
ಏಪ್ರಿಲ್ ೨೦೨೦. ಅದು ಬೇಸಿಗೆ ಕಾಲ. ಎಲ್ಲೆಲ್ಲೂ ಕೊರೋನಾ ಲಾಕ್‌ಡೌನ್. ಹಾಗೆ ನಾನು ಅಜ್ಜಿ ಮನೆಗೆ ಹೋಗಿದ್ದೆ. ಅಲ್ಲಿ ನನ್ನ ಅಜ್ಜಿ ತರಕಾರಿ ಬೀಜಗಳನ್ನು ಒಣಗಿಸುತ್ತಿದ್ದರು. ನನ್ನ ಅಣ್ಣನ ಜೊತೆ ಆಟವಾಡುತ್ತ, ಬಿದಿರಿನ ಕೋಲಿನಲ್ಲಿ ಪುಟ್ಟ ಪುಟ್ಟ ಮನೆಗಳನ್ನು ಕಟ್ಟುತ್ತಾ ದಿನ ಕಳೆದವು. ಮಳೆಗಾಲ ಬಂತು. ನನ್ನ ಅಜ್ಜಿ ಮಣ್ಣನ್ನು ಅಗೆದು ಕೆಲವು ಬೀಜಗಳನ್ನು ಬಿತ್ತಿದರು. ಒಂದು ವಾರದಲ್ಲಿ ಹಾಕಿದ ಎಲ್ಲ ಬೀಜಗಳು ಚಿಗುರಿದವು. ನನಗಂತೂ ಖುಷಿಯೋ ಖುಷಿ. ಎರಡು ಮೂರು ವಾರಗಳು ಕಳೆದ ನಂತರ ಅವು […]