‘ಚಂದಿರನೇತಕೆ ಓಡುವನಮ್ಮಾ’ ಎಂಬ ಪ್ರಸಿದ್ಧ ಶಿಶುಗೀತೆಯ ಸಾಲುಗಳನ್ನು ‘ಚಂದಿರನೇತಕೆ ತಿರುಗುವನಮ್ಮಾ’ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿತು. ಆಗ ನಾನು ಭಾರತಕ್ಕಿಂತ ಬಹಳಷ್ಟು ಉತ್ತರಕ್ಕಿದ್ದು ಅಲ್ಲಿಂದ ಚಂದ್ರನನ್ನು ನೋಡುವ ಕೋನ ಬೇರೆ ಆದುದ್ದರಿಂದ ಹೀಗಾಗಿರಬಹುದು ಎಂದು ಊಹಿಸಲು ನನಗೆ ಹೆಚ್ಚು ಸಮಯ ತಗಲಲಿಲ್ಲ. ಆದರೆ ಚಂದ್ರ ಭೂಗೋಳದ ಬೇರೆಬೇರೆ ಭಾಗಗಳಿಂದ ನೋಡಿದಾಗ ಬೇರೆಬೇರೆ ರೀತಿ ಕಾಣಿಸುತ್ತಾನೆ ಎಂದು ನಮಗೆ ಶಾಲೆಯಲ್ಲಿ ಕಲಿಸಿರಲಿಲ್ಲ. ನಾನು ಎಲ್ಲೂ ಓದಿರಲೂ ಇಲ್ಲ. ಈ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿದರೂ ಸ್ಪಷ್ಟ ಮಾಹಿತಿ ಎಲ್ಲೂ […]
ಚಂದಿರನೇತಕೆ ತಿರುಗುವನಮ್ಮ?
Month : May-2024 Episode : Author : ಚಿದಂಬರ ಕಾಕತ್ಕರ್