
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಗಮನಕ್ಕೆ ಬರುವ ಮುಖ್ಯವಾದ ವಿಷಯವೆಂದರೆ, ನಮ್ಮ ಚಳವಳಿಗಾರರ ಪೈಕಿ ಎಷ್ಟೋ ಮಂದಿ ಪತ್ರಕರ್ತರಿದ್ದರೆನ್ನುವುದು. ಸ್ವಾತಂತ್ರ್ಯವೀರರು ಪತ್ರಿಕೆಗಳನ್ನು ತಮ್ಮ ಹೋರಾಟದ ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು ಎಂದರೂ ಸಲ್ಲುತ್ತದೆ. ಹೀಗೆ ಪತ್ರಿಕಾವೃತ್ತಿ ನಮ್ಮ ರಾಷ್ಟ್ರೀಯ ಚಳವಳಿಯ ಒಂದು ಅವಿಭಾಜ್ಯ ಅಂಗವಾಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವದೇಶಾಭಿಮಾನವನ್ನು ಮೂಡಿಸುವ ಮತ್ತು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿದವು. ಭಾರತೀಯ ಮನಸ್ಸುಗಳ ಸ್ವರಾಜ್ಯದ ಕಲ್ಪನೆ ಒಂದು ಬೃಹತ್ ರಾಷ್ಟ್ರೀಯ ಆಂದೋಲನವಾಗಿ ಬೆಳೆಯುವುದರ […]