ಮಗಳ ಮದುವ್ಯಾಗ ಕೊಡಾಕs ಬೇಕಂತ ಅಪ್ಪ ಮಾಡಿಸಾಕ ಹತ್ತಿದ್ದ ಕುಸುರಿಯ ಕರಿಮರದ ಮಂಚ.. ಗಟ್ಟುಳ್ಳ ಮಂಚಾಗಬೇಕು ಎರಡು ಮಕ್ಕಳಾದ್ರೂ ಮಲಗಿಸಿ ಮಕ್ಕೋಳ್ಳಾಕ ಬೇಕು ಅಂತ ತಲಿ ತಿಂದಿದ್ದ ಕೊಂಚ ಕಿಟಕಿಯಾಗs ಇಣುಕಿ ನೋಡಿದ ಮಗಳ ಮೊಗದಾಗ ಭರಪೂರ ನಾಚಿಕೆ ಅಪ್ಪನ ಮೊಗದಾಗ ಮುಗುಳ್ನಗಿ ನೆಂಟರಿಷ್ಟರೆಲ್ಲ ಅಕ್ಕಿಕಾಳ ಹಾಕಿ ಉಂಡು, ಉಟ್ಟು ಹಾಡಿ ಹರಸಿ ಹೋಗೂ ಹೊತ್ತಿನಾಗ ಮೌನದಾಗ ಮಂಚ ಈ ಮನಿಯಿಂದ ಆ ಮನಿಗ ಮಂಚದ ತುಂಬೆಲ್ಲ ಅರಳಿದ ಸುಮ ಅತ್ತರಿನ ಘಮ ಪಿಸುಮಾತು ಹುಸಿಮುನಿಸು ರನ್ನ […]
ಬಳುವಳಿ
Month : May-2020 Episode : Author : ಮಾಲತಿ ಹೆಗಡೆ