ಕೆಲವರು ಪರಿಸರದಿಂದಲೋ ಸಾಂದರ್ಭಿಕ ಪ್ರೇರಣೆಯಿಂದಲೋ ಸಾರ್ವಜನಿಕ ಕಾರ್ಯಕ್ಕೆ ಇಳಿಯುತ್ತಾರೆ. ಆದರೆ ಸಿದ್ದವನಹಳ್ಳಿ ಕೃಷ್ಣಶರ್ಮರು ಸಾರ್ವಜನಿಕ ಕಾರ್ಯಕ್ಕಾಗಿಯೇ ಹುಟ್ಟಿದವರು ಎನಿಸುತ್ತಿತ್ತು. ಕಳೆದ ಎಂದರೆ ಇಪ್ಪತ್ತನೇ ಶತಮಾನದ ನಡುಭಾಗದ ದಶಕಗಳಲ್ಲಿ ಕನ್ನಡ ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ವಿಶೇಷ ಮೊನಚನ್ನೂ ನಾವೀನ್ಯವನ್ನೂ ತುಂಬಿದವರು ಸಾಮಾಜಿಕ ಕಾರ್ಯಕರ್ತರಾಗಿಯೂ ಗಣ್ಯತೆ ಪಡೆದಿದ್ದ ಸಿದ್ದವನಹಳ್ಳಿ ಕೃಷ್ಣಶರ್ಮ (೪.೭.೧೯೦೪-೧೪.೧೦.೧೯೭೩). ಅವರ ಮಾತು, ಬರಹ, ಕ್ರಿಯಾಶೀಲತೆ – ಎಲ್ಲವೂ ಅಸಾಮಾನ್ಯವೇ ಆಗಿದ್ದವು. ಇಂದು ಪತ್ರಿಕೆಗಳ ವೈಶಿಷ್ಟ್ಯಗಳೆನಿಸಿರುವ ಅಂಕಣವೈವಿಧ್ಯ, ಶೈಲಿ, ನುಡಿಗಟ್ಟು ಮೊದಲಾದವುಗಳ ಆವಿಷ್ಕರಣ ಬಹುಮಟ್ಟಿಗೆ ಕೃಷ್ಣಶರ್ಮರ ಕೊಡುಗೆಯೆಂದರೆ ಅತ್ಯುಕ್ತಿಯಾಗದು. ಅವರ […]
ಸಿದ್ದವನಹಳ್ಳಿ ಕೃಷ್ಣಶರ್ಮ
Month : October-2021 Episode : Author : ಎಸ್.ಆರ್. ರಾಮಸ್ವಾಮಿ