ಸಂತತ್ವವೆಂದರೆ ಜೀವನಕ್ಕೆ ವಿಮುಖನಾಗುವುದಲ್ಲ. ಕಾಡಿನಲ್ಲಿ ಕುಳಿತು ಮೂಗು ಮುಚ್ಚಿಕೊಳ್ಳುವುದೂ ಅಲ್ಲ, ತೀವ್ರತೆಯಿಂದ, ಪರಿಪೂರ್ಣತೆಯಿಂದ ಜೀವನವನ್ನು ಜೀವಿಸುವ ಶೈಲಿಯೇ ಸಂತತ್ವ. ಸಂತುಲನದಿಂದ ಬದುಕುವವನೇ ಸಂತ.
ಮಾನುಷಜೀವನ ಪಾವನವಾಗಬೇಕಾದರೆ ಸತ್ಪುರುಷರ ಸಂಗದಲ್ಲಿರಬೇಕು. ಸಜ್ಜನರ ಸಂಗದಿಂದ ಎತ್ತರಕ್ಕೆ ಏರಬಹುದು. ದುರ್ಜನರ ಸಂಗದಿಂದ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ಯಾರ ಸಹವಾಸದಲ್ಲಿದ್ದೇವೆ ಎಂಬುದರ ಮೇಲೆ ನಮ್ಮ ಬದುಕಿನ ಮೌಲ್ಯದ ನಿರ್ಣಯ ಆಗುತ್ತದೆ. ದೆವ್ವದ ಸಹವಾಸದಲ್ಲಿದ್ದರೆ ಹುಣಿಸೆಮರವನ್ನು ಹತ್ತಲೇಬೇಕು. ಸಂತರ ಸಂಗದಲ್ಲಿದ್ದರೆ ಹಿಮಾಲಯದ ಶಿಖರವನ್ನೇ ಏರಬಹುದು.
ಶ್ರೀಗಂಧವನ್ನು ಒಂದು ಬಟ್ಟೆಯಲ್ಲಿ ಸುತ್ತಿಟ್ಟರೆ ಆ ಬಟ್ಟೆಗೂ ಶ್ರೀಗಂಧದ ಸುಗಂಧ ಅಂಟಿಕೊಳ್ಳುತ್ತದೆ. ಅದೇ ರೀತಿ ಒಳ್ಳೆಯ ಈರುಳ್ಳಿಯ ರಾಶಿಗೆ ಒಂದು ಕೊಳೆತ ಈರುಳ್ಳಿ ಹಾಕಿದರೆ ಎಲ್ಲ ಈರುಳ್ಳಿಗಳೂ ಕೊಳೆತುಹೋಗುತ್ತವೆ. ಆದ್ದರಿಂದ ಜಗತ್ತೆಲ್ಲ ಸುಗಂಧ ಪಸರಿಸುವ ಶ್ರೀಗಂಧದಂತೆ ನಾವಾಗಬೇಕೋ ಅಥವಾ ದುರ್ಗಂಧವನ್ನು ಬೀರುವ ಕೊಳೆತ ಈರುಳ್ಳಿಯಂತೆ ನಾವಾಗಬೇಕೋ ಎಂಬುದನ್ನು ನಾವೇ ನಿರ್ಧರಿಸಬೇಕು.
ಶ್ರೀರಾಮಕೃಷ್ಣ ಪರಮಹಂಸರು ಒಳ್ಳೆಯ ಸಹವಾಸದಿಂದಲೇ ಉತ್ತಮ ಸಂಸ್ಕಾರ ಲಭ್ಯವಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತಾರೆ:
ರಾಮಕ್ಕ ಊರಿನಲ್ಲಿ ನಡೆಯುವ ಸಂತೆಗೆ ಮೀನನ್ನು ಮಾರಲು ಬುಟ್ಟಿಯನ್ನು ಹೊತ್ತುಕೊಂಡು ಬಂದಿದ್ದಳು. ಸಂತೆಯಲ್ಲಿ ಎಲ್ಲ ಮೀನುಗಳೂ ಮಾರಾಟವಾದವು. ಖಾಲಿ ಬುಟ್ಟಿ ಹೊತ್ತುಕೊಂಡು ತನ್ನ ಮನೆಯ ಕಡೆಗೆ ಹೆಜ್ಜೆಹಾಕಿದಳು. ಸಾಯಂಕಾಲ ಆಗಿತ್ತು. ಆಕಾಶದಲ್ಲಿ ಮೋಡಗಳು ಕವಿದು, ಮಳೆಬೀಳುವ ಲಕ್ಷಣ ಕಾಣಿಸುತ್ತಿತ್ತು. ಆಕೆಗೆ ದೂರದ ಹಳ್ಳಿಯಲ್ಲಿರುವ ಮನೆಗೆ ತಲಪುವುದು ಅಸಾಧ್ಯ ಎನಿಸಿತು. ಅದೇ ಊರಿನಲ್ಲಿ ಪರಿಚಯದ ಹೂವು ಮಾರುವ ಸೋಮಕ್ಕನ ಅಂಗಡಿ ಇತ್ತು. ರಾಮಕ್ಕ ಅವಳ ಅಂಗಡಿಯಲ್ಲೇ ರಾತ್ರಿ ಉಳಿದುಕೊಂಡು ಬೆಳಗ್ಗೆ ಎದ್ದು, ತನ್ನ ಮನೆಗೆ ಹೋಗುವುದೆಂದು ನಿಶ್ಚಯಿಸಿದಳು.
ಸೋಮಕ್ಕನ ಅಂಗಡಿಗೆ ಹೋಗಿ – “ಅಕ್ಕಾ! ನಾನು ಮನೆಗೆ ತಲಪುವುದರೊಳಗೆ ಮಳೆ ಬರಬಹುದು. ಈವತ್ತು ರಾತ್ರಿ ನಿನ್ನ ಅಂಗಡಿಯಲ್ಲೆ ಮಲಗಿ, ಬೆಳಗ್ಗೆ ಹೊಗುತ್ತೇನೆ” ಎಂದಳು. ಸೋಮಕ್ಕ ಅಂಗಡಿಯ ಒಂದು ಬದಿಯಲ್ಲೇ ಚಾಪೆ ಹಾಸಿ, ಮಲಗಲು ಅಣಿಮಾಡಿಕೊಟ್ಟಳು. ಎ? ಹೊತ್ತಾದರೂ ಸೋಮಕ್ಕನಿಗೆ ನಿದ್ರೆ ಬರಲೇ ಇಲ್ಲ. ಏಕೆಂದರೆ ಹೂವಿನ ಸುವಾಸನೆ ಆಕೆಯ ನಿದ್ದೆಗೆ ಅಡ್ಡಿಪಡಿಸಿತ್ತು. ಆಗ ಆಕೆ ಅಲ್ಲೇ ಇದ್ದ ನೀರನ್ನು ತನ್ನ ಮೀನಿನ ಬುಟ್ಟಿಗೆ ಸಿಂಪಡಿಸಿ ಅದನ್ನು ತನ್ನ ಮುಖದ ಮೇಲೆ ಬೋರಲು ಹಾಕಿಕೊಂಡು ಮಲಗಿದಳು. ಕೆಲವೇ ಕ್ಷಣಗಳಲ್ಲಿ ಆಕೆಗೆ ನಿದ್ರೆ ಬಂದು, ಜೋರಾಗಿ ಗೊರಕೆ ಹೊಡೆಯಲು ಆರಂಭಿಸಿದಳು. ಆಕೆಗೆ ಹೂವಿನ ಸುವಾಸನೆಗಿಂತ ಮೀನಿನ ವಾಸನೆಯೇ ಸಹ್ಯವೆನಿಸಿತು.
ಸಂಗ ಮಹಿಮೆ
ಮಾನುಷಜೀವನವೆಂದರೆ ಅದೊಂದು ಗಂಗಾನದಿಯಂತೆ ಪವಿತ್ರವಾದದ್ದು. ಹಿಮಾಲಯದ ಗಂಗೋತ್ರಿಯಲ್ಲಿ ಗಂಗೆ ಹುಟ್ಟುವಾಗ ಪವಿತ್ರವೂ, ಶುಭ್ರವೂ, ನಿಷ್ಕಲ್ಮಶವೂ ಆಗಿರುತ್ತದೆ. ಹಿಮಾಲಯದಿಂದ ಕೆಳಗಿಳಿದಂತೆ ಕಾರ್ಖಾನೆಗಳ ವಿಷಪೂರಿತ ರಾಸಾಯನಿಕ ಕಲ್ಮಶಗಳು, ನಗರದ ಕೊಳಚೆಗಳು ಸೇರಿ ಆ ಪವಿತ್ರ ಗಂಗೆಯೂ ಕಲುಷಿತಳಾಗುತ್ತಾಳೆ. ಇವೆಲ್ಲ ಸಂಗದೋಷದ ಪರಿಣಾಮಗಳು.
ಅದೇ ರೀತಿ ಮಾನು?ಜೀವನದ ಆರಂಭವು ತಿಳಿನೀರಿನ ಹೊಳೆಯ? ಪರಿಶುದ್ಧವಾಗಿರುತ್ತದೆ. ಆಗ ತಾನೆ ಜನಿಸಿದ ಮಗುವಿನ ನೋಟ ಭವ್ಯ, ಭಾವ ದಿವ್ಯ! ಅದರ ಮುಗುಳುನಗೆ ಆಹ್ಲಾದಕರ! ಆದರೆ ಅದೇ ಮುಗ್ಧಮಗು ಬೆಳೆಯುತ್ತಹೋದಂತೆ ಹಲವರ ಸಂಪರ್ಕಕ್ಕೆ ಬರುತ್ತದೆ. ಸಜ್ಜನರ ಸಂಗ ಅಧಿಕವಾದರೆ ಶಿ?ನಾಗುತ್ತಾನೆ. ದುರ್ಜನರ ಸಂಗ ಅಧಿಕವಾದರೆ ದು?ನಾಗುತ್ತಾನೆ. ಕಲುಷಿತ ಗಂಗೆಯನ್ನು ಶುದ್ಧಗೊಳಿಸಿದಂತೆ ಮನು?ನ ಮಲಿನ ಮನಸ್ಸನ್ನೂ ಶುದ್ಧಗೊಳಿಸಬೇಕಾಗಿದೆ.
ಈ ದೃಷ್ಟಿಯಲ್ಲಿಯೇ ಸರ್ವಜ್ಞ ಹೇಳಿದ್ದು –
“ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುರ್ಜನರ ಸಂಗವದು ಬಚ್ಚಲಿನ
ರೊಚ್ಚಿನಂತಿಹುದು ಸರ್ವಜ್ಞ ||”
ಎಂಬುದಾಗಿ. ಆದ್ದರಿಂದ ನಮ್ಮ ಜೀವನವನ್ನು ಉದ್ದೀಪಿಸಬೇಕಾದರೆ ಸಂತರ ಸಂಗ, ಸಜ್ಜನರ ಸಹವಾಸ ಮಾಡಬೇಕು. ಸಂತರ ಸಂಗವೇ ಪರಮಶ್ರೇಷ್ಠ, ಅದೇ ತೀರ್ಥಯಾತ್ರೆ. ಯಾರ ಸಂಗದಿಂದ ನಮ್ಮ ಮನಸ್ಸು ಕೆರಳುತ್ತದೋ, ಕೆಡುತ್ತದೋ ಅವರಿಂದ ನಾವು ದೂರ ಸರಿಯಬೇಕು. ಯಾರ ಸನ್ನಿಧಿಯಲ್ಲಿ ನಮ್ಮ ಮನಸ್ಸು ಅರಳುತ್ತದೋ, ಶಾಂತವಾಗುತ್ತದೋ ಅವರ ಸಂಗದಲ್ಲಿ ನಾವು ಇರಬೇಕು. ಆ ದೃಷ್ಟಿಯಲ್ಲಿ ನೋಡಿದರೆ ಸಂತರೇ ನಿಜವಾದ ಸ್ನೇಹಿತರು. ಏಕೆಂದರೆ ಅವರು ಮಾತ್ರ ನಮ್ಮ ಮನಸ್ಸನ್ನು ಅರಳಿಸಬಲ್ಲರು; ನಮ್ಮಲ್ಲಿ ಭಗವದ್ಭಾವವನ್ನು ಜಾಗೃತಗೊಳಿಸಬಲ್ಲವರು. ಭಕ್ತಿಭಾವದಿಂದ ಸಂತರ ದರ್ಶನ ಮಾಡುವುದರಿಂದ ಮನಸ್ಸು ಪ್ರಶಾಂತವಾಗುವುದಲ್ಲದೆ ಎಲ್ಲ ಕೆಟ್ಟ ಆಸಕ್ತಿಗಳೂ ದೂರವಾಗುವವು.
ಸಂತ ಮಹಿಮೆ
ಸಂತರ ಸಂಗದಲ್ಲಿ ನಮ್ಮ ಆಪೇಕ್ಷೆಗಳು ಏಕೆ ಕಡಮೆಯಾಗುತ್ತವೆ ಎಂದರೆ ಅವರ ವ್ಯಕ್ತಿತ್ವದ ಪ್ರಭಾವದಿಂದ. ಸಂತರೆಂದರೆ ತ್ಯಾಗಿಗಳು. ಅವರು ಎಲ್ಲವನ್ನೂ ತ್ಯಜಿಸಿ ಭಗವಂತನನ್ನು ದೃಢವಾಗಿ ಹಿಡಿದಿಟ್ಟುಕೊಂಡವರು; ಅವರು ನಾಳೆಗಾಗಿ ಯಾವುದನ್ನೂ ಸಂಚಯ ಮಾಡುವುದಿಲ್ಲ.
ಸಂನ್ಯಾಸಿ ಎಂದರೆ ಹೇಗಿರಬೇಕೆಂದು ಶ್ರೀರಾಮಕೃ? ಪರಮಹಂಸರು ಹೇಳಿದ್ದಾರೆ:
“ಯಾರು ಪವಿತ್ರ ಸಂನ್ಯಾಸಾಶ್ರಮಕ್ಕೆ ಅರ್ಹರು? ಯಾರು ಪ್ರಪಂಚವನ್ನು ಸಂಪೂರ್ಣ ತ್ಯಜಿಸಿ, ನಾಳೆ ಊಟ ಮಾಡುವುದೆಲ್ಲಿ, ನಾಳೆ ಉಟ್ಟುಕೊಳ್ಳುವುದೇನು ಎಂಬುದನ್ನು ಸ್ವಲ್ಪವೂ ಮನಸ್ಸಿನೊಳಗೆ ಇಟ್ಟುಕೊಳ್ಳದೆ ಇರುವರೋ ಅವರು ಸಂನ್ಯಾಸಿಯಾಗಲು ಅರ್ಹರು. ಅವರ ಸ್ವಭಾವ ಆವಶ್ಯಕತೆ ಬಿದ್ದರೆ ದೊಡ್ಡ ಮರದ ಮೇಲಿಂದ, ತನ್ನನ್ನು ರಕ್ಷಿಸಿಕೊಳ್ಳಬೇಕು ಎಂಬುದನ್ನು ಕೂಡ ಲೆಕ್ಕಿಸದೆ, ಕೆಳಗೆ ಬೀಳುವಂತೆ ಇರಬೇಕು.”
ಅದೇ ರೀತಿ ಅವರು ಕಪಟ ಸಂನ್ಯಾಸಿಯ ಲಕ್ಷಣವನ್ನೂ ಹೇಳಿದ್ದಾರೆ:
“ಯಾವ ಸಂನ್ಯಾಸಿ ಔ?ಧಿಯನ್ನು ಕೊಡುವನೋ, ಮಾಟಮಂತ್ರಗಳನ್ನು ಮಾಡುವನೋ, ಹಣವನ್ನು ಸ್ವೀಕರಿಸುವನೋ, ದೊಡ್ಡ ದೊಡ್ಡ ಬಾಹ್ಯಚಿಹ್ನೆಗಳ ಮೂಲಕ ಭಕ್ತಿಯನ್ನು ಪ್ರದರ್ಶಿಸುವನೋ ಅವನನ್ನು ನಂಬಬೇಡಿ.”
ಬಸವಣ್ಣನವರು ಕೂಡ ಸಂತರ ನಿರ್ಲಿಪ್ತತೆಯ ಬಗ್ಗೆ ಹೇಳಿದ್ದಾರೆ. ನಮ್ಮ ಋಷಿಮುನಿಗಳು, ಸಂತರು-ಶರಣರು ಬಹಿರಂಗದ ಸಿರಿಸಂಪದ ಅ?ಗಿ ಗಳಿಸಿದವರಲ್ಲ. ಆದರೆ ಅವರ? ಅಂತರಂಗದ ಸಿರಿಯನ್ನು ಗಳಿಸಿದವರು ಯಾರೂ ಇಲ್ಲ.
ಮನೆ ನೋಡಾ ಬಡವರು; ಮನ ನೋಡಾ ಸಂಪನ್ನರು!
ಧನ ನೋಡಾ, ಬಡವರು; ಘನ ಮನ ಸಂಪನ್ನರು!
ಕೂಡಲಸಂಗನ ಶರಣರು ಕರುಳಿಲ್ಲದ ಕಲಿಗಳು
ಆರಿಗೂ ಉಪಮಿಸಬಾರದು ||
ಕರುಳು ಎಂದರೆ ಆಶೆ, ಮೋಹ. ಕಲಿಗಳೆಂದರೆ ವೀರರು, ಶರಣರು. ಆಶೆಯನ್ನು ಗೆದ್ದವರೆ ನಿಜವಾದ ವೀರರು. ಅವರೇ ಕರುಳಿಲ್ಲದ ಕಲಿಗಳು.
ಇಂತಹ ಜಿತೇಂದ್ರಿಯ ಸಂತರ ಸಂಗದಿಂದ ನಾವು ಕೂಡ ವಿ?ಯಾಸಕ್ತಿಯಿಂದ ಅನಾಸಕ್ತಿಯೆಡೆಗೆ ಹೋಗುತ್ತೇವೆ. ಈ ಅನಾಸಕ್ತಿಯೇ ಮನು?ನ ಶಾಂತಿಗೆ ಬುನಾದಿ. ಆದರೆ ಸಂತರ ಬಾಹ್ಯಚರ್ಯೆಯಿಂದ ಅವರನ್ನು ನಾವು ಅಳೆಯಬಾರದು. ಬದಲಿಗೆ ಅಂತರಂಗದಿಂದ ನಾವು ಅವರನ್ನು ತಿಳಿದುಕೊಳ್ಳಬೇಕು.
ನಾವು ಸಂಸಾರದಲ್ಲಿದ್ದು ಸಂನ್ಯಾಸಿಯಾಗಬಹುದು; ಸಂನ್ಯಾಸಿಯಾಗಿದ್ದು ಸಂಸಾರಿಯಾಗಬಹುದು. ಸಂತೆಯಲ್ಲಿದ್ದು ಏಕಾಂತದಲ್ಲಿರಬಹುದು; ಏಕಾಂತದಲ್ಲಿದ್ದು ಸಂತೆಯೊಳಗಿರಬಹುದು. ಓರ್ವ ರಾಜ ಅರಮನೆಂiiಲ್ಲಿದ್ದು ಧನ-ಕನಕದ ಬಗ್ಗೆ ನಿರ್ಲಿಪ್ತನಾಗಿರಬಹುದು; ಓರ್ವ ಬಡವ ಗುಡಿಸಲಿನಲ್ಲಿದ್ದು ಸಂಪತ್ತಿನ ಲಾಲಸೆಯಿಂದಿರಬಹುದು. ಸಂತರಿಗೆ ಎಲ್ಲವೂ ಇದ್ದರೂ ಏನನ್ನೂ ಹಚ್ಚಿಕೊಳ್ಳುವುದಿಲ್ಲ. ಸಂಪತ್ತು-ಸೌಲಭ್ಯವನ್ನು ಅವರು ನೆಚ್ಚಿಕೊಳ್ಳುವುದಿಲ್ಲ. ಇಂಥವರ ಸಂಗದಿಂದಲೇ ನಮ್ಮ ಉದ್ಧಾರವಾಗುತ್ತದೆ.
ಪದ್ಮಪತ್ರಮಿವಾಂಭಸಾ
ಇಬ್ರಾಹಿಂ ಆಧಂ ಎಂಟನೇ ಶತಮಾನದ ಬಹುದೊಡ್ಡ ಸೂಫಿ ಸಂತ. ಅವನು ಮೊದಲು ಸುಲ್ತಾನನಾಗಿದ್ದನಂತೆ. ಭಾರೀ ಶ್ರೀಮಂತಿಕೆಯಲ್ಲಿ ಬದುಕಿದವನು ಅವನು. ಯಾವುದೋ ಒಂದು ದೈವೀ ಕ್ಷಣದಲ್ಲಿ ಆತನಿಗೆ ಜ್ಞಾನೋದಯವಾಗಿ ಸಂತನಾಗಿಬಿಟ್ಟ. ಆದರೆ ತಂದೆ ಇಬ್ರಾಹಿಂನನ್ನು ಮೊದಲಿನಂತೆ ಶ್ರೀಮಂತಿಕೆಯಲ್ಲಿಯೇ ಇಟ್ಟಿದ್ದ. ಇಬ್ರಾಹಿಂ ಹೋದಲ್ಲೆಲ್ಲ ನೂರಾರು ಸೇವಕರು ಅವನನ್ನು ಹಿಂಬಾಲಿಸುವರು. ಅವನಿಗೆ ವಿಶೇ?ವಾದ ಚಪ್ಪರವನ್ನು ನಿರ್ಮಿಸುವರು. ಚಪ್ಪರ ನಿರ್ಮಿಸುವಾಗ ಹಗ್ಗಕ್ಕೆ ಕಟ್ಟಿ ನೆಲಕ್ಕೆ ಹೊಡೆಯುವ ಗೂಟ ಕೂಡ ಬಂಗಾರದ್ದಾಗಿರುತ್ತಿತ್ತು. ಇಬ್ರಾಹಿಂ ಯಾವುದಾದರೂ ವಸ್ತುವನ್ನು ಅಪೇಕ್ಷಿಸುವ ಮೊದಲೇ ಅದು ಸಿದ್ಧವಾಗಿ ಅವನ ಮುಂದಿರುತ್ತಿತ್ತು.
ಒಂದು ಬಾರಿ ಇಬ್ರಾಹಿಂ ಆದಂ ತನ್ನ ಅಪರಿಮಿತ ಪರಿವಾರದೊಂದಿಗೆ ಪ್ರವಾಸ ಮಾಡುತ್ತ, ಒಂದೆಡೆ ವಾಸ್ತವ್ಯ ಹೂಡಿದ್ದ. ಅವನ ಪರಿವಾರದವರ, ವಾಹನಗಳ ಜೊತೆಗೆ ಬಂದ ಒಂಟೆ, ಕುದುರೆ ಹಾಗೂ ಇತರ ಪ್ರಾಣಿಗಳ ಸದ್ದು ವಾತಾವರಣವನ್ನೆಲ್ಲ ತುಂಬಿತ್ತು. ಆಗ ಅಲ್ಲೊಬ್ಬ ಭಿಕ್ಷುಕ ಬಂದ. ಯಾರೋ ಮಹಾರಾಜ ಬಂದಿದ್ದಾನೆ, ತನಗೇನಾದರೂ ದಾನ ಸಿಕ್ಕೀತು, ಹೆಚ್ಚಿನ ಭಿಕ್ಷೆ ದೊರಕೀತು ಎಂಬ ಆಸೆಯಿಂದ ಇಬ್ರಾಹಿಂ ಇದ್ದ ಡೇರೆಯ ಬಳಿಗೆ ಬಂದ. ಆಗ ಅವನಿಗೆ ಗೊತ್ತಾಯಿತು, ಬಂದವನು ರಾಜನಲ್ಲ, ಒಬ್ಬ ಸೂಫಿ ಸಂತ. ಅವನಿಗೆ ಆಶ್ಚರ್ಯವೂ ಆಯಿತು, ದುಃಖವೂ ಆಯಿತು. ಸಂತನೊಬ್ಬ ಈ ಪರಿಯ ವೈಭವದಲ್ಲಿ ಇರುವುದು ಸಾಧ್ಯವೇ? ಸರಿಯೇ? ದ್ವಾರಪಾಲಕರ ಅಪ್ಪಣೆ ಪಡೆದು ಇಬ್ರಾಹಿಂನ ಡೇರೆಯ ಬಳಿಗೆ ಬಂದ. ಇದನ್ನು ಪ್ರವಾಸಿಗರ ಡೇರೆ ಎಂದು ಯಾರು ಹೇಳಬಹುದು? ಒಳಗಡೆ ಅದೊಂದು ಅರಮನೆಯೇ ಆಗಿದೆ. ಏನು ಪರದೆಗಳು, ಏನು ಮೆತ್ತನೆ ಹಾಸುಗಳು, ವಜ್ರಖಚಿತವಾದ ಆಸನಗಳು, ಹೊನ್ನಿನ ಹೂವಿನ ಕರಂಡಗಳು! ಇಬ್ರಾಹಿಂ ಒಂದು ಹಂಸತೂಲಿಕಾತಲ್ಪದ ಮೇಲೆ ಅರ್ಧ ಒರಗಿಕೊಂಡು ಕುಳಿತಿದ್ದಾನೆ. ಅವನ ಬಟ್ಟೆಗಳೆ? ಸುಂದರ! ಮೈಮೇಲಿರುವ ವಜ್ರದ ಆಭರಣಗಳ ಮಿಂಚು ಕಣ್ಣು ಕೋರೈಸುತ್ತಿದೆ. ಆದರೆ ಮುಖದ ಮೇಲಿನ ಕಾಂತಿ ಎ? ಪ್ರಖರವಾಗಿದೆ! ಭಿಕ್ಷುಕ ಇಬ್ರಾಹಿಂನನ್ನು ಕೇಳಿಯೇಬಿಟ್ಟ: “ನೀವೇನು ಸಂತರೋ, ರಾಜರೋ? ಸಂತರಾಗಿದ್ದರೆ ಈ ವೈಭವವೇಕೆ ಬೇಕು?” ಇಬ್ರಾಹಿಂ ಶಾಂತವಾಗಿ ಉತ್ತರಿಸಿದ, “ಹೌದು, ಇದೆಲ್ಲ ಬೇಕಿಲ್ಲ. ಆದರೆ ಇದ್ದರೆ ತೊಂದರೆಯೂ ಇಲ್ಲ.” “ಹೌದೇ? ಹಾಗಾದರೆ ಇದನ್ನೆಲ್ಲ ಬಿಟ್ಟು ಮಕ್ಕಾಗೆ ಬನ್ನಿ, ಜೊತೆಯಾಗಿ ಹೋಗೋಣ” ಎಂದ. “ಸರಿ, ಹಾಗಾದರೆ ನಡೆ” ಎಂದು ಇಬ್ರಾಹಿಂ ತನ್ನ ಆಭರಣಗಳನ್ನು, ಬೆಲೆಬಾಳುವ ವಸ್ತ್ರಗಳನ್ನು, ವಸ್ತುಗಳನ್ನು ತೆಗೆದಿರಿಸಿ ಯಾರಿಗೂ ಹೇಳದೆ ಹಿಂದಿನ ಬಾಗಿಲಿನಿಂದ ಭಿಕ್ಷುಕನನ್ನು ಕರೆದುಕೊಂಡು ಹೊರಟುಬಿಟ್ಟ.
ಇಬ್ಬರೂ ಮರುಭೂಮಿಯಲ್ಲಿ ನಡೆಯುತ್ತಾ ಸ್ವಲ್ಪ ದೂರ ಹೋಗಿದ್ದರ?;. ಆಗ ಭಿಕ್ಷುಕನಿಗೆ ನೆನಪಾಯಿತು, ತನ್ನ ಭಿಕ್ಷಾಪಾತ್ರೆಯನ್ನು ಡೇರೆಯಲ್ಲಿಯೇ ಬಿಟ್ಟುಬಂದಿದ್ದೇನೆಂದು. “ಇಬ್ರಾಹಿಂ, ನಾನು ನನ್ನ ಭಿಕ್ಷಾಪಾತ್ರೆಯನ್ನು ಅಲ್ಲಿಯೇ ಬಿಟ್ಟು ಬಂದಿದ್ದೇನೆ. ವಾಪಸ್ಸು ಹೋಗಿ ತೆಗೆದುಕೊಂಡು ಬರೋಣ ಬಾ. ಇಲ್ಲದೇಹೋದರೆ ನೀನು ಇಲ್ಲಿಯೇ ಕುಳಿತಿರು, ನಾನು ಹೋಗಿ ಬೇಗ ತಂದುಬಿಡುತ್ತೇನೆ” ಎಂದು ಹೊರಟ. ಇಬ್ರಾಹಿಂ ಅವನನ್ನು ತಡೆದು ನಕ್ಕು ಹೇಳಿದ – “ವ್ಯತ್ಯಾಸ ಗೊತ್ತಾಯಿತೇ ಗೆಳೆಯಾ? ನಿನ್ನಲ್ಲಿದ್ದದ್ದು ಏನೇನೂ ಬೆಲೆಬಾಳದ ಭಿಕ್ಷಾಪಾತ್ರೆ. ಅದಕ್ಕೆ ನೀನು ಅಂಟಿಕೊಂಡಿದ್ದೀಯ. ಅದಿಲ್ಲದೇ ಇರುವುದು ಕ?ವಾಗುತ್ತಿದೆ ನಿನಗೆ. ನಾನು ನನ್ನ ಸುತ್ತಮುತ್ತ ಏನೆಲ್ಲ ಇದ್ದರೂ ಅವು ನನಗೆ ಬೇಕಿಲ್ಲ. ಅವುಗಳನ್ನು ಹಾಗೆಯೇ ಬಿಟ್ಟು ಬಂದುಬಿಡಬಲ್ಲೆ.”
ಭಿಕ್ಷುಕ ಇಬ್ರಾಹಿಂನ ಕಾಲಿಗೆ ಬಿದ್ದು ಕ್ಷಮೆ ಕೇಳಿದ, “ತಾವು ನಿಜವಾಗಿಯೂ ಸಂತರೇ?”
ಸಂತತ್ವವೆಂದರೆ ಯಾವುದಕ್ಕೂ ಅಂಟದಂತಿರುವುದು. ನೀರಿನಲ್ಲಿದ್ದು ನೀರನ್ನು ಅಂಟಿಸಿಕೊಳ್ಳದಿರುವ ಕಮಲದ ಎಲೆಯಂತೆ. ಸಂತನ ಸಾಮ್ರಾಜ್ಯವೆಂದರೆ ಲೌಕಿಕ ರಾಜ್ಯವಲ್ಲ, ಅದು ಹೃದಯದ ಸಾಮ್ರಾಜ್ಯ.
ಸಂನ್ಯಾಸಿಯೊಬ್ಬರು ಕಳೆದ ಶತಮಾನದ ಮೊದಲಲ್ಲಿ ಅಮೆರಿಕಕ್ಕೆ ಹೋದರು. ಅವರ ಹೆಸರು ರಾಮತೀರ್ಥ. ಇವರು ತಮ್ಮನ್ನು ಸಾಮ್ರಾಟನೆಂದು ಹೇಳಿಕೊಳ್ಳುತ್ತಿದ್ದರು. ಒಮ್ಮೆ ಅಮೆರಿಕದ ಅಧ್ಯಕ್ಷ ಇವರನ್ನು ಭೇಟಿಯಾಗಲು ಬಂದ. ಇವರನ್ನು ನೋಡಿ ಅವಾಕ್ಕಾದ; ಆತ ನೋಡಿದರೆ ಭಿಕ್ಷುಕನಂತಿರುವರು! ಅಧ್ಯಕ್ಷ ಕೇಳಿದ, “ಇದು ನನಗರ್ಥವಾಗುತ್ತಿಲ್ಲ, ನೀವು ನಿಮ್ಮನ್ನು ಸಾಮ್ರಾಟನೆಂದು ಏತಕ್ಕಾಗಿ ಕರೆದುಕೊಳ್ಳುವಿರಿ? ನೋಡಲು ನೀವು ಭಿಕ್ಷುಕನಂತೆ ಕಾಣುವಿರಿ. ಅ? ಅಲ್ಲ, ನೀವೊಂದು ಪುಸ್ತಕ ಬರೆದಿರುವಿರಿ, ’ಸಾಮ್ರಾಟ ರಾಮರ ಆರು ವಿಧಾನಗಳು’ ಎಂಬ ಶೀರ್ಷಿಕೆ ಬೇರೆ, ಇದೇಕೆ?”
ಆಗ ರಾಮತೀರ್ಥರು ಮುಗುಳುನಗುತ್ತ ಹೇಳಿದರು, “ನನ್ನೊಳಗೆ ಇಣುಕಿ ನೋಡು, ನನ್ನ ಸಾಮ್ರಾಜ್ಯ ಅಂತರ್ಜಗತ್ತಿನದು. ನಾನು ಸಾಮ್ರಾಟನೇ, ನನ್ನ ಸಾಮ್ರಾಜ್ಯ ಈ ಜಗತ್ತಿನದಲ್ಲ.”
ಸಂತತ್ವವೆಂದರೆ ಜೀವನಕ್ಕೆ ವಿಮುಖನಾಗುವುದಲ್ಲ. ಕಾಡಿನಲ್ಲಿ ಕುಳಿತು ಮೂಗು ಮುಚ್ಚಿಕೊಳ್ಳುವುದೂ ಅಲ್ಲ, ತೀವ್ರತೆಯಿಂದ, ಪರಿಪೂರ್ಣತೆಯಿಂದ ಜೀವನವನ್ನು ಜೀವಿಸುವ ಶೈಲಿಯೇ ಸಂತತ್ವ. ಸಂತುಲನದಿಂದ ಬದುಕುವವನೇ ಸಂತ. ಎರಡು ರೀತಿಯ ಸಂತರಿರುತ್ತಾರೆ. ಮೊದಲನೆಯವರು ಸರ್ವಸಂಗ ಪರಿತ್ಯಾಗ ಮಾಡಿದವರು; ಎಲ್ಲರಿಗೂ ಕಾಣುವ ಸಂತರು. ಎರಡನೆಯವರು ಪ್ರಪಂಚದಲ್ಲಿದ್ದು ಸಂಯಮದಿಂದ, ಸಮಚಿತ್ತದಿಂದ ಜೀವನ ಮಾಡುವ ಯೋಗಿಗಳು. ಇವರು ಯಾರಿಗೂ ಕಾಣುವುದಿಲ್ಲ. ಇಂತಹ ಸಂತರನ್ನು ನೋಡಿಯೇ, ’ತಸ್ಮಾತ್ ಯೋಗೀ ಭವಾರ್ಜುನ’ ಎಂಬುದಾಗಿ ಶ್ರೀಕೃ? ಹೇಳಿದ್ದು. ಜನಸಾಮಾನ್ಯರಿಗೆ ಇಂತಹ ಸಂತರೇ ಮಾರ್ಗದರ್ಶಕರು, ಸ್ಫೂರ್ತಿದಾಯಕರು. ಏಕೆಂದರೆ ಸರ್ವಸಂಗಪರಿತ್ಯಾಗ ಎಲ್ಲರಿಂದಲೂ ಸಾಧ್ಯವಿಲ್ಲ.
ಉಭಯವಾಹಿ ಸಾಮರ್ಥ್ಯ
ನಮ್ಮ ದೇಶದಲ್ಲಿ ಸಂತರು ಕೇವಲ ತಮ್ಮ ಆತ್ಮಕಲ್ಯಾಣಕ್ಕಾಗಿ ಮಾತ್ರ ಕೆಲಸ ಮಾಡಲಿಲ್ಲ; ಲೋಕೋದ್ಧಾರಕ್ಕೂ ಅವರ ಆದ್ಯತೆ ಇತ್ತು. ಜನಸಾಮಾನ್ಯರು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಜವಾಬ್ದಾರಿಯೂ ಇತ್ತು. ಅವರು ಜ್ಞಾನಪ್ರಸಾರವನ್ನೂ, ಧರ್ಮಪ್ರಚಾರವನ್ನೂ ಮಾಡಿದ್ದಾರೆ. ಅಗತ್ಯ ಬಿದ್ದಾಗ ರಾಜಕಾರ್ಯವನ್ನೂ ಯುದ್ಧವನ್ನೂ ಮಾಡಿದ್ದಾರೆ. ಅವರೆಂದೂ ಜೀವನಕ್ಕೆ ವಿಮುಖರಾಗಿ ಏಕಾಂತದಲ್ಲಿ ಬದುಕಲಿಲ್ಲ; ಜೀವನ್ಮುಖಿಯಾಗಿ, ಸಮಾಜ ಮುಖಿಯಾಗಿ ಬದುಕಿ ಜನಸಾಮಾನ್ಯರಿಗೆ ಪ್ರಾತಃಸ್ಮರಣೀಯರಾಗಿದ್ದಾರೆ.
ವಿದ್ಯಾರಣ್ಯ, ರಾಮದಾಸ, ನರಹರಿತೀರ್ಥ, ವ್ಯಾಸರಾಯರಂತಹ ಸಂತರು, ಜ್ಞಾನಕಾರ್ಯ ಶಕ್ತಿಕಾರ್ಯಗಳೆರಡರಲ್ಲೂ ಪ್ರವೃತ್ತರಾಗಿದ್ದವರು. ವಿದ್ಯಾರಣ್ಯರು ಗ್ರಂಥರಚನೆ ಮಾಡಿಕೊಂಡು ಕೇವಲ ತಪಸ್ವಿಗಳಾಗಿದ್ದರು. ಸಮಯ, ಪರಿಸ್ಥಿತಿಗೆ ತಕ್ಕಂತೆ – “ಏಳು ನಾರಾಯಣ, ಕಟ್ಟು ಗ್ರಂಥವ, ಏಳು ಪಂಪಾಕ್ಷೇತ್ರಕೆ” ಎಂಬುದಾಗಿ ಹೇಳಿಕೊಂಡೇ ಸಾಮ್ರಾಜ್ಯ ಸ್ಥಾಪನೆಗೆ ಶಕ್ತಿಕಾರ್ಯದಲ್ಲಿ ಪ್ರವೇಶ ಮಾಡಿದರು. ನರಹರಿತೀರ್ಥರು ಸಂನ್ಯಾಸಿಗಳಾದ ಮೇಲೆ ಗಜಪತಿರಾಜ್ಯ(ಇಂದಿನ ಓಡಿಸ್ಸಾ) ವನ್ನು ಹನ್ನೆರಡು ವ?ಕಾಲ ಪರಿಪಾಲನೆ ಮಾಡಿದರು. ವ್ಯಾಸರಾಯರಾದರೋ ನರಸಿಂಹ, ತಮ್ಮಾರಾಯ, ಶ್ರೀಕೃ?ದೇವರಾಯರ ಸಂಗಡ ದಂಡಯಾತ್ರೆಗೂ ಹೊರಟು ಶಕ್ತಿಕಾರ್ಯದಲ್ಲೂ ಸಹಾಯಕರಾದರು. ಸಮರ್ಥ ರಾಮದಾಸರೂ ಶಿವಾಜಿಗೆ ಬೆಂಬಲವಾಗಿ ರಣಕ್ಷೇತ್ರದಲ್ಲೂ ಓಡಾಡಿದರು. ಧರ್ಮಪ್ರಚಾರ ಮಾಡುವ ಸಂನ್ಯಾಸಿಗಳಾದ ಈ ನಾಲ್ವರಿಗೂ ಸಮಾಜಕಾರ್ಯವೂ ಸಹಜಧರ್ಮವೇ ಆಗಿತ್ತು. ವ್ಯಾಸರಾಯರಂಥ, ಸಮರ್ಥ ರಾಮದಾಸರಂಥ ಸಂತರ ಸಂಗ ನಿರಂತರವಾಗಿ ಇದ್ದದ್ದರಿಂದಲೇ ಶ್ರೀಕೃ?ದೇವರಾಯರು, ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯವನ್ನು ಕಟ್ಟಲು ಸಮರ್ಥರಾದರು. ಶ್ರೀಕೃ?ದೇವರಾಯರು ವಿಜಯನಗರದಲ್ಲಿದ್ದಾಗಲೆಲ್ಲ ವ್ಯಾಸರಾಯರೊಡನೆ ನಿತ್ಯವೂ ಸತ್ಸಂಗಕ್ಕೆ ಹೋಗುತ್ತಿದ್ದರು. ಸಂತರ ಸಂಗವೆಂದರೆ ಅದು ನಮ್ಮಲ್ಲಿರುವ ಭೇದಭಾವವನ್ನು ಅಳಿಸಿ ಏಕತ್ವಭಾವವನ್ನು ಅರಳಿಸುತ್ತದೆ. ಆದ್ದರಿಂದಲೇ ವ್ಯಾಸರಾಯರು ಹಾಡುತ್ತಿದ್ದರು –
’ಸಂಗವಾಗಲಿ ಸಾಧುಸಂಗವಾಗಲಿ
ಸಂಗದಿಂದ ಲಿಂಗಭೇದ ಭಂಗವಾಗಲಿ’ ಎಂಬುದಾಗಿ.
ಸಂತ ಲಕ್ಷಣ
ಸ್ವಾಮಿ ವಿವೇಕಾನಂದರು ಒಮ್ಮೆ ಹಿಮಾಲಯದ ಪರ್ವತಪ್ರದೇಶದಲ್ಲಿ ಸಂಚರಿಸುತ್ತಿರುವಾಗ ಒಬ್ಬ ತೇಜಃಪುಂಜನಾದ ಸ್ವಾಮಿಜೀಯ ಭೇಟಿಯಾಯಿತು. ಅವರೊಡನೆ ಕೆಲಕಾಲ ಸಂಭಾ?ಣೆ ನಡೆಸಿದಾಗ ಅವರೊಬ್ಬ ಜ್ಞಾನಿಗಳೆಂದೂ, ಅಧ್ಯಾತ್ಮದಲ್ಲಿ ಹೆಚ್ಚಿನ ಸಿದ್ಧಿ ಪಡೆದವರೆಂದೂ ತಿಳಿಯಿತು. ಸ್ವಾಮಿಜೀಯ ಪೂರ್ವಾಪರವನ್ನು ವಿಚಾರಿಸಿದಾಗ, ವಿವೇಕಾನಂದರು ಆಶ್ಚರ್ಯಪಡುವ ರೀತಿಯಲ್ಲಿ ಒಂದು ಅಂಶವನ್ನು ಅವರು ಹೇಳಿದರು: ’ನಾನು ಹಿಂದೆ ಕಳ್ಳನಾಗಿದ್ದೆ’ ಎಂದು. ’ಅದು ಹೇಗೆ’ ಎಂದು ಕುತೂಹಲದಿಂದ ಕೇಳಿದಾಗ, ಆ ಸ್ವಾಮಿಜೀ ಹೇಳಿದ್ದು ಹೀಗೆ –
ಪಾವಹರಿಬಾಬಾರವರೊಮ್ಮೆ ಘಾಜೀಪುರದಲ್ಲಿದ್ದಾಗ ಕಳ್ಳನೊಬ್ಬ ಬಾಬಾ ಇದ್ದ ಗುಡಿಸಲಿನೊಳಗೆ ನುಸುಳಿ ಅವರ ಬಳಿ ಇದ್ದ ಕೆಲವು ವಸ್ತುಗಳನ್ನು ಕದ್ದು ಇನ್ನೇನು ಹೊರಡಬೇಕು, ಆಗ ಬಾಬಾ ಗುಡಿಸಲಿನ ಒಳಗೆ ಪ್ರವೇಶಿಸಿದರು. ಅವರನ್ನು ನೋಡುತ್ತಲೇ ಕಳ್ಳ ಗಾಬರಿಯಾಗಿ ಕದ್ದ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಓಡಲು ಆರಂಭಿಸಿದ. ಆಗ ಬಾಬಾ ಕಳ್ಳನು ಬಿಟ್ಟುಹೋದ ವಸ್ತುಗಳನ್ನೆಲ್ಲ ಗಂಟುಕಟ್ಟಿ ಕಳ್ಳನ ಹಿಂದೆ ಓಡಿ ಅವನನ್ನು ಹಿಡಿದೇಬಿಟ್ಟರು. ಕಳ್ಳ ತನಗೇನು ಶಿಕ್ಷೆ ಕಾದಿದೆಯೋ ಎಂದು ಹೆದರಿಕೆಯಿಂದ ನಡುಗುತ್ತಿದ್ದ. ಆಗ ಬಾಬಾ, “ಅಯ್ಯೋ ಮಹಾತ್ಮ, ಈ ವಸ್ತುಗಳನ್ನು ಅಲ್ಲಿಯೇ ಏಕೆ ಬಿಟ್ಟು ಬಂದೆ? ಇವೆಲ್ಲ ನಿನ್ನದೇ ನಾರಾಯಣ” ಎಂದು ಹೇಳಿ ಆ ವಸ್ತುಗಳನ್ನೆಲ್ಲ ಒಪ್ಪಿಸಿಕೊಳ್ಳಬೇಕೆಂದು ಪ್ರಾರ್ಥಿಸಿದರು. ಬಾಬಾರವರ ಕರುಣಾಮಯ ಮನಸ್ಸನ್ನು ಕಂಡು ಕಳ್ಳನಿಗೆ ನಾಚಿಕೆಯಾಯಿತು. ಅಂದು ಪಾವಹರಿಬಾಬಾ ಗುಡಿಸಲಿನಿಂದ ಕಳ್ಳತನ ಮಾಡಿದ ಕಳ್ಳ ಬೇರೆ ಯಾರೂ ಅಲ್ಲ, ಅದು ತಾವೇ ಎಂದಾಗ ವಿವೇಕಾನಂದರು ನಂಬದಾದರು. ಆಗ ಆ ಸ್ವಾಮಿ ಮತ್ತೆ ಹೇಳಿದ, ‘ಯಾವಾಗ ಪಾವಹರಿಬಾಬಾ ಗಂಟನ್ನು ಕೈಗಿತ್ತು, ನನ್ನನ್ನು ನಾರಾಯಣ ಎಂದು ಸಂಬೋಧಿಸಿದರೋ, ಆ ಕ್ಷಣ ನಾನು ಎಂತಹ ಅಪರಾಧ ಮಾಡುತ್ತಿದ್ದೇನೆಂಬ ಅರಿವು ಉಂಟಾಗಿ ಅಂದೇ ನಾನು ಈ ಲೌಕಿಕ ಸಂಪತ್ತನ್ನು ಕಡೆಗಣಿಸಿ ಆಧ್ಯಾತ್ಮಿಕ ಸಂಪತ್ತನ್ನು ಗಳಿಸುವ ನಿರ್ಧಾರ ಮಾಡಿದೆ.’ ಸ್ವಾಮಿ ವಿವೇಕಾನಂದರು ಆ ಸಂನ್ಯಾಸಿಯ ನಿಲವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂತರ ಲಕ್ಷಣವನ್ನು ಈಶಾವಾಸ್ಯೋಪನಿ?ತ್ತಿನಲ್ಲಿ ತುಂಬಾ ಸುಂದರವಾಗಿ ಹೀಗೆ ವರ್ಣಿಸಿದ್ದಾರೆ –
ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನುಪಶ್ಯತಿ |
ಸರ್ವಭೂತೇ? ಚಾತ್ಮಾನಂ ತತೋ ನ ವಿಜುಗುಪ್ಸತೇ ||
ಎಲ್ಲ ಜೀವರಾಶಿಗಳಲ್ಲಿ ತನ್ನಾತ್ಮವನ್ನು ಮತ್ತು ತನ್ನಾತ್ಮದಲ್ಲಿ ಸರ್ವಜೀವರಾಶಿಗಳನ್ನು ಕಾಣುವ ಸಂತರು ಎಂದೂ ಯಾರನ್ನೂ ದ್ವೇಷಿಸಲಾರರು.
ವಿದ್ಯಾವಂತ ನರೇಂದ್ರ ಶ್ರೀರಾಮಕೃ? ಪರಮಹಂಸರ ಹತ್ತಿರ ಬಂದು, ’ದೇವರು ಇದ್ದಾನೆಯೇ? ನೀವು ದೇವರನ್ನು ಕಂಡಿದ್ದೀರಾ? ಕಂಡಿದ್ದರೆ ನನಗೂ ತೋರಿಸಬಹುದಾ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಮಾಡಿದ. ಶ್ರೀರಾಮಕೃ?ರು ಇದಕ್ಕೆ ಮಾತಿನಲ್ಲಿ ಏನೂ ಉತ್ತರಿಸಲಿಲ್ಲ. ಬದಲಿಗೆ ನರೆಂದ್ರನ ತಲೆಯ ಮೇಲೆ ಕೈಯಿಟ್ಟರು. ಆ ಸ್ಪರ್ಶಮಾತ್ರದಿಂದಲೇ ನರೇಂದ್ರನಿಗೆ ಆತ್ಮಸಾಕ್ಷಾತ್ಕಾರವಾಯಿತು. ಅವನ ವೈಚಾರಿಕ ಸಂಶಯವೆಲ್ಲ ನಿವಾರಣೆಯಾಯಿತು. ನರೇಂದ್ರ ಸ್ವಾಮಿ ವಿವೇಕಾನಂದರಾಗಿ ಪರಿವರ್ತಿತರಾದರು.
ರಾಮನ ಸಂಪರ್ಕದಿಂದ ವಿಭೀ?ಣ ರಾಕ್ಷಸತ್ವದಿಂದ ದೈವತ್ವಕ್ಕೇರಿದ. ಬುದ್ಧನ ಸಂಗದಿಂದ ಕಟುಕ ಅಂಗುಲೀಮಾಲ ಭಿಕ್ಕುವಾಗಿ ಬದಲಾದ.
ಸಂತರ ಸಂಗವೇ ನಿಜವಾದ ಸತ್ಸಂಗ. ಅಂತಹ ಸಂಗದಿಂದ ಆಗುವ ಲಾಭವನ್ನು ಸುಭಾಷಿತವೊಂದು ಈ ರೀತಿ ಹೇಳುತ್ತದೆ –
ಕೀಟೋಪಿ ಸುಮನಃ ಸಂಗಾತ್ ಆರೋಹತಿ
ಸತಾಂ ಶಿರಃ |
ಅಶ್ಮಾಪಿ ಯಾತಿ ದೇವತ್ವಂ ಮಹಭಿಃ ಸುಪ್ರತಿಷ್ಠಿತಃ ||
ಹೂವಿನ ಸಹವಾಸದಿಂದ ಸಣ್ಣ ಕೀಟವೂ ಕೂಡ ಸತ್ಪುರು?ರ ತಲೆಯನ್ನು ಏರುತ್ತದೆ. ಮಹಾತ್ಮರಿಂದ ಮುಟ್ಟಲ್ಪಟ್ಟು ಪ್ರತಿ?ಯಾದ ಒಂದು ಕಲ್ಲಿನ ವಿಗ್ರಹವೂ ದೇವತ್ವದಿಂದ ಮೆರೆಯುತ್ತದೆ.
ಕಲ್ಲಿನಂತೆ ಒರಟಾಗಿರುವ ನಮ್ಮ ಬದುಕನ್ನು ಸಂತರ ಸಂಗದಿಂದ ದೈವತ್ವಕ್ಕೇರಿಸೋಣ.