ಸಂತತ್ವವೆಂದರೆ ಜೀವನಕ್ಕೆ ವಿಮುಖನಾಗುವುದಲ್ಲ. ಕಾಡಿನಲ್ಲಿ ಕುಳಿತು ಮೂಗು ಮುಚ್ಚಿಕೊಳ್ಳುವುದೂ ಅಲ್ಲ, ತೀವ್ರತೆಯಿಂದ, ಪರಿಪೂರ್ಣತೆಯಿಂದ ಜೀವನವನ್ನು ಜೀವಿಸುವ ಶೈಲಿಯೇ ಸಂತತ್ವ. ಸಂತುಲನದಿಂದ ಬದುಕುವವನೇ ಸಂತ. ಮಾನುಷಜೀವನ ಪಾವನವಾಗಬೇಕಾದರೆ ಸತ್ಪುರುಷರ ಸಂಗದಲ್ಲಿರಬೇಕು. ಸಜ್ಜನರ ಸಂಗದಿಂದ ಎತ್ತರಕ್ಕೆ ಏರಬಹುದು. ದುರ್ಜನರ ಸಂಗದಿಂದ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ಯಾರ ಸಹವಾಸದಲ್ಲಿದ್ದೇವೆ ಎಂಬುದರ ಮೇಲೆ ನಮ್ಮ ಬದುಕಿನ ಮೌಲ್ಯದ ನಿರ್ಣಯ ಆಗುತ್ತದೆ. ದೆವ್ವದ ಸಹವಾಸದಲ್ಲಿದ್ದರೆ ಹುಣಿಸೆಮರವನ್ನು ಹತ್ತಲೇಬೇಕು. ಸಂತರ ಸಂಗದಲ್ಲಿದ್ದರೆ ಹಿಮಾಲಯದ ಶಿಖರವನ್ನೇ ಏರಬಹುದು. ಶ್ರೀಗಂಧವನ್ನು ಒಂದು ಬಟ್ಟೆಯಲ್ಲಿ ಸುತ್ತಿಟ್ಟರೆ ಆ ಬಟ್ಟೆಗೂ ಶ್ರೀಗಂಧದ […]
ಸಂತರ ಸಂಗವೇ ಸತ್ಸಂಗ
Month : September-2017 Episode : Author : ಡಾ|| ಕೆ. ಜಗದೀಶ ಪೈ