
ಉತ್ಥಾನ ಜುಲೈ 2018
Month : July-2018 Episode : Author :
Month : July-2018 Episode : Author :
Month : July-2018 Episode : Author : ಎಚ್ ಮಂಜುನಾಥ ಭಟ್
ಸಾಹಿತಿಯಾದವನು ಸಮಾಜದ ದೈನಂದಿನ ಬೆಳವಣಿಗೆಗಳಿಗೆ ತಿಳಿದೋ ತಿಳಿಯದೆಯೋ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾನೆ. ಡಾ|| ಎಸ್.ಎಲ್. ಭೈರಪ್ಪನವರಂತಹ ಮಹೋನ್ನತ ಸಾಹಿತಿಗಳ ವಿಷಯದಲ್ಲಿ ಆ ಮಾತನ್ನು ಹೇಳುವುದೇ ಬೇಡ. ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರಸ್ತ್ರೀವಾದ, ಅಂದರೆ ಹೆಣ್ಣು ಮಾಡುವುದೆಲ್ಲ ಸರಿ ಎಂಬ ಧೋರಣೆ ನಾಡಿನ ಶಾಸನಕರ್ತರ ತಲೆಗೆ ಹೊಕ್ಕು ಅಥವಾ ಯಾವುದೋ ರಾಜಕೀಯ ಉದ್ದೇಶದಿಂದ ಪೂರ್ತಿ ಮಹಿಳೆಯರ ಪರವಾದ ಅನೇಕ ಶಾಸನಗಳು ಬಂದವು. ಅದರಿಂದ ಸಮಾಜದ ಮೇಲೆ ಎಂತಹ ಪರಿಣಾಮವಾಗುತ್ತದೆ ಎನ್ನುವುದರ ಅದ್ಭುತ ಚಿತ್ರಣ ಭೈರಪ್ಪನವರ ೨೦೧೦ರಲ್ಲಿ ಹೊರಬಂದ […]
Month : July-2018 Episode : ನಿವೇದಿತಾ ಸ್ಮರಣ ಮಾಲಿಕೆ -9 Author : ಎಸ್.ಆರ್. ರಾಮಸ್ವಾಮಿ
ಪ್ರಮುಖರ ಬಂಧನದಿಂದಾಗಿ ತಲೆದೋರಿದ್ದ ನಾಯಕತ್ವಾಭಾವ, ಹೆಚ್ಚು ಬಿಗಿಗೊಳ್ಳುತ್ತಿದ್ದ ಸರ್ಕಾರೀ ದಮನಶಾಹಿ – ಈ ಪ್ರತಿಕೂಲ ಸನ್ನಿವೇಶದಲ್ಲಿಯೂ ನಿರ್ಭೀತ ರಾಷ್ಟ್ರಭಕ್ತರ ಪ್ರಭುತ್ವವಿರೋಧಿ ಭೂಗತ ಚಟುವಟಿಕೆಗಳು ನಿಲ್ಲಲಿಲ್ಲ. ಇನ್ನು ಸ್ವದೇಶೀ ಆಂದೋಲನವಂತೂ ದೇಶದೆಲ್ಲೆಡೆ ವೃದ್ಧಿಂಗತವಾಗಿತ್ತು. ಅರವಿಂದರ ಸ್ಥಾನಾಂತರದಿಂದಾಗಿ ನಿವೇದಿತಾ ವಹಿಸಿಕೊಳ್ಳಲೇಬೇಕಾಗಿಬಂದ ಕರ್ಮಯೋಗಿನ್ ಪತ್ರಿಕೆಗಾಗಿ ಅವರು ಮೌಲಿಕ ಲೇಖನಗಳನ್ನು ಬರೆದರು. ಆ ಬರಹಗಳಲ್ಲಿ ಅವರು ಸ್ಫುಟೀಕರಿಸಿದ ರಾ ದರ್ಶನವು ಚಿರಕಾಲಿಕ ಸಂಗತತೆಯುಳ್ಳದ್ದಾಗಿದೆ. ಉದಾಹರಣೆಗೆ ೧೯೧೦ ಮಾರ್ಚ್ ೧೨ರ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ ಅವರು ಹೀಗೆಂದಿದ್ದರು: ವೇದ-ಉಪನಿಷತ್ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ಧರ್ಮಸಂಸ್ಥಾಪನೆ ಮತ್ತು ರಾಜ್ಯನಿರ್ಮಿತಿಯಲ್ಲಿ ಶ್ರೇಷ್ಠ […]