
ಜಗದುದ್ದಗಲದಿ ಬೆಳಗುತಲಿಹುದು ಸ- ನಾತನ ಹಿಂದೂ ಧರ್ಮ | ಸತ್ಯ ಅಹಿಂಸೆಯೆ, ಸಮತೆಯೆ ಮಮತೆಯೆ ಜನಹಿತ ಸೇವೆಯೆ ಮರ್ಮ || ಪ || ಹಿಂದೂ ಶಕ್ತಿಯ ಸಿಂಧುವಿನಲ್ಲಿ ನಾವುಗಳೆಲ್ಲರು ಬಿಂದುಗಳು | ಅಖಂಡ ಭಾರತ ಬಾಂದಳದಲ್ಲಿ ನಗೆ ಚೆಲ್ಲುವ ಚೆಲು ತಾರೆಗಳು || ಅ. ಪ. || ಕೇಶವ ಮಾಧವರನು ಧ್ಯಾನಿಸುತಲಿ ವಂದನೆ ಸಲಿಸುವೆವು ಸಾರ್ಥಕ ದಾರಿಯ ನಡೆದ ಮಹಾತ್ಮರ ಅನುದಿನ ನೆನೆಯುವೆವು | ಬುದ್ಧಿ ವಿಕಾಸಕೆ, ಶಿಕ್ಷಣ, ಸ್ವಾಸ್ಥ್ಯಕೆ, ಜನಜಾಗೃತಿಗೆಂದು ವಿಧ ವಿಧ ರೂಪದಿ ಶ್ರಮಿಸುವೆವಿಂದು […]