ಬೆವರಾಗಿಸಿ ನಾ
ದುಡಿಯಬೇಕು ನಿನ್ನ ನಾಳೆಗಳಿಗಾಗಿ
ಓ ತಾಯಿ ಭಾರತಿಯೇ, ನೀಡೆನಗೆ ಧೈರ್ಯವನು
ಬಾಹುಬಲವನ್ನು ಶುದ್ಧಶೀಲವನು ||ಪ||
ಎನ್ನ ರಕುತವ
ನಾಡಿನ ಹಿರಿಮೆ ಗರಿಮೆಗಳ ಉಳಿವಿಗಾಗಿ
ಇಂದು ಬಲಿದಾನವಾಗಲಿ, ನನ್ನೀ ತನುವು
ಮುಂದೊಂದು ದಿನ, ಬಂದಾಗ ಪರಮವೈಭವ
ಬಾಳು ಸಾರ್ಥಕ ಎನ್ನ, ನಿನ್ನ ಉತ್ಥಾನದಲ್ಲಿ ||೧||
ನಟ್ಟಿರುಳ ಸ್ವಾತಂತ್ರ್ಯ ಬೆಳಕು ಕಾಣಲು
ನಿನ್ನ ಹೃದಯ ಮಂದಿರದಲ್ಲಿ ನಾ ಬೆಳಗಬೇಕು.
ಮುಕ್ತಿ ಬೇಡ ಎನಗೆ, ಭಕ್ತಿ ಒಂದೇ ಸಾಕು
ಮರಳಿ ನಿನ್ನ ಮಡಿಲಲ್ಲಿ ನಾ ಕೂಸಾಗಬೇಕು ||೨||
ಆನಂದ್ ಕಾರ್ಲ, ವಿರಾಜಪೇಟೆ