ಅಭಿನವ ತ್ಯಾಗರಾಜರು ಎಂದೇ ಪ್ರಸಿದ್ಧರಾಗಿದ್ದ ಮೈಸೂರು ವಾಸುದೇವಾಚಾರ್ಯರ ಬಗ್ಗೆ ತಿಳಿಯದವರು ಬಹಳ ಕಡಮೆ. ಮೈಸೂರು ರಾಜಸಭೆಯ ವಾಗ್ಗೇಯಕಾರರಾಗಿ ಅವರು ಮಾಡಿದ ಸಂಗೀತಸೇವೆ ಅಪಾರವಾದದ್ದು. ಅವರು ರಚಿಸಿದ ಇನ್ನೂರಕ್ಕೂ ಹೆಚ್ಚು ಕೃತಿಗಳು ಇಂದಿಗೂ ಹಸಿರಾಗಿವೆ ಮತ್ತು ಹೆಸರಾಗಿವೆ. ವಾಸುದೇವಾಚಾರ್ಯರು ತಮ್ಮ ಜೀವಿತದ ಕೊನೆಯ ಅವಧಿಯನ್ನು ಚೆನ್ನೈನ ಅಡಿಯಾರನಲ್ಲಿರುವ ಕಲಾಕ್ಷೇತ್ರದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಳೆದರು. ಕಲಾಕ್ಷೇತ್ರದ ಸಂಸ್ಥಾಪಕರು ಮತ್ತು ಪ್ರಖ್ಯಾತ ನೃತ್ಯ ಕಲಾವಿದರೂ ಆದ ರುಕ್ಮಿಣಿದೇವಿ ಅರುಂಡೇಲ್, ವಾಸುದೇವಾಚಾರ್ಯರ ಸೇವೆಯನ್ನು ಬಯಸಿ ತಮ್ಮ ಕಲಾಕ್ಷೇತ್ರಕ್ಕೆ ಕರೆಸಿಕೊಂಡಿದ್ದರು. ಅವರಿಬ್ಬರೂ ಸೇರಿ ರಚಿಸಿದ […]
ಸಂಗೀತಜ್ಞರ ಹಾಸ್ಯಪ್ರಜ್ಞೆ
Month : November-2023 Episode : Author : ಡಾ.ಜಿ.ಎಸ್. ವೇಣುಗೋಪಾಲ್