
ಸಾರಿನ ಜೊತೆಗೆ ಸಣ್ಣಗೆ ಹೆಚ್ಚಿ, ಕಾಯಿತುರಿ ಸ್ವಲ್ಪ ಜಾಸ್ತಿನೇ ಸೇರಿಸಿ ಹದವಾಗಿ ಒಗ್ಗರಣೆ ಕೊಟ್ಟ ಹುರಳೀಕಾಯಿ ಪಲ್ಯವಿದ್ದರೆ ಅದರ ಸೊಗಸೇ ಸೊಗಸು! ಆಫೀಸಿನಲ್ಲಿ ನನ್ನ ಕ್ಯೂಬಿಕಲ್ಗೆ ಬಂದ ಮಹೇಶ ’ಏನ್ ಸಾರೂ, ಸಪ್ಪಗೆ ಕುತ್ಕಂಡ್ ಬಿಟ್ಟಿದ್ದೀರಾ’ ಎಂದು ಕಿವಿಯ ಬಳಿ ಮೆಲ್ಲನೆ ಹೇಳಿದಾಗ, ಏನೂ ಹೇಳದೆ ಸುಮ್ಮನೆ ತಲೆ ಎತ್ತಿ ಅವನ ಮುಖವನ್ನೇ ನೋಡುತ್ತಾ ಕುಳಿತೆ. ಹೊಸದಾಗಿ ಈ ಆಫೀಸಿಗೆ ಬಂದಿದ್ದರಿಂದ ಕೊಂಚ ಕಲಸುಮೇಲೋಗರವಾದಂತೆ ಕಾಣುತ್ತಿತ್ತು. “ಅಯ್ ಅದ್ಯಾಕ ಅ? ಯೋಚ್ನೆ ಮಾಡ್ತೀರಾ ಸಾರೂ, ಈ ಬಾಸ್ನ […]