
1. ಮಾಸಿಹೋಗದ ವಾರಸಿಕೆ “ನಿಜವಾದ ಒಬ್ಬ ಮಹಾತ್ಮನ ಬಗ್ಗೆ ಪ್ರಚಾರ ಮಾಡುವ ಆವಶ್ಯಕತೆ ಇಲ್ಲ. ಸರಿಯಾದ ಸಮಯ ಬಂದಾಗ ಗಾಂಧಿ ಲೋಕವಿದಿತರಾಗುತ್ತಾರೆ. ಏಕೆಂದರೆ ಜಗತ್ತಿಗೆ ಅವರ ಮತ್ತು ಅವರ ಸಂದೇಶದ ಆವಶ್ಯಕತೆ ಇದೆ.” ಈ ಮಾತುಗಳನ್ನಾಡಿದ್ದವರು ರವೀಂದ್ರನಾಥ ಠಾಕೂರರು, 1920ರಲ್ಲಿ. ಕೆಲವೇ ವರ್ಷಗಳ ತರುವಾಯ ಠಾಕೂರರ ಮಾತು ನಿಜವಾದದ್ದನ್ನು ಕಂಡೆವು. ಅದಾದ ಮೇಲೆ ದುರದೃಷ್ಟದಿಂದ ಒಂದು ವಿಸ್ಮರಣೆಯ ಪರ್ವ ಆರಂಭವಾಯಿತು. ಅದು ಇಂದಿಗೂ ಮುಂದುವರಿದಿದೆ. ಆದರೆ ಗಾಂಧಿಯವರ ವಾರಸಿಕೆ ಅಷ್ಟು ಸುಲಭವಾಗಿ ಕೊಡವಿಕೊಳ್ಳುವಂಥದಲ್ಲ. ಅವರ ಚಿಂತನೆಯಿಂದ ದೇಶವನ್ನು […]