
ಮುಖಪುಟ ಲೇಖನ -1- 908ರ ಅಲಿಪುರ ಬಾಂಬ್ ಪ್ರಕರಣದಲ್ಲಿ (ಅದನ್ನು ಮಾಣಿಕತಲಾ ಬಾಂಬ್ ಪ್ರಕರಣವೆಂದೂ ಕರೆಯುತ್ತಾರೆ) ಅರವಿಂದ ಘೋಷರೂ ಆರೋಪಿಗಳಾಗಿದ್ದರು. ಅವರ ಮೇಲೆ ರಾಜದ್ರೋಹ ಮತ್ತು ಒಳಸಂಚಿನ ಆರೋಪವಿದ್ದಿತು. ಆ ಪ್ರಕರಣದಲ್ಲಿ ಅರವಿಂದರ ಪರವಾಗಿ ವಾದಿಸಿದವರು ಬಂಗಾಳದ ಜನನಾಯಕರೆಂದು ಹೆಸರಾದ ಚಿತ್ತರಂಜನ್ ದಾಸ್ ಅವರು. ಅವರು ತಮ್ಮ ವಾದದ ಸಾರಾಂಶವೆಂಬಂತೆ ನ್ಯಾಯಾಧೀಶರಿಗೆ ಮಾಡಿದ ಕೊನೆಯ ಮನವಿಯು ಹೃದಯಸ್ಪರ್ಶಿಯಾಗಿದ್ದಿತು. ಆರೋಪಿಯಾದ ಅರವಿಂದರ ಬಗ್ಗೆ ವಿವರಿಸುತ್ತ ಅವರು “ಈವರೆಗೆ ಎದ್ದ ಎಲ್ಲ ವಾದ-ವಿವಾದಗಳೂ ಕೊನೆಗೊಂಡು ಹಲವು ವರ್ಷಗಳೇ ಕಳೆದಮೇಲೆ ನಡೆಯುತ್ತಿರುವ […]