ಪುಸ್ತಕಗಳನ್ನು ಕೊಳ್ಳುವುದಿರಲಿ, ಅವುಗಳ ಉಪಲಬ್ಧಿಯೇ ಕಷ್ಟವಾಗಿದ್ದ ಆ ಕಾಲದಲ್ಲಿ ಅವರು ಎಲ್ಲ ಪಾಠಗಳನ್ನೂ ಕಂಠಗತ ಮಾಡಿಕೊಳ್ಳುವ ಅನಿವಾರ್ಯತೆ ಇದ್ದಿತು. ಹೀಗೆ ಮುಖಸ್ಥವಾದ ವಿದ್ಯೆಯ ಸತ್ಫಲಗಳನ್ನು ಮುಂದೆ ವರ್ಣೇಕರ್ ಅವರು ಗಳಿಸಿ ಇತರರೂ ಅನುಭವಿಸುವಂತಾದುದು ಸಂಸ್ಕೃತದ ಸುಕೃತ. ‘ಪ್ರಜ್ಞಾಭಾರತಿ’ ಶ್ರೀಧರ ಭಾಸ್ಕರ ವರ್ಣೇಕರ್ (೩೧.೦೭.೧೯೧೮ – ೧೦.೪.೨೦೦೦) ಅವರು ಆಧುನಿಕ ಸಂಸ್ಕೃತಸಾಹಿತ್ಯದ ಧ್ರುವತಾರೆ ಎಂದೇ ಕೀರ್ತಿತರು. ಅವರ ಕೃತಿಗಳು ರಾಷ್ಟ್ರಭಕ್ತಿ ಮತ್ತು ಉದಾತ್ತ ಕಲ್ಪಕತೆಗಳ ಬಿರುಕಿಲ್ಲದ ಬೆಸುಗೆಯ ಅಪೂರ್ವ ನಿದರ್ಶನಗಳು. ಅವರು ತಮ್ಮ ಸೃಷ್ಟಿಶೀಲ ರಚನೆಗಳಿಂದ ಸಂಸ್ಕೃತ ಮತ್ತು […]
ಭಾರತೀವಿವೇಕ
Month : August-2021 Episode : Author : ಬಿ.ಎನ್. ಶಶಿಕಿರಣ