
–ಆರತಿ ಪಟ್ರಮೆ ಯಕ್ಷಗಾನ ಅಕಾಡೆಮಿ ವತಿಯಿಂದ ಪ್ರತಿದಿನವೂ ಓರ್ವ ಕಲಾವಿದರಂತೆ ಸಂವಾದ ನಡೆಸಿದ್ದು ನನಗೊಂದು ವಿಶಿಷ್ಟ ಅನುಭವದ ಕಂತೆಯನ್ನು ಒದಗಿಸಿಕೊಟ್ಟಿದೆ. ರಂಗಸ್ಥಳದ ಅರಸರಾಗಿ ಮೆರೆದ, ದೇವರೇ ಆಗಿ ವರಗಳನ್ನು ದಯಪಾಲಿಸಿದ ಕಲಾವಿದರ ಮನೆಯೊಳಗಿನ ಕಥೆ ಉಂಟುಮಾಡಿದ ಕಸಿವಿಸಿ ಅಷ್ಟಿಷ್ಟಲ್ಲ. ವೃದ್ಧಾಪ್ಯದ ಹಲವು ಬಣ್ಣಗಳನ್ನು, ಹಲವು ನೋಟಗಳನ್ನು ಕಂಡು ಅರಗಿಸಿಕೊಂಡಿರುವೆನಾದರೂ ಕಲ್ಪನೆಯಲ್ಲಿ ಕಂಡ ಕಲಾವಿದರ ಚಿತ್ರಕ್ಕೂ ನೈಜ ಬದುಕಿಗೂ ಅಜಗಜಾಂತರವಿದೆ. ವೃದ್ಧಾಪ್ಯವೆಂಬುದು ಅಷ್ಟೊಂದು ಹೀನಾಯವೇ? ದೇವರೊಬ್ಬರನ್ನು ಬಿಟ್ಟರೆ! ಅತಿ ಹಿರಿಯ ಕಲಾವಿದರೋರ್ವರಿಗೆ ಕರೆ ಮಾಡಿ ಮಾತನಾಡಿಸಿದಾಗ ಅವರಿಗೆ ‘ಝೂಮ್’ನ […]