ಭಾರತದ ಸಂಸತ್ತಿನ ಸಂರಚನೆಯ ಸ್ವರೂಪದ ಬಗೆಗೆ ಪುನರಾಲೋಚನೆ ಮಾಡಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ. ರಾಜ್ಯಾಂಗರಚನೆಯ ಸಮಯದಲ್ಲಿ ರಾಜ್ಯಸಭೆಯ ಅಸ್ತಿತ್ವಕ್ಕೆ ಪ್ರೇರಣೆಯನ್ನು ಒದಗಿಸಿದ್ದುದು ಬಹುಮಟ್ಟಿಗೆ ಸಂಖ್ಯಾಧಾರಿತವಾಗಿ ರಚನೆಗೊಳ್ಳುವ ಲೋಕಸಭೆಯ ನಡವಳಿಯಲ್ಲಿ ತೋರಬಹುದಾದ ಅಸಮರ್ಪಕತೆಗಳಿಗೆ ಪರಿಹಾರ ನೀಡಬಲ್ಲ ಪ್ರತಿಭಾರವಾಗಿ ರಾಜ್ಯಸಭೆಯು ಕೆಲಸ ಮಾಡಬೇಕೆಂಬುದು. ಈ ಹಿನ್ನೆಲೆಯಲ್ಲಿಯೆ ವಿವಿಧ ಜೀವನಕ್ಷೇತ್ರಗಳ ಅನುಭವಿಗಳಿಗೆ ರಾಜ್ಯಸಭೆಯಲ್ಲಿ ಸದಸ್ಯತ್ವವನ್ನು ಕಲ್ಪಿಸುವ ಪದ್ಧತಿಯನ್ನು ನೆಲೆಗೊಳಿಸಲಾಗಿತ್ತು. ಕೆಲವು ವರ್ಷಗಳ ಕಾಲ ಈ ವ್ಯವಸ್ಥೆಯು ತಕ್ಕಮಟ್ಟಿಗೆ ಕೆಲಸ ಮಾಡಿದ್ದುದೂ ಹೌದು. ಆದರೆ ಈಚಿನ ದಶಕಗಳಲ್ಲಿ ರಾಜ್ಯಸಭೆಯನ್ನು ಬಲಿಷ್ಠ ಪಕ್ಷದ ಉಪಜೀವಿಗಳಾದವರಿಗೆ […]
ರಾಜ್ಯಸಭೆಯ ಸಾರ್ಥಕತೆ
Month : February-2016 Episode : Author :