ಎಲ್ಲ ಅನುಭವಗಳಲ್ಲಿ ಸ್ವಾನುಭವವೇ ನಿಜವಾದದ್ದು. ಬೇರೆಯವರು ಬಹಳಷ್ಟು ಅನುಭವ ಹೇಳಿದರೂ ನಮಗೆ ಬಂದ ಅನುಭವವೇ ಮಹತ್ತ್ವದ ಅನುಭವವಾಗಿರುತ್ತದೆ. ಸ್ವಾನುಭವದಿಂದ ಜಾಗೃತಿಯುಂಟಾಗುತ್ತದೆ, ಭಾವ ಬೆಳೆಯುತ್ತದೆ, ಸಾಧನೆಯಲ್ಲಿ ತೀವ್ರತೆ ಬರುತ್ತದೆ ಹಾಗೂ ಭಗವತ್ಪ್ರಾಪ್ತಿಯೂ ಶೀಘ್ರವಾಗಿ ಆಗುತ್ತದೆ. ಸತ್ಪುರುಷರು ನಮಗೆ ಈವರೆಗೆ ಸಾಕಷ್ಟು ವಿಚಾರ ಹೇಳಿರುತ್ತಾರೆ. ಆದರೆ ಅವರಿಗೆ ಭಗವಂತನು ಬೇಕೆನಿಸುವಂತೆ ನಮಗೆ ಬೇಕೆನಿಸುವನೆ? ಪ್ರಪಂಚದಲ್ಲಿ ವ್ಯಸ್ತರಾಗಿರುವ ನಮಗೆ ಭಗವಂತನ ಆವಶ್ಯಕತೆ ಇದೆ ಅನಿಸುತ್ತದೆಯೆ? ನಾವು ಚಿಕ್ಕವರಿಂದ ದೊಡ್ಡವರಾದೆವು, ವಿದ್ಯೆ ಸಂಪಾದಿಸಿದೆವು, ಉದ್ಯೋಗ ಪಡೆದುಕೊಂಡೆವು, ಮದುವೆ ಮಾಡಿಕೊಂಡೆವು. ಮಕ್ಕಳುಮರಿಗಳಾದವು, ಮನೆಮಾರು ಸಂಪಾದಿಸಿಕೊಂಡೆವು. […]
ಅಪೂರ್ಣವಸ್ತುಗಳಲ್ಲಿ ಸಮಾಧಾನ ಸಿಗಲಾರದು
Month : January-2016 Episode : Author : ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು