
ಎಲ್.ವಿ. ಶಾಂತಕುಮಾರಿ ಕಾಳ ಕತ್ತಲ ಹೃದಯವ ನಾದಿ ನಾದಿ ನಾದಿ, ಬೆಳಕಿನೆಳೆಗಳ ಹಿಡಿದೆಳೆತಂದು, ಇಲ್ಲಿ ನಿಲ್ಲಿಸುವೆ ಸೂರ್ಯ ಚಂದ್ರ ತಾರೆಗಳ. ಬಾಲರವಿ ಎಳೆಬೆಳಕು, ನಡುಹಗಲ ಸುಡುಬೆಳಕು, ಇಳಿಸಂಜೆ ಸೂರ್ಯ ಹರಡುವ ರಂಗಿನಾರತಿ ಬೆಳಕು, ಇರುಳ ಚಂದ್ರನ ಬೆಳಕು, ಮಿನುಗು ತಾರೆಯ ಬೆಳಕು, ಮುಗಿಲ ಮರೆಯಿಂದೆಸೆವ ಸಿಡಿಲು-ಮಿಂಚಿನ ಬೆಳಕು, ಕಾಳ್ಗಿಚ್ಚು ಜ್ವಾಲಾಮುಖಿ ಹಣತೆ ದೀಪಗಳ ಬೆಳಕು, ಹೇಗೆ ಮೂಡಿಸುವೆ ತಾಯೆ ಬೆಳಕಿನಚ್ಚರಿಯನೀ ಜಗದೊಳಗೆ ಅರೆಗಳಿಗೆಯಲಿ? ಕಾರ್ಗಲ್ಲಿನೆದೆಯಿಂದ ಸೆಳೆ ಸೆಳೆದು ನೀರ ಹನಿಗಳ ಸಾಗರ ನದನದಿಗಳ ಅರೆನಿಮಿಷದಲ್ಲಿ ನಿರ್ಮಿಸುವೆ, […]