ಮುಖಪುಟ ಲೇಖನ
ಸತ್ಯನಾರಾಯಣ ಶಾನಭಾಗ್
ಭಾರತದಿಂದ ಅನೇಕ ಸಂತರು ಮಹಾತ್ಮರು ಅಮೆರಿಕದ ನೆಲದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಬೀಜಗಳನ್ನು ಬಿತ್ತಿದರು. ೧೯೦೨ರಲ್ಲಿ ಅಮೆರಿಕದಲ್ಲಿ ಕಾಲಿಟ್ಟ ಯುವ ಸಂತ ಸ್ವಾಮಿ ರಾಮತೀರ್ಥರು ಆನ್ವಯಿಕ ವೇದಾಂತದ ತತ್ತ್ವಗಳನ್ನು ಪ್ರಸಾರ ಮಾಡಿದರು. ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಕರೆತರಲು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ಗಳನ್ನು ಸ್ಥಾಪಿಸಲು ಅವರು ವಿಶೇಷ ಪ್ರಯತ್ನ ಮಾಡಿದರು.
ಆಮೇಲಿನ ಕಾಲಘಟ್ಟದಲ್ಲಿ ಪರಮಹಂಸ ಯೋಗಾನಂದ, ಪ್ರಸಿದ್ಧ ಬೀಟಲ್ ಮ್ಯೂಸಿಕ್ ಬ್ಯಾಂಡ್ನ ಮೇಲೆ ವಿಶೇಷ ಪ್ರಭಾವ ಬೀರಿದ್ದ ಮಹರ್ಷಿ ಮಹೇಶಯೋಗಿ, ಹರೇ ಕೃಷ್ಣ ಪಂಥವನ್ನು ಆರಂಭಿಸಿದ ಶ್ರೀಲ ಪ್ರಭುಪಾದರು, ಸ್ವಾಮಿ ನಾರಾಯಣ ಆಂದೋಲನ, ಯೋಗಗುರುಗಳಾದ ಬಿ.ಕೆ.ಎಸ್. ಐಯಂಗಾರ್, ಪಟ್ಟಾಭಿ ಜೊಯಿಸ್, ದೊಡ್ಡ ಅನುಯಾಯಿಗಳ ಪಂಗಡವನ್ನೇ ಹೊಂದಿದ್ದ ಓಶೋ ರಜನೀಶ್ರಿಂದ ಹಿಡಿದು ಇತ್ತೀಚಿಗೆ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್, ಮಾತಾ ಅಮೃತಾನಂದಮಯೀ, ಸದ್ಗುರು ಜಗ್ಗಿ ವಾಸುದೇವ್ರವರೆಗೆ ಭಾರತದ ಆಧ್ಯಾತ್ಮಿಕ ತತ್ತ್ವಚಿಂತನೆಯ ಪ್ರವಾಹ ನಿರಂತರವಾಗಿ ಅಮೆರಿಕದಲ್ಲಿ ಹರಿದಿದೆ.
ಜೋಬೈಡನ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ಅಮೆರಿಕÀದ ಬಾಹ್ಯಾಕಾಶ ಸಂಸ್ಥೆ ರ್ಸಿವಿಯರೆನ್ಸ್ ಹೆಸರಿನ ರೋವರ್ ಅನ್ನು ಮಂಗಳಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿ ಇನ್ನೊಂದು ಮೈಲಿಗಲ್ಲನ್ನು ಸ್ಥಾಪಿಸಿದ ಘಟನೆಯೂ ನಡೆಯಿತು. ಈ ಗಗನನೌಕೆಯ ಲ್ಯಾಂಡಿAಗ್ ಕಾರ್ಯಾಚರಣೆಯ ಗೈಡನ್ಸ್, ನ್ಯಾವಿಗೇಶನ್ ಮತ್ತು ಕಂಟ್ರೋಲ್ ಆಪರೇಶನ್ನ ನೇತೃತ್ವ ವಹಿಸಿದ್ದು ಭಾರತೀಯ-ಮೂಲದ ಏರೋಸ್ಪೇಸ್ ವಿಜ್ಞಾನಿ ೩೯ ವರ್ಷದ ಡಾ. ಸ್ವಾತಿ ಮೋಹನ್. ಈ ಮಹತ್ತ್ವದ ಘಟನೆಯ ಹಿನ್ನೆಲೆಯಲ್ಲಿ ನಾಸಾದ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದ ಜೋ ಬೈಡನ್ ಹೇಳಿದ ಮಾತು ಗಮನಾರ್ಹವಾದುದು: “ಇದೊಂದು ಅದ್ಭುತ, ಭಾರತೀಯ-ಮೂಲದ ಅಮೆರಿಕÀನ್ನರು ದೇಶವನ್ನೇ ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ; ನೀವು, ನಮ್ಮ ಉಪಾಧ್ಯಕ್ಷೆ (ಕಮಲಾ ಹ್ಯಾರಿಸ್), ನನ್ನ ಭಾಷಣಲೇಖಕ ವಿನಯ್ (ವಿನಯ್ ರೆಡ್ಡಿ)… ಧನ್ಯವಾದಗಳು. ನೀವೊಂದು ವಿಸ್ಮಯ.” (And it’s amazing. Indian – of descent – Americans are taking over the country: you; my Vice President; my speechwriter Vinay. I tell you what. But thank you. You guys are incredible.) ಒಂದು ನೂರು ವರ್ಷದ ಹಿಂದೆ ಹಿಂದೂಗಳ ಕುರಿತ ಅಮೆರಿಕÀನ್ನರು ಹೊಂದಿದ್ದ ಅಭಿಪ್ರಾಯದೊಂದಿಗೆ ಈ ಹೇಳಿಕೆಯನ್ನು ತುಲನೆ ಮಾಡಿದರೆ ಇದರ ಮಹತ್ತ್ವ ಸ್ಪಷ್ಟವಾದೀತು. ೧೯೦೭ರಲ್ಲಿ ಕಾಂಗ್ರೆಸ್ (ಅಮೆರಿಕÀದ ಸಂಸತ್ತು) ಅಮೆರಿಕÀದೊಳಗೆ ಹೊರದೇಶೀಯರ ವಲಸೆಯ ಕುರಿತು ಪರ-ವಿರೋಧಗಳ ಹೊಂದಾಣಿಕೆಗಾಗಿ ಒಂದು ಸಮಗ್ರ ಅಧ್ಯಯನ ಮಾಡುವ ಸಲುವಾಗಿ ಆಯೋಗವೊಂದನ್ನು ರಚಿಸಿತ್ತು. ಈ ಆಯೋಗ ೧೯೧೧ರಲ್ಲಿ ಸಲ್ಲಿಸಿದ ವರದಿಯಲ್ಲಿ “ಇದುವರೆಗೂ ಯುನೈಟೆಡ್ ಸ್ಟೇಟ್ಸ್ಗೆ ಪ್ರವೇಶ ಪಡೆದಿರುವವರ ಪೈಕಿ ಅತ್ಯಂತ ಕನಿಷ್ಠ ಅಪೇಕ್ಷಣೀಯ ಜನಾಂಗ ಎಂದು ಸಾರ್ವತ್ರಿಕವಾಗಿ ಪರಿಗಣಿಸಲ್ಪಟ್ಟಿರುವವರು ಹಿಂದೂಗಳು.” (Hindus were universally regarded as the least desirable race of immigrants thus far admitted to the United States). ಒಂದು ಶತಮಾನದ ನಂತರ ಇಂದು ಅಮೆರಿಕÀದಲ್ಲಿ ವಾಸವಾಗಿರುವ ಭಾರತೀಯ ಸಮುದಾಯದ ಜನಸಂಖ್ಯೆ ನಲವತ್ತೆöÊದು ಲಕ್ಷ ಮೀರುತ್ತದೆ. ಅಮೆರಿಕÀದ ಸ್ವಾತಂತ್ರಾö್ಯನAತರದ ವಲಸಿಗರ ಪೈಕಿ ಭಾರತೀಯ-ಮೂಲದವರು ಎರಡನೇ ದೊಡ್ಡ ವಲಸಿಗ ಸಮುದಾಯ. ಸಿಲಿಕಾನ್ ವ್ಯಾಲಿಯ ಟೆಕ್ ಕಂಪೆನಿಗಳ ಸಿಇಓಗಳು, ನಾಸಾದ ವಿಜ್ಞಾನಿಗಳು, ಆ ದೇಶದಲ್ಲಿನ ಡಾಕ್ಟರುಗಳು, ದೊಡ್ಡ ಪ್ರಮಾಣದ ಐಟಿ ಉದ್ಯೋಗಿಗಳು, ರಾಜಕೀಯ ಪಕ್ಷಗಳ ಮುಖಂಡರುಗಳು, ಸಂಸತ್ಸದಸ್ಯರು, ಉದ್ಯಮಿಗಳು, ಪತ್ರಕರ್ತರು – ಹೀಗೆ ಎಲ್ಲ ಪ್ರಭಾವೀ ಕ್ಷೇತ್ರಗಳಲ್ಲೂ ಭಾರತೀಯ-ಮೂಲದವರನ್ನು ಕಾಣಬಹುದು. ಅಮೆರಿಕÀದ ಜನಗಣತಿ ಬ್ಯೂರೋ ನಡೆಸಿದ ಅಮೆರಿಕನ್ ಕಮ್ಯುನಿಟಿ ಸರ್ವೇಯಲ್ಲಿ ಕಂಡುಬAದAತೆ ಅಮೆರಿಕÀದಲ್ಲಿ ವಾಸವಾಗಿರುವ ಭಾರತೀಯ-ಮೂಲದವರ ಜನಸಂಖ್ಯೆ ೪.೫ ಮಿಲಿಯನ್. ಇವರಲ್ಲಿ ೨.೬ ಮಿಲಿಯನ್ ಅಲ್ಲಿನ ನಾಗರಿಕರು; ಅವರ ಪೈಕಿ ೧.೨ ಮಿಲಿಯನ್ ಅಮೆರಿಕÀದಲ್ಲೇ ಹುಟ್ಟಿದ ಎರಡನೇ ತಲೆಮಾರು.
ವಲಸಿಗರ ನಾಡು ಅಮೆರಿಕÀ
ಹಾಗೆ ನೋಡಿದರೆ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಎಂದು ತನ್ನನ್ನು ಕರೆದುಕೊಳ್ಳುವ ಅಮೆರಿಕ ತಾನೇ ವಲಸಿಗರ ದೇಶ. ೧೪೯೨ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿಯಲೆAದು ಸ್ಪೇನಿನ ಕಡಲತೀರದಿಂದ ಪಶ್ಚಿಮದಿಕ್ಕಿಗೆ ಸಮುದ್ರಯಾನವನ್ನು ಆರಂಭಿಸಿದ ಕೊಲಂಬಸ್ ಇಂದಿನ ಮಧ್ಯ-ಅಮೆರಿಕದ ಬಹಾಮಾಸ್ ಹೆಸರಿನ ದ್ವೀಪವನ್ನು ತಲಪಿದ. ಅಲ್ಲಿಂದ ಯೂರೋಪಿಯನ್ನರಿಗೆ ಅಮೆರಿಕವೆಂದು ನಾಮಕರಣಗೊಂಡ ಹೊಸ ನೆಲದ ಪರಿಚಯವಾಯಿತು, ಯೂರೋಪಿಯನ್ನರ ವಲಸೆಯೂ ಆರಂಭವಾಯಿತು. ಅಮೆರಿಕÀದ ನೆಲದಲ್ಲಿ ಕಾಲೊನಿಗಳನ್ನು ನಿರ್ಮಿಸಿಕೊಂಡು ವಸಾಹತುಗಳನ್ನು ಸ್ಥಾಪಿಸಿದವರ ಪೈಕಿ ಬ್ರಿಟಿಷರೇ ಸ್ವಲ್ಪ ತಡವಾಗಿ ಬಂದವರು. ದಕ್ಷಿಣ ಅಮೆರಿಕÀದಲ್ಲಿ ಸ್ಪ್ಯಾನಿಷ್ ಮತ್ತು ಪೋರ್ಚುಗೀಸರ ಪ್ರಾಬಲ್ಯ ಹೆಚ್ಚಾದರೆ ಉತ್ತರ ಅಮೆರಿಕÀ ಬ್ರಿಟಿಷರ ತೆಕ್ಕೆಗೆ ಬಿತ್ತು. ಅಗಾಧವಾದ ಅಮೆರಿಕದ ನೆಲದ ನಿಸರ್ಗಸಂಪತ್ತು ಯೂರೋಪಿಯನರ ವಸಾಹತುಶಾಹಿಯನ್ನು ಆಕರ್ಷಿಸಿತು, ಸ್ಥಳೀಯ ಮೂಲಸಂಸ್ಕೃತಿಯ ಸಮಾಧಿಯ ಮೇಲೆ ಯೂರೋಪಿನ ವಸಾಹತು ಸೌಧ ನಿರ್ಮಾಣವಾಯಿತು ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಈ ನಡುವೆ ೧೮ನೇ ಶತಮಾನದ ಮಧ್ಯಭಾಗದಲ್ಲಿ ಉತ್ತರ ಅಮೆರಿಕದ ಬಹುತೇಕ ಪೂರ್ವ ಕರಾವಳಿಯಲ್ಲಿ ಸ್ಥಾಪಿತವಾದ ೧೩ ಬ್ರಿಟಿಷ್ ಕಾಲೊನಿಗಳು ತೆರಿಗೆ, ರಾಜಕೀಯ ಪ್ರಾತಿನಿಧಿತ್ವ, ಕಾಲೊನಿಗಳ ಆಡಳಿತ ನಿಯಂತ್ರಣ ಮೊದಲಾದ ವಿಷಯಗಳಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದೊಂದಿಗೆ ತಕರಾರು ತೆಗೆಯುವುದರೊಂದಿಗೆ ಆರಂಭಗೊAಡ ಅಮೆರಿಕನ್ ಕ್ರಾಂತಿ ೧೭೭೬ ಜುಲೈ ೪ರಂದು ಬ್ರಿಟಿಷ್ ಆಧಿಪತ್ಯದಿಂದ ಸ್ವಾತಂತ್ರö್ಯವನ್ನು ಘೋಷಿಸಿಕೊಳ್ಳುವುದರೊಂದಿಗೆ ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ ಹೆಸರಿನ ಸ್ವತಂತ್ರ ದೇಶದ ಉಗಮವಾಯಿತು. ಅಂದಿನ ಯೂರೋಪಿಗೆ ಅಷ್ಟು ಪರಿಚಿತವಲ್ಲದ ಪ್ರಜಾಪ್ರಭುತ್ವ ಎನ್ನುವ ಹೆಸರಿನ ಆಡಳಿತ ವ್ಯವಸ್ಥೆಯನ್ನು ಅದು ಸ್ಥಾಪಿಸಿತು. ಮುಂದಿನ ೬೦-೭೦ ವರ್ಷಗಳ ಕಾಲ ಉತ್ತರ ಅಮೆರಿಕÀದ ಎಲ್ಲ ದಿಕ್ಕುಗಳಲ್ಲಿ ಯುದ್ಧ, ಸ್ಥಳೀಯ ನಿವಾಸಿಗಳ ಮೇಲೆ ಆಕ್ರಮಣ ಮೊದಲಾದ ಸಂಘರ್ಷದ ಮಾರ್ಗದಲ್ಲಿ ತನ್ನ ಭೌಗೋಳಿಕ ವಿಸ್ತಾರವನ್ನು ಹೆಚ್ಚಿಸಿಕೊಂಡ ಯುನೈಟೆಡ್ ಸ್ಟೇಟ್ಸ್ ೧೯ನೇ ಶತಮಾದ ಮಧ್ಯದ ಹೊತ್ತಿಗೆ ಉತ್ತರ ಅಮೆರಿಕÀ ಖಂಡದಲ್ಲಿ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವಿನ ಅಗಾಧ ಭೂಭಾಗದಲ್ಲಿ ವಿಸ್ತರಿಸಿದ ದೇಶವಾಗಿ ಬೆಳೆಯಿತು.
ಇಂದಿನ ಅಮೆರಿಕÀ ದೇಶದ ಇತಿಹಾಸ ಇನ್ನೂರೈವತ್ತು ವರ್ಷ ದಾಟುವುದಿಲ್ಲ. ಆದರೂ ಅದು ಸಾಧಿಸಿದ ಭೌತಿಕ ಪ್ರಗತಿ ಅಸಾಧಾರಣವಾದುದು. ಭುವಿಯ ಮೇಲಿನ ಸ್ವರ್ಗ, ಅವಕಾಶಗಳ ನಾಡು ಎಂದೆಲ್ಲ ಅಭಿಮಾನ ಪಡುವ ಅಮೆರಿಕÀದ ಭೌತಿಕ ಪ್ರಗತಿ ಸಾಧ್ಯವಾದದ್ದು ವಲಸಿಗರಿಂದಲೇ. ೧೮೨೦ರಿಂದ ೧೯೨೦ರ ನೂರು ವರ್ಷಗಳ ಅವಧಿಯಲ್ಲಿ ಎರಡು ಅಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಯೂರೋಪಿನಿಂದ ಅಮೆರಿಕÀಕ್ಕೆ ವಲಸೆ ನಡೆಯಿತು. ೧೯ನೇ ಶತಮಾನದ ಆದಿಯಲ್ಲಿ ಉತ್ತರ ಮತ್ತು ಪಶ್ಚಿಮ ಯೂರೋಪಿನಿಂದ ಮತ್ತು ೧೮೬೦-೧೯೨೦ ಅವಧಿಯಲ್ಲಿ ದಕ್ಷಿಣ ಮತ್ತು ಪೂರ್ವ ಯೂರೋಪಿನ ಭಾಗಗಳಿಂದ ಆರ್ಥಿಕ ಬಡತನ ಮತ್ತು ರಾಜಕೀಯ ದಬ್ಬಾಳಿಕೆಯಿಂದ ಮುಕ್ತಿಯನ್ನು ಬಯಸಿ ದೊಡ್ಡ ಪ್ರಮಾಣದಲ್ಲಿ ಯೂರೋಪಿನಿಂದ ಅಮೆರಿಕÀಕ್ಕೆ ವಲಸೆ ನಡೆಯಿತು. ಹಾಗೆಯೇ ಯೂರೋಪನ್ನು ನಲುಗಿಸಿದ ಮಹಾಯುದ್ಧಗಳೂ ಕೂಡ ವಲಸೆಗೆ ಒಂದು ಪ್ರಮುಖ ಕಾರಣ. ಇಂದಿನ ಅಮೆರಿಕÀದ ಜನಾಂಗೀಯ ಸಂಯೋಜನೆಯಲ್ಲಿ ಶೇ. ೬೨ಕ್ಕೂ ಹೆಚ್ಚು ಜನರು ಯೂರೋಪಿನ ಬಿಳಿಯ ಜನಾಂಗದವರು. ಅಮೆರಿಕÀದ ಮೂಲನಿವಾಸಿಗಳ ಪಾಲು ಕೇವಲ ಶೇ. ೧ರಷ್ಟು.
ಅಮೆರಿಕದಲ್ಲಿ ಕಾಲಿಟ್ಟ ಭಾರತೀಯರು
೧೭೯೦ರಲ್ಲಿ ಮದ್ರಾಸಿನಿಂದ ಹೊರಟ ಬ್ರಿಟಿಷ್ ಹಡಗೊಂದರಲ್ಲಿ ಭಾರತೀಯರು ಅಮೆರಿಕÀಕ್ಕೆ ವಲಸೆ ಬಂದರು ಎನ್ನುವುದಕ್ಕೆ ಅಧಿಕೃತ ಉಲ್ಲೇಖಗಳು ಸಿಗುತ್ತವೆ. ಉಳಿದಂತೆ ೧೯ನೇ ಶತಮಾನದ ಮಧ್ಯದಲ್ಲಿ ಬ್ರಿಟಿಷರಿಂದ ಕೆರೆಬಿಯನ್ ದ್ವೀಪಗಳಿಗೆ ಕೃಷಿ-ಕೂಲಿಗಳಾಗಿ ಕರೆದೊಯ್ಯಲ್ಪಟ್ಟವರ ಪೈಕಿ ಅಮೆರಿಕÀ ಪ್ರವೇಶಿಸಿದ ಉಲ್ಲೇಖಗಳು ದೊರಕುತ್ತವೆ. ಆದರೂ ಮೊದಲ ಬಾರಿಗೆ ಗಣನೀಯ ಸಂಖ್ಯೆಯಲ್ಲಿ ಅಮೆರಿಕಕ್ಕೆ ವಲಸೆ ಬಂದದ್ದು ೧೮೯೯-೧೯೧೪ರ ನಡುವೆ; ಅವರಲ್ಲಿ ಬಹುತೇಕ ಮಂದಿ ಸಿಖ್ ಕೃಷಿಕಾರ್ಮಿಕರು ಮತ್ತು ಉದ್ಯಮಿಗಳು. ಟಾಟಾ ಕಂಪೆನಿಯ ಪರವಾಗಿ ಹತ್ತಿಬಟ್ಟೆ ವ್ಯಾಪಾರಕ್ಕಾಗಿ ಅಮೆರಿಕÀಕ್ಕೆ ಬಂದು ನ್ಯೂಯಾರ್ಕ್ನಲ್ಲಿ ನೆಲೆಸಿದ ಭಿಕಾಜಿ ಬಾಲ್ಸರಾ ಎನ್ನುವ ಭಾರತೀಯ-ಮೂಲದ ಪಾರ್ಸಿ ವ್ಯಕ್ತಿ ೧೯೦೯ರಲ್ಲಿ ಅಮೆರಿಕÀದ ಪೌರತ್ವವನ್ನು ಪಡೆಯುವ ಮೂಲಕ ಅಮೆರಿಕÀದ ಪೌರತ್ವ ಪಡೆದ ಮೊದಲ ವ್ಯಕ್ತಿ ಎನಿಸಿದರು. ಅನಂತರ ೧೯೧೩ರಲ್ಲಿ ಪೌರತ್ವ ಪಡೆದ ಎ.ಕೆ. ಮಜುಮ್ದಾರ್ ಎಂಬವರು ಎರಡನೆಯ ಭಾರತೀಯ-ಮೂಲದ ಅಮೆರಿಕÀ ನಾಗರಿಕರೆನಿಸಿದರು. ೧೯೨೦ರ ದಶಕ ಮತ್ತು ತದನಂತರ ಶಿಕ್ಷಣ ಮತ್ತಿತರ ಕಾರಣಗಳಿಂದ ಅನೇಕ ಭಾರತೀಯ-ಮೂಲದ ವ್ಯಕ್ತಿಗಳು ಅಮೆರಿಕÀವನ್ನು ಪ್ರವೇಶಿಸಿದರೂ ಅಲ್ಲಿ ಪೌರತ್ವವನ್ನು ಪಡೆಯುವುದು ಸುಲಭವಾಗಿರಲಿಲ್ಲ. ಅದರಲ್ಲೂ ವಲಸಿಗರ ನಿಯಂತ್ರಣ ಕುರಿತ ಆಯೋಗದ ೧೯೧೧ರ ವರದಿ, ಭಾರತೀಯರೂ ಸೇರಿದಂತೆ ಏಷಿಯನ್ರ ವಲಸೆಯನ್ನು ನಿರ್ಬಂಧಿಸುವ ೧೯೧೭ರ ಬರ್ಡ್ ಜೋನ್ ಆ್ಯಕ್ಟ್ ಮೊದಲಾದ ತೊಡಕುಗಳಿಂದ ಅಮೆರಿಕÀಕ್ಕೆ ಬಂದ ಭಾರತೀಯರು ಅಲ್ಲಿ ನೆಲಸುವಂತಿರಲಿಲ್ಲ. ಅಂತಿಮವಾಗಿ ೧೯೪೬ರಲ್ಲಿ ಭಾರತೀಯ ವಲಸಿಗರಿಗೆ ಅಮೆರಿಕದ ನ್ಯಾಚುರಲೈಸ್ಡ್ ಸಿಟಿಜನ್ಗಳಾಗುವ ಅವಕಾಶವನ್ನು ನೀಡುವ ಕಾನೂನಿಗೆ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ಅಂಕಿತ ಬೀಳುವುದರೊಂದಿಗೆ ಭಾರತೀಯರಿಗೆ ಅಮೆರಿಕ ಪೌರತ್ವದ ಬಾಗಿಲು ತೆರೆಯಿತು. ಆದರೂ ೧೯೬೫ರವರೆಗೆ ಭಾರತೀಯರ ಕೋಟಾದಡಿಯಲ್ಲಿ ವಾರ್ಷಿಕ ಕೇವಲ ೧೦೦ ಜನರಿಗೆ ಮಾತ್ರ ಪೌರತ್ವದ ಅವಕಾಶವಿತ್ತು. ಈ ಕೋಟಾ ವ್ಯವಸ್ಥೆ ರದ್ದಾದ ನಂತರ ೧೯೬೦-೭೦ರ ದಶಕದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾರತೀಯ-ಮೂಲದ ಜನರು ಶಿಕ್ಷಣ, ಉದ್ಯೋಗ-ವೃತ್ತಿಯ ಅವಕಾಶಗಳನ್ನರಸಿ ‘ಅವಕಾಶಗಳ ನಾಡು’ ಅಮೆರಿಕÀಕ್ಕೆ ವಲಸೆ ಬಂದು ನೆಲೆನಿಂತರು. ಇವರಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಪಡೆದವರು, ವಿಜ್ಞಾನಿಗಳು, ಡಾಕ್ಟರುಗಳು ಮೊದಲಾದವರು. ಈ ಹಿನ್ನೆಲೆಯಲ್ಲಿ ಭಾರತದಿಂದ ‘ಬ್ರೆöÊನ್ ಡ್ರೇನ್’ ಎನ್ನುವ ಪದಗುಚ್ಛವೂ ಕಳೆದ ಶತಮಾನದ ನಡುಭಾಗದಲ್ಲಿ ಬಳಕೆಗೆ ಬಂದಿತ್ತು.
೨೦ನೇ ಶತಮಾನದ ಕೊನೆಯ ಭಾಗದಲ್ಲಿ ಆರಂಭವಾದ ಮಾಹಿತಿ-ತಂತ್ರಜ್ಞಾನ ಕ್ರಾಂತಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಅಮೆರಿಕÀದಲ್ಲಿ ವಾಸಿಸಲು ಕಾರಣವಾದ ಪ್ರಮುಖ ಸಂಗತಿ. ೧೯೮೦ ರಿಂದ ೨೦೧೯ರ ಅವಧಿಯಲ್ಲಿ ಅಮೆರಿಕÀದಲ್ಲಿ ಭಾರತೀಯ ವಲಸಿಗರ ಸಂಖ್ಯೆ ೧೩ ಪಟ್ಟು ಏರಿದೆ ಎಂದು ಅಲ್ಲಿನ ಜನಗಣತಿ ಬ್ಯೂರೋದ ಅಂಕಿಅAಶಗಳು ಹೇಳುತ್ತವೆ. ೨೦೨೨ರಲ್ಲಿ ಅಮೆರಿಕÀ ಭಾರತೀಯ ವಿದ್ಯಾರ್ಥಿಗಳಿಗೆ ಮಂಜೂರು ಮಾಡಿದ ವೀಸಾಗಳ ಸಂಖ್ಯೆಯೇ ಬರೋಬ್ಬರಿ ೮೨ ಸಾವಿರ!
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಮೆರಿಕ
ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿಯೇ ಅಮೆರಿಕದ ಯೂರೋಪಿಯನ್ ಕಾಲೊನಿಗಳು ಯುನೈಟೆಡ್ ಸ್ಟೇಟ್ಸ್ ಎನ್ನುವ ದೇಶವನ್ನು ಹುಟ್ಟುಹಾಕಿದ್ದು. ಆದರೂ ಪ್ರಪಂಚದ ಉಳಿದ ಕಡೆಗಳಲ್ಲಿರುವ ಯೂರೋಪಿಯನ್ ವಸಾಹತು ಮತ್ತು ಕಾಲೊನಿಗಳ ಸ್ವಾತಂತ್ರ್ಯದ ವಿಷಯದಲ್ಲಿ ಹೊಸದಾಗಿ ಹುಟ್ಟಿದ ಅಮೆರಿಕÀ ದೇಶ ಆಸಕ್ತಿ ತಾಳಲಿಲ್ಲ. ಬಹುತೇಕ ತಟಸ್ಥ ನೀತಿಯನ್ನು ಅನುಸರಿಸಿದರೂ ತನ್ನ ನೆಲದಲ್ಲಿ ಬ್ರಿಟಿಷ್ ಮತ್ತಿತರ ವಸಾಹತುಶಾಹಿಗಳ ವಿರುದ್ಧ ನಡೆಯುತ್ತಿದ್ದ ಚಟುವಟಿಕೆಗಳ ಮೇಲೆ ಒಂದು ಕಣ್ಣಿಟ್ಟಿತ್ತು. ಅವರ ಯೂರೋಪಿಯನ್ ಮೂಲವೂ ಈ ನೀತಿಗೆ ಕಾರಣವಿರಬಹುದು. ಇಂತಹ ಅನುಕೂಲಕರವಲ್ಲದ ವಾತಾವರಣದಲ್ಲಿ ಸಣ್ಣ ಸಂಖ್ಯೆಯಲ್ಲಿದ್ದರೂ ಅಮೆರಿಕÀದಲ್ಲಿ ನೆಲಸಿದ್ದ ಭಾರತೀಯರು ತಮ್ಮ ದೇಶದ ಸ್ವಾತಂತ್ರö್ಯ ಹೋರಾಟದ ಕಿಡಿಯನ್ನು ಅಮೆರಿಕದಲ್ಲಿಯೂ ಹೊತ್ತಿಸಿದ್ದರು. ಪ್ರಮುಖವಾಗಿ ಮೂರು ಸಂಘಟನೆಗಳ ಚಟುವಟಿಕೆಗಳು ಉಲ್ಲೇಖನೀಯವಾದವು.
೧೯೧೩ರ ಸುಮಾರಿಗೆ ಅಮೆರಿಕದ ಒರೆಗಾನ್ ಮತ್ತು ಸಾನ್ಫ್ರಾನ್ಸಿಸ್ಕೋ ಪ್ರದೇಶಗಳಲ್ಲಿ ಆರಂಭವಾದ ಗದರ್ ಚಳವಳಿ ಭಾರತದ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಆಂದೋಲನ. ಬಹುತೇಕ ವಲಸಿಗ ಪಂಜಾಬಿ ಸಿಖ್ ಸಮುದಾಯದವರೇ ಈ ಚಳವಳಿಯ ಬೆನ್ನೆಲುಬಾಗಿದ್ದರು. ಜೊತೆಗೆ ಬ್ರಿಟಿಷ್ ಸೈನ್ಯ ಮತ್ತು ಪೊಲೀಸ್ಗಳಿಂದ ನಿವೃತ್ತರಾದವರು, ಅಮೆರಿಕÀಕ್ಕೆ ಬಂದ ಭಾರತೀಯ ವಿದ್ಯಾರ್ಥಿಗಳು ಸೇರಿದ್ದರು. ಭಾಯಿ ಪರಮಾನಂದ, ಸೋಹನ್ ಸಿಂಗ್ ಭಾಖ್ನಾ, ಲಾಲಾ ಹರದಯಾಳ್, ರಾಸ್ಬಿಹಾರಿ ಬೋಸ್, ಕರ್ತಾರ್ಸಿಂಗ್ ಸರಭಾ ಮೊದಲಾದ ಕ್ರಾಂತಿಕಾರಿಗಳು ಈ ಚಳವಳಿಯೊಂದಿಗೆ ಗುರುತಿಸಿಕೊಂಡವರು. ಭಾರತ ಸ್ವಾತಂತ್ರ್ಯ ಆಂದೋಲನವನ್ನು ಪ್ರೇರೇಪಿಸುವ ‘ಗದರ್’ ಎನ್ನುವ ಉರ್ದು ಭಾಷಿಕ ಪತ್ರಿಕೆಯನ್ನು ಇದು ಪ್ರಕಟಿಸುತ್ತಿತ್ತು. ಈ ಪತ್ರಿಕೆ ಜಪಾನ್, ಹಾಂಗ್ಕಾAಗ್, ಬರ್ಮಾ ಮೊದಲಾದ ದೇಶಗಳೂ ಸೇರಿದಂತೆ ವಿಶ್ವದೆಲ್ಲೆಡೆ ಪ್ರಸಾರವಾಗುತ್ತಿತ್ತು. ಅನಂತರ ‘ಹಿಂದುಸ್ತಾನ್’ ಮತ್ತು ‘ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ’ ಎನ್ನುವ ಜರ್ನಲ್ಗಳನ್ನೂ ಪ್ರಕಟಿಸಿತು. ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಅದರಲ್ಲೂ ವಿಶೇಷವಾಗಿ ಪಂಜಾಬ್ ಪ್ರಾಂತದಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸುವುದರಲ್ಲಿ ಗದರ್ ಚಳವಳಿ ಒಂದು ಪ್ರಮುಖ ಭೂಮಿಕೆಯನ್ನು ವಹಿಸಿತು.
ಅಮೆರಿಕÀದ ನ್ಯೂಯಾರ್ಕ್ನಲ್ಲಿ ಲಾಲಾ ಲಜಪತ್ ರಾಯ್ ಆರಂಭಿಸಿದ ಇಂಡಿಯನ್ ಹೋಮ್ರೂಲ್ ಲೀಗ್ ಇನ್ನೊಂದು ಪ್ರಮುಖ ಸಂಘಟನೆ. ಭಾರತದಲ್ಲಿ ಬ್ರಿಟಿಷ್ ಆಡಳಿತದ ದೌರ್ಜನ್ಯವನ್ನು ವಿಶ್ವದ ದೇಶಗಳ ಮುಂದೆ ತೆರೆದಿಡುವ ಅಗತ್ಯಕ್ಕಾಗಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಸತ್ಯಸಂಗತಿಯನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿ ಲಾಲಾ ಲಜಪತ್ ರಾಯ್ ಅಮೆರಿಕÀದ ನೆಲದಿಂದ ಈ ಕಾರ್ಯಕ್ಕೆ ಮುಂದಾದರು.
ಫ್ರೆAಡ್ಸ್ ಆಫ್ ಫ್ರೀಡಮ್ ಫಾರ್ ಇಂಡಿಯಾ ಎನ್ನುವ ಇನ್ನೊಂದು ಸಂಘಟನೆ ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ಉಲ್ಲೇಖನೀಯವಾದುದು. ಅಮೆರಿಕÀದ ನೆಲದಲ್ಲಿ ಭಾರತದ ರಾಜಕೀಯ ನಿರಾಶ್ರಿತರ ಆಶ್ರಯದ ಹಕ್ಕನ್ನು ಕಾಪಾಡುವುದು ಮತ್ತು ಭಾರತದ ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರತಿಪಾದಿಸುವುದು ಈ ಸಂಘಟನೆಯ ಪ್ರಮುಖ ಉದ್ಧೇಶವಾಗಿತ್ತು.
ಭಾರತದ ಅಧ್ಯಾತ್ಮ ಚಿಂತನೆ ಮತ್ತು ಯೋಗ
ಭಾರತೀಯ ಆಧ್ಯಾತ್ಮಿಕ ಚಿಂತನೆ ಮತ್ತು ಯೋಗ – ಇವೂ ಅಮೆರಿಕÀದ ನೆಲೆದಲ್ಲಿ ಪ್ರಭಾವ ಬೀರಿದ ಮಹತ್ತ್ವದ ಸಂಗತಿಗಳು. ಅಮೆರಿಕÀದ ನ್ಯೂಯಾರ್ಕ್ನಿಂದ ಪ್ರಕಟವಾಗುವ ಪ್ರತಿಷ್ಠಿತ ಸಾಪ್ತಾಹಿಕ ನ್ಯೂಸ್ವೀಕ್ ೨೦೦೯ರಲ್ಲಿ ಪಶ್ಚಿಮದಲ್ಲಿ ಭಾರತೀಯ ಅಧ್ಯಾತ್ಮದ ಪ್ರಭಾವದ ಕುರಿತು ಒಂದು ಲೇಖನವನ್ನು ಪ್ರಕಟಿಸಿತ್ತು. ಆ ಲೇಖನದ ಶೀರ್ಷಿಕೆ “ಈಗ ನಾವೆಲ್ಲರೂ ಹಿಂದುಗಳು” (We Are All Hindus Now). ಅದು ಏಕೆ ಎಂದು ವಿವರಿಸುತ್ತ ಲೇಖಕಿ ಲೀಸಾ ಮಿಲ್ಲರ್ ಬರೆಯುತ್ತಾರೆ – “ಸತ್ಯ ಒಂದು, ಅದನ್ನು ಜ್ಞಾನಿಗಳು ಬೇರೆ ನಾಮಗಳಿಂದ ಕರೆಯುತ್ತಾರೆ – ಎಂದು ಅತ್ಯಂತ ಪ್ರಾಚೀನ ಹಿಂದು ಪವಿತ್ರ ಗ್ರಂಥ ಋಗ್ವೇದದಲ್ಲಿ ಹೇಳಲಾಗಿದೆ. ದೇವರನ್ನು ತಲಪಲು ಅನೇಕ ಮಾರ್ಗಗಳಿವೆ ಎಂದು ಓರ್ವ ಹಿಂದು ನಂಬುತ್ತಾನೆ. ಆದರೆ ಸಂಪ್ರದಾಯವಾದಿ ಕ್ರಿಶ್ಚಿಯನ್ನರಿಗೆ ಈ ರೀತಿ ಯೋಚಿಸಲು ಕಲಿಸಿಲ್ಲ. ತಮ್ಮ ಮತವೊಂದೇ ಸತ್ಯ, ಉಳಿದೆಲ್ಲವೂ ಸುಳ್ಳು ಎಂದೇ ಅವರಿಗೆ ಭಾನುವಾರದ ತರಗತಿಯಲ್ಲಿ ಕಲಿಸಲಾಗುತ್ತದೆ. ಆದರೆ ಅಮೆರಿಕÀನ್ನರು ಈ ವಾದವನ್ನು ಈಗ ಒಪ್ಪುತ್ತಿಲ್ಲ. ೨೦೦೮ರ ಪ್ಯೂ ಫೋರಮ್ನ ಸಮೀಕ್ಷೆಯ ಪ್ರಕಾರ “ಅನೇಕ ಮತಗಳು ಮುಕ್ತಿಯೆಡೆಗೆ ಕೊಂಡೊಯ್ಯಬಲ್ಲವು ಎಂದು ಹೆಚ್ಚಿನ ಜನರು ನಂಬುತ್ತಾರೆ. ಚರ್ಚಿನ ಹೊರಗೆ ಆಧ್ಯಾತ್ಮಿಕ ಸತ್ಯವನ್ನು ಅರಸುವವರ ಸಂಖ್ಯೆ ಹೆಚ್ಚಾಗಿದೆ. ಶೇ. ೩೦ರಷ್ಟು ಜನ ತಮ್ಮನ್ನು ‘ಆಧ್ಯಾತ್ಮಿಕರು, ಮತಾನುಯಾಯಿಗಳಲ್ಲ’ (spiritual, not religious) ಎಂದು ಕರೆದುಕೊಳ್ಳುತ್ತಾರೆ.”
ಆ ನ್ಯೂಸ್ವೀಕ್ ಲೇಖನ ಪ್ರಕಟವಾಗಿ ಹದಿಮೂರು ವರ್ಷ ಕಳೆದಿದೆ. ಅಮೆರಿಕÀದ ಭಾರತೀಯ ಆಧ್ಯಾತ್ಮಿಕ ಚಿಂತನೆ ಈಗಲೂ ಪಸರಿಸಿದೆ. ‘ಅಮೆರಿಕನ್ ವೇದ’ ಎನ್ನುವ ಪುಸ್ತಕವನ್ನು ಬರೆದ ಫಿಲಿಪ್ ಗೋಲ್ಡ್ಬರ್ಗ್ ಒಂದು ಲೇಖನದಲ್ಲಿ ಹೀಗೆ ಹೇಳುತ್ತಾರೆ – “ಹಿಂದೂಧರ್ಮವು ಅಮೆರಿಕÀದ ಸಂಸ್ಕೃತಿಯನ್ನು ತಾತ್ತ್ವಿಕವಾಗಿ ಆಳವಾಗಿ ಒಳಹೊಕ್ಕಿದೆ. ಅಮೆರಿಕÀ ಹೆಚ್ಚುಹೆಚ್ಚು ವೇದಾಂತಿಗಳ ದೇಶವಾಗುತ್ತಿದೆ ಹಾಗೂ ಆಧ್ಯಾತ್ಮಿಕತೆಯ ದೃಷ್ಟಿಯಿಂದ ಯೋಗಿಗಳ ದೇಶವಾಗುತ್ತಿದೆ.”
ಇದಕ್ಕೆ ಕಾರಣ ಅಮೆರಿಕÀ ರೂಢಿಸಿಕೊಂಡ ವೈಜ್ಞಾನಿಕ ಚಿಂತನಮಾರ್ಗಕ್ಕೆ ತರ್ಕಬದ್ಧವಾಗಿ ಒಗ್ಗುವ ಭಾರತದ ಆಧ್ಯಾತ್ಮಿಕ ತತ್ತ್ವಚಿಂತನೆ ಹಾಗೂ ಭಾರತದಿಂದ ಅಮೆರಿಕÀಕ್ಕೆ ವಲಸೆ ಬಂದು ನೆಲಸಿದರೂ ತಮ್ಮ ಬೇರಿನೊಂದಿಗೆ ಸಂಪರ್ಕ ಕಡಿದುಕೊಳ್ಳದೆ ತಮ್ಮೊಡನೆ ಭಾರತದ ಪರಂಪರೆಯ ಬೆಳಕನ್ನು ಕೊಂಡೊಯ್ದ ಜನಸಮುದಾಯದ ಜೀವನ ಹಾಗೂ ಸ್ವಾಮಿ ವಿವೇಕಾನಂದರಾದಿಯಾಗಿ ಕಾಲಕಾಲಕ್ಕೆ ಭಾರತದ ಅಧ್ಯಾತ್ಮವನ್ನು ಪಶ್ಚಿಮಕ್ಕೆ ಪರಿಚಯಿಸಿದ-ಪಸರಿಸಿದ ಸಂತರ ಶ್ರಮ.
ಪಶ್ಚಿಮಕ್ಕೆ ಹಿಂದೂ ಆಧ್ಯಾತ್ಮಿಕ ಚಿಂತನೆಯನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಪರಿಚಯಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಅಗ್ರಗಣ್ಯರು. ೧೮೯೩ರ ಷಿಕಾಗೋ ನಗರದ ಧರ್ಮ ಸಂಸತ್ತಿನಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸಿನ ನಂತರ ಅವರಿಗೆ ಹಿಂದೂಧರ್ಮದ ಚಿಂತನೆಗಳ ಕುರಿತು ಉಪನ್ಯಾಸ ನೀಡಲು ಆಹ್ವಾನಗಳು ಬರತೊಡಗಿದವು. ಚರ್ಚ್, ವಿಶ್ವವಿದ್ಯಾಲಯ, ಖಾಸಗೀ ಸಭೆಗಳು, ನಾಗರಿಕ ಸಂಸ್ಥೆಗಳು – ಹೀಗೆ ಭಿನ್ನಭಿನ್ನ ಜನಸಮುದಾಯಗಳ ನಡುವೆ ಪ್ರತಿವಾರ ಡಜನ್ಗಟ್ಟಲೆ ಉಪನ್ಯಾಸಗಳನ್ನು ಅವರು ನೀಡಿದರು. ಮುಂದಿನ ಎರಡು ವರ್ಷಗಳ ಕಾಲ ಅಲ್ಲೇ ನೆಲಸಿದ್ದ ಸ್ವಾಮಿ ವಿವೇಕಾನಂದರು ಮಧ್ಯ ಮತ್ತು ಪೂರ್ವ ಅಮೆರಿಕÀದ ಅನೇಕ ನಗರಗಳಲ್ಲಿ ಪ್ರವಾಸ ಮಾಡಿದರು. ಅವರ ಪ್ರಭಾವ ಎಷ್ಟಿತ್ತೆಂದರೆ ಪೂರ್ವದ ತತ್ತ್ವಜ್ಞಾನ ಅಧ್ಯಯನದ ಮುಖ್ಯಸ್ಥರಾಗುವಂತೆ ಪ್ರತಿಷ್ಠಿತ ಹಾರ್ವರ್ಡ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯಗಳಿಂದ ಅವರಿಗೆ ಆಹ್ವಾನ ಬಂದಿತ್ತು. ತಾನೊಬ್ಬ ಪರಿವ್ರಾಜಕ ಸಂತ ಎಂದು ವಿವೇಕಾನಂದರು ಇಂತಹ ಆಹ್ವಾನಗಳನ್ನು ನಿರಾಕರಿಸಿದರು. ೧೮೯೪ರಲ್ಲಿ ನ್ಯೂಯಾರ್ಕ್ನಲ್ಲಿ ಮೊದಲ ವೇದಾಂತ ಸೊಸೈಟಿಯನ್ನು ಆರಂಭಿಸಿ ಜಿಜ್ಞಾಸುಗಳಿಗೆ ವೇದಾಂತ ತತ್ತ್ವಜ್ಞಾನದ ಪಾಠಗಳನ್ನು ಮಾಡಿದರು. ಅನಂತರ ೧೮೯೭ರಲ್ಲಿ ವೇದಾಂತ ಸೊಸೈಟಿಯ ಉಸ್ತುವಾರಿ ವಹಿಸಿಕೊಳ್ಳಲು ರಾಮಕೃಷ್ಣ ಪರಮಹಂಸರ ನೇರ ಶಿಷ್ಯರು ಮತ್ತು ಅವರ ಗುರುಬಂಧುವೂ ಆದ ಸ್ವಾಮಿ ಅಭೇದಾನಂದರನ್ನು ಕಳುಹಿಸಿದರು. ಮುಂದಿನ ೨೫ ವರ್ಷಗಳ ಕಾಲ ಅಭೇದಾನಂದರು ಅಮೆರಿಕÀದಲ್ಲಿ ನೆಲೆನಿಂತು ಪ್ರವಾಸ ಮಾಡಿದರು. ಸ್ವಾಮಿ ವಿವೇಕಾನಂದರೇ ೧೮೯೯-೧೯೦೨ರ ಕಾಲದಲ್ಲಿ ಮತ್ತೆ ಅಮೆರಿಕÀಕ್ಕೆ ಭೇಟಿ ನೀಡಿ ಪಶ್ಚಿಮ ಕರಾವಳಿಯಲ್ಲಿ ಪ್ರವಾಸ ಮಾಡಿದರು. ವಿವೇಕಾನಂದರನ್ನು ಅನುಸರಿಸಿ ಅನಂತರ ರಾಮಕೃಷ್ಣ ಮಿಶನ್ನಿನ ಸ್ವಾಮಿ ಶಾರದಾನಂದ, ಸ್ವಾಮಿ ಪರಮಾನಂದ ಮೊದಲಾದ ಹಲವರು ಅಮೆರಿಕÀಕ್ಕೆ ಭೇಟಿ ನೀಡಿದರು, ಅನೇಕ ನಗರಗಳಲ್ಲಿ ವೇದಾಂತ ಸೊಸೈಟಿಗಳು ಆರಂಭವಾದವು.
ಸ್ವಾಮಿ ವಿವೇಕಾನಂದರAತೆ ಷಿಕಾಗೋದ ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡ ಇನ್ನೋರ್ವ ಭಾರತೀಯ ವೀರ್ಚಂದ್ ಗಾಂಧಿ. ಜೈನಧರ್ಮವನ್ನು ಪ್ರತಿನಿಧಿಸಿದ್ದ ವೀರ್ಚಂದ್ ಗಾಂಧಿ ಅಮೆರಿಕÀದಲ್ಲಿ ಜೈನ ಚಿಂತನೆಯ ಕುರಿತು ಉಪನ್ಯಾಸಗಳನ್ನು ನೀಡಿದ್ದರು.
ಅನಂತರದ ದಶಕಗಳಲ್ಲೂ ಭಾರತದಿಂದ ಅನೇಕ ಸಂತರು ಮಹಾತ್ಮರು ಅಮೆರಿಕÀದ ನೆಲದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಬೀಜಗಳನ್ನು ಬಿತ್ತಿದರು. ೧೯೦೨ರಲ್ಲಿ ಅಮೆರಿಕÀದಲ್ಲಿ ಕಾಲಿಟ್ಟ ಯುವ ಸಂತ ಸ್ವಾಮಿ ರಾಮತೀರ್ಥರು ಆನ್ವಯಿಕ ವೇದಾಂತದ ತತ್ತ್ವಗಳನ್ನು ಪ್ರಸಾರ ಮಾಡಿದರು. ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕÀದ ವಿಶ್ವವಿದ್ಯಾಲಯಗಳಿಗೆ ಕರೆತರಲು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ಗಳನ್ನು ಸ್ಥಾಪಿಸಲು ಅವರು ವಿಶೇಷ ಪ್ರಯತ್ನ ಮಾಡಿದರು.
ಆಮೇಲಿನ ಕಾಲಘಟ್ಟದಲ್ಲಿ ಪರಮಹಂಸ ಯೋಗಾನಂದ, ಪ್ರಸಿದ್ಧ ಬೀಟಲ್ ಮ್ಯೂಸಿಕ್ ಬ್ಯಾಂಡ್ನ ಮೇಲೆ ವಿಶೇಷ ಪ್ರಭಾವ ಬೀರಿದ್ದ ಮಹರ್ಷಿ ಮಹೇಶಯೋಗಿ, ಹರೇ ಕೃಷ್ಣ ಪಂಥವನ್ನು ಆರಂಭಿಸಿದ ಶ್ರೀಲ ಪ್ರಭುಪಾದರು, ಸ್ವಾಮಿ ನಾರಾಯಣ ಆಂದೋಲನ, ಯೋಗಗುರುಗಳಾದ ಬಿ.ಕೆ.ಎಸ್. ಐಯಂಗಾರ್, ಪಟ್ಟಾಭಿ ಜೊಯಿಸ್, ದೊಡ್ಡ ಅನುಯಾಯಿಗಳ ಪಂಗಡವನ್ನೇ ಹೊಂದಿದ್ದ ಓಶೋ ರಜನೀಶ್ರಿಂದ ಹಿಡಿದು ಇತ್ತೀಚಿಗೆ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್, ಮಾತಾ ಅಮೃತಾನಂದಮಯೀ, ಸದ್ಗುರು ಜಗ್ಗಿ ವಾಸುದೇವ್ರವರೆಗೆ ಭಾರತದ ಆಧ್ಯಾತ್ಮಿಕ ತತ್ತ÷್ವಚಿಂತನೆಯ ಪ್ರವಾಹ ನಿರಂತರವಾಗಿ ಅಮೆರಿಕÀದಲ್ಲಿ ಹರಿದಿದೆ. ಭಾರತದ ಹೊರಗಿನ ಅತ್ಯಂತ ದೊಡ್ಡ ಹಿಂದೂ ದೇಗುಲ ಸಂಕೀರ್ಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ನ್ಯೂಜೆರ್ಸಿಯ ಅಕ್ಷರಧಾಮ ದೇಗುಲ, ಇತ್ತೀಚೆಗೆ ಸಿಯಾಟಲ್ ನಗರದಲ್ಲಿ ಆರಂಭವಾದ ಉಡುಪಿಯ ಪುತ್ತಿಗೆ ಮಠದ ೯ನೇ ಶಾಖೆ ವೆಂಕಟಕೃಷ್ಣ ವೃಂದಾವನವೂ ಸೇರಿದಂತೆ ನೂರಾರು ಹಿಂದೂ ಶ್ರದ್ಧಾಕೇಂದ್ರಗಳು ಅಮೆರಿಕÀದ ನೆಲದಲ್ಲಿ ತಲೆಯೆತ್ತಿವೆ. ಅಂತರರಾಷ್ಟಿçÃಯ ಯೋಗದಿವಸದ ಘೋಷಣೆಗಿಂತ ಮೊದಲೇ ಯೋಗ ಅಮೆರಿಕÀದಲ್ಲಿ ಆಳವಾಗಿ ಬೇರೂರಿತ್ತು.
ಹಾಗೆಯೇ ಭಾರತದ ಚಿಂತನೆಗೆ ಮಾರುಹೋಗಿದ್ದ ನಿಕೋಲಾ ಟೆಸ್ಲಾ, ರ್ವಿನ್ ಶ್ರೋಡಿಂಜರ್, ರಾಬರ್ಟ್ ಓಪನ್ಹೀಮರ್ ಮೊದಲಾದ ವಿಜ್ಞಾನಿಗಳೂ ವೇದದ ಚಿಂತನೆಗಳನ್ನು ಪಸರಿಸಿದ್ದಾರೆ. ಡೇವಿಡ್ ಫ್ರಾಲಿಯವರಂತಹ ಹಿಂದೂ ತತ್ತ್ವವಿದ್ವಾಂಸರು ಅಮೆರಿಕÀದಲ್ಲಿದ್ದಾರೆ.
ಭಾರತೀಯ ಕಲೆ–ಸಂಗೀತ–ಸಾAಸ್ಕೃತಿಕ ಚಿಗುರು
೨೦ನೇ ಶತಮಾನದ ಮಧ್ಯದವರೆಗೆ ಅಮೆರಿಕÀನ್ನರಿಗೆ ಭಾರತದ ಸಂಗೀತ ಅಪರಿಚಿತವಾಗಿತ್ತು ಎಂದರೆ ತಪ್ಪಲ್ಲ. ೧೯೫೫ರ ಹೊತ್ತಿಗೆ ಪ್ರಖ್ಯಾತ ವಯೋಲಿನ್ ವಾದಕ ಯೆಹುದಿ ಮೆನುಹಿನ್ ಸಂಪರ್ಕಕ್ಕೆ ಬಂದಿದ್ದ ಹಿಂದೂಸ್ತಾನಿ ಸಂಗೀತಗಾರರಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಮತ್ತು ಪಂಡಿತ್ ರವಿಶಂಕರ್ ಅಮೆರಿಕÀದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಪ್ರಚುರಪಡಿಸಿದರು. ಅಲ್ಲಿಂದ ಭಾರತೀಯ ಸಂಗೀತ ಅಮೆರಿಕÀದಲ್ಲಿಯೂ ಮೆಚ್ಚುಗೆ ಪಡೆಯತೊಡಗಿತು. ಅಲಿ ಅಕ್ಬರ್ ಖಾನರು ಕ್ಯಾಲಿಫೋರ್ನಿಯಾದಲ್ಲಿ ಸಂಗೀತ ಕಾಲೇಜನ್ನು ತೆರೆದು ಸಹಸ್ರಾರು ಶಿಷ್ಯರನ್ನು ತಯಾರಿಸಿದರು. ಭಾರತೀಯ ಸಂಜಾತರಿAದ ಆರಂಭಗೊAಡ ಅನೇಕ ಸಾಂಸ್ಕೃತಿಕ ಸಂಘಟನೆಗಳು ಭಾರತೀಯ ಕಲೆ ಅಮೆರಿಕದ ನೆಲದಲ್ಲಿಯೂ ಅರಳಲು ನೀರೆರೆದವು. ಉದಾಹರಣೆಗೆ ನಾವಿಕ, ಅಕ್ಕ, ತೆಲುಗು ಅಸೋಸಿಯೇನ್ ಆಫ್ ನಾರ್ತ್ ಅಮೆರಿಕÀ, ಮಹಾರಾಷ್ಟç ಮಂಡಳ ಮೊದಲಾದ ಭಾಷಾ ಸಂಘಗಳು ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸುವ ಕೆಲಸವನ್ನು ನಿರಂತರ ಮಾಡಿಕೊಂಡು ಬಂದಿವೆ. ಭಾರತದಿಂದ ಅತಿಥಿ ಕಲಾವಿದರುಗಳನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೆ ಅಲ್ಲಿಯೇ ನೆಲೆಸಿರುವ ಅನೇಕರು ಕಲಾವಿದರಾಗಿದ್ದಾರೆ.
ಇಂದು ಯಕ್ಷಗಾನದಂತಹ ಕರ್ನಾಟಕದ ಕಲೆಗೂ ಅಮೆರಿಕÀದಲ್ಲಿ ಜನಪ್ರಿಯ ವೇದಿಕೆ ಸಿಗುತ್ತ್ತಿದೆ. ಹಿಂದೆ ಕೇವಲ ಬಾಲಿವುಡ್ ಸಿನೆಮಾ ಹಾಡುಗಳು ಅಮೆರಿಕÀದಲ್ಲಿ ಜನಪ್ರಿಯವಾಗಿದ್ದರೆ ಇಂದು ಭಾರತೀಯ ಭಾಷಾ ಸಿನೆಮಾಗಳೂ ಅಮೆರಿಕÀದಲ್ಲಿ ಹಣಮಾಡತೊಡಗಿವೆ.
ಹಾಗೆಯೇ ಹಿಂದೂ ಸ್ವಯಂಸೇವಕ ಸಂಘದAತಹ ಸಂಘಟನೆಗಳ ಸಂಸ್ಕಾರ ಮತ್ತು ಸೇವಾ ಚಟುವಟಿಕೆಗಳು ಭಾರತೀಯ ಜೀವನಶೈಲಿಯನ್ನು ಅಮೆರಿಕÀದ ಹಿಂದೂಗಳಲ್ಲಿ ಬೆಳೆಸುವ ಮತ್ತು ಅಮೆರಿಕನ್ನರಿಗೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿವೆ. ಇಂದು ಅಮೆರಿಕÀದ ಅಧ್ಯಕ್ಷರ ನಿವಾಸ ಶ್ವೇತಭವನದಲ್ಲಿ ವೇದಘೋಷ ಮೊಳಗುತ್ತದೆ, ದೀಪಾವಳಿ ಹಬ್ಬದ ಆಚರಣೆ ನಡೆಯತ್ತದೆ. ಅಂದರೆ ಭಾರತೀಯ ಸಾಂಸ್ಕೃತಿಕ ಆಚರಣೆಗಳು ಅಷ್ಟರವರೆಗೆ ಅಮೆರಿಕÀದ ಜನಜೀವನದಲ್ಲಿ ಸ್ಥಾನ ಪಡೆದಿವೆ.
ಇಂದಿನ ಭಾರತೀಯ ಅಮೆರಿಕನ್ನರು
೨೦೧೯ರ ಸೆಪ್ಟೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕÀ ಭೇಟಿಯ ಸಂದರ್ಭದಲ್ಲಿ ‘ಹೌದಿ ಮೋದಿ’ ಹೆಸರಿನ ಕಾರ್ಯಕ್ರಮ ಹ್ಯೂಸ್ಟನ್ನಿನ ಎನ್ಆರ್ಜಿ ಸ್ಟೇಡಿಯಮ್ನಲ್ಲಿ ನಡೆದಿತ್ತು. ನರೇಂದ್ರ ಮೋದಿ ಎರಡನೇ ಬಾರಿ ಚುನಾಯಿತರಾಗಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾರ್ಥ ನಡೆದ ಆ ಕಾರ್ಯಕ್ರಮದಲ್ಲಿ ೫೦ ಸಾವಿರಕ್ಕೂ ಹೆಚ್ಚು ಭಾರತೀಯ-ಅಮೆರಿಕÀನ್ನರು ಭಾಗವಹಿಸಿದ್ದರು. ಸ್ವಯಂ ಅಮೆರಿಕÀ ಅಧ್ಯಕ್ಷ ಟ್ರಂಪ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೋಪ್ ಹೊರತುಪಡಿಸಿದರೆ ಇನ್ನಾವ ವಿದೇಶೀ ನಾಯಕನಿಗೂ ಅಮೆರಿಕದ ನೆಲದಲ್ಲಿ ಇಂತಹ ಬೃಹತ್ ಸಂಖ್ಯೆಯಲ್ಲಿ ಜನರು ಭಾಗವಹಿಸಿದ ಅಭೂತಪೂರ್ವ ಸ್ವಾಗತ ದೊರೆತಿರಲಿಲ್ಲ. ಇದು ಕೇವಲ ಮೋದಿಯವರ ಜನಪ್ರಿಯತೆಯಿಂದ ಸಾಧ್ಯವಾದುದಲ್ಲ. ಅಮೆರಿಕದಲ್ಲಿ ನೆಲಸಿರುವ ಭಾರತೀಯರ ಬೆಳೆಯುತ್ತಿರುವ ಪ್ರಭಾವವನ್ನೂ ಸೂಚಿಸುತ್ತದೆ.
ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಕೇಂದ್ರಬಿAದು (nerve centre) ಆದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯ ವಿಜ್ಞಾನಿಗಳು-ಇಂಜಿನಿಯರುಗಳು ಸಾಧಿಸಿದ ಯಶಸ್ಸು, ಹಾಗೆಯೇ ಟೆಕ್ ಕಂಪೆನಿಗಳು ಸೇರಿದಂತೆ ಅಮೆರಿಕÀ ದೊಡ್ಡ ದೊಡ್ಡ ಸಂಸ್ಥೆಗಳ ಸಿಇಓಗಳು ಸೇರಿದಂತೆ ಉನ್ನತ ಸ್ಥಾನಗಳಲ್ಲಿ ಭಾರತೀಯ-ಮೂಲದವರು ನಿಂತು ಮುನ್ನಡೆಸುತ್ತಿರುವ ಸಂಗತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇವರಲ್ಲಿ ಕೆಲವರು ಭಾರತಕ್ಕೆ ಮರಳಿ ಬಂದು ಬೆಂಗಳೂರಿನAತಹ ನಗರಗಳಲ್ಲಿ ಕಂಪೆನಿಗಳನ್ನು ಆರಂಭಿಸಿ ಇಲ್ಲಿಯೂ ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ನಾಂದಿಯಾದದ್ದಲ್ಲದೆ ದೊಡ್ಡ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿ ಭಾರತದ ಪಾಲುದಾರಿಕೆ ಹೆಚ್ಚಲು ಸಹಾಯಕರಾಗಿದ್ದಾರೆ.
ಅಷ್ಟೇ ಅಲ್ಲದೆ ಅಮೆರಿಕÀದ ರಾಜಕೀಯವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯರ ಮೂಲದವರನ್ನು ಇಂದು ಕಾಣಬಹುದು. ಅಮೆರಿಕÀದ ಅಧ್ಯಕ್ಷರ ಕ್ಯಾಬಿನೆಟ್ನಲ್ಲಿ, ಸಂಸತ್ತಿನಲ್ಲಿ, ಸೆನೆಟ್ ಸದಸ್ಯರಾಗಿ, ರಾಜ್ಯಗಳ ಗವರ್ನರ್ಗಳಾಗಿ ಭಾರತೀಯ-ಮೂಲದವರು ಪ್ರಭಾವಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ವಲಸಿಗ ಭಾರತೀಯರಿಗೆ ಜನಿಸಿದ ಎರಡು ಮತ್ತು ಮೂರನೇ ತಲೆಮಾರಿನ ಸಮುದಾಯ ಇಂದು ವಿಜ್ಞಾನ, ಶಿಕ್ಷಣ, ಜರ್ನಲಿಸಂ, ಉದ್ಯಮ, ವೈದ್ಯಕೀಯ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿ ಪ್ರಭಾವಿಯಾಗಿದೆ. ಭಾರತೀಯ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ – ಈ ಎಲ್ಲ ಮಾನದಂಡಗಳಿAದಲೂ ಎಲ್ಲ ವಲಸಿಗ ಸಮುದಾಯಗಳ ಪೈಕಿ ಅಷ್ಟೇ ಅಲ್ಲ ಅಮೆರಿಕÀನ್ನರಿಗಿಂತಲೂ ಮುಂದಿದ್ದಾರೆ ಎನ್ನುವುದು ಅನೇಕ ಸಮೀಕ್ಷೆಗಳಿಂದ ತಿಳಿದುಬಂದಿದೆ. ಪ್ರತಿವರ್ಷ ನಡೆಯುವ ಪ್ರತಿಷ್ಠಿತ ಅಮೆರಿಕನ್ ನ್ಯಾಶನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಗೆಲ್ಲುವವರು ಭಾರತೀಯ ಸಂಜಾತರೇ!
ಭಾರತೀಯ-ಅಮೆರಿಕನ್ನರ ಬದುಕಿನಲ್ಲಿ ಹುಳುಕುಗಳಿಲ್ಲ ಎಂದಲ್ಲ. ಭಾರತೀಯ ಸಮುದಾಯ ಸಂಖ್ಯಾತ್ಮಕವಾಗಿ ವೈವಿಧ್ಯದಿಂದ ಬೆಳೆದಂತೆಲ್ಲ ಜಾತಿ-ಮತಗಳ ವಿಭಾಗಗಳೂ ಕಾಣಿಸಿಕೊಂಡಿವೆ. ಹಾಗೆಯೇ ಅನಧಿಕೃತವಾಗಿ ವಲಸೆ ಬಂದು ನೆಲಸಿದವರಲ್ಲಿ ಬಡತನ ಸಮಸ್ಯೆಗಳಿವೆ. ಇನ್ನೊಂದೆಡೆ ಭಾರತೀಯರು ಇಂದಿಗೂ ಜನಾಂಗೀಯ ನಿಂದನೆ ಮತ್ತು ತಾರತಮ್ಯಗಳಿಗೆ ಗುರಿಯಾಗುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ.
ಆದರೂ ಭೂಗೋಳದ ಇನ್ನೊಂದು ಬದಿಯ ಬಡದೇಶದಿಂದ ವಲಸೆ ಬಂದವರು ಸ್ಥಳೀಯರನ್ನು ಮೀರಿಸಿ ಯಶಸ್ವಿಯಾಗಿದ್ದು ಹೇಗೆ? ಈ ಪ್ರಶ್ನೆಗೆ ಉತ್ತರ – ಪರಿಶ್ರಮ ಮತ್ತು ಮೂಲ ಭಾರತೀಯ ಸಂಸ್ಕಾರಗಳು ಎನ್ನುವುದನ್ನು ನಿಚ್ಚಳವಾಗಿ ಹೇಳಬಹುದು.