ಜನಪ್ರಿಯತೆ ಎನ್ನುವ ಕುದುರೆಯ ಹಿಂದೆ ಓಡದೆ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಗೆಲವಿನ ಶಿಖರವನ್ನು ತಲಪಿರುವ ರಘು ದೀಕ್ಷಿತ್ , ತಾನು ಸಾಧಿಸಿದ್ದೇನೆ ಎಂದರೆ ಅದು ಅಹಂ ಆಗುತ್ತದೆ ಎನ್ನುವ ವಿನೀತ ವ್ಯಕ್ತಿ. ಅಪ್ಪಟ ಶ್ರೀವೈಷ್ಣವ ಮನೆತನದಿಂದ ಬಂದಿರುವ ಇವರು ತಮ್ಮ ಅಂತರಾಳದಲ್ಲಿ ಭಾರತೀಯತೆಯ ಬಗ್ಗೆ ಆಳವಾದ ಪ್ರೀತಿ-ಗೌರವ ಬೆಳೆಸಿಕೊಂಡು ಬಂದಿದ್ದಾರೆ. ಭಾರತೀಯತೆ , ಶಾಸ್ತ್ರೀಯಸಂಗೀತ ಕಲೆಗಳಿಲ್ಲದೆ ’ರಘು ದೀಕ್ಷಿತ್ ಪ್ರಾಜೆಕ್ಟ್’ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಭಾರತೀಯತೆ ಇವರಲ್ಲಿ ಹಾಸುಹೊಕ್ಕಾಗಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿ ಜನಿಸಿದ ಇವರ ಬಾಲ್ಯ-ವಿದ್ಯಾಭ್ಯಾಸ […]














