
ಛಲ ಬಿಡದ ತ್ರಿವಿಕ್ರಮನು ಎಂಟನೆಯ ಸಾರಿ ಮತ್ತೆ ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು ಶ್ಮಶಾನದತ್ತ ಮೌನವಾಗಿ ಹೆಜ್ಜೆ ಹಾಕಿದನು. ಆಗ ಹೆಣದಲ್ಲಿದ್ದ ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು – ಅಂಗದೇಶದಲ್ಲಿ ವೃಕ್ಷಘಟವೆಂಬ ಹೆಸರಿನ ಒಂದು ದೊಡ್ಡ ಅಗ್ರಹಾರವಿದೆ. ಹಿಂದೆ ಅಲ್ಲಿ ವಿಷ್ಣುಸ್ವಾಮಿ ಎಂಬ ಧನಿಕನಾದ ಬ್ರಾಹ್ಮಣನಿದ್ದನು. ಅನುರೂಪಳಾದ ಪತ್ನಿಯಲ್ಲಿ ಅವನಿಗೆ ಕ್ರಮವಾಗಿ ಮೂವರು ಗಂಡು ಮಕ್ಕಳು ಜನಿಸಿದರು. ಅವರೆಲ್ಲರೂ ಬೆಳೆದು ಯುವಕರಾದರು. ವಿಷ್ಣುಸ್ವಾಮಿಯು ಆಗಾಗ್ಗೆ ಬೇರೆ ಬೇರೆ ಯಜ್ಞಗಳನ್ನು ಮಾಡುತ್ತಿದ್ದನು. ಒಮ್ಮೆ ಅವನು ವಿಶಿಷ್ಟವಾದ ಯಜ್ಞವೊಂದನ್ನು […]