
ಆ ಹಳೆಯ ಪತ್ರ ಸಿಕ್ಕಿ ಬಹಳ ದಿನವಾಗಿರಲಿಲ್ಲ. ನಾಗಪ್ಪ ಮಾಮ ತೀರಿಕೊಂಡಿದ್ದ. ಅವನ ವೈಕುಂಠಸಮಾರಾಧನೆಗೆಂದು ಗೋಕರ್ಣಕ್ಕೆ ಹೋದಾಗ ವಚ್ಚಲತ್ತೆ ಬಂದಿದ್ದಳು. ಲೋಕಾಭಿರಾಮದ ಮಾತಿನ ನಂತರ ಅವಳ ಬಳಿ ಭೀಮಬೊಪ್ಪನ ಸಾವಿನ ಬಗ್ಗೆ ಕೇಳಿದ್ದೆ. ಅವಳು ನನ್ನಿಂದ ನಿರೀಕ್ಷಿಸದ ಪ್ರಶ್ನೆಗೆ ಗಾಬರಿಯಾಗಿದ್ದಳು. ನಿನ್ನ ಹಳೆಯ ಪತ್ರ ಸಿಕ್ಕಿತು ಅದರಲ್ಲಿ ನೋಡಿದೆ ಎಂದೆ. ವಚ್ಚಲತ್ತೆ ಅಬ್ಬಾ ಎಂದು ದಂಗಾದಳು. “ಕಾಣಕೋಣದ ನಮ್ಮ ಮನೆಗೆ ಬಾ. ಅಲ್ಲಿ ಮಲ್ಲಿಕಾರ್ಜುನ ದೇವರ ದರ್ಶನ ಮಾಡಿದಂತೆಯೂ ಆಯಿತು, ಹಾಗೇ ಒಂದಿಡೀ ರಾತ್ರಿ ಕುಳಿತು ಭೀಮಬೊಪ್ಪನ […]