ಸರಾಗ ಮಾತುಕತೆಗೊಂದು ಮುನ್ನುಡಿ!
ಪರಿಚಿತರು, ಆತ್ಮೀಯರು, ಬಂಧು-ಬಾಂಧವರು ಯಾರೇ ಎದುರಾಗಲಿ, ಮೊದಲು ನಡೆಯುವುದೇ ಉಭಯಕುಶಲೋಪರಿ ಸಾಂಪ್ರತ. ’ಹೇಗಿದ್ದೀರಿ? ಚೆನ್ನಾಗಿದ್ದೀರಾ?’ ಎಂದು ಕೇಳುವುದು ವಾಡಿಕೆ. ಜಾತಿ, ಧರ್ಮ, ದೇಶ-ಭಾಷೆಗಳು ಬೇರೆಬೇರೆಯದಿರಬಹುದು, ಆದರೆ ಎಲ್ಲರ ಭಾವನೆಗಳೂ ಒಂದೇ. ಪದದ ಅಕ್ಷರಶಃ ಅರ್ಥವಲ್ಲ, ಭಾವ ಮುಖ್ಯ. ಸರಾಗ ಮಾತುಕತೆಗೊಂದು ಮುನ್ನುಡಿ ಅಷ್ಟೆ. ಆದರೆ ಕೆಲವರಿಗೆ ಈ ಪದಗಳೇ ಇರಿಸುಮುರಿಸು ಉಂಟುಮಾಡುತ್ತವೆ ಅಂದರೆ ನಂಬುತ್ತೀರಾ?
ನನ್ನ ಹೈಸ್ಕೂಲ್ಮಾಸ್ತರ್ ಒಬ್ಬರಿಗೆ, “ಹೇಗಿದ್ದೀರಿ, ಊಟ ಆಯ್ತಾ, ತಿಂಡಿ ಆಯ್ತಾ?” ಎಂದೆಲ್ಲ ಕೇಳಿದರೆ ಇರಿಸುಮುರಿಸಾಗಿ, ’ನನ್ನ ಊಟವನ್ನು ನಾನೇ ಮಾಡಿದ್ದೇನೆ’ ಎಂದು ಮನೆಯ ಮುಂದೆ ಬೋರ್ಡ್ ಬರೆದು ಹಾಕಿದ್ದರಂತೆ! ’ಹೇಗಿದ್ದೀರಿ?’ ಎಂದು ಕೇಳಿದರೆ ಸಾಮಾನ್ಯವಾಗಿ ಎಲ್ಲರೂ ’ಚೆನ್ನಾಗಿದ್ದೇನೆ’ ಎಂದೇ ಹೇಳುವುದು. “ಇಲ್ಲ, ಏನೇನೂ ಚೆನ್ನಾಗಿಲ್ಲ. ಮನೆಕಟ್ಟಿದ ಸಾಲ ಇನ್ನೂ ತೀರಿಲ್ಲ, ಮಗಳು ಯಾರನ್ನೂ ಒಪ್ಪುತ್ತಿಲ್ಲ, ಮಗನಿಗೆ ಯಾರೂ ಜಾತಕವನ್ನೇ ಕೊಡುತ್ತಿಲ್ಲ, ನನಗೆ ಬೇರೆ ಬಿ.ಪಿ. ಇದೆ. ಇವಳಿಗೆ ಶುಗರ್ರು, ಏನು ಜೀವನವೋ ಏನೋ, ಒಂದು ಐದುಸಾವಿರ ಇದ್ರೆ ಕೊಡುತ್ತೀರಾ?” ಎಂದೆನ್ನಿ, ನೋಡೋಣ. ಮುಂದಿನ ಸಲ ನೀವು ಕಂಡರೂ ಕಾಣದಿರುವ ಥರ ಹೋಗಿಬಿಡುತ್ತಾರೆ ಜನ.
ಸ್ವಭಾವ ಅನಾವರಣ
“ಹೇಗಿದ್ದೀರಿ, ಚೆನ್ನಾಗಿದ್ದೀರಾ, ಆರಾಮವೇ?” ಎಂದು ಕೇಳಿದರೆ ಅಷ್ಟೇಕೆ ಸಿಡಿಮಿಡಿಗೊಳ್ಳಬೇಕೋ ಗೊತ್ತಿಲ್ಲ. “ಚೆನ್ನಾಗಿದ್ದೇನೆ, ನೀವು ಚೆನ್ನಾಗಿದ್ದೀರಾ?” ಅಂದರೆ ಆಯ್ತಪ್ಪ. ಇ? ಇದ್ದರೆ ಮಾತನಾಡಿ, ಇಲ್ಲದೆ ಇದ್ದರೆ ಸುಮ್ಮನೆ ಇದ್ದುಬಿಡಿ. ಇ?ಕ್ಕೆ ಅವರೇನು ಕೊಲೆ ಮಾಡಿಬಿಡುತ್ತಾರಾ? ಆದರೆ ಒಂದು ಗಮನೀಯ ಅಂಶ ಅಂದರೆ, ಅವರ ಪ್ರತಿಕ್ರಿಯೆಯಿಂದ ಅವರ ಸ್ವಭಾವ ಅನಾವರಣವಾಗಿಬಿಡುತ್ತದೆ.
ನೀವೇ ನೋಡಿ. “ಹೇಗಿದ್ದೀರಿ?” ಎಂದು ಯಾರನ್ನಾದರೂ ಕೇಳಿ. ಕೆಲವರು “ಏನೋ ಇದ್ದೇವೆ” ಎನ್ನುತ್ತಾರೆ. ಅವರಿಗೆ ಹೇಳುವುದಕ್ಕೆ ಇ? ಇಲ್ಲ. ’ಇನ್ಕಂಟ್ಯಾಕ್ಸ್ ಡಿಪಾಟ್ರ್ಮೆಂಟಿನವರು ಕೇಳುತ್ತಿದ್ದಾರೆ, ಏನೂ ಬಿಟ್ಟುಕೊಡಬಾರದು’ ಎನ್ನುವ ಥರ ಎಲ್ಲ ಗುಟ್ಟುಗುಟ್ಟು! ಇನ್ನು ಕೆಲವರು, “ಏನೋ ಇದ್ದೇವೆ, ದೇವರ ದಯದಿಂದ” ಎನ್ನುತ್ತಾರೆ. ಇವರು ’ತೇನವಿನಾ ತೃಣಮಪಿ ನ ಚಲತಿ’ ಅಂತ ಭಯ-ಭಕ್ತಿಯಿಂದ ನಂಬಿದ ಆಸ್ತಿಕರು. ಪಾಪ, ಅವರು ಹಾಗೇ ಇರಲಿ ಬಿಡಿ, ನಮ್ಮ ಗಂಟೇನು ಹೋಗುವುದಿದೆ? ಇನ್ನು ಕೆಲವರು “ಏನೋ ಇದ್ದೇವೆ, ಆದ್ರೆ ನಿಮ್ಮಷ್ಟಲ್ಲ” ಎನ್ನುತ್ತಾರೆ. ಇವರು ಮಹಾ ಹೊಟ್ಟೆಕಿಚ್ಚಿನ ಜನ. ನಿಮ್ಮ ಪ್ರತಿಯೊಂದು ವಿ?ಯವನ್ನೂ ಗೊತ್ತುಮಾಡಿಕೊಂಡಿರುತ್ತಾರೆ. ಹಾಗಾಗಿ ಹೊಟ್ಟೆಯಲ್ಲಿ ಅವಲಕ್ಕಿಭತ್ತ ಕುಟ್ಟಿದಂತಾಗಿರುತ್ತದೆ. ಅದುಮಿಡಲಾಗದೆ ಕಕ್ಕಿಬಿಡುತ್ತಾರೆ. ಇನ್ನು ಒಂದ? ಜನ, “ಏನೋ ಇದ್ದೇವೆ, ನಿಮ್ಮ ದಯದಿಂದ” ಎನ್ನುತ್ತಾರೆ. ಇದು ವ್ಯಂಗ್ಯ, ಕುಹಕ. ಚೇಳಿನ ಥರ ಕುಟುಕುವುದು ಇವರ ಸ್ವಭಾವ. ಇಂಥವರನ್ನು ಹು?ರಾಗಿ ಹ್ಯಾಂಡಲ್ ಮಾಡಬೇಕು. ಇನ್ನು ಕೆಲವರು, “ಹೇಗಿದ್ದೀರಿ” ಅಂದರೆ, “ಹೋ.. ಫಸ್ಟ್ಕ್ಲಾಸ್.. ಏಕ್ದಂ ಮಸ್ತ್.. ಜಕಾಸ್” ಎನ್ನುತ್ತಾರೆ, ತಮ್ಮ ಮೂವತ್ತೆರಡೂ ಹಲ್ಲು ಪ್ರದರ್ಶಿಸುತ್ತಾ. ಇವರು ’ಇಲಿಹೋಯ್ತು ಅಂದರೆ ಹುಲಿಹೋಯ್ತು’ ಅನ್ನುವ ಕೆಟಗರಿಯವರು. ಎಲ್ಲದಕ್ಕೂ ಉತ್ಪ್ರೇಕ್ಷೆ ಮಾಡುತ್ತಾರೆ.
ಇನ್ನೂ ಕೆಲವರು, “ಏನೋ ಇದ್ದೇವಪ್ಪ.. ಸುಮಾರಾಗಿ” ಎನ್ನುತ್ತಾರೆ. ಇವರು ಸ್ವಲ್ಪ ನೆಗೆಟಿವ್ ಆಗಿ ಯೋಚನೆ ಮಾಡುವ ಜನ. ಇವರು ಈಗ ಇರುವ ರೀತಿ ಇವರಿಗೇ ಇ? ಇಲ್ಲ! ಏನೋ ಬೇಜಾರು. ಇವರ ಬಳಿ ಮಾತನಾಡಿದರೆ ನಿಮ್ಮ ಆಲೋಚನೆಗಳೂ ನೆಗೆಟಿವ್ ಆಗಿಬಿಡುತ್ತವೆ.
ಗುಣ ವೈವಿಧ್ಯ
ಇನ್ನು “ಚೆನ್ನಾಗಿದ್ದೀರಾ?” ಎಂದು ಕೇಳಿ. ಕೆಲವರು ಅದೇಕೋ.. ಏಕದಂ ತಿರುಗಿಬೀಳುತ್ತಾರೆ. ಜಗಳಗಂಟತನ ಇವರ ಮುಖ್ಯಗುಣ. “ಚೆನ್ನಾಗಿಲ್ಲದೇ ಇದ್ದರೆ ಬರುತ್ತಿದ್ದೆನಾ, ಮನೆಯಲ್ಲೇ ಇರುತ್ತಿದ್ದೆ” ಎಂದು ಹರಿಹಾಯುತ್ತಾರೆ. ನಿಮಗೂ ಉರಿಯುತ್ತದೆ. ’ಯಾಕಾದರೂ ಕೇಳಿದೆನೋ. ಮನೆಯಲ್ಲೆ ಬಿದ್ದು ಸಾಯಿರಿ” ಎಂದು ಹೇಳುವಷ್ಟು ಸಿಟ್ಟು ಬರುತ್ತದೆ. ಹಾಗೆ ಹೇಳುವುದಕ್ಕೆ ಆಗುತ್ತಾ? ಇನ್ನು ಕೆಲವರು “ಏನು ಚೆನ್ನವೋ ಏನೋ ಮಳೆ ಇಲ್ಲ… ಬೆಳೆ ಇಲ್ಲ ಎಲ್ಲ ಹಾಳಾಗಿ ಹೋಯಿತು. ಇದ್ದ ಕಾಡೆಲ್ಲ ಕಡಿದರು. ಮಳೆ ಬರಬೇಕು ಅಂದರೆ ಹೇಗೆ ಬರುತ್ತದೆ? ಈ ರಾಜಕಾರಣಿಗಳು” ಇವರು ಬೊಗಳೆ ಜನ. ಸುಮ್ಮನೆ ಭಾ?ಣ ಮಾಡುತ್ತಾರೆ. ದೇಶದ ಒಳಿತನ್ನು ತಾವೇ ಗುತ್ತಿಗೆ ತೆಗೆದುಕೊಂಡವರ ಹಾಗೆ ಮಾತಾಡುತ್ತಾರೆ. ’ಬನ್ನಿ, ಗಿಡ ನೆಡೋಣ’ ಎಂದು ಕರೆಯಿರಿ, ಆಗ ಗೊತ್ತಾಗುತ್ತದೆ ಇವರ ಬಣ್ಣ
ಇನ್ನು ಕೆಲವರು, ಚೆನ್ನಾಗಿದ್ದೀರಾ ಎಂದರೆ “ಹೇಗೆ ಕಾಣುತ್ತೀನಿ? ನೀವೇ ಹೇಳಿ” ಎಂದು ನಮ್ಮ ಕುತ್ತಿಗೆಗೇ ತಂದುಬಿಡುತ್ತಾರೆ. ವಿಶೇಷವಾಗಿ ಹೆಣ್ಣುಮಕ್ಕಳು ಇವರು ಹೊಗಳಿಕೆಯನ್ನು ಬಯಸುವ ಜನ. “ನೀವು ಬಿಡೀಪ್ಪಾ ಹೇಗಿದ್ದರೂ ಚೆಂದಾನೆ” ಎಂದು ನಾವು ಹೇಳಲಿ ಎಂದು ಅವರ ಆಸೆ. ’ನಿಮ್ಮ ಎತ್ತರ, ಬಣ್ಣ, ಪರ್ಸನಾಲಿಟಿ ಹೀಗೆ ಒಂದೆರಡು ಬಿಟ್ಟರೆ ಥೇಟು ಶ್ರೀದೇವಿ ಥರಾನೇ ಇದ್ದೀರಿ’ ಎಂದು ಹೇಳಲಿಕ್ಕಾಗುವುದಿಲ್ಲ. ಅದು ಹಳೇ ಜೋಕು. ಇದು ಒಂದು ತರಹ ತಂತಿಮೇಲಿನ ನಡಿಗೆ. ಜಾಣ್ಮೆಯಿಂದ ನಿಭಾಯಿಸಬೇಕು. ಇನ್ನು ಕೆಲವರು “ಚೆನ್ನಾಗಿದ್ದೀರಾ?” ಎಂದರೆ, ಬರೀ “ಹುಂ” ಎನ್ನುತ್ತಾರೆ. ತಿರುಗಿ, “ನೀವು ಚೆನ್ನಾಗಿದ್ದೀರಾ?” ಎಂದು ಅವರ ಬಾಯಲ್ಲಿ ಯಾವತ್ತಿಗೂ ಬಿಲ್ಕುಲ್ ಬರುವುದಿಲ್ಲ. ’ನೀವು ಚೆನ್ನಾಗಿದ್ದರೆ?, ಬಿಟ್ಟರೆ?’ ಎನ್ನುವ ಥರ, ಮೈಯೆಲ್ಲಾ ಕೊಬ್ಬು, ಅಹಂಕಾರ. ಇಂಥವರನ್ನು ತಿರುಗಿಯೂ ನೋಡಬಾರದು. ಅಹಂಕಾರಕ್ಕೆ ಉದಾಸೀನವೇ ಮದ್ದು.
“ಹೇಗಿದ್ದೀರಿ?” ಎಂದು ಕೇಳಿದರೆ “ಚೆನ್ನಾಗಿದ್ದೇವೆ, ನೀವು ಹೇಗಿದ್ದೀರಿ, ಮನೆ ಕಡೆ ಎಲ್ಲರೂ ಚೆನ್ನಾಗಿದ್ದಾರಾ?” ಅಂದರಾಯ್ತು. ಇ?ವಿದ್ದರೆ ಮುಂದುವರಿಸಿ, ಇಲ್ಲವಾದರೆ ಬಿಡಿ. ಆದರೆ ನೆನಪಿಟ್ಟುಕೊಳ್ಳಿ, ಇವೆಲ್ಲ ನಿಮ್ಮ ಸ್ವಭಾವವನ್ನೂ, ಸಂಸ್ಕಾರವನ್ನೂ ಸ್ವಲ್ಪಮಟ್ಟಿಗೆ ಬಯಲು ಮಾಡಿಬಿಡುತ್ತವೆ.
ಪುಟ್ಟ ಬಾಯಿ-ದೊಡ್ಡ ಮಾತು
ಮಹಡಿ ಮೇಲಿನ ಹಾಲ್ನಲ್ಲಿ ಮಗಳ ಪಟಾಲಂ ಆಟವಾಡುತ್ತಿತ್ತು. ನಾನು ಮಲ್ಲಾದಿಯವರ ’ಈ ಜೀವನ ಬೇವು-ಬೆಲ್ಲ’ ಕಾದಂಬರಿ ಓದುತ್ತಿದ್ದೆ. ಪುಟ್ಟ ಸಹನಾ ಬಂದಳು, ಯಾವುದೋ ತಕರಾರು ತೆಗೆದುಕೊಂಡು. ಅವಳ ಸಕಲ ಸಮಸ್ಯೆಗಳಿಗೂ ಪರಿಹಾರ ನೀಡುವ ಏಕೈಕ ನ್ಯಾಯಾಧೀಶೆ ನಾನು! “ಅತ್ತೆ, ಈ ಗೊಂಬೆ ನೋಡೇ” ನೋಡಿದೆ. ಅದಕ್ಕೊಂದು ಕಾಲಿರಲಿಲ್ಲ. ಇದೆಲ್ಲ ನನ್ನ ಮಗಳ ಕೆಲಸ. ಎಲ್ಲ ಗೊಂಬೆಗಳ ಬಟ್ಟೆ ತೆಗೆದು, ಕೈಕಾಲು ಬೇರೆ ಮಾಡಿ.. ಹಿಂದಿನ ಜನ್ಮದಲ್ಲಿ ಮಟನ್ಶಾಪ್ ಇಟ್ಟುಕೊಂಡಿದ್ದಳೋ ಏನೋ.. “ಅತ್ತೆ, ಈ ಗೊಂಬೇನ ಯಾರೂ ತಕತ್ವಿಲ್ಲೆ” ಸಹನಾಳಿಗೆ ಯಾಕೊ ಅಸಹನೆ. “ಹೋಗ್ಲಿ ಬಿಡು ಬೇರೆ ಗೊಂಬೆ ಇದೆಯಲ್ಲ, ಅದನ್ನು ತಗೋ” ನನ್ನ ಮಾತು ಅವಳಿಗೆ ಹಿಡಿಸಲಿಲ್ಲ. “ಹಾಂಗಲ್ದೆ ಅತ್ತೆ, ರಾಶಿ ದಿವ್ಸದಿಂದ ನೋಡಿದ್ನೇ.. ಒಬ್ರೂ ಮುಟ್ತುತ್ವಿಲ್ಲೆ ಇದನ್ನ” ನಾನೂ ದನಿ ಎತ್ತರಿಸಿದೆ. “ಅಯ್ಯೋ ಬಿಡೆ ಮಾರಾಯ್ತಿ, ನೀನೂ ಬೇರೆಯದನ್ನು ತಗೋಳ್ಳೇ.. ಇದು ಬೇಡ ಅಂದರೆ” ಅಂದೆ. “ಹಾಂಗೆ ಹ್ಯಾಂಗೆ ಮಾಡಲಾಗ್ತು? ಒಮ್ಮೆ, ನಾನೂ ತಕಂಡಿದ್ನಿಲ್ಲೆ ಅಂದ್ರೆ.. ಬ್ಯಾರೆ ಯಾರೂ ತಕತ್ವಿಲ್ಲೆ. ಅದಕ್ಕೆ (ಗೊಂಬೆಗೆ) ಬ್ಯಾಜಾರ್ ಆಗ್ತಿಲ್ಯಾ? ಅದ್ರ ಕಾಲುಮುರಿದು ಹೋಗಿದ್ದು ಅದ್ರ ತಪ್ಪಾ?” ಅವಳ ಮಾತು ಕೇಳಿ ಮೂಕಳಾದೆ. ಕರುಳ ಮೂಲೆಯಲ್ಲೆಲ್ಲೋ ‘ಚುಳ್’ ಎನಿಸಿತು. ಪುಟ್ಟ ಬಾಯಲ್ಲಿ ಎಂಥ ದೊಡ್ಡಮಾತು!
ಪ್ರಪಂಚವೇ ಹೀಗೆ. ಚೆನ್ನಾಗಿಲ್ಲದವರು ಯಾರಿಗೂ ಬೇಡ. ಒಮ್ಮೆ ನಾನೂ ಸಣ್ಣ ಕಾಯಿಲೆಯಿಂದ ಪೀಡಿತಳಾಗಿ, ಚೆನ್ನಾಗಿಲ್ಲದವರು (ಆರೋಗ್ಯ) ತೆಪ್ಪಗೆ ಮನೆಯಲ್ಲಿ ಇರಬೇಕು ಎಂದು ನನಗೆ ನಾನೇ ಕರ್ಫ್ಯೂ ವಿಧಿಸಿಕೊಂಡು ಮನಸಿನ ಬಾಗಿಲು ಹಾಕಿಕೊಂಡಿದ್ದೆ. ಈ ಬಾಗಿಲು ತೆರೆದು, ಭರವಸೆಯ ಬೆಳಕಾಗಿ ಬಂದು, ಜೀವನೋತ್ಸಾಹಕ್ಕೆ ಸುಂದರ ಭಾಷೆ ಬರೆದಿಟ್ಟವಳು ಇದೇ ಸಹನಾ! ಚೆನ್ನಾಗಿರುವವರು ಚೆನ್ನಾಗಿಲ್ಲದವರನ್ನೂ ಜೊತೆಯಲ್ಲಿ ಸೇರಿಸಿಕೊಂಡು, ಸಾಧ್ಯವಾದ? ಮಟ್ಟಿಗೆ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಅದೇ ಬದುಕಿನ ಚೆಂದ, ಜೀವನಸಾರ್ಥಕ್ಯ.
ಅವಳನ್ನು ಕರೆದು, ಕೂರಿಸಿಕೊಂಡು ಹೇಳಿದೆ: “ಸಹನಾ, ನಿಮ್ಮ ಆಟಕ್ಕೆ ನನ್ನನ್ನೂ ಸೇರಿಸಿಕೊಳ್ಳುತ್ತೀರಾ? ನಾನು ಡಾಕ್ಟ್ರಂತೆ, ನಿನ್ನ ಮಗೂಗೆ ಟ್ರೀಟ್ಮೆಂಟ್ ಮಾಡ್ತೀನಂತೆ. ಅದರ ಕಾಲು ಸರಿಹೋದರೆ ಸಂತೋ?.. (ಮಗಳು ಎಲ್ಲಿ ಎಸೆದುಬಿಟ್ಟಿದ್ದಾಳೋ ಏನು ಕತೆಯೋ,) ಇಲ್ಲದಿದ್ದರೆ ಅದರ ಕೈ ಬಿಡಲಿಲ್ಲೆ ಮತ್ತೆ…” ಅವಳ ಮುಖ ಹೂವಿನಂತೆ ಅರಳಿತು. ಗೊಂಬೆಯನ್ನು ಎದೆಗೊತ್ತಿಕೊಂಡಳು. ಎಲ್ಲರಿಗೂ ಸುದ್ದಿ ಬಿತ್ತರಿಸಲು ಓಡಿದಳು ಮಹಡಿಗೆ. “ನೋಡ್ರೇ, ಅತ್ತೇನೂ ಬತ್ತಡ ಆಟಕ್ಕೆ. ಆದರೆ ನಾ ಮೊದಲೇ ಹೇಳ್ಕಂಡಿದ್ದೆ ಮತ್ತೆ… ಅತ್ತೆ ನನ್ನ ಪಾರ್ಟಿ” ಅವಳ ಮಾತು ಮನೆಯಲ್ಲೆಲ್ಲ ಮಾರ್ದನಿಸುತ್ತಿತ್ತು.
ನನ್ನ ಜೊತೆಯಲ್ಲೇ ಇದ್ದೂ ಇದ್ದೂ, ನನ್ನ ಭಾವನೆಗಳನ್ನು ಅದೆ? ಚೆನ್ನಾಗಿ ಅರ್ಥಮಾಡಿಕೊಂಡಿದ್ದಾಳೆ. ಪರಿತ್ಯಕ್ತರನ್ನು ಪರಿಗ್ರಹಿಸುವ ಪುಟ್ಟ ದೇವಮಾತೆ! ಯಾಕೋ ಕಣ್ಣಂಚು ಒದ್ದೆಯಾಯಿತು. ಅಂದ ಹಾಗೆ ಕೇಳೋದು ಮರೆತೇಬಿಟ್ಟೆ, ನೀವು ಹೇಗಿದ್ದೀರಿ? ಚೆನ್ನಾಗಿದ್ದೀರಾ?