಾದ್ಯಂತ ಧಗಧಗಿಸಿದ ಸ್ವಾತಂತ್ರ್ಯ ಸಂಗ್ರಾಮದ ದಳ್ಳುರಿಯ ನಡುವೆ ಆಂಧ್ರಪ್ರದೇಶದ ಒಂದು ಹಳ್ಳಿಯಿಂದ ಸಿಡಿದೆದ್ದ ಘೋಷಣೆಯೊಂದು ಬ್ರಿಟಿಷ್ ಆಡಳಿತಗಾರರ […]