ಬಾಗಿಲು ಸಣ್ಣಗೆ ಶಬ್ದ ಆದಾಗ ವಿಶ್ವ ಬಾಗಿಲು ತೆಗೆಯಲು ಹೋದ. ಟಿವಿ ಮುಂದೆ ನ್ಯೂಸ್ ನೋಡುತ್ತಾ ಕುಳಿತಿದ್ದ ಅವನಿಗೆ ಕರೋನಾ ಭೀತಿ ಇತ್ತು. ವಿಶಾಲು ಸಹ ಹೆದರಿದ್ದಳು. “ರೀ, ಏಕ್ದಂ ತೆಗೀಬೇಡ್ರೀ ಬಾಗಿಲು’’ “ಯಾಕಮ್ಮಾ, ಏನು ಭಯ ಹಗಲು ಹೊತ್ತಲ್ಲಿ?” “ಒಂದ್ವೇಳೆ ಕರೋನಾ ವೈರಸ್ ಬಂದಿದ್ರೆ ಏನು ಗತಿ?” ಎಂದಳು. ವಿಶ್ವ ನಕ್ಕ. ‘‘ಅಲ್ಲ, ಕರೋನಾ ವೈರಸ್ ಬಾಗಿಲು ಬಡಿದು ಬರುತ್ತೇನು?” ಎಂದು ಕೇಳಿದ. ವಿಶಾಲು ಕರೋನಾ ಕತೆಯನ್ನು ಸವಿಸ್ತಾರವಾಗಿ ಹೇಳಿದಳು. “ನಮ್ಮ ಎದುರು ಮನೆ ವೆಂಕಣ್ಣ […]
ಕ್ಯಾ ಕರೋನಾ
Month : April-2020 Episode : Author : ಎಂ.ಎಸ್. ನರಸಿಂಹಮೂರ್ತಿ