೧೯೦೦ರ ಅಂತ್ಯದಲ್ಲಿ ಭಾರತಕ್ಕೆ ಹಿಂದಿರುಗಿದಾಗಿನಿಂದ ಸ್ವಾಮಿಜೀಯವರ ದೇಹಸ್ಥಿತಿ ಹದಗೆಡುತ್ತಲೇ ಸಾಗಿತ್ತು. ೧೯೦೨ರ ಜುಲೈ ೪ರಂದು ಅವರು ದೇಹತ್ಯಾಗ ಮಾಡಿದರು. ಕೈಯಲ್ಲಿ ಹಿಡಿದಿದ್ದ ಜಪಮಾಲೆಯನ್ನು ನಿಮೀಲಿತನೇತ್ರರಾಗಿ ತಿರುಗಿಸುತ್ತಿದ್ದ ಸ್ವಾಮಿಜೀಯವರ ಬೆರಳುಗಳು ರಾತ್ರಿ ೯ರ ಸುಮಾರಿಗೆ ಇದ್ದಕ್ಕಿದ್ದಂತೆ ತಟಸ್ಥವಾದವು. ಒಂದೆರಡು ಬಾರಿ ದೀರ್ಘಶ್ವಾಸವನ್ನೆಳೆಯುತ್ತಿದ್ದಂತೆ ದೃಷ್ಟಿಯು ಭ್ರೂಮಧ್ಯದಲ್ಲಿ ಏಕಾಗ್ರಗೊಂಡಿತು. ಸ್ವಾಮಿಜೀಯವರ ಜೀವವು ಮೂಲನೆಲೆಗೆ ಮರಳಿತ್ತು. ಸ್ವಾಮಿಜೀ ಮೊದಲೇ ನಿರ್ದೇಶಿಸಿದ್ದಂತೆ ಅಂತ್ಯಸಂಸ್ಕಾರ ನಡೆಯಿತು. ಮೊದಲು ಅಗ್ನಿಸ್ಪರ್ಶ ಮಾಡಿದವರು ನಿವೇದಿತಾ; ಅವರ ಹಿಂದುಗೂಡಿ ಇತರ ಸಂನ್ಯಾಸಿಗಳು. ತಮ್ಮ ಜೀವಿತದ ಮುಂದಿನ ಭಾಗದಲ್ಲಿ ತಮ್ಮ ಕರ್ತವ್ಯ […]
ಸಮಾಜೋಜ್ಜೀವನದ ಮಹಾಭಿಯಾನ
Month : April-2018 Episode : ನಿವೇದಿತಾ ಸ್ಮರಣ ಮಾಲಿಕೆ -6 Author : ಎಸ್.ಆರ್. ರಾಮಸ್ವಾಮಿ