ಸರ್ಕಲ್ಲಿಗೊಂದು ಸಿಗ್ನಲ್ಲು, ಪ್ರತಿಮೆ ಬಂದು ಕೂತವು. ಯಾವಾಗ ಸರ್ಕಲ್ಲುಗಳು ಬೆಳೆದು ಟ್ರಾಫಿಕ್ಕು ಬೆಳೆದು, ಗಾಡಿಗಳು ಕೆಂಪುದೀಪಕ್ಕೆ ಬಯ್ಯುತ್ತ ಸರ್ಕಲ್ಲಿನಲ್ಲಿ ನಿಂತವೋ, ಆಗ ಮಂಗಳಮುಖಿಯರು ಕಾಣಿಸತೊಡಗಿದರು… ಪ್ರತಿಸಲ ಸರ್ಕಲ್ಲಿನಲ್ಲಿ ನಿಂತಾಗ, ಮೊದಲು ಕಣ್ಣು ಹೋಗುವುದು ಅವರು ಯಾರಾದರೂ ಇದ್ದಾರಾ ಅಂತ. ಇದೆಂತ ಭಯ? ಈ ಭಯದ ಮೂಲ ಯಾವುದು ಅಂತ ತುಂಬಾ ಸಲ ಯೋಚಿಸಿದ್ದೇನೆ. ಅದು ಅವರು ನನ್ನ ಮುಟ್ಟುವರು ಎಂಬ ಭಯವೇ? ಇಲ್ಲ ಜೇಬಿನಿಂದ ದುಡ್ಡು ಕಸಿದುಬಿಡುತ್ತಾರೆ ಎಂಬ ಭಯವೇ? ಇಲ್ಲ ಮತ್ತೇನೋ ಮಾಡಿ ಅಕ್ಕಪಕ್ಕದವರು ನೋಡಿದರೆ […]
ಪೊಮ್ಯಾಟೋ
Month : May-2023 Episode : Author : ಜಯರಾಮಾಚಾರಿ