
ಬಿಟ್ಟುಬಂದ ದೇಶಕ್ಕಿಂತ ಇಲ್ಲಿಯ ಬದುಕೇ ತನಗೆ ಉತ್ತಮವಾಗಿದೆಯೆಂದುಕೊಂಡ ರಂಗನಾಥ ಅಲ್ಲಿನ ಪೌರತ್ವವನ್ನು ಸ್ವೀಕರಿಸಿದ. ಪ್ರಾಮಾಣಿಕತೆ, ತನ್ನ ಕಾರ್ಯದಲ್ಲಿ ತೋರಿದ ನಾಯಕತ್ವಗುಣ ಹಾಗೂ ತನ್ನ ಸಂವಹನ ಶೈಲಿಗಳಿಂದಾಗಿ ಧನ್ಯಾಡಿಯ ರಂಗನಾಥ ಇಂಗ್ಲೆಂಡಿನಲ್ಲಿ ಮಿಸ್ಟರ್ ರಂಗನಾದ. ಅಷ್ಟಲ್ಲದೆ ಮುಂದೆ ನಡೆದ ಲ್ಯಾಂಕಶೈರ್ ಕೌಂಟಿಯ ಚುನಾವಣೆಯಲ್ಲಿ ಕೌನ್ಸಿಲರ್ ಆಗಿ ಚುನಾಯಿಸಲ್ಪಟ್ಟ. ಈ ವಿಷಯ ಇಂಗ್ಲೆಂಡಿನ ಪತ್ರಿಕೆಗಳಲ್ಲದೆ, ರಂಗನಾಥನ ಹುಟ್ಟೂರು ಧನ್ಯಾಡಿಯ ಸಂಜೆ ಪತ್ರಿಕೆಯಲ್ಲೂ ಸಹ ಅವನ ಭಾವಚಿತ್ರದ ಸಹಿತ ಪ್ರಕಟವಾಗಿ ಊರಿನ ಸಮಸ್ತ ಜನತೆ ಈ ವಿಷಯವನ್ನು ಕೇಳಿ ಹೊಂಪುಳಿಹೋದರು. ಮುಂದಿನ […]