ಕಳೆದ ತಿಂಗಳು ನಮ್ಮಮ್ಮನ ವರ್ಷಾಬ್ದಿಕಕ್ಕೆ ನನ್ನ ಸಹೋದರ ಬಂದಾಗ ಅಮ್ಮನ ಕಾಗದ ಪತ್ರಗಳನ್ನು ಪರಿಶೀಲಿಸಲು ಆಲ್ಮೆರಾ ತೆಗೆದೆವು. ಕಾಗದ ಪತ್ರಗಳ ತಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಗಂಟು ಅಡಗಿಕೊಂಡಿತ್ತು. ಗಂಟು ಬಿಚ್ಚಿದೆ. ಒಳಗೆ ಇನ್ನೊಂದು ಗಂಟಿತ್ತು. ಅದರಲ್ಲಿ ಮತ್ತೊಂದು, ಅದರಲ್ಲಿ ಮಗದೊಂದು! ಬಿಚ್ಚುತ್ತಲೇ ಹೋದೆ. ಒಂಬತ್ತು ಬಾರಿ ಬಿಚ್ಚಿದಾಗ ಒಳಗಿತ್ತು ಚೀಟಿ ಅಂಟಿಸಿದ್ದ ಹಿಮಾಲಯಾ ಪೌಡರ್ ಡಬ್ಬ. ಇದು ನಮ್ಮಮ್ಮನ ಭದ್ರತಾ ವ್ಯವಸ್ಥೆ! ಡಬ್ಬಿಯೊಳಗೆ ನಾಲ್ಕು ಸಾವಿರ ಚಿಲ್ಲರೆ ದುಡ್ಡಿತ್ತು. “ಅಮ್ಮನಂತೆ ನೀನೂ ಬ್ಯಾಂಕಿನ ವ್ಯವಹಾರ ಮುಂದುವರಿಸುತ್ತಿಯಾ?” […]






