
ಮತಾಂಧರ ತೆಕ್ಕೆಯಲ್ಲಿ ಗಾಂಧಾರಿಯ ತವರೂರು: ಅಧಿಕಾರದ ಸಿಂಹಾಸನವೇರಿದ ಭಯೋತ್ಪಾದಕರು ತಾಲಿಬಾನ್ ಹಂಗಾಮಿ ಸರ್ಕಾರವನ್ನು ಘೋಷಿಸಿದೆ. ಮಂತ್ರಿಮಂಡಳದ ೩೩ ಸದಸ್ಯರ ಪೈಕಿ ೧೭ ಹೆಸರುಗಳು ವಿಶ್ವಸಂಸ್ಥೆಯ ನಿರ್ಬಂಧಿತ ಉಗ್ರರ ಪಟ್ಟಿಯಲ್ಲಿವೆ! ಪ್ರಧಾನಮಂತ್ರಿಯೆಂದು ಘೋಷಣೆಯಾದ ಮುಲ್ಲಾ ಮಹಮ್ಮದ್ ಹಸನ್ ಅಖುಂದ್ ವಿಶ್ವಸಂಸ್ಥೆಯ ನಿರ್ಬಂಧಿತ ಉಗ್ರ! ದೇಶದ ಗೃಹಮಂತ್ರಿಯೆಂದು ಘೋಷಿಸಲಾದ ಮೌಲ್ವಿ ಸಿರಾಜುದ್ದೀನ ಹಕ್ಕಾನಿ ನಿಷೇಧಿತ ಹಕ್ಕಾನಿ ನೆಟ್ವರ್ಕ್ ಉಗ್ರ ಸಂಘಟನೆಯ ಮುಖ್ಯಸ್ಥ; ಈತನ ತಲೆಯ ಮೇಲೆ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ೫ ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ! ಆಫಘಾನಿಸ್ತಾನ […]